ಸ್ಯಾಮ್‌ಸಂಗ್ ನೌಕರರಿಗೆ ಕ್ಯಾನ್ಸರ್!..ಕ್ಷಮೆ ಕೇಳಿ ಪರಿಹಾರ ನೀಡಿದ ಕಂಪೆನಿ!!

|

ವಿಶ್ವದ ಟೆಕ್ ದೈತ್ಯ ಸ್ಯಾಮ್‌ಸಂಗ್ ಕಂಪೆನಿಯ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿದ್ದ ಕೆಲ ವರ್ಷಗಳ ಹಿಂದಿನ ಬಹುದೊಡ್ಡ ತಪ್ಪನ್ನು ಕಂಪೆನಿ ಒಪ್ಪಿಕೊಂಡಿದೆ. ಕಂಪೆನಿಯ ಸೆಮಿಕಂಡಕ್ಟರ್ ತಯಾರಿಸುವ ಕಾರ್ಖಾನೆಯಲ್ಲಿ ಆದ ಪ್ರಮಾದದಿಂದ ಅನೇಕ ಕಾರ್ಮಿಕರು ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗಿದ್ದಕ್ಕೆ ಸ್ಯಾಮ್‌ಸಂಗ್ ಕ್ಷಮೆಯಾಚಿಸಿದೆ. ಜೊತೆಗೆ ಕೋರ್ಟ್ ಆದೇಶಿಸಿದ ಪರಿಹಾರದ ಹಣವನ್ನು ಸಹ ನೀಡಿದೆ.

ಹೌದು, ಅತಿದೊಡ್ಡ ಮೊಬೈಲ್ ಫೋನ್ ಮತ್ತು ಚಿಪ್ ತಯಾರಿಕಾ ಕಂಪೆನಿ ಸ್ಯಾಮ್​ಸಂಗ್​ನ 240 ಉದ್ಯೋಗಿಗಳು ಅನಾರೋಗ್ಯಕ್ಕೆ ಈಡಾಗಿದ್ದರು. ಖಾರ್ಖಾನೆಯ ಸೆಮಿಕಂಡಕ್ಟರ್ ಮತ್ತು ಡಿಸ್​ಪ್ಲೇ ತಯಾರಿಕಾ ಘಟಕದಲ್ಲಿ ಉಂಟಾದ ಈ ಸಮಸ್ಯೆಯಿಂದ ಸುಮಾರು 80 ಮಂದಿ ಸಾವನ್ನಪ್ಪಿದ್ದರು. ಅಲ್ಲದೆ ಇಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ 16 ರೀತಿಯ ಕ್ಯಾನ್ಸರ್​ ರೋಗ ಬಾಧಿಸಿತ್ತು. 1984 ರಲ್ಲಿ ನಡೆದ ಈ ಪ್ರಕರಣವು 2007ರಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಹಿರಂಗಪಡಿಸಲಾಯಿತು.

ಸ್ಯಾಮ್‌ಸಂಗ್ ನೌಕರರಿಗೆ ಕ್ಯಾನ್ಸರ್!..ಕ್ಷಮೆ ಕೇಳಿ ಪರಿಹಾರ ನೀಡಿದ ಕಂಪೆನಿ!!

ಇದಾದ ನಂತರ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಂದ ಬಳಲುತ್ತಿದದ್ದ ಕುರಿತು ಕಾರ್ಮಿಕರು ನ್ಯಾಯಾಲಯದ ಮೆಟ್ಟಿಲೇರಿ ನಷ್ಟ ಪರಿಹಾರವನ್ನು ಆಗ್ರಹಿಸಿದ್ದರು. ಒಂದು ದಶಕಕ್ಕೂ ದೀರ್ಘಕಾಲ ನಡೆದ ಈ ವಾದ ಪ್ರತಿವಾದ ಕೊನೆಗೂ ಮುಗಿದಿದ್ದು, ಕೋರ್ಟ್ ಕಾರ್ಮಿಕರ ಪರವಾಗಿ ತೀರ್ಪು ನೀಡಲಾಗಿದೆ. ನಮ್ಮ ನೌಕರರು ಕ್ಯಾನ್ಸರ್​​ಗೆ ತುತ್ತಾಗಿರುವುದಕ್ಕೆ ನಾವು ಅವರ ಕುಟುಂಬದ ಕ್ಷಮೆಯಾಚಿಸಿದ್ದೇವೆ ಎಂದು ಸ್ಯಾಮ್‌ಸಂಗ್ ಕಂಪೆನಿ ಕೂಡ ಹೇಳಿದೆ.

ಕಂಪೆನಿಯ ಸೆಮಿಸೆಕಂಡರ್​ ಮತ್ತು ಎಲ್ಸಿಡಿ ಕಾರ್ಖಾನೆಯಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಪರಿಹರಿಸಲು ನಾವು ವಿಫವಾಗಿದ್ದೆವು. ನಮ್ಮ ನೌಕರರು ಕ್ಯಾನ್ಸರ್​​ಗೆ ತುತ್ತಾಗಿರುವುದಕ್ಕೆ ನಾವು ಅವರ ಕುಟುಂಬದ ಕ್ಷಮೆಯಾಚಿಸಿದ್ದೇವೆ. ಪರಿಹಾರದ ಹಣವಾಗಿ ಸ್ಯಾಮ್​ಸಂಗ್ ಕ್ಯಾನ್ಸರ್ ಪೀಡಿತ ಕಾರ್ಮಿಕರಿಗಾಗಿ 15 ಮಿಲಿಯನ್ ವೋನ್ (133,000 ಡಾಲರ್) ನೀಡಲು ನಿರ್ಧರಿಸಿದೆ ಎಂದು ಸ್ಯಾಮ್​ಸಂಗ್​ ಕಂಪೆನಿಯ ಉಪಾಧ್ಯಕ್ಷ ಕಿಮ್ ಕಿ ನ್ಯಾಮ್ ಹೇಳಿದ್ದಾರೆ.

ಸ್ಯಾಮ್‌ಸಂಗ್ ನೌಕರರಿಗೆ ಕ್ಯಾನ್ಸರ್!..ಕ್ಷಮೆ ಕೇಳಿ ಪರಿಹಾರ ನೀಡಿದ ಕಂಪೆನಿ!!

ಸ್ಯಾಮ್‌ಸಂಗ್ ಕಂಪೆನಿಯಿಂದ ಬಾಧಿತರಾದ ಕಾರ್ಮಿಕರಿಗೆ 1.33 ಲಕ್ಷ ಡಾಲರ್ ( 95 ಲಕ್ಷ) ಪರಿಹಾರ ನೀಡುವಂತೆ ಕಾರ್ಮಿಕ ನ್ಯಾಯಾಲಯ ಸ್ಯಾಮ್​ಸಂಗ್​ ಕಂಪೆನಿಗೆ ಸೂಚಿಸಿದೆ.ಇದರ ಪ್ರಕಾರ ಸ್ಯಾಮ್​ಸಂಗ್ ಕ್ಯಾನ್ಸರ್ ಪೀಡಿತ ಕಾರ್ಮಿಕರಿಗಾಗಿ 15 ಮಿಲಿಯನ್ ವೋನ್ (133,000 ಡಾಲರ್) ನೀಡಲು ನಿರ್ಧರಿಸಿದೆ. ಒಟ್ಟಿನಲ್ಲಿ ಏನೇ ಹಣವನ್ನು ಪಾವತಿಸಿದರೂ ಸಹ ಸ್ಯಾಮ್‌ಸಂಗ್ ತನ್ನ ನೌಕರರ ಜೀವನಕ್ಕೆ ಬೆಲೆ ತರಲು ಆಗಲಿಲ್ಲ.

Best Mobiles in India

English summary
Company's apology follows a 10-year battle by families of workers who developed severe diseases, including leukaemia.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X