ಜಿಯೋ ಗ್ರಾಹಕರಿಗೆ ಸಲಾಮ್ ಹೊಡೆದ ಅಂಬಾನಿ!..ಭಾರೀ ಲಾಭದಲ್ಲಿ ಕಂಪೆನಿ!!

|

ಭಾರತದ ಟೆಲಿಕಾಂ ಗೇಮ್ ಚೇಂಜರ್ ರಿಲಯನ್ಸ್ ಜಿಯೋ ಕಂಪೆನಿಯ ನಿವ್ವಳ ಲಾಭದಲ್ಲಿ ಈ ಬಾರೀಯೂ ಏರಿಕೆ ಕಂಡುಬಂದಿದೆ. ಕಳೆದ ಡಿಸೆಂಬರ್ 2018ರ ಅವಧಿಯಲ್ಲಿ ಜಿಯೋವಿನ ನಿವ್ವಳ ಲಾಭ ಶೇ 65 ರಷ್ಟು ಏರಿಕೆ ಕಂಡು ಒಟ್ಟು 831 ಕೋಟಿ ರೂ. ಲಾಭವನ್ನು ದಾಖಲಿಸಿದ್ದರೆ, ಕಾರ್ಯಾಚರಣಾ ಆದಾಯ ಶೇ.50.9 ರಷ್ಟು ಹೆಚ್ಚಳವಾಗಿ 10,383 ಕೋಟಿ ರೂಪಾಯಿಗಳಿಗೆ ತಲುಪಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 504 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದ್ದ ಜಿಯೋ, ಒಟ್ಟಾರೆ ಕಾರ್ಯಾಚರಣಾ ಆದಾಯವಾಗಿ 6,879 ಕೋಟಿ ರೂ.ಆದಾಯವನ್ನು ಗಳಿಸಿತ್ತು. ಆದರೆ, ಡಿಸೆಂಬರ್ 2018ರ ಅಂತ್ಯದ ವೇಳೆಗೆ ಜಿಯೋ ಗ್ರಾಹಕರ ಸಂಖ್ಯೆ ಭಾರೀ ಹೆಚ್ಚಳವಾಗಿರುವ ಕಾರಣದಿಂದ ಈ ಬಾರಿ ಆದಾಯ ಕೂಡ ಹೆಚ್ಚಾಗಿದೆ ಎಂದು ಕಂಪೆನಿಯೇ ಮಾಹಿತಿ ನೀಡಿದೆ.

ಜಿಯೋ ಗ್ರಾಹಕರಿಗೆ ಸಲಾಮ್ ಹೊಡೆದ ಅಂಬಾನಿ!..ಭಾರೀ ಲಾಭದಲ್ಲಿ ಕಂಪೆನಿ!!

ಈ ಬಗ್ಗೆ ಮಾತನಾಡಿರುವ ಜಿಯೋ ಮಾಲಿಕ ಮುಕೇಶ್ ಅಂಬಾನಿ ಅವರು ಜಿಯೋ ಕುಟುಂಬದ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ. ಹಾಗಾದರೆ, ಜಿಯೋ ಕಂಪೆನಿಯ ಲಾಭದಲ್ಲಿ ಏರಿಕೆಯಾಗಿರುವ ಬಗ್ಗೆ ಅಂಬಾನಿ ಹೇಳಿದ್ದೇನು?, ಜಿಯೋ ಬಳಕೆದಾರರು ಬಳಕೆ ಮಾಡಿರುವ ಡೇಟಾ, ಕರೆಗಳ ಪ್ರಮಾಣ ಎಷ್ಟು ಎಂಬ ಹಲವು ವಿಶೇಷ ಮಾಹಿತಿಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಜಿಯೋಗೆ ಈಗ 28 ಕೋಟಿ ಗ್ರಾಹಕರು!

ಜಿಯೋಗೆ ಈಗ 28 ಕೋಟಿ ಗ್ರಾಹಕರು!

ಡಿಸೆಂಬರ್ 2018ರ ಅವಧಿಯ ವೇಳೆಗೆ 28 ಕೋಟಿ ಗ್ರಾಹಕರನ್ನು ಹೊಂದಿರುವುದಾಗಿ ರಿಲಯನ್ಸ್ ಜಿಯೋ ಸಂಸ್ಥೆ ಮಾಹಿತಿ ನೀಡಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಜಿಯೋ ಗ್ರಾಹಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಎಲ್ಲರೂ ಮತ್ತು ಎಲ್ಲವನ್ನೂ ಸಂಪರ್ಕಿಸುವ ನಮ್ಮ ದೃಷ್ಠಯಿಂದಾಗಿ ಜಿಯೋ ಈ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ಡೇಟಾ ಬಳಕೆಯಲ್ಲಿ ಹೆಚ್ಚಳ!

ಡೇಟಾ ಬಳಕೆಯಲ್ಲಿ ಹೆಚ್ಚಳ!

ಜಿಯೋ ನೆಟ್‌ವರ್ಕ್‌ನಲ್ಲಿ ಪ್ರತಿ ತಿಂಗಳ ಪ್ರತಿ ಬಳಕೆದಾರರಿಗೆ ಸರಾಸರಿ ಬಳಸಿದ ಡೇಟಾ ಪ್ರಮಾಣವು ಮತ್ತಷ್ಟು ಹೆಚ್ಚಳವಾಗಿರುವುದನ್ನು ಜಿಯೋ ತಿಳಿಸಿದೆ. ಕಳೆದ ವರ್ಷ ಜಿಯೋ ಗ್ರಾಹಕ ಸರಾಸರಿ 9.6 GB ಯಷ್ಟು ಮೊಬೈಲ್ ಡೇಟಾವನ್ನು ಬಳಸಿದ್ದರೆ, ಈ ವರ್ಷ ಪ್ರತಿ ಜಿಯೋ ಗ್ರಾಹಕನ ಸರಾಸರಿ ಮೊಬೈಲ್ ಡೇಟಾ ಬಳಕೆ 10.8GBಗೆ ಏರಿಕೆಯಾಗಿದೆ ಎಂದು ಕಂಪೆನಿ ತಿಳಿಸಿದೆ.

ಡೇಟಾ ಮತ್ತು ಕರೆಗಳು ದ್ವಿಗುಣ!

ಡೇಟಾ ಮತ್ತು ಕರೆಗಳು ದ್ವಿಗುಣ!

2017-18ರ ಮೂರನೇ ತ್ರೈಮಾಸಿಕದಲ್ಲಿ ಒಟ್ಟು 431 ಕೋಟಿ ಜಿಬಿ ಡೇಟಾ ಬಳಕೆ ಮಾಡಿದ್ದ ಜಿಯೋ ಬಳಕೆದಾರರು, ಈ ವರ್ಷ ಒಟ್ಟು 864 ಕೋಟಿ ಜಿಬಿ ಡೇಟಾವನ್ನು ಪೂರೈಸಿ ದ್ವಿಗುಣಗೊಳಿಸಿದ್ದಾರೆ. ಇದೇ ವೇಳೆಯಲ್ಲಿ ವೀಡಿಯೊ ಬಳಕೆ 460 ಕೋಟಿ ಗಂಟೆಗಳಷ್ಟು ಹೆಚ್ಚಳವಾಗಿದ್ದರೆ, ಧ್ವನಿ ಕರೆಗಳು 694 ನಿಮಿಷಗಳಿಂದ ಸರಾಸರಿ 794 ನಿಮಿಷಗಳಿಗೆ ಹೆಚ್ಚಿದೆ. .

ಸರಾಸರಿ ಆದಾಯ ಇಳಿಕೆ!

ಸರಾಸರಿ ಆದಾಯ ಇಳಿಕೆ!

ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿರುವ ಜಿಯೋವಿನ ಸರಾಸರಿ ಗ್ರಾಹಕನ ಆದಾಯ ಶೇ 15.5 ರಷ್ಟು ಇಳಿಕೆ ಕಂಡಿದೆ. ಗ್ರಾಹಕರ ಸಂಖ್ಯೆಯನ್ನು 28 ಕೋಟಿಗೆ ಏರಿಕೆ ಕಂಡಿದ್ದರಿಂದ ಪ್ರತಿ ಜಿಯೋ ಗ್ರಾಹಕನಿಂದ ಈ ಬಾರಿ ಕೇವಲ 130 ರೂ. ಆದಾಯವನ್ನು ಜಿಯೋ ಪಡೆದುಕೊಂಡಿದೆ. ಆದರೆ, ಈ ಹಿಂದಿನ ವರ್ಷದಲ್ಲಿ ಜಿಯೋ ಸರಾಸರಿ ಗ್ರಾಹಕನ ಆದಾಯ 154 ರೂ. ರಷ್ಟಿತ್ತು

ವಿಶ್ವದ ದೊಡ್ಡ ಟೆಲಿಕಾಂ ಆಗುವತ್ತ ಜಿಯೋ!

ವಿಶ್ವದ ದೊಡ್ಡ ಟೆಲಿಕಾಂ ಆಗುವತ್ತ ಜಿಯೋ!

ಅತ್ಯುತ್ತಮ ಗುಣಮಟ್ಟದ ಮತ್ತು ಅತ್ಯಂತ ಉತ್ತಮ ದರದಲ್ಲಿ ಸೇವೆಯನ್ನು ಒದಗಿಸುತ್ತಿರುವ ರಿಲಯನ್ಸ್ ಜಿಯೋ ಪ್ರಪಂಚದ ಅತಿದೊಡ್ಡ ಮೊಬೈಲ್ ಡಾಟಾ ನೆಟ್ವರ್ಕ್ ಆಗುವತ್ತ ಹೆಜ್ಜೆಹಾಕಿದೆ. ಜಿಯೋ ಕುಟುಂಬವು ಈಗ ಉತ್ಕೃಷ್ಟ ಗುಣಮಟ್ಟದಲ್ಲಿದ್ದು, ಒಟ್ಟಾರೆ 280 ಮಿಲಿಯನ್ ಗ್ರಾಹಕರನ್ನು ಹೊಂದಿರುವುದು ಮೊದಲ ಹೆಜ್ಜೆ ಎಂಬರ್ಥದಲ್ಲಿ ಮುಖೇಶ್ ಅಂಬಾನಿ ಅವರು ಹೇಳಿದ್ದಾರೆ.

Best Mobiles in India

English summary
Jio's revenue during the period under review stood at Rs. 10,383 crores. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X