ವೊಡಾಫೋನ್, ಏರ್‌ಟೆಲ್‌ಗೆ 'ಮಿಸ್ಸಿಂಗ್ ಯೂ' ಮೆಸೇಜ್ ಮಾಡಿತು ಜಿಯೋ!

By Gizbot Bureau
|

ರಿಲಯನ್ಸ್ ಜಿಯೋ ಸಂಸ್ಥೆ ಭಾರತೀ ಏರ್ ಟೆಲ್, ವಡಾಫೋನ್ ಗಳಿಗೆ ಕಾಲೆಳೆಯುವ ಪ್ರಯತ್ನಕ್ಕೆ ಕೈಹಾಕಿದಂತಿದೆ. ಹೌದು ಇತ್ತೀಚೆಗೆ ರಿಲಯನ್ಸ್ ಜಿಯೋ ಸಂಸ್ಥೆ ಭಾರತೀ ಏರ್ ಟೆಲ್ ಮತ್ತು ವಡಾಫೋನ್ ಗಳಿಗೆ ನೆರೆಹೊರೆಯವರು ಎಂದು ಕರೆದು ಟ್ವೀಟ್ ವೊಂದನ್ನು ಮಾಡಿದೆ. ಇದೀಗ ಈ ಟ್ವೀಟ್ ಗೆ ಪ್ರತಿಕ್ರಿಯೆಗಳು ಕೂಡ ಬಂದಿದೆ.

ವೊಡಾಫೋನ್, ಏರ್‌ಟೆಲ್‌ಗೆ 'ಮಿಸ್ಸಿಂಗ್ ಯೂ' ಮೆಸೇಜ್ ಮಾಡಿತು ಜಿಯೋ!

ಅಪಹಾಸ್ಯದ ರೀತಿಯಲ್ಲಿ ಅವರ ಅನುಪಸ್ಥಿತಿಯನ್ನು ಕಂಪೆನಿಯು ಈ ರೀತಿಯಲ್ಲಿ ವರ್ಣಿಸಿದೆ. ”ಗುಲಾಬಿಗಳು ಕೆಂಪು ಬಣ್ಣದ್ದಾಗಿದೆ, ವಯಲೆಟ್ ಗಳು ನೀಲಿ ಬಣ್ಣದಲ್ಲಿರುತ್ತದೆ ಸಿಮ್ ಸ್ಲಾಟ್ 2 ರಲ್ಲಿರುವ ನೆರೆಹೊರೆಯವರು ನೀವೆಲ್ಲೀದ್ದೀರಿ?”

ಕಂಪೆನಿಯು ಟ್ವೀಟ್ ಹೀಗಿದೆ..

ರಿಲಯನ್ಸ್ ಹಿಸ್ಟರಿ:

ರಿಲಯನ್ಸ್ ಹಿಸ್ಟರಿ:

ಡಿಸೆಂಬರ್ 2015 ರಲ್ಲಿ ರಿಲಯನ್ಸ್ ಜಿಯೋ ಇಂಡಿಯನ್ ಟೆಲಿಕಾಂ ಸೆಕ್ಟರ್ ಗೆ ಕಾಲಿಟ್ಟಿತ್ತು. ಸೆಪ್ಟೆಂಬರ್ 2016 ರಲ್ಲಿ ಜಿಯೋ ಸಿಮ್ ನ್ನು ಖರೀದಿಸುವುದಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಾಯಿತು. ಪ್ರಾರಂಭಿಕ ಹಂತದಲ್ಲಿ ಈ ಸಿಮ್ 4ಜಿ ಅನೇಬಲ್ ಇರುವ ಸಿಮ್ ಸ್ಲಾಟ್ ಗಳಲ್ಲಿ ಮಾತ್ರವೇ ಕಾರ್ಯ ನಿರ್ವಹಿಸಿತು ಅಂದರೆ ಹೆಚ್ಚಿನ ಮೊಬೈಲ್ ಗಳಲ್ಲಿ ಸಿಮ್ ಸ್ಲಾಟ್ 1 ರಲ್ಲಿ ಮಾತ್ರವೇ ಕೆಲಸ ಮಾಡುತ್ತಿತ್ತು. ಹಾಗಾಗಿ ಜಿಯೋ ಸಿಮ್ ಹೆಚ್ಚಿನ ಮೊಬೈಲ್ ಗಳಲ್ಲಿ ಮೊದಲ ಸ್ಥಾನ ಗಿಟ್ಟಿಸಿದರೆ ಎರಡನೇ ಸ್ಥಾನಕ್ಕೆ ಇತರೆ ಆಪರೇಟರ್ ಗಳ ಸಿಮ್ ಗಳು ತಳ್ಳಲ್ಪಟ್ಟವು. ಇದೇ ಕಾರಣಕ್ಕೆ ಕಂಪೆನಿಯ ಇತ್ತೀಚೆಗಿನ ಟ್ವೀಟರ್ ಶ್ಲಾಘನೆಯು ಕಾಲೆಳೆಯುವಿಕೆಯಾಗಿದೆ.

ಆಕರ್ಷಕ ಬೆಲೆ ನೀಡಿ ಪ್ರಸಿದ್ಧಿ:

ಆಕರ್ಷಕ ಬೆಲೆ ನೀಡಿ ಪ್ರಸಿದ್ಧಿ:

ಇದರ ಪರಿಚಯವಾದಾಗಿನಿಂದಲೂ ಕೂಡ ಮುಖೇಶ್ ಅಂಬಾನಿ ಮಾಲೀಕತ್ವದ ಕಂಪೆನಿ ಟೆಲಿಕಾಂ ಸೆಕ್ಟರ್ ಗಳಲ್ಲಿ ಅಗ್ರೆಸ್ಸೀವ್ ಆಗಿರುವ ಮತ್ತು ಆಕರ್ಷಕ ಬೆಲೆಯಲ್ಲಿ ಲಭ್ಯವಾಗುವ ಪ್ಲಾನ್ ಗಳನ್ನು ಉದಾಹರಣೆಗೆ ಉಚಿತ ಡಾಟಾ, ಅನಿಯಮಿತ ಕರೆಗಳು ಮತ್ತು ಇತ್ಯಾದಿ ಬೆನಿಫಿಟ್ ಗಳನ್ನು ನೀಡಲು ಮುಂದಾಯಿತು. ಹಾಗಾಗಿ ಇದೇ ಮೊದಲ ಬಾರಿಗೆ ಮಾತ್ರವೇ ಅಲ್ಲ ಬದಲಾಗಿ ಈಗಾಗಲೇ ಹಲವು ಬಾರಿ ಇತರೆ ಆಪರೇಟರ್ ಗಳಿಗೆ ರಿಲಯನ್ಸ್ ಜಿಯೋ ಸ್ಪರ್ಧೆಯೊಡ್ಡಿದೆ.

ಆಕರ್ಷಕ ರೀತಿಯಲ್ಲಿ ಶುಭಾಶಯ:

ಆಕರ್ಷಕ ರೀತಿಯಲ್ಲಿ ಶುಭಾಶಯ:

2017 ರಲ್ಲಿ ಜಿಯೋ ಆಶ್ಚರ್ಯಕರ ರೀತಿಯಲ್ಲಿ ವಡಾಫೋನ್, ಐಡಿಯಾ ಸೆಲ್ಯೂಲರ್, ಏರ್ ಟೆಲ್ ಗೆ ಟ್ವಿಟರ್ ನಲ್ಲಿ ಶುಭಾಶಯ ಕೋರಿತ್ತು. ಈ ಟ್ವೀಟ್ ಕಂಪೆನಿಯು ಇತರೆ ಸ್ಪರ್ಧಾತ್ಮಕ ಕಂಪೆನಿಗಳು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ದೂರನ್ನು ಟ್ರಾಯ್ ಗೆ ನೀಡಿದ ನಂತರದ ದಿನಗಳಲ್ಲಿ ಪ್ರಕಟಿಸಲಾಗಿತ್ತು.

ರಿಪ್ಲೈ ಮಾಡದ ಇತರೆ ಸಂಸ್ಥೆಗಳು:

ರಿಪ್ಲೈ ಮಾಡದ ಇತರೆ ಸಂಸ್ಥೆಗಳು:

ಆದರೆ ಏರ್ ಟೆಲ್ ಮತ್ತು ವಡಾಫೋನ್ ಐಡಿಯಾ ಇದಕ್ಕೆ ರಿಪ್ಲೈ ಮಾಡಲಿಲ್ಲ ಆದರೆ ನೂತನ ಟ್ವೀಟ್ ಗೆ ಸಾಮಾಜಿಕ ಜಾಲತಾಣವು ವಿಭಿನ್ನವಾಗಿ ಪ್ರತಿಕ್ರಿಯಿಸಿದೆ. ಕೆಲವು ಜಿಯೋ ಬಳಕೆದಾರರು ರಿಲಯನ್ಸ್ ಜಿಯೋವನ್ನು ಹೊಗಳಿದರೆ ಇನ್ನೂ ಕೆಲವು ಮಂದಿ ತಾವು ಅನುಭವಿಸುತ್ತಿರುವ ಹತಾಶೆಯನ್ನು ಹೊರಹಾಕುವುದಕ್ಕೆ ಈ ಟ್ವೀಟ್ ನ್ನು ಬಳಸಿಕೊಂಡಿದ್ದಾರೆ.

ರಿಲಯನ್ಸ್ ಜಿಯೋ ಪ್ಲಾನ್:

ರಿಲಯನ್ಸ್ ಜಿಯೋ ಪ್ಲಾನ್:

ಮತ್ತೊಂದು ಸುದ್ದಿಯಲ್ಲಿ 200 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡ ನಂತರ ರಿಲಯನ್ಸ್ ಜಿಯೋ ಮಾರಾಟದ ವಿಭಾಗವನ್ನು ಪ್ರವೇಶಿಸುವ ಮೂಲಕ ವ್ಯಾಪಾರಿ ಸಮುದಾಯಕ್ಕೆ ಲಗ್ಗೆ ಇಡುವ ಪ್ರಯತ್ನ ಮಾಡುತ್ತಿದೆ. ವ್ಯಾಪಾರಿಗಳು ಮತ್ತು ಚಿಲ್ಲರೆ ಮಳಿಗೆಗಳು ಸುಮಾರು 3000 ರುಪಾಯಿ ಡೆಪಾಸಿಟ್ ಮಾಡಿದರೆ ರಿಲಯನ್ಸ್ ಜಿಯೋ PoS ಡಿವೈಸ್ ಪಡೆದುಕೊಳ್ಳಲು ತಯಾರಿದ್ದಾರೆ. ಕುತೂಹಲಕಾರಿ ವಿಚಾರವೇನೆಂದರೆ ಎಲ್ಲಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಟ್ರಾನ್ಸ್ಯಾಕ್ಷನ್ 2000 ರುಪಾಯಿ ಒಳಗಿನ ಡಿವೈಸ್ ಗಳಿಗೆ ಮರ್ಚಂಟ್ ಡಿಸ್ಕೌಂಟ್ ರೇಟ್(MDR) ಸೊನ್ನೆ ಆಗಿರುತ್ತದೆ.

Best Mobiles in India

Read more about:
English summary
Reliance Jio sends ‘missing you’ message to Airtel, Vodafone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X