ಜಿಯೋ, ಏರ್‌ಟೆಲ್ 'ಡೇಟಾ ವಾರ್'...293 ರೂ.ಗೆ ಮತ್ತೊಂದು ಶಾಕಿಂಗ್ ಏರ್‌ಟೆಲ್ ಆಫರ್!!

Written By:

ಜಿಯೋ ಮತ್ತು ಏರ್‌ಟೆಲ್ ಫೈಟ್ ಇಲ್ಲಿಗೆ ನಿಲ್ಲುವಂತೆ ಕಾಣುತ್ತಿಲ್ಲ.!! ಹಾಗಾಗಿ, ಜಿಯೋಗೆ ಕೌಂಟರ್ ನೀಡಲು ಏರ್‌ಟೆಲ್ ಏನೇ ಪ್ಲಾನ್‌ಗಳನ್ನು ಮಾಡಿದರೂ ಅದು ಉಪಯೋಗಕ್ಕೆ ಬರುತ್ತಿಲ್ಲವೇನೋ.! ಅದಕ್ಕಾಗಿಯೇ ಏರ್‌ಟೆಲ್ ಇದೀಗ ಜಿಯೋ ಜೊತೆಯಲ್ಲಿ ದರಸಮರಕ್ಕೆ ನಿಂತಿದೆ.!!

ಅತಿ ಹೆಚ್ಚು ಸ್ಪಿಡ್ ನೆಟ್‌ವರ್ಕ್ ಎಂಬ ಹಣಪಟ್ಟಿ ಕೆಲಸಕ್ಕೆ ಬಾರದು ಎಂದು ತಿಳಿದಿರುವ ಏರ್‌ಟೆಲ್ ಇದೀಗ ಜಿಯೋ ಧನ್‌ ಧನಾ ಧನ್ ಆಫರ್‌ಗೂ ಕಡಿಮೆ ಬೆಲೆಯಲ್ಲಿ ನೂತನ ಆಫರ್ ಒಂದನ್ನು ಬಿಡುಗಡೆ ಮಾಡಿದೆ.!! ಹೌದು, ಏರ್‌ಟೆಲ್ ಹೊಸದಾಗಿ 293 ರೂಪಾಯಿಗಳ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು, ಜಿಯೋ ಗ್ರಾಹಕರಿಗೆ ಮತ್ತೆ ಬಲೆಬೀಸಿದೆ.!!

ಹಾಗಾದರೆ, ಏರ್‌ಟೆಲ್ ಬಿಡುಗಡೆಮಾಡಿರುವ ನೂತನ 293 ರೂ. ಪ್ಲಾನ್ ಆಫರ್ ಏನು? 293 ರೂಪಾಯಿಗಳಿಗೆ ಏರ್‌ಟೆಲ್‌ ಏನೆಲ್ಲಾ ಆಫರ್‌ಗಳನ್ನು ಬಿಡುಗಡೆ ಮಾಡಿದೆ. ಆಫರ್ ಎಲ್ಲಿಯವರೆಗೂ ಲಭ್ಯವಿದೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
309 v/s 293!!

309 v/s 293!!

ಸಧ್ಯ ಜಿಯೋ ಧನ್‌ಧನಾಧನ್ ಆಫರ್‌ಗೆ ಕೌಂಟರ್ ನೀಡಲು ಏರ್‌ಟೆಲ್ ಈ ಪ್ಲಾನ್ ಬಿಡುಗಡೆ ಮಾಡಿದ್ದು, ಜಿಯೋ ಗ್ರಾಹಕರನ್ನು ಮತ್ತೆ ಸೆಳೆಯಲು ಏರ್‌ಟೆಲ್ ತಂತ್ರ ಹೂಡಿದೆ. ಹಾಗಾಗಿಯೇ ಜಿಯೋ ಗಿಂತಲೂ ಕಡಿಮೆ ಬೆಲೆಯಲ್ಲಿ ಆಫರ್ ಬಿಡುಗಡೆ ಮಾಡಿದೆ.!!

 293 ರೂಪಾಯಿಗೆ ಏನೆಲ್ಲಾ ಆಫರ್?

293 ರೂಪಾಯಿಗೆ ಏನೆಲ್ಲಾ ಆಫರ್?

ಈ ಮೊದಲೇ ಹೇಳಿದಂತೆ ಏರ್‌ಟೆಲ್ 293 ರೂಪಾಯಿಗೆ ದೇಶದಾಧ್ಯಂತ ಅನ್‌ಲಿಮಿಟೆಡ್ ಕಾಲ್, ಮತ್ತು ಅನ್‌ಲಿಮಿಟೆಡ್ ಡೇಟಾ ನೀಡಿದೆ. ಈ ಆಫರ್‌ನಲ್ಲಿ 56 ದಿವಸಗಳಿಗೆ 56GB ಡೇಟಾ ಪಡೆಯಬಹುದಾಗಿದೆ.ಆದರೆ, ಡೇಟಾ ಬಳಕೆಗೆ ಲಿಮಿಟ್ ಇಲ್ಲ.!!

4G ಗ್ರಾಹಕರಿಗೆ ಮಾತ್ರ!!

4G ಗ್ರಾಹಕರಿಗೆ ಮಾತ್ರ!!

ಏರ್‌ಟೆಲ್‌ನ ಈ 293 ರೂಪಾಯಿಯ ಆಫರ್ ಕೇವಲ ಏರ್‌ಟೆಲ್ 4G ಗ್ರಾಹಕರಿಗೆ ಮಾತ್ರ ಲಭ್ಯವಿದ್ದು, 2G ಮತ್ತು 3G ಗ್ರಾಹಕರು ಈ ಆಫರ್‌ಗೆ ಲಭ್ಯವಿಲ್ಲಾ. ಕೇವಲ 4G ಬಳಕೆದಾರರನ್ನು ಗುರಿಯಾಗಿಸಿಕೊಂಡು ಈ ಆಫರ್‌ ನೀಡಲಾಗಿದೆ.!!

ಆಫರ್‌ಗೆ ಜಿಯೋ ಕೌಂಟರ್!

ಆಫರ್‌ಗೆ ಜಿಯೋ ಕೌಂಟರ್!

ಏರ್‌ಟೆಲ್ ಬಿಡುಗಡೆ ಮಾಡಿರುವ ನೂತನ ಆಫರ್‌ಗೆ ಜಿಯೋ ಕೌಂಟರ್ ನೀಡಿದ್ದು, 4G ಗ್ರಾಹಕರಿಗಲ್ಲದೇ ಇತರ ಗ್ರಾಹಕರಿಗೆ ಏರ್‌ಟೆಲ್ ಕೇವಲ 50MB ಡೇಟಾ ನೀಡುತ್ತಿದೆ. ಹೀಗೆ ಒಂದು ಜಿಬಿ ಡೇಟಾಗೆ ಏರ್‌ಟೆಲ್ 4000 ರೂಪಾಯಿಗಳ ದರ ವಿಧಿಸುತ್ತಿದ್ದಾರೆ ಎಂದು ಹೇಳಿದೆ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Reliance Jio vs Bharti Airtel fight over recharge offers: We explain what the Rs 293 and Rs 449 plan offer. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot