ಕೇವಲ 12,990ರೂ.ಗೆ 32 ಇಂಚಿನ ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ ಲಾಂಚ್!

|

ದಕ್ಕಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯು ಭಿನ್ನ ಭಿನ್ನ ಮಾದರಿಯ ಸ್ಮಾರ್ಟ್‌ ಟಿವಿಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ದೇಶಿಯ ಮಾರುಕಟ್ಟೆಗೆ ಕಡಿಮೆ ಪ್ರೈಸ್‌ಟ್ಯಾಗ್‌ನಲ್ಲಿ ಕೆಲವು ಶ್ರೇಣಿಯ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡಿ ಸದ್ದು ಮಾಡಿರುವ ಸ್ಯಾಮ್‌ಸಂಗ್ ಇದೀಗ ಮತ್ತೆ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ ಟಿವಿ ಲಾಂಚ್ ಮಾಡಿದೆ. ಫನ್‌ಬಿಲಿವೇಬಲ್ ಸರಣಿ ಹೆಸರಿನಲ್ಲಿ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡಿದೆ.

ಸ್ಯಾಮ್‌ಸಂಗ್ ಸಂಸ್ಥೆ

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ದೇಶದಲ್ಲಿ ಹೊಸದಾಗಿ ಫನ್‌ಬಿಲಿವೇಬಲ್-Funbelievable ಸರಣಿಯಲ್ಲಿ ಸ್ಮಾರ್ಟ್‌ ಟಿವಿಯನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ ಟಿವಿ ಸರಣಿಯು ಅಗ್ಗದ ಪ್ರೈಸ್‌ಟ್ಯಾಗ್ ಹೊಂದಿರುವುದು ಪ್ಲಸ್‌ ಪಾಯಿಂಟ್‌ ಆಗಿದ್ದು, ಆರಂಭಿಕ ಬೆಲೆಯು 12,990ರೂ.ಗಳಾಗಿದೆ. ಈ ಮೂಲಕ ಸ್ಯಾಮ್‌ಸಂಗ್ ಕಂಪನಿಯು ಶಿಯೋಮಿ ಮತ್ತು ವಿಯು ಸಂಸ್ಥೆಯ ಅಗ್ಗದ ಸ್ಮಾರ್ಟ್‌ ಟಿವಿಗಳಿಗೆ ಮಕಾಡೆ ಮಲಗಿಸುವ ಲಕ್ಷಣಗಳನ್ನು ಹೊರ ಸೂಚಿಸಿದೆ.

32 ಇಂಚಿನ ವೇರಿಯಂಟ್‌

ಈ ಸ್ಮಾರ್ಟ್‌ ಟಿವಿಯು ಎರಡು ವೇರಿಯಂಟ್‌ಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 32 ಇಂಚಿನ ವೇರಿಯಂಟ್‌ ಹಾಗೂ 43 ಇಂಚಿನ ವೇರಿಯಂಟ್‌ ಮಾದರಿಯನ್ನು ಹೊಂದಿವೆ. 32 ಇಂಚಿನ ಸ್ಮಾರ್ಟ್‌ ಟಿವಿಯ ಡಿಸ್‌ಪ್ಲೇಯು 1280x720 ಪಿಕ್ಸಲ್ ರೆಸಲ್ಯೂಶನ್ ಆಗಿದ್ದು, ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 43 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಆಗಿದೆ. ಈ ಟಿವಿಯ ಡಿಸ್‌ಪ್ಲೇಯು 1920x1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ.

ಪರ್ಸನಲ್ ಕಂಪ್ಯೂಟರ್

ಈ ಸ್ಮಾರ್ಟ್‌ ಟಿವಿಯು ಪರ್ಸನಲ್ ಕಂಪ್ಯೂಟರ್ ಮೋಡ್ ಹೊಂದಿದ್ದು, ಸ್ಮಾರ್ಟ್‌ ಟಿವಿಯನ್ನು ಕಂಪ್ಯೂಟರ್ ತರಹ ಬಳಕೆ ಮಾಡುವ ಆಯ್ಕೆ ಇದೆ. ಹಾಗೆಯೇ ವೆಬ್ ಸರ್ಚ್, ಆನ್‌ಲೈನ್ ಕಂಟೆಂಟ್ ಹಾಗೂ ವಿಡಿಯೊ ಸ್ಟ್ರೀಮಿಂಗ್ ಸೌಲಭ್ಯಗಳನ್ನು ಒಳಗೊಂಡಿದ್ದು, ಬೇಸಿಕ್ ಮಾದರಿಯ ಡಿಟಿಎಚ್ ಕನೆಕ್ಷನ್ ಆಯ್ಕೆಯನ್ನು ಸಹ ಪಡೆದುಕೊಂಡಿದೆ. ಈ ಸ್ಮಾರ್ಟ್‌ ಟಿವಿಯಲ್ಲಿ ಸ್ಕ್ರೀನ್ ಮಿರರ್ ಆಯ್ಕೆ ಇದ್ದು, ಇಂಟರ್ನೆಟ್ ಕನೆಕ್ಷನ್ ಇಲ್ಲದೆ ಲ್ಯಾಪ್‌ಟಾಪ್ ಸ್ಕ್ರೀನ್‌ ಅನ್ನು ಟಿವಿಯಲ್ಲಿ ವೀಕ್ಷಿಸಬಹುದು.

ಅಮೆಜಾನ್ ಪ್ರೈಮ್ ವಿಡಿಯೊ

ಇನ್ನು ಈ ಸ್ಮಾರ್ಟ್‌ ಟಿವಿಯು ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೊ, ಜೀ5, ಸೋನಿಲೈವ್ ಹಾಗೂ ವೂಟ್ ಆಪ್ಸ್‌ಗಳ ಸಪೋರ್ಟ್‌ ಪಡೆದಿವೆ. ಅಂದಹಾಗೆ 32 ಇಂಚಿನ ಸ್ಮಾರ್ಟ್‌ ಟಿವಿಯ ಬೆಲೆಯು 12,990ರೂ.ಗಳಾಗಿದ್ದು, 43 ಇಂಚಿನ ಸ್ಮಾರ್ಟ್‌ ಟಿವಿಯ ಬೆಲೆಯನ್ನು ರೀವಿಲ್ ಮಾಡಿಲ್ಲ. ಈ ಎರಡು ಸ್ಮಾರ್ಟ್‌ ಟಿವಿಗಳು ಆನ್‌ಲೈನ್ ಮತ್ತು ಆಫ್‌ಲೈನ್ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಲಿವೆ ಎಂದು ಸಂಸ್ಥೆ ತಿಳಿಸಿದೆ.

Best Mobiles in India

English summary
The new Samsung televisions are available in 32-inch and 43-inch sizes.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X