Subscribe to Gizbot

ಜಯೋ ಪ್ರೈಮ್ ಸದಸ್ಯತ್ವದ ಅವಧಿ ವಿಸ್ತರಣೆ ಮಾಡಿದ್ದು ಯಾಕೆ..?

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಕ್ರಾಂತಿಯ ಅಲೆಯನ್ನು ಹುಟ್ಟಿಹಾಕಿರುವುದನ್ನು ನಾವು ಕಾಣಬದಾಗಿದೆ. ಇದೇ ಮಾರ್ಚ್ 31 ರಂದು ಕೊನೆಯಾಗುತ್ತಿದ್ದ ತನ್ನ ಪ್ರೈಮ್ ಸದಸ್ಯತ್ವವನ್ನು ಮತ್ತೇ ಒಂದು ವರ್ಷಗಳ ಕಾಲ ವಿಸ್ತರಿಸುವ ಘೋಷಣೆಯನ್ನು ಜಿಯೋ ಮಾಡಿದೆ. ಈ ಹಿನ್ನಲೆಯಲ್ಲಿ ಪ್ರತಿ ಬಾರಿ ಜಿಯೋ ಯೋಜನೆಯನ್ನು ನೀಡಲು ಒಂದೊಂದು ಕಾರಣ ಇದ್ದೇ ಇರಲಿದೆ. ಈ ಬಾರಿಯೂ ಒಂದು ಕಾರಣ ಇದೆ.

ಜಯೋ ಪ್ರೈಮ್ ಸದಸ್ಯತ್ವದ ಅವಧಿ ವಿಸ್ತರಣೆ ಮಾಡಿದ್ದು ಯಾಕೆ..?

ಜಿಯೋ ಸೇವೆಯನ್ನು ಆರಂಭಿಸಿ ಎರಡು ವರ್ಷ ಕಳೆಯುತ್ತಾ ಬಂದಿದ್ದು, ಜಿಯೋ ಬಳಕೆದಾರರು ಸಂಖ್ಯೆ ಏರುಗತಿಯಲ್ಲಿ ಸಾಗುತ್ತಲೇ ಇದೆ. ಇದೇ ಮಾದರಿಯಲ್ಲಿ ಇದೇ ತಿಂಗಳಲ್ಲಿ ಜಿಯೋ ತನ್ನ ಬಳಕೆದಾರರ ಸಂಖ್ಯೆಯನ್ನು 175 ಮಿಲಿಯನ್‌ಗೆ ವಿಸ್ತರಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಈ ಸಂಭ್ರಮವನ್ನು ತನ್ನ ಬಳಕೆದಾರರೊಂದಿಗೆ ಹಂಚಿಕೊಳ್ಳುವ ಸಲುವಾಗಿ ಪ್ರೈಮ್ ಸೇವೆಯ ಅವಧಿಯನ್ನು ಒಂದು ವರ್ಷದ ಅವಧಿಗೆ ಉಚಿತವಾಗಿ ವಿಸ್ತರಿಸಿದೆ ಎನ್ನಲಾಗಿದೆ.

2019ರ ಮಾರ್ಚ್ 31ರ ವರೆಗೂ ಜಿಯೋ ಪ್ರೈಮ್ ಸದಸ್ಯರು ಜಿಯೋ ನೀಡುವ ಉಚಿತ ಸೇವೆಗಳ ಲಾಭವನ್ನು ಪಡೆಯಬಹುದಾಗಿದೆ. ಈಗಾಗಲೇ ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡಿರುವವರು ಮತ್ತು ಹೊಸದಾಗಿ ಜಿಯೋ ಸೇವೆಯನ್ನು ಪಡೆಯುವವರು ಸಹ ಈ ಸೇವೆಯ ಲಾಭವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ 19 ರೂ.ಗಳಿಂದ ಹಿಡಿದು 9,999 ರೂ.ಗಳ ವರೆಗೆ ಜಿಯೋ ಪ್ಲ್ಯಾನ್‌ಗಳನ್ನು ಬಳಕೆದಾರರಿಗೆ ನೀಡುತ್ತಿದ್ದು, ಈ ಪ್ಲಾನ್‌ಗಳಲ್ಲಿ ಬೆಲೆಗಳಿಗೆ ತಕ್ಕ ಹಾಗೆ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳನ್ನು ಗ್ರಾಹಕರು ಬಳಸಬಹುದಾಗಿದೆ. ಇವುಗಳು ಕ್ರಮವಾಗಿ ವ್ಯಾಲಿಡಿಟಿಯನ್ನು ಹೊಂದಿವೆ ಎನ್ನಲಾಗಿದೆ.

ಜಯೋ ಪ್ರೈಮ್ ಸದಸ್ಯತ್ವದ ಅವಧಿ ವಿಸ್ತರಣೆ ಮಾಡಿದ್ದು ಯಾಕೆ..?

ಈದಲ್ಲದೇ ಜಿಯೋದಲ್ಲಿ ನಿತ್ಯ 1.5 ಜಿಬಿ ಡೇಟಾ ನೀಡುವ ನಾಲ್ಕು ಪ್ಲ್ಯಾನ್‌ಗಳು ಚಾಲ್ತಿಯಲ್ಲಿದ್ದು, ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದೆ. ಅದರೊಂದಿಗೆ ದಿನಕ್ಕೆ 1GB. 2GB ಮತ್ತು ಅದಕ್ಕಿಂತ ಹೆಚ್ಚಿನ ಡೇಟಾವನ್ನು ನೀಡುವ ಆಫರ್ ಗಳನ್ನು ಜಿಯೋದಲ್ಲಿ ಕಾಣಬಹುದಾಗಿದೆ. ಈ ಎಲ್ಲಾ ಪ್ಲಾನ್‌ಗಳಲ್ಲಿ ಅನ್‌ಲಿಮಿಟೆಡ್ ಕರೆ ಮತ್ತು ಎಸ್‌ಎಮ್‌ಎಸ್‌ ಕಳುಹಿಸುವ ಅವಕಾಶವನ್ನು ಹೊಂದಿವೆ.

English summary
Reliance Jio Subscriber Base Crosses 175 Million. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot