ಸ್ಯಾಮ್‌ಸಂಗ್‌ನಿಂದ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌: ಗ್ಯಾಲಕ್ಸಿ ಟ್ಯಾಬ್‌ಗಳಿಗೆ ಡಿಸ್ಕೌಂಟ್‌!

|

ಸ್ಯಾಮ್‌ಸಂಗ್ ತನ್ನ 'ಬ್ಯಾಕ್ ಟು ಸ್ಕೂಲ್' ಅಭಿಯಾನದ ಭಾಗವಾಗಿ ತನ್ನ ಗ್ಯಾಲಕ್ಸಿ ಟ್ಯಾಬ್‌ಗಳಲ್ಲಿ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಕೊರೊನಾ ಪರಿಣಾಮದಿಂದಾಗಿ ಸದ್ಯ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಹೀಗಾಗಿ ಪ್ರಸ್ತುತ ಸ್ಯಾಮ್‌ಸಂಗ್‌ನ ಈ ಕೊಡುಗೆಯು ವಿದ್ಯಾರ್ಥಿಗಳಿಗೆ ಅನುಕೂಲಕರ ಎನಿಸಲಿದೆ.

ಸ್ಯಾಮ್‌ಸಂಗ್

ಹೌದು, ಸ್ಯಾಮ್‌ಸಂಗ್ ಕಂಪನಿಯು ವಿದ್ಯಾರ್ಥಿಗಳಿಗಾಗಿ ಬ್ಯಾಕ್‌ ಟು ಸ್ಕೂಲ್ ಅಭಿಯಾನವನ್ನು ಶುರು ಮಾಡಿದೆ. ಈ ಕ್ಯಾಂಪೇನ್‌ನಲ್ಲಿ ವಿದ್ಯಾರ್ಥಿಗಳಿಗೆ ಕಂಪನಿಯ ಗ್ಯಾಲಕ್ಸಿ ಟ್ಯಾಬ್ ಎಸ್ 7+, ಗ್ಯಾಲಕ್ಸಿ ಟ್ಯಾಬ್ ಎಸ್ 7, ಗ್ಯಾಲಕ್ಸಿ ಟ್ಯಾಬ್ ಎಸ್ 6 ಲೈಟ್ ಮತ್ತು ಗ್ಯಾಲಕ್ಸಿ ಟ್ಯಾಬ್ ಎ 7 ಸೇರಿದಂತೆ ಇತರೆ ಡಿವೈಸ್‌ಗಳಲ್ಲಿ ರಿಯಾಯಿತಿ ಕೊಡುಗೆಯು ಅನ್ವಯವಾಗುತ್ತವೆ.

ಗ್ಯಾಲಕ್ಸಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 7+, ಗ್ಯಾಲಕ್ಸಿ ಟ್ಯಾಬ್ ಎಸ್ 7, ಗ್ಯಾಲಕ್ಸಿ ಟ್ಯಾಬ್ ಎಸ್ 6 ಲೈಟ್ ಮತ್ತು ಗ್ಯಾಲಕ್ಸಿ ಟ್ಯಾಬ್ ಎ7 ಡಿವೈಸ್‌ ಅನ್ನು ತನ್ನದೇ ಆದ ಇ-ಸ್ಟೋರ್‌ನಲ್ಲಿ ಖರೀದಿಸುವಾಗ ಸ್ಯಾಮ್‌ಸಂಗ್, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಶೇಕಡಾ 10 ರಷ್ಟು ರಿಯಾಯಿತಿ ನೀಡುತ್ತದೆ. ದೇಶಾದ್ಯಂತದ ವಿದ್ಯಾರ್ಥಿಗಳು ತಮ್ಮ ಅಧಿಕೃತ ಕಾಲೇಜು / ಶಾಲೆ / ವಿಶ್ವವಿದ್ಯಾಲಯದ ಇಮೇಲ್ ಐಡಿ ಬಳಸಿ ಅಥವಾ ಅಧಿಕೃತ ವಿದ್ಯಾರ್ಥಿ ರುಜುವಾತು ಪರಿಶೀಲನಾ ಏಜೆನ್ಸಿಯ ಮೌಲ್ಯಮಾಪನದ ಮೂಲಕ ಈ ಪ್ರಯೋಜನಗಳನ್ನು ಪಡೆಯಬಹುದು.

ಡಿಸ್ಕೌಂಟ್‌

ಗ್ಯಾಲಕ್ಸಿ ಟ್ಯಾಬ್ ಎಸ್ 7+, ಗ್ಯಾಲಕ್ಸಿ ಟ್ಯಾಬ್ ಎಸ್7 ಗಾಗಿ ಸ್ಯಾಮ್‌ಸಂಗ್ ಟ್ಯಾಬ್ಲೆಟ್ ಕೀಬೋರ್ಡ್‌ಗಳಲ್ಲಿ 10,000ರೂ. ಇನ್‌ಸ್ಟಂಟ್‌ ರಿಯಾಯಿತಿ ಕೊಡುಗೆ ನೀಡಿದೆ. ಆಕರ್ಷಕ ಡಿಸ್ಕೌಂಟ್‌ ನಂತರ ಗ್ಯಾಲಕ್ಸಿ ಟ್ಯಾಬ್ ಎಸ್ 7+ ಕೀಬೋರ್ಡ್ ಕವರ್‌ಗೆ 7,999ರೂ ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್7 ಗೆ 5,999ರೂ. ಬೆಲೆಯಲ್ಲಿ ಲಭ್ಯ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ ಗ್ಯಾಲಕ್ಸಿ ಟ್ಯಾಬ್ ಎಸ್ 7+ ನಲ್ಲಿ 10,000ರೂ.ಗಳ ಕ್ಯಾಶ್‌ಬ್ಯಾಕ್‌ ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್7 ನಲ್ಲಿ 9,000ರೂ.ಗಳ ಕ್ಯಾಶ್‌ಬ್ಯಾಕ್‌ ದೊರೆಯಲಿದೆ.

ಸಿಗಲಿದೆ

ಹಾಗೆಯೇ ಗ್ಯಾಲಕ್ಸಿ ಟ್ಯಾಬ್ ಎಸ್6 ಲೈಟ್ ಡಿವೈಸ್ ಗ್ಯಾಲಕ್ಸಿ ಬಡ್ಸ್+ ನೊಂದಿಗೆ 1,999ರೂ.ಗಳ ವಿಶೇಷ ಬೆಲೆಗೆ ಸಿಗಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು ಹೆಚ್ಚುವರಿಯಾಗಿ 3000ರೂ.ಗಳ ಕ್ಯಾಶ್‌ಬ್ಯಾಕ್‌ ಪಡೆಯುತ್ತಾರೆ. ಗ್ರಾಹಕರು ಗ್ಯಾಲಕ್ಸಿ ಟ್ಯಾಬ್ ಎ7 ಅನ್ನು ಖರೀದಿದರೇ ಸ್ಯಾಮ್‌ಸಂಗ್ ಬ್ರಾಂಡ್ ಕವರ್ 999ರೂ.ಗಳ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಹಾಗೆಯೇ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 2000ರೂ.ಕ್ಯಾಶ್ ಬ್ಯಾಕ್ ಆಫರ್ ಸಿಗಲಿದೆ.

ರಿಯಾಯಿತಿ

ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್ ಕೆಫೆಗಳು ಮತ್ತು ಪ್ಲಾಜಾಗಳಲ್ಲಿ ವಿದ್ಯಾರ್ಥಿಗಳಿಗೆ ‘ಸ್ಟೂಡೆಂಟ್ ಅಡ್ವಾಂಟೇಜ್' ಕೊಡುಗೆಗಳನ್ನು ಪಡೆಯಲು ಅನುಮತಿಸುತ್ತದೆ. ಸಂಬಂಧಿತ ರಿಯಾಯಿತಿ ಪಡೆಯಲು ಬಿಲ್ಲಿಂಗ್ ಮಾಡುವಾಗ ವಿದ್ಯಾರ್ಥಿಗಳು ಈ ಯಾವುದೇ ಅಂಗಡಿಗಳಿಗೆ ಭೇಟಿ ನೀಡಬಹುದು ಮತ್ತು ಅವರ ಕಾಲೇಜು ಇಮೇಲ್ ಐಡಿಯನ್ನು ಮೌಲ್ಯೀಕರಿಸಬಹುದು. ಅವರು ಸ್ಮಾರ್ಟ್ ಕ್ಲಬ್ ಸದಸ್ಯತ್ವವನ್ನು ಸಹ ಸ್ವೀಕರಿಸುತ್ತಾರೆ, ಇದರಲ್ಲಿ ಬೋನಸ್ ಬೇನಿಫಿಟ್ಸ್, ರಿವಾರ್ಡ್ ಪಾಯಿಂಟ್‌ಗಳು ಮತ್ತು ಸೇವಾ ಸೌಲಭ್ಯಗಳು ಸೇರಿವೆ.

Best Mobiles in India

English summary
Samsung has announced various new offers on its Galaxy Tabs as part of its ‘Back to School’ campaign for students.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X