Subscribe to Gizbot

ಜಿಯೋ ಎಫೆಕ್ಟ್..299 ರೂ.ಗೆ ಕರೆ ಮಾತ್ರವಲ್ಲಾ ಡೇಟಾ ಕೂಡ ಅನ್‌ಲಿಮಿಟೆಡ್!!

Written By:

ಒಮ್ಮೊಮ್ಮೆ ದರಸಮರ ಎಷ್ಟು ತಾರಕಕ್ಕೇರುತ್ತದೆ ಎನ್ನುವುದಕ್ಕೆ ರಿಲಾಯನ್ಸ್ ಬಿಡುಗಡೆ ಮಾಡಿರುವ ನೂತನ ಆಫರ್ ಸಾಕ್ಷಿಯಾಗಿದೆ.! ಹೌದು, ಎಲ್ಲಾ ಟೆಲಿಕಾಂ ಕಂಪೆನಿಗಳು ಜಿಯೋ ಜೊತೆ ದರಸಮರದಲ್ಲಿ ಮಗ್ನವಾಗಿದ್ದರೆ ಅನಿಲ್ ಅಂಬಾನಿ ಒಡೆತನದ ರಿಲಾಯನ್ಸ್ ಕಮ್ಯುನಿಕೇಷನ್ ಮಾತ್ರ ಇಡೀ ಟೆಲಿಕಾಂಗೆ ಶಾಕ್‌ ನೀಡುವಂತಹ ಆಫರ್ ನೀಡಿದೆ.!!

ಈ ಬಗ್ಗೆ ರಿಲಾಯನ್ಸ್ ಟ್ವಿಟ್ ಮಾಡಿದ್ದು,.299 ರೂ.ಗೆ ಕರೆ, ಡೇಟಾ ಕೂಡ ಅನ್‌ಲಿಮಿಟೆಡ್ ನೀಡುವುದಾಗಿ ಹೇಳಿದೆ. ಇನ್ನು ಇದೇ ಮೊದಲ ಭಾರಿಗೆ ಟೆಲಿಕಾಂನಲ್ಲಿ ಯಾರು ನೀಡಿರದ ಆಫರ್ ಇದಾಗಿದೆ. ಹಾಗಾದರೆ, ರಿಲಾಯನ್ಸ್ ಬಿಡುಗಡೆ ಮಾಡಿರುವ ನೂತನ ಆಫರ್ ಏನೇನೆಲ್ಲಾ ಒಳಗೊಂಡಿದೆ. ಈ ಆಫರ್ ಬೆಸ್ಟ್ ಏಕೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
299 ರೂಪಾಯಿಗಳಿಗೆ ಎಲ್ಲವೂ ಅನ್‌ಲಿಮಿಟೆಡ್.!!

299 ರೂಪಾಯಿಗಳಿಗೆ ಎಲ್ಲವೂ ಅನ್‌ಲಿಮಿಟೆಡ್.!!

ರಿಲಾಯನ್ಸ್ ಕಮ್ಯುನಿಕೇಷನ್ ಬಿಡುಗಡೆ ಮಾಡಿರುವ ನೂತನ ಆಫರ್ ಕೇವಲ 299 ರೂಪಾಯಿಗಳಿಗೆ ಎಲ್ಲಾ ಸೇವೆಯನ್ನು ಒಳಗೊಂಡಿದೆ.!! ಅಂದರೆ ಅನ್‌ಲಿಮಿಟೆಡ್ ಇಂಟರ್‌ನೆಟ್, ಅನ್‌ಲಿಮಿಟೆಡ್ ಕಾಲ್ ಹಾಗೂ ಎಲ್ಲಾ ಸೇವೆಗಳನ್ನು ರಿಲಾಯನ್ಸ್ ಕೇವಲ 299 ರೂಪಾಯಿಗೆ ನೀಡಿದೆ.!!

ಅನ್‌ಲಿಮಿಟೆಡ್ ಇಂಟರ್‌ನೆಟ್!!

ಅನ್‌ಲಿಮಿಟೆಡ್ ಇಂಟರ್‌ನೆಟ್!!

ಇದೇ ಮೊದಲ ಭಾರಿಗೆ ಟೆಲಿಕಾಂ ಕಂಪೆನಿಯೊಂದು ಅನ್‌ಲಿಮಿಟೆಡ್ ಡೇಟಾವನ್ನು ಘೋಷಿಸಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ.! ಪ್ರತಿದಿನ ಎಷ್ಟು GB ಡೇಟಾವನ್ನಾದರೂ ಬಳಕೆ ಮಾಡಿದರೂ ಕೂಡ ಡೇಟಾ ಬಳಕೆಗೆ ಮಿತಿ ಇಲ್ಲ ಎಂದು ರಿಲಾಯನ್ಸ್ ಹೇಳಿದೆ.!!

ಒಂದು ಜೊತೆ ಶೂಗಿಂತ ಕಡಿಮೆ ಬೆಲೆ!!

ಒಂದು ಜೊತೆ ಶೂಗಿಂತ ಕಡಿಮೆ ಬೆಲೆ!!

ಇನ್ನು ಈ ಆಫರ್ ಬಿಡುಗಡೆ ಮಾಡಿರುವ ರಿಲಾಯನ್ಸ್ ನಾವು ಬಿಡುಗಡೆ ಮಾಡಿರುವ ನೂತನ ಆಫರ್ ಒಂದು ಜೊತೆ ಶೂ ಗಿಂತಲೂ ಕಡಿಮೆ ಬೆಲೆಯಾಗಿದೆ ಎಂದು ಹೇಳಿಕೊಂಡಿದೆ.!! ಈ ಆಫರ್ ಮೂಲಕ ಟೆಲಿಕಾಂನಲ್ಲಿಯೇ ಅತ್ಯಂತ ಬೆಸ್ಟ್ ಆಫರ್ ನಮ್ಮದು ಎಂದು ಹೇಳಿದೆ.!!

ದರಸಮರಕ್ಕೆ ಮುನ್ನುಡಿ!!

ದರಸಮರಕ್ಕೆ ಮುನ್ನುಡಿ!!

ಟೆಲಿಕಾಂನಲ್ಲಿ ಇಷ್ಟು ದಿವಸ ಇದ್ದ ದರಸಮರ ಅನ್‌ಲಿಮಿಟೆಡ್ ಕರೆಗಳಿಗೆ ಮತ್ತು ಲಿಮಿಟೆಡ್ ಡೇಟಾಗೆ ಮಾತ್ರ ಸೀಮಿತವಾಗಿತ್ತು. ಆದರೆ, ರಿಲಾಯನ್ಸ್ ಟೆಲಿಕಾಂ ಬಿಡುಗಡೆ ಮಾಡಿದ ನೂತನ ಆಫರ್‌ನಲ್ಲಿ ಡೇಟಾ ಬಳಕೆಗೂ ಮಿತಿ ಇಲ್ಲದಾಗಿದ್ದು, ಇದು ಮತ್ತೊಂದು ದರಸಮರಕ್ಕೆ ಮುನ್ನುಡಿಯಾಗಬಹುದು.!!

ವ್ಯಾಲಿಡಿಟಿ ಎಷ್ಟು?

ವ್ಯಾಲಿಡಿಟಿ ಎಷ್ಟು?

299 ರೂಪಾಯಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಅನ್‌ಲಿಮಿಟೆಡ್ ಡೇಟಾವನ್ನು ಘೋಷಿಸಿರುವ ರಿಲಯನ್ಸ್ ಈ ಸೇವೆಗೆ ಒಂದು ತಿಂಗಳ ವ್ಯಾಲಿಡಿಟಿಯನ್ನು ನೀಡಿದೆ.!! ತಿಂಗಳಿಗೆ 299 ರೂ. ರೀಚಾರ್ಜ್ ಮಾಡಿಸಿದರೆ ಎಲ್ಲಾ ಅನ್‌ಲಿಮಿಟೆಡ್ ಸೇವೆಗಳು ನಿಮಗೆ ದೊರೆಯಲಿವೆ.!!

ಓದಿರಿ:ಭಾರತದಲ್ಲಿ 10 ಲಕ್ಷ ಗ್ರಾಹಕರಿಂದ ನೋಕಿಯಾ 6 ಆಂಡ್ರಾಯ್ಡ್ ಬುಕ್!!.ಮತ್ತೊಂದು ದಾಖಲೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Mobile introduces the lowest rates ever! Starting at Rs. 299 monthly rental.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot