ಜಿಯೋ ಗ್ರಾಹಕರ ಅಚ್ಚುಮೆಚ್ಚಿನ ಟೆಲಿಕಾಂ ಆಗಿದೆಯೇ!?..ಟ್ರಾಯ್ ರಿಪೋರ್ಟ್ ಹೇಳುತ್ತಿರುವುದು ಏನು?

ಟ್ರಾಯ್ ಬಿಡುಗಡೆ ಮಾಡಿರುವ ಡೇಟಾ ಪ್ರಕಾರ ಈಗಲೂ ಜಿಯೋ ಗ್ರಾಹಕರ ಅಚ್ಚುಮೆಚ್ಚಿನ ಟೆಲಿಕಾಂ ಆಗಿ ಹೊರಹೊಮ್ಮಿದ್ದು, ನವೆಂಬರ್‌ನಲ್ಲಿ 6.1 ದಶಲಕ್ಷ ಗ್ರಾಹಕರನ್ನು ಜಿಯೋ ಸೆಳೆದಿದೆ.!!

|

ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ 2017ರ ನವೆಂಬರ್ ತಿಂಗಳ ಮಾಸಿಕ ಚಂದಾದಾರರ ಡೇಟಾವನ್ನು ಬಿಡುಗಡೆ ಮಾಡಿದೆ. ಟ್ರಾಯ್ ಬಿಡುಗಡೆ ಮಾಡಿರುವ ಡೇಟಾ ಪ್ರಕಾರ ಈಗಲೂ ಜಿಯೋ ಗ್ರಾಹಕರ ಅಚ್ಚುಮೆಚ್ಚಿನ ಟೆಲಿಕಾಂ ಆಗಿ ಹೊರಹೊಮ್ಮಿದ್ದು, ನವೆಂಬರ್‌ನಲ್ಲಿ 6.1 ದಶಲಕ್ಷ ಗ್ರಾಹಕರನ್ನು ಜಿಯೋ ಸೆಳೆದಿದೆ.!!

ಈಗಲೂ ಕೂಡ ಏರ್‌ಟೆಲ್ ಭಾರತದ ಟೆಲಿಕಾಂ ಅನ್ನು ಮುನ್ನಡೆಸುತ್ತಿದ್ದು, ದೇಶದ ಒಟ್ಟು ಮೊಬೈಲ್ ಬಳಕೆದಾರರಲ್ಲಿ 24.91% ಬಳಕೆದಾರರು ಏರ್‌ಟೆಲ್ ತೆಕ್ಕೆಯಲ್ಲಿಯೇ ಇದ್ದಾರೆ.!! ಆದರೆ, 4G ಬಳಕೆದಾರರನ್ನು ಸೆಳೆಯುವುದರಲ್ಲಿ ಜಿಯೋ ಈಗಲೂ ಮೊದಲಿನ ಸ್ಥಾನದಲ್ಲಿಯೇ ಮುಂದುವರೆದಿದೆ ಎನ್ನುವುದನ್ನು ಟ್ರಾಯ್ ಡೇಟಾದಲ್ಲಿ ನೋಡಬಹುದಾಗಿದೆ.!!

ಜಿಯೋ ಗ್ರಾಹಕರ ಅಚ್ಚುಮೆಚ್ಚಿನ ಟೆಲಿಕಾಂ ಆಗಿದೆಯೇ!?..ಟ್ರಾಯ್ ರಿಪೋರ್ಟ್!!

ಇನ್ನು ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹಲವು ಬದಲಾವಣೆಯಾಗಿದ್ದು, 2017ರ ನವೆಂಬರ್ ತಿಂಗಳ ಮಾಸಿಕ ಚಂದಾದಾರರ ಡೇಟಾ ಪಟ್ಟಿ ಇನ್ನು ಹಲವು ಅಚ್ಚರಿ ಮಾಹಿತಿಗಳನ್ನು ಹೊರಹಾಕಿದೆ.!! ಹಾಗಾದರೆ, ಟ್ರಾಯ್ ಬಿಡುಗಡೆ ಮಾಡಿರುವ ಡೇಟಾದಲ್ಲಿ ಏನೆಲ್ಲಾ ಕುತೋಹಲ ಅಂಶಗಳಿವೆ ಎಂಬುದನ್ನು ತಿಳಿಯಿರಿ.!!

ಒಟ್ಟು ಚಂದಾದರರ ಸಂಖ್ಯೆ ಇಳಿಕೆ!!

ಒಟ್ಟು ಚಂದಾದರರ ಸಂಖ್ಯೆ ಇಳಿಕೆ!!

ಭಾರತದಲ್ಲಿ ದೂರವಾಣಿ ಸಂಖ್ಯೆಯ ಸಂಖ್ಯೆ 1,201.72 ದಶಲಕ್ಷದಿಂದ ಅಕ್ಟೋಬರ್ 2017 ರ ವೇಳೆಗೆ 1,185.88 ದಶಲಕ್ಷಕ್ಕೆ ಇಳಿದಿದೆ ಮತ್ತು 1.32% ನಷ್ಟು ಮಾಸಿಕ ಇಳಿಮುಖ ದರವನ್ನು ತೋರಿಸುತ್ತಿದೆ.! ನಗರ ಪ್ರದೇಶದಲ್ಲಿ ಚಂದಾದರರ ಸಂಖ್ಯೆ 697.54 ದಶಲಕ್ಷದಿಂದ 684.89 ದಶಲಕ್ಷಕ್ಕೆ ಇಳಿದಿದ್ದರೆ, ಆದರೆ ಗ್ರಾಮೀಣ ಪ್ರದೇಶದಲ್ಲಿ 504.19 ದಶಲಕ್ಷದಿಂದ 500.99 ದಶಲಕ್ಷಕ್ಕೆ ಇಳಿದಿದೆ.!!

ಖಾಸಾಗಿ ಕಂಪೆನಿಗಳ ದರ್ಬಾರ್!!

ಖಾಸಾಗಿ ಕಂಪೆನಿಗಳ ದರ್ಬಾರ್!!

2017 ನವೆಂಬರ್‌ ವೇಳೆಗೆ ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರರ ಚಂದಾದಾರರ ಸಂಖ್ಯೆ 90.44% ಮಾರುಕಟ್ಟೆ ಪಾಲನ್ನು ಹೊಂದಿದೆ. ಆದರೆ, ಸರ್ಕಾರಿ ನಿಯಮಿತ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಸೇವಾ ಪೂರೈಕೆದಾರರು ಶೇ. 9.56% ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ಟೆಲಿಕಾಂ ಕ್ಷೇತ್ರದಲ್ಲಿ ಖಾಸಾಗಿ ಕಂಪೆನಿಗಳ ದರ್ಬಾರ್ ನೋಡಬಹುದು.!!

ಉಳಿದಿದೆ ಏರ್‌ಟೆಲ್ ಸಾಮ್ರಾಜ್ಯ!!

ಉಳಿದಿದೆ ಏರ್‌ಟೆಲ್ ಸಾಮ್ರಾಜ್ಯ!!

ಭಾರತದಲ್ಲಿ ಏರ್‌ಟೆಲ್ 24.91% ಪಾಲು ಹೊಂದಿದಿದ್ದು, ಭಾರತದ ಟೆಲಿಕಾಂ ಅನ್ನು ಮುನ್ನಡೆಸುತ್ತಿದೆ. ಅದರ ನಂತರ ಸ್ಥಾನ 18.15% ಮಾರುಕಟ್ಟೆ ಪಾಲನ್ನು ಪಡೆದಿರುವ ವೊಡಾಫೋನ್‌ಗೆ ಸಿಕ್ಕಿದ್ದರೆ, ಐಡಿಯಾ 16.69% ಮಾರುಕಟ್ಟೆ ಪಾಲನ್ನು ಹೊಂದಿ ಮೂರನೇ ಸ್ಥಾನಕ್ಕೆ ತೃಪ್ತಿಯಾಗಿದೆ.!! ಇನ್ನು ರಿಲಯನ್ಸ್ ಜಿಯೋ 13.08% ಪಾಲು ಪಡೆದು ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದೆ.!!

ಪತನವಾಗುತ್ತಿವೆ ಟೆಲಿಕಾಂ ಕಂಪೆನಿಗಳು!!

ಪತನವಾಗುತ್ತಿವೆ ಟೆಲಿಕಾಂ ಕಂಪೆನಿಗಳು!!

ಟೆಲಿಕಾಂನಲ್ಲಿ ನಡೆಯುತ್ತಿರುವ ದರಸಮರಕ್ಕೆ ಟೆಲಿಕಾಂ ಕಂಪೆನಿಗಳು ನೆಲಕಚ್ಚುತ್ತಿವೆ.! ಬಾಗಿಲು ಹಾಕಿದ ಆರ್‌ಕಾಂನಿಂದ 25 ದಶಲಕ್ಷ ಚಂದಾದಾರರು ಹೊರಹೋಗಿದ್ದರೆ, ಏರ್ಸೆಲ್ ಮತ್ತು ಟೆಲಿನಾರ್ ಕ್ರಮವಾಗಿ 6.5 ಲಕ್ಷ ಮತ್ತು 1.2 ಮಿಲಿಯನ್ ಚಂದಾದಾರರನ್ನು ಕಳೆದುಕೊಂಡು ಪತನದ ಅಂಚಿಗೆ ಬಂದುನಿಂತಿವೆ.!!

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಜಿಯೋ ಮೇಲೆ ಗ್ರಾಹಕನ ಒಲವು!!

ಜಿಯೋ ಮೇಲೆ ಗ್ರಾಹಕನ ಒಲವು!!

ಟೆಲಿಕಾಂ ಕಂಪೆನಿಗಳಲ್ಲಿ ಭಾರತೀಯ ಗ್ರಾಹಕ ಜಿಯೋ ಮೇಲೆ ಒಲವು ತೋರುತ್ತಿದ್ದಾನೆ ಎಂದು ಹೇಳಬಹುದಾಗಿದೆ. ಈ ವರ್ಷ ಕೂಡ ಜಿಯೋ ತನ್ನ ಆಫರ್‌ಗಳ ಬೆಲೆಯನ್ನು ಇಳಿಸಿಕೊಂಡಿರುವುದರಿಂದ ಜಿಯೋಗೆ ಮತ್ತಷ್ಟು ಗ್ರಾಹಕರು ಸೇರ್ಪಡೆಯಾಗುವ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದಾಗಿದೆ.!!

ಮೊಬೈಲ್ ಮಾರುಕಟ್ಟೆಯನ್ನು ಬೆಚ್ಚಿ ಬೀಳಿಸಿದೆ ಶಿಯೋಮಿ 'ರೆಡ್‌ಮಿ ನೋಟ್ 5' ಬೆಲೆ!!ಮೊಬೈಲ್ ಮಾರುಕಟ್ಟೆಯನ್ನು ಬೆಚ್ಚಿ ಬೀಳಿಸಿದೆ ಶಿಯೋಮಿ 'ರೆಡ್‌ಮಿ ನೋಟ್ 5' ಬೆಲೆ!!

Best Mobiles in India

English summary
The Telecom Regulatory Authority of India (Trai) today released monthly subscriber data for the month of November 2017.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X