Subscribe to Gizbot

ಜಿಯೋ ಮ್ಯೂಸಿಕ್ ಜೊತೆಗೂಡಿತು 'ಸಾವನ್'!..ಸಂಗೀತ ಪ್ರಿಯರಿಗೆ ಹಬ್ಬ!!

Written By:

ಸತತ 60 ಕ್ಕೂ ಹೆಚ್ಚು ವಾರಗಳಿಂದ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮ್ಯೂಸಿಕ್ ಸ್ಟ್ರೀಮಿಂಗ್ ಆಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಿಲಯನ್ಸ್ ಸಮೂಹದ ಜಿಯೋ ಮ್ಯೂಸಿಕ್ ಡಿಜಿಟಲ್ ಮ್ಯೂಸಿಕ್ ಕ್ಷೇತ್ರದಲ್ಲಿ ದಕ್ಷಿಣ ಏಷ್ಯಾದಲ್ಲೇ ಮುಂಚೂಣಿ ಸ್ಥಾನದಲ್ಲಿರುವ 'ಸಾವನ್' ಮ್ಯೂಸಿಕ್ ಜೊತೆ ಪರಸ್ಪರ ಜೊತೆಗೂಡಿಸಿದೆ.!!

ಈಗಾಗಲೇ 20 ಭಾಷೆಗಳಲ್ಲಿ 16 ಮಿಲಿಯನ್‌ಗಿಂತ ಹೆಚ್ಚಿನ ಎಚ್‌ಡಿ ಹಾಡುಗಳ ಸಂಗ್ರಹ ಹೊಂದಿರುವ ಜಿಯೋ ಸಾವನ್ ಜೋಡಿ ಇನ್ನೂ ಹೆಚ್ಚಿನ ಕೇಳುಗರನ್ನು ತಲುಪಲಿದ್ದು ಆ ಮೂಲಕ ಭಾರತೀಯ ಸ್ಟ್ರೀಮಿಂಗ್ ಮಾರುಕಟ್ಟೆಯಲ್ಲಿ ನಮ್ಮ ಮುಂಚೂಣಿ ಸ್ಥಾನ ಇನ್ನಷ್ಟು ಸದೃಢವಾಗಲಿದೆ ಎಂದು ಜಂಟಿ ಪ್ರಕಟಣೆಯಲ್ಲಿ ಆಕಾಶ್ ಅಂಬಾನಿ ಹೇಳಿದ್ದಾರೆ.!!

ಜಿಯೋ ಮ್ಯೂಸಿಕ್ ಜೊತೆಗೂಡಿತು 'ಸಾವನ್'!..ಸಂಗೀತ ಪ್ರಿಯರಿಗೆ ಹಬ್ಬ!!

'ಸಾವನ್' ಮತ್ತು 'ಜಿಯೋ ಮ್ಯೂಸಿಕ್' ಪರಸ್ಪರ ಜೊತೆಗೂಡಲಿರುವುದರಿಂದ ಒಂದು ಬಿಲಿಯನ್ ಡಾಲರುಗಳಿಗೂ ಹೆಚ್ಚು ಮೌಲ್ಯದ ಜಾಗತಿಕ ವೇದಿಕೆ ರೂಪುಗೊಳ್ಳಲಿದೆ. ವಿಶ್ವದ ಅತಿದೊಡ್ಡ ಮೊಬೈಲ್ ಜಾಹೀರಾತು ಮಾಧ್ಯಮಗಳ ಪೈಕಿ ಸ್ಥಾನಪಡೆಯಲಿರುವ ಭವಿಷ್ಯದ ಮಾಧ್ಯಮ ವೇದಿಕೆಯನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.!!

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?

2007 ರಲ್ಲಿ ಪ್ರಾರಂಭವಾದ ಸಾವನ್ ಡಿಜಿಟಲ್ ಮ್ಯೂಸಿಕ್ ಸ್ಟ್ರೀಮಿಂಗ್ ಕ್ಷೇತ್ರದಲ್ಲಿ ದಕ್ಷಿಣ ಏಷ್ಯಾದಲ್ಲೇ ಮುಂಚೂಣಿ ಸ್ಥಾನದಲ್ಲಿದೆ. ಜಿಯೋಮ್ಯೂಸಿಕ್‌ನ 670 ಮಿಲಿಯನ್ ಡಾಲರ್ ಸೂಚಿತ ಮೌಲ್ಯ ಸೇರಿ ಈ ಹೊಸ ಘಟಕದ ಮೌಲ್ಯ ಒಂದು ಬಿಲಿಯನ್ ಡಾಲರಿಗೂ ಹೆಚ್ಚಾಗಲಿದೆ. ಈ ಮೂಲಕ ಜಿಯೋ ಮ್ಯೂಸಿಕ್ ಜಾಗತಿಕ ವ್ಯಾಪ್ತಿ ಪಡೆಯಲಿದೆ.!!

ಜಿಯೋ ಮ್ಯೂಸಿಕ್ ಜೊತೆಗೂಡಿತು 'ಸಾವನ್'!..ಸಂಗೀತ ಪ್ರಿಯರಿಗೆ ಹಬ್ಬ!!

ಈ ನೂತನ ಘಟಕದ ಅಭಿವೃದ್ಧಿಗಾಗಿ ಜಿಯೋ ನೂರು ಮಿಲಿಯನ್ ಡಾಲರುಗಳಷ್ಟು ಹೆಚ್ಚುವರಿ ಬಂಡವಾಳ ಹೂಡಿಕೆಯನ್ನೂ ಮಾಡಲಿದೆ. ಒಟ್ಟಾರೆಯಾಗಿ ಜಾಗತಿಕ ಸಂಗೀತೋದ್ಯಮದ ಕುರಿತು ನಮಗಿರುವ ಬದ್ಧತೆಯನ್ನು ರಿಲಯನ್ಸ್ ಜೊತೆಗಿನ ಒಡನಾಟ ಹೆಚ್ಚು ಶಕ್ತಿಯುತಗೊಳಿಸಲಿದೆ ಎಂದು ಸಾವನ್‌ನ ಸಹ ಸ್ಥಾಪಕರಾದ ಪರಮ್‌ದೀಪ್ ಸಿಂಗ್ ಅವರು ಅಭಿಪ್ರಾಯಪಟ್ಟಿದ್ದಾರೆ.!! 

English summary
Reliance Industries and Saavn have signed a deal for the combination of Saavn withJioMusic to create a global online music streaming platform. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot