Subscribe to Gizbot

ಬಳಕೆದಾರರನ್ನು ಸೆಳೆಯುವಲ್ಲಿ ಜಿಯೋ ನಂಬರ್ 1: ಬಳಕೆದಾರರ ಸಂಖ್ಯೆ ಎಷ್ಟು..?

Written By:

ದೇಶದಲ್ಲಿ ಹೊಸ ಮಾದರಿಯ ಸೇವೆಯನ್ನು ಆರಂಭಿಸಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ, ಆರಂಭದಿಂದಲೂ ತನ್ನ ಬಳಕೆದಾರರ ಸಂಖ್ಯೆಯನ್ನು ಒಂದೇ ಸಮ ಏರಿಕೆಯನ್ನು ಮಾಡಿಕೊಂಡು ಬಂದಿದ್ದು, ಏರಿಕೆ ಪ್ರಮಾಣದಲ್ಲಿ ಕೊಂಚ ಇಳಿಕೆ ಕಂಡರು ಸಹ, ದೇಶದಲ್ಲಿ ಪ್ರತಿ ತಿಂಗಳು ಜಿಯೋ ಸೇರುತ್ತಿರುವ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೊಸ ಬಳಕೆದಾರರನ್ನು ಸೆಳೆಯುವ ನಂಬರ್ 1 ಟೆಲಿಕಾಂ ಕಂಪನಿ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

ಬಳಕೆದಾರರನ್ನು ಸೆಳೆಯುವಲ್ಲಿ ಜಿಯೋ ನಂಬರ್ 1: ಬಳಕೆದಾರರ ಸಂಖ್ಯೆ ಎಷ್ಟು..?

ಸದ್ಯ ಟ್ರಾಯ್ ಜನವರಿ ತಿಂಗಳ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಈ ಮಾಹಿತಿಯ ಪ್ರಕಾರವಾಗಿ ಸುಮಾರು 168413628 ಬಳಕೆದಾರರನ್ನು ಜಿಯೋ ಹೊಂದಿದೆ. ಜನವರಿ ಒಂದೇ ತಿಂಗಳಿನಲ್ಲಿ ಜಿಯೋ 8.3 ಮಿಲಿಯನ್ ಬಳಕೆದಾರರನ್ನು ಸೆಳೆಯುವಲ್ಲಿ ಜಿಯೋ ಯಶಸ್ವಿಯಾಗಿದ್ದು, ಜಿಯೋ ಪೋನ್ ಮತ್ತು ಜಿಯೋ ಡಾಗಲ್ ಮೇಲೆ ಹೆಚ್ಚಿನ ಆಫರ್ ಘೋಷಣೆ ಮಾಡಿದ್ದು, ಇದಕ್ಕೆ ಕಾರಣವಾಗಿದೆ.

ಇದೇ ಮಾದರಿಯಲ್ಲಿ ಜನವರಿ ತಿಂಗಳಿನಲ್ಲಿ ಏರ್‌ಟೆಲ್, ವೊಡಾಪೋನ್, ಐಡಿಯಾ ಕಂಪನಿಗಳು 1.5 ಮಿಲಿಯನ್ ಬಳಕೆದಾರರನ್ನು ತಮ್ಮ ನೆಟ್‌ವರ್ಕ್‌ಗೆ ಸೇರ್ಪಡೆಗೊಳಿಸಿಕೊಂಡಿವೆ. ಖಾಸಗಿ ಕಂಪನಿಗಳಿಗೆ ಶಾಕ್ ನೀಡುವಂತೆ BSNL 4 ಲಕ್ಷ ಬಳಕೆದಾರರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ. ಇದನ್ನು ಬಿಟ್ಟು ಉಳಿದೆ ಎಲ್ಲಾ ಕಂಪನಿಗಳು ಬಳಕೆದಾರರನ್ನು ಭಾರೀ ಪ್ರಮಾಣದಲ್ಲಿ ಕಳೆದುಕೊಂಡಿವೆ ಎನ್ನಲಾಗಿದೆ.

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?

ಸರಕಾರಿ ಸ್ವಾಮ್ಯದ ಮತ್ತೊಂದು ಟೆಲಿಕಾಂ ಸಂಸ್ಥೆ MTNL ಸೇರಿದಂತೆ ಏರ್‌ಸೆಲ್, ಟೆಲಿನಾರ್ ಮತ್ತು ಟಾಟಾ ಕಂಪನಿಗಳು ದೊಡ್ಡ ಮಟ್ಟದಲ್ಲಿ ಬಳಕೆದಾರರನ್ನು ಕಳೆದುಕೊಂಡಿದ್ದು, ಇವರನ್ನು ಸೆಳೆಯುವಲ್ಲಿ ಇತರೆ ಕಂಪನಿಗಳು ಯಶಸ್ವಿಯಾಗಿವೆ. ಒಟ್ಟಿನಲ್ಲಿ ದರ ಸಮರವೂ ಬಳಕೆದಾರರ ಸಂಖ್ಯೆಗೆ ಬಹಳ ಹೊಡೆತ ನೀಡಿದೆ.

ಜನವರಿ ತಿಂಗಳ ಅಂತ್ಯಕ್ಕೆ ಏರ್‌ಟೆಲ್‌ ಒಟ್ಟು 291.67208 ಮಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ಎನ್ನಿಸಿಕೊಂಡಿದೆ. ಇದಾದ ನಂತರದಲ್ಲಿ 213 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವೊಡಾಫೋನ್ ಕಾಣಿಸಿಕೊಂಡಿದೆ. ಮೂರನೇ ಸ್ಥಾನದಲ್ಲಿ ಐಡಿಯಾ ಇದ್ದು, 197 ಬಳಕೆದಾರರನ್ನು ಹೊಂದಿದೆ.

English summary
Reliance Jio’s Subscriber Base Reaches 168.4 Million at the End of January 2018. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot