ಹುರ್ರೇ! ಜಿಯೋ ವೆಲ್‌ಕಮ್ ಆಫರ್ ಮಾರ್ಚ್ 2017 ರವರೆಗೆ ವಿಸ್ತರಣೆ

ಇಂದಿನ ಲೇಖನದಲ್ಲಿ ಈ ವೆಲ್‌ಕಮ್ ಆಫರ್ ಮಾರ್ಚ್ 2017ರವರೆಗೆ ಏಕೆ ವಿಸ್ತರಣೆಯಾಗುತ್ತಿದೆ ಎಂಬುದನ್ನು ಇಂದಿಲ್ಲಿ ಕಂಡುಕೊಳ್ಳೋಣ.

By Shwetha
|

ಹೆಚ್ಚಿನ ಜನರು ಪ್ರಸ್ತುತ ಜಿಯೋ ಸೇವೆಗೆ ಚಂದಾದಾರರಾಗಿದ್ದಾರೆ. ಪ್ರಸ್ತುತ ಜಿಯೋ ವಿಶ್ವದಾಖಲೆಯನ್ನೇ ಮಾಡಿದ್ದು ಒಂದೇ ತಿಂಗಳಲ್ಲಿ ಸರ್ವೀಸ್ ಪ್ರೊವೈಡರ್ 16 ಮಿಲಿಯನ್ ಬಳಕೆದಾರರನ್ನು ತನ್ನ ತೆಕ್ಕೆಗೆ ಬರಸೆಳೆದುಕೊಂಡಿದೆ. ಜಿಯೋ ವೆಲ್‌ಕಮ್ ಆಫರ್ ನೀಡುತ್ತಿರುವ ಸೇವೆಗಳನ್ನು ಯಾವುದೇ ಬಳಕೆದಾರರು ಮಿಸ್ ಮಾಡಿಕೊಳ್ಳುತ್ತಿಲ್ಲ. ಬದಲಾಗಿ ಈಗ ರಿಲಾಯನ್ಸ್ ಸಂಸ್ಥೆಯಲ್ಲಿ ಉಚಿತ ಸಿಮ್‌ಗಾಗಿ ನೂಕು ನುಗ್ಗಲು ಉಂಟಾಗುತ್ತಿದೆ.

ಓದಿರಿ: ಜಿಯೋ 4ಜಿ ಇಂಟರ್ನೆಟ್ ಸ್ಲೋವಾಗಲು ಕಾರಣಗಳೇನು?

ಪ್ರಸ್ತುತ ಜಿಯೋ ವೆಲ್‌ಕಮ್ ಆಫರ್ ಅನ್ನು ಡಿಸೆಂಬರ್ 31, 2016 ರವರೆಗೆ ಲಾಂಚ್ ಮಾಡಿದ್ದು, ಇದು ಮಾರ್ಚ್ 2017 ರವರೆಗೆ ವಿಸ್ತರಿಸಬಹುದು ಎಂಬ ಒಂದು ಸುದ್ದಿ ಕೂಡ ಇದೆ. ಇಂದಿನ ಲೇಖನದಲ್ಲಿ ಈ ವೆಲ್‌ಕಮ್ ಆಫರ್ ಮಾರ್ಚ್ 2017ರವರೆಗೆ ಏಕೆ ವಿಸ್ತರಣೆಯಾಗುತ್ತಿದೆ ಎಂಬುದನ್ನು ಇಂದಿಲ್ಲಿ ಕಂಡುಕೊಳ್ಳೋಣ.

ಓದಿರಿ: ಏರ್‌ಟೆಲ್‌ನಲ್ಲಿ ಉಚಿತ 3ಜಿಬಿ ಡೇಟಾ ಪಡೆದುಕೊಳ್ಳುವುದು ಹೇಗೆ?

ಜಿಯೋದಿಂದ ಜಿಯೋ ಕರೆಗಳ ಹೆಚ್ಚಳ

ಜಿಯೋದಿಂದ ಜಿಯೋ ಕರೆಗಳ ಹೆಚ್ಚಳ

ಜಿಯೋ ಸಂಖ್ಯೆಗಳನ್ನು ಬಳಸಿಕೊಂಡು ಕರೆಮಾಡುವಲ್ಲಿ ಸಮಸ್ಯೆಯೊಂದು ಉದ್ಭವಿಸಿದೆ. ಜಿಯೋ ಸಂಖ್ಯೆಯಿಂದ ಕರೆಮಾಡಲು ಇತರ ಟೆಲಿಕಾಮ್ ಸೇವೆಗಳು ಬೆಂಬಲವನ್ನು ನೀಡುತ್ತಿಲ್ಲ. ರಿಲಾಯನ್ಸ್ ಜಿಯೋದಿಂದ ಜಿಯೋಗೆ ಮಾಡುವ ಕರೆಗಳ ಪ್ರಮಾಣವನ್ನು ಹೆಚ್ಚಿಸಲಿದ್ದು, ಇದರ ಬಗ್ಗೆ ಯೋಜನೆಗಳನ್ನು ಹಮ್ಮಿಕೊಂಡಿದೆ. ವೆಲ್‌ಕಮ್ ಆಫರ್ ಅನ್ನು ಕಂಪೆನಿ ವಿಸ್ತರಣೆ ಮಾಡಿದಲ್ಲಿ, ಜಿಯೋ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಲಿದೆ ಅಂತೆಯೇ ಕರೆಗಳ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳವನ್ನು ಕಂಡುಕೊಳ್ಳಬಹುದಾಗಿದೆ.

ಕರೆ ಸಮಸ್ಯೆಗಳನ್ನು ಜಿಯೋ ಪತ್ತೆಹಚ್ಚುತ್ತಿದೆ

ಕರೆ ಸಮಸ್ಯೆಗಳನ್ನು ಜಿಯೋ ಪತ್ತೆಹಚ್ಚುತ್ತಿದೆ

ರಿಲಾಯನ್ಸ್ ಜಿಯೋ ತನ್ನ ಸೇವೆಯನ್ನು ಆರಂಭಿಸಿದಂದಿನಿಂದ, ಬಳಕೆದಾರರು ಕರೆಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಸ್ಪರ್ಧಿಗಳಿಂದ ಉಂಟಾಗಿರುವ ಸಮಸ್ಯೆಯಾಗಿದ್ದು, ಜಿಯೋ ತನ್ನ ಬಳಕೆದಾರರಿಗೆ ಸಮಸ್ಯೆ ಇಲ್ಲದ ಸೇವೆಯನ್ನು ಒದಗಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.

100 ಮಿಲಿಯನ್ ಬಳಕೆದಾರರ ಗುರಿ

100 ಮಿಲಿಯನ್ ಬಳಕೆದಾರರ ಗುರಿ

ಕೆಲವೇ ತಿಂಗಳುಗಳಲ್ಲಿ ಸರ್ವೀಸ್ ಪ್ರೊವೈಡರ್ 100 ಮಿಲಿಯನ್ ಬಳಕೆದಾರರ ಗುರಿ ಹೊಂದಿದೆ. ಈಗಾಗಲೇ 16 ಮಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ದಾಖಲೆಯನ್ನು ಸಂಸ್ಥೆ ಮಾಡಿದ್ದು ಇದೀಗ 25 ಮಿಲಿಯನ್ ಬಳಕೆದಾರರನ್ನು ಜಿಯೋ ಸಮೀಪಿಸಲಿದೆ. ಆದರೆ 100 ಮಿಲಿಯನ್ ಬಳಕೆದಾರರನ್ನು ಹೊಂದುವ ಗುರಿ ಅಷ್ಟೊಂದು ಸುಲಭವಾಗಿಲ್ಲ ಅಂತೆಯೇ ಅದಕ್ಕೆ ತಕ್ಕಂತೆ ಜಿಯೋ ತನ್ನ ಆಫರ್‌ಗಳನ್ನು ಪ್ರಸ್ತುತಪಡಿಸಲಿದೆ.

ಟಿಆರ್ಐ ಸಂಘರ್ಷಗಳಿಲ್ಲ

ಟಿಆರ್ಐ ಸಂಘರ್ಷಗಳಿಲ್ಲ

ಜಿಯೋ ವೆಲ್‌ಕಮ್ ಆಫರ್ ಮತ್ತು ಉಚಿತ ಸಿಮ್ ಕಾರ್ಡ್‌ಗಳನ್ನು ಇತರ ಸ್ಪರ್ಧಿಗಳು ವಿರೋಧಿಸಿದ್ದರು. ಆದರೆ ಟಿಆರ್ಐ ಇದುವರೆಗೆ ಇದರ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರಿಲ್ಲ. ಇದೂ ಕೂಡ ಜಿಯೋ ತನ್ನ ಆಫರ್‌ಗಳನ್ನು ಮಾರ್ಚ್ 2017 ರವರೆಗೆ ವಿಸ್ತರಿಸಲು ಇರುವ ಕಾರಣವಾಗಿದೆ.

ಹೆಚ್ಚು ವೇಗದ ಡೇಟಾ

ಹೆಚ್ಚು ವೇಗದ ಡೇಟಾ

ಪ್ರಿವ್ಯೂ ಆಫರ್ ಸಂದರ್ಭದಲ್ಲಿ, ಜಿಯೋ 4ಜಿ ಸ್ಪೀಡ್ ಹೆಚ್ಚು ವೇಗದ್ದಾಗಲಿದ್ದು, ಬಳಕೆದಾರರು 30ಎಮ್‌ಬಿಪಿಎಸ್‌ವರೆಗೆ ಡೇಟಾವನ್ನು ಆನಂದಿಸಬಹುದಾಗಿತ್ತು, ಸಪ್ಟೆಂಬರ್‌ನಲ್ಲಿ ಅಧಿಕೃತವಾಗಿ ಜಿಯೋ ಲಾಂಚ್ ಆದನಂತರ, ವೇಗದಲ್ಲಿ ಇಳಿಕೆ ಕಂಡುಬಂದಿದೆ. ಕನೆಕ್ಶನ್ ಮತ್ತು ವೇಗದ ಇಳಿಕೆಯಲ್ಲಿ ಬಳಕೆದಾರರು ದೂರುಗಳನ್ನು ದಾಖಲಿಸಿದ್ದಾರೆ. ಜಿಯೋ ವೆಲ್‌ಕಮ್ ಆಫರ್ ಅನ್ನು ವಿಸ್ತರಿಸಲಿದ್ದು ಉಚಿತ ಮತ್ತು ಅನ್‌ಲಿಮಿಟೆಡ್ 4ಜಿ ಕನೆಕ್ಟಿವಿಟಿಯನ್ನು ಬಳಕೆದಾರರಿಗೆ ಮಾರ್ಚ್ 2017 ರವರೆಗೆ ನೀಡಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Reliance Jio launched the Welcome Offer with December 31, 2016 as the expiry date. However, there are reports that this offer that bundles the above-mentioned benefits will be extended until March 2017.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X