Subscribe to Gizbot

65,000 ಕ್ಕಿಂತ ಹೆಚ್ಚಿನ ಫ್ರೀಡಂ 251 ಸ್ಮಾರ್ಟ್‌ಫೋನ್ ಡೆಲಿವರಿ

Written By:

ಫ್ರೀಡಂ 251 ಸ್ಮಾರ್ಟ್‌ಫೋನ್‌ಗಳ ಪ್ರಥಮ 5,000 ಡೆಲಿವರಿಗಳನ್ನು ಮಾಡಿದ ನಂತರ, ಸೋಮವಾರ ರಿಂಗಿಂಗ್ ಬೆಲ್ಸ್ ಇನ್ನೂ 65,000 ಮೊಬೈಲ್‌ಗಳನ್ನು ಡೆಲಿವರಿ ಮಾಡುವುದಾಗಿ ತಿಳಿಸಿದ್ದು $4 ಕ್ಕಿಂತ ಸ್ಮಾರ್ಟ್‌ಫೋನ್‌ಗಳನ್ನು ಕ್ಯಾಶ್ ಆನ್ ಡೆಲಿವರಿ ಮೋಡ್‌ನಲ್ಲಿ ಬುಕ್ ಮಾಡಿದವರಿಗೆ ವಿತರಣೆಯನ್ನು ಮಾಡುವ ಇರಾದೆಯನ್ನು ಕಂಪೆನಿ ಹೊಂದಿದೆ.

ಓದಿರಿ: ಆಗರ್ಭ ಶ್ರೀಮಂತರ ಜೇಬಿನಲ್ಲಿರುವ ಹೆಚ್ಚು ದುಬಾರಿ ಫೋನ್‌ಗಳು

ಜೂನ್ 30 ಕ್ಕೂ ಮುನ್ನವೇ ಫೆಬ್ರವರಿ ಮಧ್ಯದಲ್ಲಿ 25 ಲಕ್ಷ ಹ್ಯಾಂಡ್‌ಸೆಟ್‌ಗಳನ್ನು ವಿತರಿಸುವ ಗುರಿಯನ್ನು ಕಂಪೆನಿ ಇಟ್ಟುಕೊಂಡಿತ್ತು. ಆದರೆ ಪಾವತಿ ಕ್ರಮದಲ್ಲಿ ದೋಷವಿದ್ದ ಕಾರಣ ಏಳು ಕೋಟಿ ನೋಂದಾವಣೆಗಳ ಮೇಲೆ ರಿಂಗಿಂಗ್ ಬೆಲ್ಸ್ ನಷ್ಟಕ್ಕೆ ಒಳಗಾಗಿತ್ತು. ಬನ್ನಿ ಈ ಕೆಳಗಿನ ಸ್ಲೈಡರ್‌ಗಳಲ್ಲಿ ರಿಂಗಿಂಗ್ ಬೆಲ್ಸ್ ನೀಡಿರುವ ಮಾಹಿತಿಯ ಬಗ್ಗೆ ಇನ್ನಷ್ಟು ವಿವರಗಳನ್ನು ಅರಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಾಟರಿ ಪ್ರಕ್ರಿಯೆ

ಲಾಟರಿ ಪ್ರಕ್ರಿಯೆ

ನಾವು ಕೆಲವು ದಿನಗಳ ಹಿಂದೆಯಷ್ಟೇ ಲಾಟರಿ ಪ್ರಕ್ರಿಯೆಯನ್ನು ಆರಂಭಿಸಿದ್ದು ಜನರಿಗೆ ಯೂನಿಟ್‌ಗಳನ್ನು ವಿತರಿಸುತ್ತಿದ್ದೇವೆ. ಇನ್ನಷ್ಟು ಸೆಟ್‌ಗಳನ್ನು ವಿತರಿಸುವ ಜವಬ್ದಾರಿ ಕೂಡ ನಮ್ಮ ಮೇಲಿದೆ ಎಂಬುದನ್ನು ನಾವು ಅರಿತಿದ್ದೇವೆ ಎಂಬುದಾಗಿ ಕಂಪೆನಿಯು ಹೇಳಿಕೆ ನೀಡಿದೆ.

ವಿತರಣೆ

ವಿತರಣೆ

ಕಂಪೆನಿಯು ಪಶ್ಚಿಮ ಬಂಗಾಳ, ಹರಿಯಾಣ, ಹಿಮಾಚಲ ಪ್ರದೇಶ, ಬಿಹಾರ, ಉತ್ತರಾಖಂಡ್, ಹೊಸದೆಹಲಿ, ಪಂಜಾಬ್, ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಮಧ್ಯಪ್ರದೇಶ, ಜಾರ್ಖಂಡ್, ರಾಜಸ್ತಾನ ಮತ್ತು ಉತ್ತರ ಪ್ರದೇಶದಲ್ಲಿ ವಿತರಣೆಗಳನ್ನು ಮಾಡಲಿದೆ.

70,000 ಯೂನಿಟ್‌

70,000 ಯೂನಿಟ್‌

65,000 ಯೂನಿಟ್‌ಗಳ ವಿತರಣೆಯೊಂದಿಗೆ, ಫ್ರೀಡಮ್ 251 ವಿತರಣೆಯು ದೇಶಾದ್ಯಂತ 70,000 ಯೂನಿಟ್‌ಗಳನ್ನು ಮೀರಲಿದೆ. ಎಂಬುದಾಗಿ ರಿಂಗಿಂಗ್ ಬೆಲ್ಸ್ ಸ್ಥಾಪಕರಾದ ಮೋಹಿತ್ ಗೋಯೆಲ್ ತಿಳಿಸಿದ್ದಾರೆ.

ಬಳಕೆದಾರರ ನಂಬಿಕೆ

ಬಳಕೆದಾರರ ನಂಬಿಕೆ

ತಾವು ಮಾತು ಕೊಟ್ಟಂತೆಯೇ ನಡೆದುಕೊಳ್ಳುವುದಾಗಿ ಸ್ಥಾಪಕರು ತಿಳಿಸಿದ್ದು ಬಳಕೆದಾರರ ನಂಬಿಕೆಯನ್ನು ಉಳಿಸಿಕೊಳ್ಳುವುದೇ ನಮ್ಮ ಗುರಿಯಾಗಿದೆ ಎಂಬುದು ಸ್ಥಾಪಕರ ಮಾತಾಗಿದೆ.

2 ಲಕ್ಷದಷ್ಟು 'ಫ್ರೀಡಂ 251 ಹ್ಯಾಂಡ್‌ಸೆಟ್‌

2 ಲಕ್ಷದಷ್ಟು 'ಫ್ರೀಡಂ 251 ಹ್ಯಾಂಡ್‌ಸೆಟ್‌

ನಾವು ಈಗಾಗಲೇ 2 ಲಕ್ಷದಷ್ಟು 'ಫ್ರೀಡಂ 251 ಹ್ಯಾಂಡ್‌ಸೆಟ್‌ಗಳೊಂದಿಗೆ ಸಿದ್ಧರಾಗಿದ್ದು ಜೂನ್ 30 ರಿಂದಲೇ ನಮ್ಮ ಡೆಲಿವರಿಯನ್ನು ನಾವು ಆರಂಭಿಸಿದ್ದೇವೆ

ಪ್ರಥಮ ಡೆಲಿವರಿ

ಪ್ರಥಮ ಡೆಲಿವರಿ

ಪ್ರಥಮ ಡೆಲಿವರಿಯನ್ನು ಕಂಪೆನಿಯು ಈಗಾಗಲೇ ಮಾಡಿದ್ದು, ಹ್ಯಾಂಡ್‌ಸೆಟ್ ಅನ್ನು ಖರೀದಿಸಲು ಉತ್ಸುಕರಾಗಿರುವವರಿಗೆ ಪುನಃ ರಿಜಿಸ್ಟ್ರೇಶನ್ ಅನ್ನು ಆರಂಭಿಸಲಿದ್ದಾರೆ.

3ಜಿ ಡಿವೈಸ್

3ಜಿ ಡಿವೈಸ್

ಈ 3ಜಿ ಡಿವೈಸ್, 1.3GHZ ಕ್ವಾಡ್ - ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು, 1ಜಿಬಿ RAM ಅನ್ನು ಪಡೆದುಕೊಂಡಿದೆ ಮತ್ತು 8 ಜಿಬಿ ಆಂತರಿಕ ಮೆಮೊರಿಯನ್ನು ಡಿವೈಸ್ ಒಳಗೊಂಡಿದೆ ಇದು 32 ಜಿಬಿ ಹೆಚ್ಚುವರಿ ಸಂಗ್ರಣೆಗೆ ಬೆಂಬಲವನ್ನು ನೀಡಲಿದೆ.

ಕ್ಯಾಮೆರಾ

ಕ್ಯಾಮೆರಾ

ಕಂಪೆನಿಯು 8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾವನ್ನು ಡಿವೈಸ್‌ನಲ್ಲಿ ನೀಡಿದ್ದು, ಮುಂಭಾಗದಲ್ಲಿ 3.2 ಎಮ್‌ಪಿ ಕ್ಯಾಮೆರಾವನ್ನು ಹೊಂದಿದೆ. ಇದು ಸೆಲ್ಫಿ ತೆಗೆಯಲು ಪೂರಕವಾಗಿದೆ. ಡಿವೈಸ್ 1,800mAh ಬ್ಯಾಟರಿಯನ್ನು ಕೂಡ ಒಳಗೊಂಡಿದೆ. ಆಂಡ್ರಾಯ್ಡ್ 5.1 ಲಾಲಿಪಪ್ ಅನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The company in mid-February this year planned to deliver 25 lakh handsets before June 30. Ringing Bells received mammoth over seven crore registrations before the payment gateway crashed.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot