ಸ್ಯಾಮ್‌ಸಂಗ್‌ನ ಈ ಟಿವಿ ಖರೀದಿಸಿದರೆ, 'ಗ್ಯಾಲಕ್ಸಿ Z ಫೋಲ್ಡ್‌ 4' ಫೋನ್‌ ಉಚಿತ!

|

ಸ್ಯಾಮ್‌ಸಂಗ್‌ ಸಂಸ್ಥೆಯು ಸ್ಯಾಮ್‌ಸಂಗ್‌ ಬಿಗ್ ಟಿವಿ ಡೇಸ್‌ ಸೇಲ್ ಆಯೋಜಿಸಿದ್ದು, ಭಾರತದಲ್ಲಿ ನಿಯೋ QLED 8K, ನಿಯೋ QLED TV, ಪ್ರೇಮ್‌ ಮತ್ತು ಕ್ರಿಸ್ಟಲ್ 4K UHD ಸ್ಮಾರ್ಟ್‌ ಟಿವಿಗಳಲ್ಲಿ ಇದೀಗ ಹೊಸ ಡೀಲ್‌ಗಳು ಮತ್ತು ಕೊಡುಗೆಗಳನ್ನು ಪ್ರಕಟಿಸಿದೆ. ಈ ಕೊಡುಗೆಗಳು ಜನವರಿ 31, 2023 ರವರೆಗೆ ಲಭ್ಯವಿರಲಿದ್ದು, ಗ್ರಾಹಕರಿಗೆ ಗ್ಯಾಲಕ್ಸಿ Z ಫೋಲ್ಡ್‌ 4, ಗ್ಯಾಲಕ್ಸಿ A23, ಅಥವಾ ಸ್ಯಾಮ್‌ಸಂಗ್‌ ಲೈಫ್‌ಸ್ಟೈಲ್ ಸೌಂಡ್‌ಬಾರ್ ಅನ್ನು ಆಯ್ದ ಉತ್ಪನ್ನಗಳ ಖರೀದಿಗೆ ಒದಗಿಸುತ್ತದೆ.

ಸ್ಯಾಮ್‌ಸಂಗ್‌ನ

ಅಂದಹಾಗೆ ಈ ಡೀಲ್‌ಗಳು ಸ್ಯಾಮ್‌ಸಂಗ್‌ನ ಅಧಿಕೃತ ಆನ್‌ಲೈನ್ ಸ್ಟೋರ್ ಸ್ಯಾಮ್‌ಸಂಗ್ ಶಾಪ್ ಮತ್ತು ಎಲ್ಲಾ ಪ್ರಮುಖ ರಿಟೇಲ್‌ ಸ್ಟೋರ್‌fಳಲ್ಲಿ ಲಭ್ಯವಿರುತ್ತವೆ. ಸ್ಯಾಮ್‌ಸಂಗ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ 10 ಪ್ರತಿಶತ ಕ್ಯಾಶ್‌ಬ್ಯಾಕ್ ಜೊತೆಗೆ 20 ಪ್ರತಿಶತದವರೆಗೆ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಅನ್ನು ಸಹ ನೀಡುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಗಳಲ್ಲಿ ಕೊಡುಗೆಗಳು

ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಗಳಲ್ಲಿ ಕೊಡುಗೆಗಳು

98 ಇಂಚಿನ ನಿಯೋ QLED TV ಮತ್ತು 85 ಇಂಚಿನ ಮತ್ತು 75 ಇಂಚಿನ ನಿಯೋ QLED 8K ಮಾದರಿ ಟಿವಿಗಳನ್ನು ಖರೀದಿಸುವ ಗ್ರಾಹಕರು, 2 ವರ್ಷಗಳ ವಾರಂಟಿ ಜೊತೆಗೆ 1,54,999ರೂ. ಮೌಲ್ಯದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಅನ್ನು ಉಚಿತವಾಗಿ ಪಡೆಯುತ್ತಾರೆ.

ಮಾಡೆಲ್‌ಗಳನ್ನು

ಹಾಗೆಯೇ 85 ಇಂಚಿನ ಮತ್ತು 75 ಇಂಚಿನ ನಿಯೋ QLED ಟಿವಿ ಮಾಡೆಲ್‌ಗಳು, 75 ಇಂಚಿನ ದಿ ಫ್ರೇಮ್‌ ಟಿವಿ ಅಥವಾ 85 ಇಂಚಿನ ಮತ್ತು 75 ಇಂಚಿನ ಅಲ್ಟ್ರಾ ಹೆಚ್‌ಡಿ 4K QLED ಮಾಡೆಲ್‌ಗಳನ್ನು ಖರೀದಿಸಿದರೆ, ಗ್ರಾಹಕರು 40,999ರೂ. ಮೌಲ್ಯದ HW-S801B ಸ್ಯಾಮ್‌ಸಂಗ್‌ ಸೌಂಡ್‌ಬಾರ್ ಅನ್ನು ಉಚಿತವಾಗಿ ಪಡೆಯುತ್ತಾರೆ.

ಖಚಿತವಾದ

65 ಇಂಚಿನ ನಿಯೋ QLED 8K ಟಿವಿ, 85 ಇಂಚಿನ, 75 ಇಂಚಿನ, 65 ಇಂಚಿನ ಮತ್ತು 55 ಇಂಚಿನ ನಿಯೋ QLED ಟಿವಿಗಳ ಖರೀದಿಯ ಮೇಲೆ, 85 ಇಂಚಿನ, 75 ಇಂಚಿನ, 65 ಇಂಚಿನ ಅಲ್ಟ್ರಾ ಹೆಚ್‌ಡಿ 4K QLED ಟಿವಿಗಳು, ಅಥವಾ 75 ಇಂಚಿನ ಮತ್ತು 85 ಇಂಚಿನ ಕ್ರಿಸ್ಟಲ್ 4K UHD ಟಿವಿಗಳು, ಗ್ರಾಹಕರು 18,499ರೂ. ಮೌಲ್ಯದ ಖಚಿತವಾದ ಗ್ಯಾಲಕ್ಸಿ A23 ಅನ್ನು ಪಡೆಯುತ್ತಾರೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಫೀಚರ್ಸ್‌:

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಫೀಚರ್ಸ್‌:

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಸ್ಮಾರ್ಟ್‌ಫೋನ್‌ 7.6 ಇಂಚಿನ ಡೈನಾಮಿಕ್ ಅಮೋಲೆಡ್‌ 2X ಇನ್ಫಿನಿಟಿ ಫ್ಲೆಕ್ಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೇನ್‌ ಡಿಸ್‌ಪ್ಲೇ ಆಗಿದ್ದು, QXGA+ ರೆಸಲ್ಯೂಶನ್ ಮತ್ತು 21.6:18 ರಚನೆಯ ಅನುಪಾತವನ್ನು ಹೊಂದಿದೆ. ಈ ಡಿಸ್‌ಪ್ಲೇ 1Hz ನಿಂದ 120Hz ವರೆಗೆ ರಿಫ್ರೆಶ್‌ ರೇಟ್‌ ನೀಡಲಿದೆ. ಇದಲ್ಲದೆ 6.2 ಇಂಚಿನ HD+ ಡೈನಾಮಿಕ್ ಅಮೋಲೆಡ್‌ 2X ಕವರ್‌ ಡಿಸ್‌ಪ್ಲೇ ಹೊಂದಿದೆ. ಇದು 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು 23.1:9 ರಚನೆಯ ಅನುಪಾತವನ್ನು ಹೊಂದಿದೆ.

ಸ್ಮಾರ್ಟ್‌ಫೋನ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್‌ 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಮಡಿದೆ. ಇದು ಆಂಡ್ರಾಯ್ಡ್‌ 12L ಆಧಾರಿತ ಒನ್‌ UI 4.1.1 ನಲ್ಲಿ ಕಾರ್ಯನಿರ್ವಹಿಸುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಇದು 12GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ.

ಮೆಗಾಪಿಕ್ಸೆಲ್‌

ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಮೇನ್‌ ಡಿಸ್‌ಪ್ಲೇಯಲ್ಲಿ 4 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಹಾಗೂ ಕವರ್ ಡಿಸ್‌ಪ್ಲೇಯಲ್ಲಿ 10 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

Best Mobiles in India

English summary
Samsung Big TV Days: Buy THIS Samsung TV and get a Galaxy Z Fold 4 free.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X