ಜಿಯೋ ಗಢಗಢ!..ಏರ್‌ಟೆಲ್‌ನ ವಾರ್ಷಿಕ ಆಫರ್ ಬೆಲೆ ಜಿಯೋವಿಗಿಂತ 1000 ರೂ.ಕಡಿಮೆ!!

Written By:

ಜಿಯೋವಿನ ಪ್ರತಿಯೊಂದು ಆಫರ್‌ಗಳಿಗೆ ಸರಿಸಮ ಆಫರ್ ಬಿಡುತ್ತಿದ್ದ ಏರ್‌ಟೆಲ್ ಇದೀಗ ಜಿಯೋಗಿಂತಲೂ ಅತ್ಯುತ್ತಮವಾದ ಮತ್ತೊಂದು ಆಫರ್ ಮೂಲಕ ಜಿಯೋವಿನ ನಿದ್ದೆಗೆಡಿಸಿದೆ.! ಹೌದು, ಜಿಯೋವಿನ ವಾರ್ಷಿಕ ಆಫರ್‌ಗೆ ಭಾರಿ ಸೆಡ್ಡುಹೊಡೆದಿರುವ ಏರ್‌ಟೆಲ್ ಜಿಯೋವಿಗಿಂತಲೂ 1000 ರೂ.ಕಡಿಮೆ ಬೆಲೆಗೆ ವಾರ್ಷಿಕ ಆಫರ್ ಘೋಷಿಸಿದೆ.!!

ಇದೇ ಮೊದಲ ಸಾರಿ ಜಿಯೋವಿಗಿಂತ ಕಡಿಮೆ ಬೆಲೆಯಲ್ಲಿ ಏರ್‌ಟೆಲ್ ಆಫರ್ ಘೋಷಿಸಿದ್ದು, ಜಿಯೋವಿನ 4,999 ರೂಪಾಯಿಗಳ ಆಫರ್‌ಗೆ ವಿರುದ್ದವಾಗಿ ಕೇವಲ 3,999 ರೂಪಾಯಿಗಳಿಗೆ ವಾರ್ಷಿಕ ಪ್ಲಾನ್ ಬಿಡುಗಡೆ ಮಾಡಿದೆ.! ಹಾಗಾದರೆ, ಏರ್‌ಟೆಲ್‌ನ ವಾರ್ಷಿಕ ಪ್ಲಾನ್ ಆಫರ್ ಹೇಗಿದೆ? ಜಿಯೋಗಿಂತಲೂ ಈ ಆಫರ್ ಬೆಸ್ಟ್ ಏಕೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾರ್ಷಿಕ ಆಫರ್ ನೀಡಲು ಒಲವು!!

ವಾರ್ಷಿಕ ಆಫರ್ ನೀಡಲು ಒಲವು!!

ಒಬ್ಬ ಗ್ರಾಹಕ ಒಮ್ಮೆ ರೀಚಾರ್ಜ್ ಮಾಡಿಸಿದರೆ ಒಂದು ವರ್ಷ ತನ್ನ ಗ್ರಾಹಕನಾಗಿಯೇ ಉಳಿಯುತ್ತಾನೆ ಎಂಬ ಉದ್ದೇಶದಿಂದ ಜಿಯೋ., ಏರ್‌ಟೆಲ್ ಸೇರಿ ಎಲ್ಲಾ ಟೆಲಿಕಾಂಗಳು ವಾರ್ಷಕ ಆಫರ್‌ ನೀಡಲು ಒಲವು ತೋರಿವೆ. ಇದರಿಂದಾಗಿಯೇ, ಏರ್‌ಟೆಲ್ ಜಿಯೋಗಿಂತಲೂ 1000 ರೂ.ಕಡಿಮೆ ಬೆಲೆಗೆ ವಾರ್ಷಿಕ ಆಫರ್ ಘೋಷಿಸಿದೆ ಎನ್ನಬಹುದು.!!

ಜಿಯೋ 4,999 ರೂ. ಆಫರ್!?

ಜಿಯೋ 4,999 ರೂ. ಆಫರ್!?

ಜಿಯೋ 4,999 ರೂಪಾಯಿಗಳಿಗೆ 360 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುವ ವಾರ್ಷಿಕ ಆಫರ್ ಅನ್ನು ನೀಡಿದ್ದು, ಈ ಆಫರ್‌ನಲ್ಲಿ ಜಿಯೋವಿನ ಗ್ರಾಹಕ 350GB ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಮಾಡುವ ಆಯ್ಕೆ ನೀಡಿದೆ. ಜೊತೆಗೆ ಜಿಯೋವಿನ ಎಲ್ಲಾ ಚಂದಾದಾರಿಕೆ ಆಫರ್ ಕೂಡ ಲಭ್ಯವಿದೆ.!!

ಏರ್‌ಟೆಲ್ 3,999 ರೂ. ಆಫರ್!!

ಏರ್‌ಟೆಲ್ 3,999 ರೂ. ಆಫರ್!!

ಜಿಯೋವಿನ ವಾರ್ಷಕ ಆಫರ್‌ಗೆ ಪ್ರತಿಸ್ಪರ್ಧಿಯಾಗಿ ಈ ಆಫರ್ ಹೊರಬಂದಿದ್ದು, ಏರ್‌ಟೆಲ್ 3,999 ರೂ. ಆಫರ್ ಮೂಲಕ 300GB ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಮಾಡುವ ಆಯ್ಕೆ ನೀಡಿದೆ. ಈ ಆಫರ್‌ನಲ್ಲಿ ಏರ್‌ಟೆಲ್‌ನ ಕೆಲವು ಚಂದಾದಾರಿಕೆಗಳನ್ನು ಉಚಿತವಾಗಿ ನೀಡಿದೆ.!!

ಯಾವುದು ಬೆಸ್ಟ್ ಆಫರ್.!!

ಯಾವುದು ಬೆಸ್ಟ್ ಆಫರ್.!!

ಜಿಯೋ ಮತ್ತು ಏರ್‌ಟೆಲ್ ಎರಡೂ ಕಂಪೆನಿಗಳ ಆಫರ್‌ನಲ್ಲಿ ಏರ್‌ಟೆಲ್‌ನ ಆಫರ್ ಬೆಸ್ಟ್ ಎನ್ನಬಹುದು.! ಏಕೆಂದರೆ ಜಿಯೋವಿಗಿಂತಲೂ 1000 ರೂಪಾಯಿಗಳ ಕಡಿಮೆ ಬೆಲೆಯಲ್ಲಿ ಜಿಯೋವಿನಷ್ಟೆ ಸೌಲಭ್ಯಗಳನ್ನು ಏರ್‌ಟೆಲ್ ನೀಡಿದೆ ಎನ್ನಬಹುದು. ಆದರೆ, ಜಿಯೋವಿನಲ್ಲಿ 50GB ಡೇಟಾ ಹೆಚ್ಚು ದೊರೆಯುತ್ತದೆ.!!

ಪ್ರತಿದಿನ ಒಂದು ಜಿಬಿ ಯೂಸ್ ಮಾಡೊಲ್ಲ!!

ಪ್ರತಿದಿನ ಒಂದು ಜಿಬಿ ಯೂಸ್ ಮಾಡೊಲ್ಲ!!

ಜಿಯೋವಿಗಿಂತಲೂ ಏರ್‌ಟೆಲ್ ಆಫರ್ ಬೆಸ್ಟ್ ಎನ್ನುವುದಕ್ಕೆ ಮತ್ತೊಂದು ಕಾರಣವಿದೆ.! 1000ರೂ. ಏರ್‌ಟೆಲ್‌ನ ಆಫರ್‌ನಲ್ಲಿ ಜಿಯೋವಿಗಿಂತ 50GB ಡೇಟಾ ಕಡಿಮೆ ಇದೆ. ಆದರೆ, ಹೆಚ್ಚು ಜನ ಪ್ರತಿದಿನ ಒಂದು ಜಿಬಿ ಡೇಟಾ ಯೂಸ್ ಮಾಡೊಲ್ಲ.! ಅಂತವರಿಗೆ ಈ ಆಫರ್ ಬಹಳ ಉಪಯೋಗವಾಗಲಿದ್ದು, ಅವರಿಗೆ ಬೇಕಾದ ಸಮಯದಲ್ಲಿ ಡೇಟಾ ಬಳಕೆ ಮಾಡಿಕೊಳ್ಳಬಹುದು.!!

ಓದಿರಿ:'ATM'ಗೆ ಗುಡ್‌ಬೈ!..ಭವಿಷ್ಯದ ಬ್ಯಾಂಕ್‌ 'ITM' ಮಷಿನ್ ಬರಲಿದೆ ಶೀಘ್ರದಲ್ಲಿ!!.ಎಲ್ಲರೂ ತಿಳಿಯಬೇಕು!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Airtel launched a new plan for consumers that want to pay once and get done with for an entire year. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot