ನಿಮ್ಮ ಫೋನ್‌ನಲ್ಲಿ ಈ 16 ಆಪ್‌ಗಳಿದ್ದರೆ ತಕ್ಷಣವೇ ಅನ್‌ಇನ್‌ಸ್ಟಾಲ್‌ ಮಾಡಿ: ಯಾಕೆ ಗೊತ್ತಾ!?

|

ಈಗಂತೂ ಬಹುಪಾಲು ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ ಇದ್ದೇ ಇರುತ್ತದೆ. ಸ್ಮಾರ್ಟ್‌ಫೋನ್‌ ಹೆಚ್ಚಾದಂತೆ ತಂತ್ರಜ್ಞಾನ ಸಂಬಂಧಿತ ಅಪರಾಧಗಳು ಸಹ ಹೆಚ್ಚಾಗುತ್ತಲೇ ಇವೆ. ಫೋನ್‌ ಹ್ಯಾಕ್‌ ಮಾಡಿ ಬೆದರಿಕೆ ಹಾಕುವ ಅಥವಾ ಹಣ ಪೀಕುವ ಅದೆಷ್ಟೋ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈಗ ಹೊಸ ರೀತಿಯ ಹ್ಯಾಕಿಂಗ್ ಸಿಸ್ಟಮ್ ಅಸ್ಥಿತ್ವದಲ್ಲಿದ್ದು, ನಿಮ್ಮ ಖಾಸಗಿತನಕ್ಕೆ ಧಕ್ಕೆ ತರದೇ ಇದ್ದರೂ ಸಹ ನಿಮ್ಮ ಸ್ಮಾರ್ಟ್ ಫೋನ್‌ ಬ್ಯಾಟರಿಗೆ ಮಾತ್ರ ಅಪಾಯ ಉಂಟು ಮಾಡುತ್ತಿರುತ್ತದೆ.

ಆಪ್‌ಗಳು

ಹೌದು, ಇತ್ತೀಚೆಗೆ ಕೆಲವು ಆಪ್‌ಗಳು ಸ್ಮಾರ್ಟ್‌ಫೋನ್‌ ಬ್ಯಾಟರಿ ಸಾಮರ್ಥ್ಯವನ್ನು ಕುಗ್ಗಿಸುತ್ತಾ ಬರುತ್ತಿವೆ. ಇದಕ್ಕೆ ಕಾರಣ ಮಾಲ್‌ವೇರ್‌. ಪರಿಣಾಮ ಗೂಗಲ್‌ ಪ್ಲೇ ಸ್ಟೋರ್‌ ಆ ರೀತಿಯ ಕಿರಾತಕ ಬುದ್ಧಿ ತೋರಿಸುವ ಆಪ್‌ಗಳನ್ನು ತನ್ನ ಲಿಸ್ಟ್‌ನಿಂದ ತೆಗೆದುಹಾಕಿದೆ. ಆದರೆ, ನೀವು ಇನ್ನೂ ಆ ರೀತಿಯ ಆಪ್‌ಗಳನ್ನು ನಿಮ್ಮ ಮೊಬೈಲ್‌ನಲ್ಲಿ ಇರಿಸಿಕೊಂಡಿದ್ದರೆ ಇಂದೇ ರಿಮೂವ್ ಮಾಡಿ. ಯಾಕೆಂದರೆ ಈ ಆಪ್‌ಗಳಲ್ಲಿರುವ ಮಾಲ್‌ವೇರ್‌ ನಿಮಗೆ ಅರಿವಿಲ್ಲದಂತೆ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಬಳಕೆ ಮಾಡುತ್ತಿರುತ್ತವೆ.

ಮಾಲ್‌ವೇರ್‌

ಇನ್ನು ಮಾಲ್‌ವೇರ್‌ನಿಂದ ಕೂಡಿದ 16 ಅಪ್ಲಿಕೇಶನ್‌ಗಳನ್ನು ಪತ್ತೆ ಮಾಡಲಾಗಿದ್ದು, ಈಗಾಗಲೇ ಅವುಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಈ ಈ ಅಪ್ಲಿಕೇಶನ್‌ಗಳು ಈವರೆಗೆ 20 ಮಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಲ್‌ ಆಗಿವೆಯಂತೆ. ಹಾಗೆಯೇ ಇವುಗಳ ಮಾಲೀಕರಿಗೆ ಸಾಕಷ್ಟು ಹಣವನ್ನು ಗಳಿಸಿಕೊಟ್ಟಿವೆಯಂತೆ. ಹಾಗಿದ್ದರೆ ಆ ಆಪ್‌ಗಳು ಯಾವುವು?, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅವುಗಳ ಕೆಲಸ ಏನು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏನಿದು ಮಾಲ್‌ವೇರ್ ?

ಏನಿದು ಮಾಲ್‌ವೇರ್ ?

ಈ ಹಿಂದೆ ಬಳಕೆದಾರರ ಖಾಸಗಿ ಮತ್ತು ವೈಯಕ್ತಿಕ ಡೇಟಾವನ್ನು ಕದಿಯುವ ಮಾಲ್‌ವೇರ್‌ಗಳು ಭಾರೀ ಸದ್ದು ಮಾಡುತ್ತಿದ್ದವು. ಆದರೆ, ಇವುಗಳಿಗೆ ಭಿನ್ನವಾಗಿ ಹೊಸ ಮಾಲ್‌ವೇರ್ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಕಲಿ ವೀಕ್ಷಣೆಗಳು ಮತ್ತು ಕ್ಲಿಕ್‌ಗಳನ್ನು ಮಾಡುತ್ತಿವೆ. ನಕಲಿ ವೀಕ್ಷಣೆಗಳು ಮತ್ತು ಜಾಹೀರಾತುಗಳ ಮೇಲಿನ ಕ್ಲಿಕ್‌ಗಳಿಗೆ ಪ್ರತಿಯಾಗಿ ಡೆವಲಪರ್‌ಗಳಿಗೆ ಇದರಿಂದ ಹೆಚ್ಚಿನ ಆದಾಯ ಸಿಗುತ್ತಿದೆ ಎನ್ನಲಾಗುತ್ತಿದೆ. ದುರಂತ ಎಂದರೆ ನಿಮಗೆ ಅರಿವಿಲ್ಲದಂತೆಯೇ ವೆಬ್‌ಸೈಟ್‌ಗಳನ್ನು ಇವು ಬ್ರೌಸ್ ಮಾಡುತ್ತಿರುತ್ತವೆ. ಇದರಿಂದಾಗಿ ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಸಾಮರ್ಥ್ಯ ಖಾಲಿಯಾಗುತ್ತಾ ಬರುತ್ತಿರುತ್ತದೆ.

ಆ ಆಪ್‌ಗಳಾವುವು?

ಆ ಆಪ್‌ಗಳಾವುವು?

ಈ ರೀತಿಯ ಮಾಲ್‌ವೇರ್ ಹೊಂದಿರುವ ಆಪ್‌ಗಳಲ್ಲಿ ಪ್ರಮುಖವಾಗಿ BusanBus, ಜಾಯ್‌ಕೋಡ್, ಕರೆನ್ಸಿ ಕನ್ವರ್ಟರ್, ಹೈ ಸ್ಪೀಡ್‌ ಕ್ಮಾಮೆರಾ, ಸ್ಮಾರ್ಟ್‌ ಟಾಸ್ಕ್‌ ಮ್ಯಾನೇಜರ್‌, ಫ್ಲ್ಯಾಶ್‌ಲೈಟ್+ (ಟಾರ್ಚ್), ಕೆ-ಡಿಕ್ಷನರಿ, ಕ್ವಿಕ್‌ ನೋಟ್, EzDica ಹಾಗೂ ಇನ್ಸ್ಟಾಗ್ರಾಮ್ ಪ್ರೊಫೈಲ್ ಡೌನ್‌ಲೋಡರ್‌, Ez ನೋಟ್ಸ್‌ , ಕ್ಯೂಆರ್ ರೀಡರ್ಸ್‌ ಸೇರಿವೆ. ಅದರಲ್ಲೂ Dx ಕ್ಲೀನ್‌ ಆಪ್‌ ಅಪ್ಲಿಕೇಶನ್‌ ಅನ್ನು ಬರೋಬ್ಬರಿ ಐದು ಮಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಲ್‌ ಮಾಡಲಾಗಿದೆ.

ಮಾಲ್‌ವೇರ್‌ ಹೇಗೆ ಸಕ್ರಿಯವಾಗುತ್ತದೆ?

ಮಾಲ್‌ವೇರ್‌ ಹೇಗೆ ಸಕ್ರಿಯವಾಗುತ್ತದೆ?

ನೀವು ಮೇಲೆ ತಿಳಿಸಿದ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿದ್ದರೆ ಅದು ಜಾಹೀರಾತು ಕ್ಲಿಕ್ಕರ್ ಮಾಲ್‌ವೇರ್‌ ಜೊತೆ ಕೆಲಸ ಮಾಡಲು ಮುಂದಾಗುತ್ತದೆ. ಹಾಗೆಯೇ ಹೆಚ್‌ಟಿಟಿಪಿ ವಿನಂತಿಯನ್ನು ಕಾರ್ಯಗತಗೊಳಿಸುವ ಮೂಲಕ ರಿಮೋಟ್ ಕಾನ್ಫಿಗರೇಶನ್ ಅನ್ನು ಡೌನ್‌ಲೋಡ್ ಮಾಡುತ್ತದೆ. ವಿಶೇಷ ಎಂದರೆ ಇನ್‌ಸ್ಟಾಲ್‌ ಮಾಡಿಕೊಳ್ಳುವ ಆಪ್‌ಗಳು ತುಂಬಾನೇ ಅಕರ್ಷಕವಾಗಿ ಹಾಗೂ ಹೆಚ್ಚಿನ ಭದ್ರತೆ ಇರುವ ಆಪ್‌ಗಳಾಗಿ ಕಂಡರೂ ಸಹ ನಮಗೆ ಅರಿವಿಲ್ಲದಂತೆ ವೆಬ್‌ಬ್ರೌಸರ್‌ ಓಪನ್‌ ಮಾಡಿ ಲೈಕ್‌ ಮಾಡುವುದು, ವೀಕ್ಷಣೆ ಮಾಡುವುದು ಸೇರಿದಂತೆ ಇನ್ನಿತರೆ ಕೆಲಸಗಳನ್ನು ಮಾಡುತ್ತಿರುತ್ತವೆ.

ಹೇಗೆ ಕಂಡುಹಿಡಿಯುವುದು?

ಹೇಗೆ ಕಂಡುಹಿಡಿಯುವುದು?

ಪೂರ್ಣ ಚಾರ್ಜಿಂಗ್ ಆದ ನಿಮ್ಮ ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್ ಅನ್ನು ಒಂದು ಗಂಟೆಗಳ ಕಾಲ ಬಳಕೆ ಮಾಡದೆ ಸುಮ್ಮನೆ ಇಡಿ. ನಂತರ ಅವುಗಳ ಬ್ಯಾಟರಿ ಕಾರ್ಯಕ್ಷಮತೆಯನ್ನು ಪರೀಕ್ಷಿಸಿ, ಅದರಲ್ಲಿ ಏನಾದರೂ ಇಳಿಕೆ ಕಂಡರೇ ತಕ್ಷಣವೇ ಇತ್ತೀಚಿಗೆ ಇನ್‌ಸ್ಟಾಲ್‌ ಮಾಡಿಕೊಂಡ ಆಪ್‌ಗಳನ್ನು ಅನ್‌ ಇನ್‌ಸ್ಟಾಲ್‌ ಮಾಡಿಬಿಡಿ.

ಸ್ಟೋರ್‌

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮಾಲ್‌ವೇರ್ ತುಂಬಿದ ಅಪ್ಲಿಕೇಶನ್‌ಗಳನ್ನು ಮ್ಯಾಕ್‌ಅಫೀ ಗುರುತಿಸಿತ್ತು. ಅದರಂತೆ ಎಲ್ಲಾ ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆಯಾದರೂ ನಿಮ್ಮ ಫೋನ್‌ನಿಂದ ಅವುಗಳನ್ನು ಈಗ ಅನ್‌ಇನ್‌ಸ್ಟಾಲ್‌ ಮಾಡಬೇಕಿದೆ. ಹಾಗೆಯೇ ಸಂಬಂಧಿಸಿದ ಡೇಟಾ ಇದ್ದರೆ ಅವುಗಳನ್ನೂ ಸಹ ತೆಗೆದುಹಾಕಬೇಕಿದೆ. ಈ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಸಾಮರ್ಥ್ಯ ಕಾಪಾಡಿಕೊಳ್ಳುವುದರ ಜೊತೆಗೆ ನಿಮ್ಮ ಫೋನ್‌ ಅನ್ನು ಭದ್ರತೆಯಿಂದ ಇರಿಕೊಳ್ಳಬಹುದಾಗಿದೆ.

Best Mobiles in India

English summary
If the battery on your smartphone is draining then remove the apps given in this article. 16 Apps Running Your Phone With Malware.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X