Subscribe to Gizbot

ಶಾಕಿಂಗ್ ಸುದ್ದಿ: ರಿಲಯನ್ಸ್ ಜಿಯೋ ಜೊತೆಗೆ ಕೈ ಜೋಡಿಸಲಿದೆ ಸ್ಯಾಮ್‌ಸಂಗ್..?

Written By:
ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ವಲಯದಿಂದ ಮತ್ತೊಂದು ಶಾಕಿಂಗ್ ಸುದ್ದಿ ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದ್ದು, ವಿಶ್ವದಲ್ಲೇ ಮೊಬೈಲ್ ತಯಾರಿಕೆಯಲ್ಲಿ ಎರಡನೇ ಸ್ಥಾನ ಪಡೆದಿರುವ ಕಂಪನಿ ಜೊತೆಗೆ ಕೈ ಜೋಡಿಸಲಿದೆ ಎನ್ನಲಾಗಿದೆ.

ಶಾಕಿಂಗ್ ಸುದ್ದಿ: ರಿಲಯನ್ಸ್ ಜಿಯೋ ಜೊತೆಗೆ ಕೈ ಜೋಡಿಸಲಿದೆ ಸ್ಯಾಮ್‌ಸಂಗ್..?


ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಾಮ್‌ಸಂಗ್ ಜೊತೆ ಕೈ ಜೋಡಿಸಲಿರುವ ಜಿಯೋ..?

ಸಾಮ್‌ಸಂಗ್ ಜೊತೆ ಕೈ ಜೋಡಿಸಲಿರುವ ಜಿಯೋ..?

ಸದ್ಯ ಮಾರುಕಟ್ಟೆಯಲ್ಲಿ ಅಲೆ ಸೃಷ್ಟಿಸಿರುವ ರಿಲಯನ್ಸ್ ಜಿಯೋ ಉಚಿತ ಸೇವೆಗಳ ಮೂಲಕ ಮಿಲಿಯನ್‌ಗಟ್ಟಲೆ ಗ್ರಾಹಕರನ್ನು ತನ್ನ ಜೋಳಿಗೆಗೆ ಸೇರಿಸಿಕೊಂಡಿದೆ, ಅಲ್ಲದೇ ಇನ್ನು ತನ್ನ ಗ್ರಾಹಕರ ಸಂಖ್ಯೆಯನ್ನು ಏರಿಸಿಕೊಳ್ಳುತ್ತಲೇ ಇದೆ. ಇದಲ್ಲದೇ ಉಚಿತ ಸೇವೆಯನ್ನು ಲೈಫ್ ಟೈಮ್ ನೀಡಲು ಚಿಂತನೆ ನಡೆಸುತ್ತಿದೆ ಇದೇ ಸಂದರ್ಭದಲ್ಲಿ ಸಾಮ್‌ಸಂಗ್ ಜೊತೆ ಕೈ ಜೋಡಿಸುವ ಸುದ್ದಿ ಹೊರ ಬಿದ್ದಿದೆ.

ಜಂಟಿ ಸುದ್ದಿಗೋಷ್ಠಿ..!

ಜಂಟಿ ಸುದ್ದಿಗೋಷ್ಠಿ..!

ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ವಿಶ್ವದ ಅತೀ ದೊಡ್ಡ ಮೊಬೈಲ್ ಮೇಳ 'ಮೊಬೈಲ್ ವರ್ಲ್ಡ್ ಕಾಂಗ್ರೇಸ್' ನಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ಮತ್ತು ಮೊಬೈಲ್ ತಯಾರಕಾ ಕಂಪನಿ ದಕ್ಷಿಣಾ ಕೊರಿಯಾ ಮೂಲದ ಸ್ಯಾಮ್‌ಸಂಗ್ ಒಂದಾಗಿ ಸುದ್ಧಿಗೋಷ್ಠಿಯನ್ನು ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಈ ವಿಷು ಬಹಿರಂಗಗೊಳಿಸಲಿದೆ ಎನ್ನುವ ಮಾಹಿತಿ ದೊರೆತಿದೆ.

ಫೆಬ್ರವರಿ 28 ರಂದು ಬಹಿರಂಗ..!

ಫೆಬ್ರವರಿ 28 ರಂದು ಬಹಿರಂಗ..!

ಫೆಬ್ರವರಿ 28 ರಂದು ಬೆಳಿಗ್ಗೆ 8.45ಕ್ಕೆ ಈ ಸುದ್ದಿಗೋಷ್ಠಿ ನಡೆಯಲಿದ್ದು, ಈ ಸಂದರ್ಭದಲ್ಲಿ ಜಿಯೋ ಮತ್ತು ಸ್ಯಾಮ್‌ಸಂಗ್ ನಡುವಿನ ಸಂಬಂಧದ ಕುರಿತು ಸಂಪೂರ್ಣ ಮಾಹಿತಿ ದೊರೆಯಲಿದೆ. ಸ್ಯಾಮ್‌ಸಂಗ್ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಗ್ರಾಹಕರನ್ನು ಹೊಂದಿದ್ದು, ಇದೇ ಮಾದರಿಯಲ್ಲಿ ಜಿಯೋ ಸಹ ಬೆಳೆಯುತ್ತಿದ್ದು, ಈ ಎರಡು ಕಂಪನಿಗಳು ಸೇರಿ ಹೊಸ ಕಾರ್ಯಕ್ಕೆ ಮುಂದಾಗಲಿವೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
The South Korean handset manufacturer, Samsung will host a joint press conference with India’s Reliance Jio at the tech show. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot