ಜಿಯೋ ಫೋನ್ ಇನ್ನು ಮುಂದೆ ಭಾರತದಲ್ಲಿಯೇ ನಿರ್ಮಾಣವಾಗಲಿದೆ: ಅಂಬಾನಿ

By Lekhaka
|

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಿ, ಮತ್ತೊಮ್ಮೆ ಫೀಚರ್ ಫೋನ್ ಅಧ್ಯಾಯವನ್ನು ಆರಂಭಿಸಿದ ಜಿಯೋ ಫೋನ್ ಇಷ್ಟು ದಿನ ಚೀನಾದಿಂದ ಆಮದಾಗುತ್ತಿತ್ತು. ಆದರೆ ಇನ್ನು ಮುಂದೆ ಜಿಯೋ ಫೋನ್ ಭಾರತದಲ್ಲಿಯೇ ತಯಾರಗಲಿದ್ದು, ಮೇಡ್ ಇನ್ ಇಂಡಿಯಾ ಹಣೆಪಟ್ಟಿಯನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಜಿಯೋ ಫೋನ್ ಇನ್ನು ಮುಂದೆ ಭಾರತದಲ್ಲಿಯೇ ನಿರ್ಮಾಣವಾಗಲಿದೆ: ಅಂಬಾನಿ

ಮುಖೇಶ್ ಅಂಬಾನಿ ದೇಶದಲ್ಲಿ ಜಿಯೋ ಫೋನ್ ಬೇಡಿಕೆ ಮತ್ತು ಗ್ರಾಹಕರು ಈ ಫೋನ್ ಅನ್ನು ಸ್ವೀಕರಿಸಿದ ಕ್ರಮಕ್ಕೆ ಫೀದಾ ಆಗಿದ್ದು, ಇನ್ನು ಮುಂದೆ ಭಾರತದಲ್ಲಿಯೇ ಜಿಯೋ ಫೋನ್ ಉತ್ಪಾದನೆಯನ್ನು ಆರಂಭಿಸಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಚೀನಾ ಮೂಲದ ಫೋನ್ ಪೂರೈಕೆದಾರರು ಸರಿಯಾದ ಸಮಯಕ್ಕೆ ಫೋನ್ ನೀಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಭಾರತದಲ್ಲಿಯೇ ಈ ಫೋನ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಮೊದಲ ಹಂತದಲ್ಲಿ ಜಿಯೋ ಫೋನ್ ಗಳು 6 ಮಿಲಿಯನ್ ಸಂಖ್ಯೆಯಲ್ಲಿ ಮಾರಾಟವಾಗಿದ್ದವು. ಇದಾದ ನಂತರದಲ್ಲಿ ಜಿಯೋ ಎರಡನೇ ಹಂತದ ಬುಕ್ಕಿಂಗ್ ಓಪನ್ ಮಾಡಿದ್ದು, 10 ಮಿಲಿಯನ್ ಫೋನ್ ಗಳನ್ನು ಮಾರಾಟ ಮಾಡುವ ನಿರೀಕ್ಷೆಯನ್ನು ಇಟ್ಟು ಕೊಂಡಿದೆ ಆದರೆ ಫೋನ್ ತಯಾರಕರು ಸರಿಯಾದ ಸಂದರ್ಭದಲ್ಲಿ ಫೋನ್ ಪೂರೈಕೆ ಮಾಡಲು ವಿಫಲಾಗಿದ್ದಾರೆ ಎನ್ನಲಾಗಿದೆ.

ಈಗಾಗಲೇ ಜಿಯೋ ಫೋನ್ ಮಾರಾಟದ ಟಾರ್ಗೆಟ್ ಇಟ್ಟು ಕೊಂಡಿರುವ ಜಿಯೋ ಮುಂದಿನ 2018ರ ಡಿಸೆಂಬರ್ ಒಳಗೆ 200 ಮಿಲಿಯನ್ ಜಿಯೋ ಫೋನ್ ಗಳನ್ನು ಮಾರಾಟ ಮಾಡಲಿದೆ. ಇದಕ್ಕಾಗಿ ಭಾರತದಲ್ಲಿಯೇ ಫೋನ್ ನಿರ್ಮಾಣ ಮಾಡಲು ಜಿಯೋ ಮುಂದಾಗಿದೆ.

ವಿವೋ X20 ಕ್ರಿಸ್ ಮಸ್ ಎಡಿಷನ್: ವಿಶೇಷ ವಿನ್ಯಾಸ.!ವಿವೋ X20 ಕ್ರಿಸ್ ಮಸ್ ಎಡಿಷನ್: ವಿಶೇಷ ವಿನ್ಯಾಸ.!

Best Mobiles in India

English summary
Reliance JioPhone is likely to be made in India soon as there are glitches at the Chinese facility.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X