ಸ್ಯಾಮ್‌ಸಂಗ್‌ನಿಂದ 'ಬ್ಲೂ ಫೆಸ್ಟ್‌' ಆಫರ್‌ ಪ್ರಕಟ! ಏನೆಲ್ಲಾ ಡಿಸ್ಕೌಂಟ್‌ ಸಿಗಲಿದೆ?

|

ಟೆಕ್‌ ವಲಯದಲ್ಲಿ ಸ್ಯಾಮ್‌ಸಂಗ್‌ ಅನೇಕ ಗ್ಯಾಜೆಟ್ಸ್‌ಗಳನ್ನು ಪರಿಚಯಿಸಿದೆ. ತನ್ನ ವಿಶೇಷ ಗ್ಯಾಜೆಟ್ಸ್‌ಗಳ ಮೂಲಕ ಗ್ರಾಹಕರ ನೆಚ್ಚಿನ ಬ್ರ್ಯಾಂಡ್‌ ಎನಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ, ಸ್ಮಾರ್ಟ್‌ಟಿವಿ, ರೆಫ್ರಿಜರೇಟರ್‌,ಸೌಡ್‌ಬಾರ್‌ಗಳು ಸೇರಿದಂತೆ ಹಲವು ಗ್ಯಾಜೆಟ್ಸ್‌ಗಳನ್ನು ಪರಿಚಯಿಸಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಿಕೊಂಡಿದೆ. ಇನ್ನು ಸ್ಯಾಮ್‌ಸಂಗ್‌ ಕಂಪೆನಿ ತನ್ನ ಗ್ರಾಹಕರಿಗೆ ಆಗಾಗ ವಿಶೇಷ ಆಫರ್‌ಗಳನ್ನು ನೀಡುತ್ತಾ ಬಂದಿದೆ. ಸದ್ಯ ಇದೀಗ ತನ್ನ ಗ್ರಾಹಕರಿಗಾಗಿ ಹೊಸ ಬ್ಲೂ ಫೆಸ್ಟ್‌ ಆಫರ್‌ ಅನ್ನು ಪ್ರಕಟಿಸಿದೆ.

ಸ್ಯಾಮ್‌ಸಂಗ್

ಹೌದು, ಸ್ಯಾಮ್‌ಸಂಗ್ ಕಂಪೆನಿ ಬ್ಲೂ ಫೆಸ್ಟ್‌ ಆಫರ್‌ ಪ್ರಕಟಿಸಿದೆ. ಇದರಲ್ಲಿ ಸ್ಯಾಮ್‌ಸಂಗ್‌ನ ಪ್ರೀಮಿಯಂ ಟೆಲಿವಿಷನ್‌ಗಳು, ರೆಫ್ರಿಜರೇಟರ್‌ಗಳು, ಡಿಶ್‌ವಾಶರ್‌ಗಳು, ಮೈಕ್ರೋವೇವ್ ಓವನ್‌ಗಳು ಮತ್ತು ಸೌಂಡ್‌ಬಾರ್‌ಗಳ ಮೇಲೆ ಬಿಗ್‌ ಆಫರ್‌ ದೊರೆಯಲಿದೆ. ಇನ್ನು ಬ್ಲೂ ಫೆಸ್ಟ್‌ 2.0 ಆಫರ್‌ಗಳು ಈಗಾಗಲೇ ಲೈವ್‌ ಆಗಿದ್ದು, ಆಗಸ್ಟ್ 21, 2022 ರವರೆಗೆ ನಡೆಯಲಿದೆ. ಸ್ಯಾಮ್‌ಸಂಗ್‌ನ ಬ್ಲೂ ಫೆಸ್ಟ್‌ ಆಫರ್‌ ಸ್ಯಾಮ್‌ಸಂಗ್‌ನ ಅಧಿಕೃತ ಆನ್‌ಲೈನ್ ಸ್ಟೋರ್, ಸ್ಯಾಮ್‌ಸಂಗ್‌ ಶಾಪ್‌ ಮತ್ತು ದೇಶಾದ್ಯಂತ ಎಲ್ಲಾ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ರಿಟೇಲ್ ಸ್ಟೋರ್‌ಗಳಲ್ಲಿ ಮಾನ್ಯವಾಗಿರಲಿದೆ.

ಸ್ಯಾಮ್‌ಸಂಗ್‌

ಇನ್ನು ಈ ಆಫರ್‌ ಸೇಲ್‌ ಟೈಂನಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಸ್ಯಾಮ್‌ಸಂಗ್‌ ಗ್ಯಾಜೆಟ್ಸ್‌ ಮೇಲೆ ವಿಶೇಷ ಡೀಲ್‌ಗಳು ಮತ್ತು ಸೀಮಿತ ಅವಧಿಯ ಆಫರ್‌ಗಳನ್ನು ಪಡೆಯಬಹುದು. ಇದಲ್ಲದೆ ಗ್ರಾಹಕರು ಬೆಸ್ಪೋಕ್ ಫ್ಯಾಮಿಲಿ ಹಬ್ ರೆಫ್ರಿಜರೇಟರ್‌ನೊಂದಿಗೆ ಉಚಿತವಾಗಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಫೋನ್‌ ಪಡೆದುಕೊಳ್ಳಬಹುದು. ಹಾಗೆಯೇ 30% ತ್ವರಿತ ರಿಯಾಯಿತಿ, 20% ಹೆಚ್ಚುವರಿ ಕ್ಯಾಶ್‌ಬ್ಯಾಕ್ ಮತ್ತು ಜಿರೋ ಡೌನ್ ಪೇಮೆಂಟ್‌ ಜೊತೆಗೆ ಸುಲಭ EMI ಆಯ್ಕೆಗಳು ದೊರೆಯಲಿವೆ. ಇನ್ನುಳಿದಂತೆ ಸ್ಯಾಮ್‌ಸಂಗ್‌ ಬ್ಲೂ ಫೆಸ್ಟ್‌ ಆಫರ್‌ನಲ್ಲಿ ಯಾವೆಲ್ಲಾ ಡಿಸ್ಕೌಂಟ್‌ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಟಿವಿಗಳ ಮೇಲೆ ಏನಿದೆ ಆಫರ್‌?

ಸ್ಮಾರ್ಟ್‌ಟಿವಿಗಳ ಮೇಲೆ ಏನಿದೆ ಆಫರ್‌?

ಸ್ಯಾಮ್‌ಸಂಗ್‌ನ ಬ್ಲೂ ಫೆಸ್ಟ್‌ 2.0 ಆಫರ್‌ ಸಮಯದಲ್ಲಿ ಗ್ರಾಹಕರು ಆಯ್ದ ಪ್ರೀಮಿಯಂ ಸ್ಮಾರ್ಟ್‌ಟಿವಿಗಳ ಮೇಲೆ 25% ಡಿಸ್ಕೌಂಟ್‌ ಅನ್ನು ಪಡೆದುಕೊಳ್ಳಬಹುದು. ಅಲ್ಲದೆ 20% ಕ್ಯಾಶ್‌ಬ್ಯಾಕ್ ಅನ್ನು ಕೂಡ ಪಡೆದುಕೊಳ್ಳುವುದಕ್ಕೆ ಅವಕಾಶವನ್ನು ಕೂಡ ನೀಡಲಾಗಿದೆ. ಹಾಗೆಯೇ ಬ್ಲೂ ಫೆಸ್ಟ್ 2.0 ಆಫರ್‌ನಲ್ಲಿ ಸ್ಯಾಮ್‌ಸಂಗ್‌ ನಿಯೋ QLED ಮತ್ತು QLED ಟಿವಿಗಳನ್ನು 3 ವರ್ಷದ ವಾರಂಟಿ ಮತ್ತು 10 ವರ್ಷದ ನೋ ಸ್ಕ್ರೀನ್ ಬರ್ನ್-ಇನ್ ವಾರೆಂಟಿಯೊಂದಿಗೆ ಖರೀದಿಸಬಹುದಾಗಿದೆ.

ರೆಫ್ರಿಜರೇಟರ್‌ಗಳು

ರೆಫ್ರಿಜರೇಟರ್‌ಗಳು

ಸ್ಯಾಮ್‌ಸಂಗ್ ಬ್ಲೂ ಫೆಸ್ಟ್ 2.0ನಲ್ಲಿ ರೆಫ್ರಿಜರೇಟರ್‌ಗಳನ್ನು ಖರೀದಿಸುವವರಿಗೆ ಬಿಗ್‌ ಆಫರ್‌ ಲಭ್ಯವಿದೆ. ಈ ಸಮಯದಲ್ಲಿ, ಗ್ರಾಹಕರು ಆಯ್ದ ರೆಫ್ರಿಜರೇಟರ್ ಮಾದರಿಗಳ ಮೇಲೆ 20% ಕ್ಯಾಶ್‌ಬ್ಯಾಕ್ ಮತ್ತು ಇತರ ಅತ್ಯಾಕರ್ಷಕ ಬಂಡಲ್ ಡೀಲ್‌ಗಳನ್ನು ಪಡೆದುಕೊಳ್ಳಬಹುದು. ಜೊತೆಗೆ ಜಿರೋ ಡೌನ್ ಪೇಮೆಂಟ್‌ನೊಂದಿಗೆ ಸುಲಭ EMI ಆಯ್ಕೆಗಳನ್ನು ಪಡೆಯಬಹುದು. ಇದಲ್ಲದೆ ಗ್ರಾಹಕರು ಬೆಸ್ಪೋಕ್ ಫ್ಯಾಮಿಲಿ ಹಬ್ ರೆಫ್ರಿಜರೇಟರ್‌ ಖರೀದಿಸಿದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 (8GB/128GB) ಫೋನ್‌ ಅನ್ನು ಕೊಡುಗೆಯಾಗಿ ಪಡೆಯಲಿದ್ದಾರೆ. ಇದಲ್ಲದೆ ಸ್ಯಾಮ್‌ಸಂಗ್‌ನ ಕರ್ಡ್ ಮೆಸ್ಟ್ರೋ ರೆಫ್ರಿಜರೇಟರ್‌ ಕೂಡ ಆಫರ್‌ನಲ್ಲಿ ದೊರೆಯಲಿದೆ. ಇದು ಮೊಸರು ತಯಾರಿಸಬಲ್ಲ ವಿಶ್ವದ ಮೊದಲ ರೆಫ್ರಿಜರೇಟರ್ ಎನಿಸಿಕೊಂಡಿದೆ.

ಮೈಕ್ರೋವೇವ್

ಮೈಕ್ರೋವೇವ್

ಸ್ಯಾಮ್‌ಸಂಗ್ ಬ್ಲೂ ಫೆಸ್ಟ್ 2.0 ಸಮಯದಲ್ಲಿ ಮೈಕ್ರೋವೇವ್‌ ಅನ್ನು ಕೂಡ ಆಫರ್‌ನಲ್ಲಿ ಖರೀದಿಸಬಹುದು. ಇದರಲ್ಲಿ ಗ್ರಾಹಕರು ಮಸಾಲಾ ಮತ್ತು ಸನ್-ಡ್ರೈ ಶ್ರೇಣಿಯ ಮೈಕ್ರೋವೇವ್ ಓವನ್‌ಗಳ ಖರೀದಿಯ ಮೇಲೆ ಆಕರ್ಷಕ ಕೊಡುಗೆಗಳನ್ನು ಕೂಡ ಪಡೆದುಕೊಳ್ಳಬಹುದು. 18,900ರೂ. ಆರಂಬಿಕ ಬೆಲೆ ಹೊಂದಿರುವ ಮೈಕ್ರೋವೇವ್‌ಗಳ ಮೇಲೆ 10 ವರ್ಷಗಳ ವಾರಂಟಿಯನ್ನು ಕೂಡ ನೀಡಲಾಗ್ತಿದೆ. ಇದರಿಂದ ನಿಮ್ಮ ಮನೆಯಲ್ಲಿಯೂ ಅತ್ಯುತ್ತಮ ಮೈಕ್ರೋವೇವ್‌ ಬೇಕೆಂದು ಬಯಸಿದರೆ ಬ್ಲೂ ಫೆಸ್ಟ್‌ನಲ್ಲಿ ನಿಮಗೆ ಉತ್ತಮ ಆಯ್ಕೆಗಳು ದೊರೆಯಲಿವೆ.

ಡಿಶ್‌ ವಾಶರ್‌

ಡಿಶ್‌ ವಾಶರ್‌

ಇನ್ನು ಸ್ಯಾಮ್‌ಸಂಗ್‌ ಕಂಪೆನಿ ಇಂಟೆನ್ಸಿವ್ ವಾಶ್ ಶ್ರೇಣಿಯ ಡಿಶ್‌ವಾಶರ್‌ಗಳು ಕೂಡ ಬಿಗ್‌ ಆಫರ್‌ ಪಡೆದುಕೊಂಡಿವೆ. ಈ ಡಿಶ್‌ವಾಶರ್‌ಗಳು ಕುಕ್ಕರ್ ಮತ್ತು ಕಧಾಯ್‌ನಂತಹ ಭಾರತೀಯ ಕುಕ್‌ವೇರ್ ಅನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಬ್ಲೂ ಫೆಸ್ಟ್‌ ಆಪರ್‌ನಲ್ಲಿ ಡಿಶ್‌ವಾಶರ್‌ಗಳ ಆರಂಭಿಕ ಬೆಲೆ 36,990 ರೂ. ಆಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ಜಿರೋ ಡೌನ್‌ ಪಾವತಿ ಆಯ್ಕೆಗಳೊಂದಿಗೆ ಸುಲಭ EMI ಗಳ ಆಯ್ಕೆಯನ್ನು ನೀಡಲಾಗಿದೆ. ಜೊತೆಗೆ ಗ್ರಾಹಕರು 20% ತನಕ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಸೌಂಡ್‌ಬಾರ್‌ಗಳು

ಸೌಂಡ್‌ಬಾರ್‌ಗಳು

ಸ್ಯಾಮ್‌ಸಂಗ್ ಸೌಂಡ್‌ಬಾರ್‌ಗಳನ್ನು ಖರೀದಿಸುವವರಿಗೆ ಬ್ಲೂ ಫೆಸ್ಟ್‌ ಉತ್ತಮ ವೇದಿಕೆಯಾಗಿದೆ. ಏಕೆಂದರೆ ಸ್ಯಾಮ್‌ಸಂಗ್‌ ಸೌಂಡ್‌ಬಾರ್‌ಗಳನ್ನು ಖರೀದಿಸಿದ ನಂತರ, ಗ್ರಾಹಕರು 30%ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದರಲ್ಲಿ ಸ್ಯಾಮ್‌ಸಂಗ್‌ನ 2022 ಸೌಂಡ್‌ಬಾರ್ ಲೈನ್‌ಅಪ್, ಪ್ರಮುಖ Q ಸರಣಿ ಮತ್ತು ಲೈಪ್‌ಸ್ಟೈಲ್‌ S ಸರಣಿಗಳು ಆಫರ್‌ ಪಡೆದುಕೊಂಡಿವೆ. ಅತ್ಯುತ್ತಮ ಸೌಂಡ್‌ಬಾರ್‌ಗಳನ್ನು ಖರೀದಿಸುವವರಿಗೆ ಬ್ಲೂ ಫೆಸ್ಟ್‌ನಲ್ಲಿ ಅತ್ಯುತ್ತಮ ಆಫರ್‌ಗಳು ಲಭ್ಯವಾಗಲಿವೆ.

ವಾಶಿಂಗ್‌ ಮೆಷಿನ್‌

ವಾಶಿಂಗ್‌ ಮೆಷಿನ್‌

ಸ್ಯಾಮ್‌ಸಂಗ್‌ ಬ್ಲೂ ಫೆಸ್ಟ್ 2.0 ಸಮಯದಲ್ಲಿ ವಾಶಿಂಗ್‌ ಮೆಷಿನ್‌ಗಳಿಗೆ ಡಿಸ್ಕೌಂಟ್‌ ಘೋಷಿಸಲಾಗಿದೆ. ಅದರಂತೆ ಸ್ಯಾಮ್‌ಸಂಗ್ ಗ್ರಾಹಕರು ಸ್ಯಾಮ್‌ಸಂಗ್‌ ವಾಶಿಂಗ್‌ ಮೆಷಿನ್‌ಗಳ ಮೇಲೆ 25% ತ್ವರಿತ ರಿಯಾಯಿತಿ, 20% ವರೆಗೆ ಕ್ಯಾಶ್‌ಬ್ಯಾಕ್ ಮತ್ತು ಜಿರೋ ಡೌನ್ ಪಾವತಿ ಆಯ್ಕೆಗಳನ್ನು ನೀಡಲಾಗಿದೆ. ಹಾಗೆಯೇ 990ರೂ.ಗಳಲ್ಲಿ ಸುಲಭ EMI ಆಯ್ಕೆಯನ್ನು ಸಹ ನೀಡಲಾಗಿದೆ.

ಫೆಸ್ಟ್‌

ಇನ್ನು ಬ್ಲೂ ಫೆಸ್ಟ್‌ ಮೂಲಕ ಸ್ಯಾಮ್‌ಸಂಗ್‌ ಗ್ರಾಹಕರು ಉತ್ತಮ ಆಯ್ಕೆಗಳನ್ನು ಪಡೆದುಕೊಳ್ಳಬಹುದು. ಗ್ರಾಹಕರು ತಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಹಬ್ಬಗಳನ್ನು ಆಚರಿಸಲು ತಮ್ಮ ಮನೆಗಳನ್ನು ನವೀಕರಿಸಲು ಹೊಸ ಗ್ಯಾಜೆಟ್ಸ್‌ಗಳನ್ನು ಖರೀದಿಸುವುದಕ್ಕೆ ಇದು ಉತ್ತಮ ಸಮಯವಾಗಿದೆ. ಗ್ರಾಹಕ ಬಾಳಿಕೆ ಬರುವ ಉತ್ಪನ್ನಗಳ ಶ್ರೇಣಿಯಾದ್ಯಂತ ನಮ್ಮ ಬ್ಲೂ ಫೆಸ್ಟ್ 2.0 ಆಫರ್‌ಗಳು ಗ್ರಾಹಕರಿಗೆ ಸೂಕ್ತವಾಗಿವೆ. ಸಾಟಿಯಿಲ್ಲದ ತಂತ್ರಜ್ಞಾನ, ವರ್ಧಿತ ಅನುಕೂಲತೆ ಮತ್ತು ಇಂಧನ ದಕ್ಷತೆಯನ್ನು ಒದಗಿಸುವ ಜೊತೆಗೆ ಅವರ ವೈಯಕ್ತಿಕ ಶೈಲಿಗಳನ್ನು ಪ್ರತಿಬಿಂಬಿಸುವ ವೈಯಕ್ತೀಕರಿಸಿದ ವಾಸದ ಸ್ಥಳಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ, ಎಂದು ಸ್ಯಾಮ್ಸಂಗ್ ಇಂಡಿಯಾದ ಸೀನಿಯರ್‌ ವೈಸ್‌ ಪ್ರೆಸಿಡೆಂಟ್‌ ಮೋಹನ್‌ದೀಪ್ ಸಿಂಗ್ ಹೇಳಿದ್ದಾರೆ.

Best Mobiles in India

English summary
Samsung announced ‘Blue Fest’ offers:discounts on smart TVs, refrigerators and more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X