ಸ್ವಂತ ಇಂಟರ್‌ನೆಟ್‌ ಜಾರಿಗೆ ರಷ್ಯಾ ತಂತ್ರ..! ರೂನೆಟ್‌ ಪ್ರಯೋಗ ಯಶಸ್ವಿ..!

By Gizbot Bureau
|

ರಷ್ಯಾ ತನ್ನದೇ ಆದ ಅಂತರ್ಜಾಲ ಸೃಷ್ಟಿಸುವ ಬಗ್ಗೆ ಈ ಹಿಂದೆ ಹಲವಾರು ಸುದ್ದಿಗಳು ಬಿತ್ತರಗೊಂಡಿವೆ. ಈಗ, ಬಿಬಿಸಿ ವರದಿಯು ಈ ಅಂಶವನ್ನು ದೃಢಫಡಿಸಿದ್ದು, ರಷ್ಯಾ ತನ್ನದೇ ಆದ ಅಂತರ್ಜಾಲ ಪ್ರಾರಂಭಿಸಲು ಪರೀಕ್ಷಿ ನಡೆಸಿದೆ ಎಂದು ವರದಿ ಮಾಡಿದೆ, ಜಾಗತಿಕ ಅಂತರ್ಜಾಲಕ್ಕೆ ಪರ್ಯಾಯ ಇಂಟರ್‌ನೆಟ್‌ನ್ನು ರಷ್ಯಾ ತನ್ನ ದೇಶಾದ್ಯಂತ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ವರದಿ ಹೇಳುತ್ತದೆ.

ಸರ್ಕಾರದಿಂದ ಘೋಷಣೆ

ಸರ್ಕಾರದಿಂದ ಘೋಷಣೆ

ರಷ್ಯಾದ ಸಂವಹನ ಸಚಿವಾಲಯವು ಕೂಡ ಈ ಬಗ್ಗೆ ಘೋಷಣೆ ಮಾಡಿದೆ. ಆದರೆ, ಯಾವುದೇ ಹೆಚ್ಚಿನ ವಿವರಗಳನ್ನು ಸರ್ಕಾರ ನೀಡಿಲ್ಲ. ಮತ್ತು ಸಾಮಾನ್ಯ ಬಳಕೆದಾರರು ಯಾವುದೇ ಬದಲಾವಣೆಗಳನ್ನು ಗಮನಿಸಲಿಲ್ಲ ಎಂದು ಬಿಬಿಸಿ ವರದಿ ಹೇಳುತ್ತದೆ.

ಕಂಟೆಂಟ್‌ ಫಿಲ್ಟರ್‌

ಕಂಟೆಂಟ್‌ ಫಿಲ್ಟರ್‌

ಹೊಸ ಇಂಟರ್‌ನೆಟ್‌ ಪ್ರಯೋಗದ ಫಲಿತಾಂಶಗಳನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೀಡಲಾಗುತ್ತದೆ. ರಷ್ಯಾದ ಈ ಯೋಜನೆಗೆ "ರೂನೆಟ್" ಎಂದು ಹೆಸರಿಡಲಾಗಿದೆ ಎಂಬ ಮಾಹಿತಿ ಮಾತ್ರ ದೊರೆಯುತ್ತಿದೆ. ಅನೇಕ ವರದಿಗಳ ಪ್ರಕಾರ, ಸರ್ಕಾರವು ತನ್ನದೇ ಆದ ಸೆನ್ಸಾರ್‌ಗಳ ಪ್ರಕಾರ ಯಾವುದೇ ಆನ್‌ಲೈನ್ ವಿಷಯವನ್ನು ಫಿಲ್ಟರ್ ಮಾಡಲು ಅವಕಾಶ ನೀಡುವುದು ಈ ಕ್ರಮದ ಹಿಂದಿನ ಆಲೋಚನೆಯಾಗಿದೆ.

ಹೇಗೆ ಕಾರ್ಯನಿರ್ವಹಣೆ..?

ಹೇಗೆ ಕಾರ್ಯನಿರ್ವಹಣೆ..?

ಹೊಸ ಅಂತರ್ಜಾಲವು ಒಂದು ದೊಡ್ಡ ನಿಗಮದಂತೆಯೇ ದೈತ್ಯ ಅಂತರ್ಜಾಲವಾಗಿ ಗಡಿಯೊಳಗೆ ಇಂಟರ್‌ನೆಟ್‌ ಕಾನ್ಫಿಗರ್ ಮಾಡಲು ಐಎಸ್‌ಪಿಗಳು ಮತ್ತು ಟೆಲಿಕಾಂ ಕಂಪನಿಗಳು ಪಡೆಯುತ್ತವೆ ಎಂದು ಸರ್ರೆ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನಿ ಪ್ರೊಫೆಸರ್ ಅಲನ್ ವುಡ್‌ವರ್ಡ್ ಹೇಳಿದ್ದಾರೆ ಎಂದು ಬಿಬಿಸಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಷ್ಟೇ ಅಲ್ಲದೇ ಇದರಿಂದ ನಿರ್ಬಂಧಿಸಲಾದ ಯಾವುದೇ ವಿಷಯವನ್ನು ಪ್ರವೇಶಿಸಲು ವಿಪಿಎನ್‌ಗಳಿಗೂ ಕಷ್ಟವಾಗುತ್ತದೆ.

ಸ್ಪ್ಲಿಂಟರ್‌ನೆಟ್‌

ಸ್ಪ್ಲಿಂಟರ್‌ನೆಟ್‌

ತಂತ್ರಜ್ಞರು "ಸ್ಪ್ಲಿಂಟರ್‌ನೆಟ್" ವಿದ್ಯಮಾನದ ಬಗ್ಗೆ ಚಿಂತಿತರಾಗಿದ್ದಾರೆ. ಇಲ್ಲಿ ಸರ್ಕಾರಗಳು ತಮ್ಮದೇ ಆದ ಅಂತರ್ಜಾಲವನ್ನು ರಚಿಸಬಹುದಾಗಿದೆ. ಇದರ ಅಡಿಯಲ್ಲಿ ನಾಗರಿಕರು ಪರಸ್ಪರ ಹೇಗೆ ಸಂವಹನ ನಡೆಸುತ್ತಾರೆ ಮತ್ತು ಅವರು ಯಾವ ರೀತಿಯ ವಿಷಯವನ್ನು ಪ್ರವೇಶಿಸಬಹುದು ಎಂಬುದನ್ನು ಸರ್ಕಾರ ನಿಯಂತ್ರಿಸಬಹುದು. ಈ ವಿಚಾರವಾಗಿ ಚೀನಾ, ಸೌದಿ ಅರೇಬಿಯಾದಂತಹ ದೇಶಗಳು ಈಗಾಗಲೇ ನಿಯಮಗಳನ್ನು ರಚಿಸಿವೆ, ಉದಾಹರಣೆಗೆ, ಚೀನಾದಲ್ಲಿ ಬಹಳಷ್ಟು ಗೂಗಲ್‌, ಫೇಸ್‌ಬುಕ್‌ ಸೇವೆಗಳನ್ನು ನಿಷೇಧಿಸಲಾಗಿದ್ದು, ಯಾರೂ ಬಳಕೆ ಮಾಡಲಾಗುವುದಿಲ್ಲ,

ಪ್ರಾಯೋಗಿಕ ಹಂತ

ಪ್ರಾಯೋಗಿಕ ಹಂತ

ರಷ್ಯಾ ತನ್ನ ನಾಗರಿಕರ ಮೇಲೆ ತನ್ನದೇ ಆದ ಅಂತರ್ಜಾಲವನ್ನು ಹೇಗೆ ಕಾರ್ಯಗತಗೊಳಿಸಲು ಯೋಜಿಸಿದೆ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಈಗಿನವರೆಗೆ ಈ ಯೋಜನೆಯನ್ನು ಪರೀಕ್ಷಿಸಲಾಗಿದ್ದು, ಇನ್ನು ಕಾರ್ಯಗತಗೊಳಿಸಿಲ್ಲ.

Best Mobiles in India

Read more about:
English summary
Russia Might Have Developed Its Own Internet Alternative To Global Internet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X