ಸ್ಯಾಮ್‌ಸಂಗ್‌ನಿಂದ ಅಗ್ಗದ 'ಗ್ಯಾಲಕ್ಸಿ A11' ಫೋನ್ ಲಾಂಚ್!

|

ದಕ್ಷಿಣ ಕೊರಿಯಾ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯು ಜನಪ್ರಿಯ 'ಗ್ಯಾಲಕ್ಸಿ A' ಸರಣಿಯಲ್ಲಿ ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಬಜೆಟ್‌ ಬೆಲೆಯಿಂದ ಹೈ ಎಂಡ್‌ ಬೆಲೆಯವರೆಗೂ ಭಿನ್ನ ಶ್ರೇಣಿಯ ಫೋನ್‌ಗಳನ್ನು ಹೊಂದಿರುವ ಸ್ಯಾಮ್‌ಸಂಗ್ ಈಗ ಸದ್ದಿಲ್ಲದೇ ಹೊಸದಾಗಿ ಮತ್ತೊಂದು ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಅದುವೇ ಗ್ಯಾಲಕ್ಸಿ A11 ಸ್ಮಾರ್ಟ್‌ಫೋನ್‌.

ಗ್ಯಾಲಕ್ಸಿ A11

ಹೌದು, ಸ್ಯಾಮ್‌ಸಂಗ್ ಕಂಪನಿಯು ಗ್ಯಾಲಕ್ಸಿ A11 ಸ್ಮಾರ್ಟ್‌ಫೋನ್ ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ಕಾಣಿಸಿಕೊಂಡಿದ್ದರು, ತ್ರಿವಳಿ ಕ್ಯಾಮೆರಾ ಸೆಟ್‌ಅಪ್, 4000mAh ಬ್ಯಾಟರಿ ಪವರ್, ಆಕರ್ಷಕ ಡಿಸೈನ್‌ನಿಂದ ಗ್ರಾಹಕರ ಗಮನ ಸೆಳೆದಿದೆ. ಆದರೆ ಈ ಫೋನ್ ಯಾವಗ ಸೇಲ್ ಆಗುತ್ತದೆ ಹಾಗೂ ಪ್ರೊಸೆಸರ್‌ ಸಾಮರ್ಥ್ಯದ ಬಗ್ಗೆ ಸಂಸ್ಥೆಯು ಇನ್ನು ಮಾಹಿತಿ ಹೊರಹಾಕಿಲ್ಲ. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲಕ್ಸಿ A11 ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಗ್ಯಾಲಕ್ಸಿ A11 ಸ್ಮಾರ್ಟ್‌ಫೋನ್ 720×1560 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ LCD ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಪಂಚ್ ಹೋಲ್ ಡಿಸೈನ್ ಪಡೆದ ಈ ಫೋನ್ 161.4 x76.3 x 8mm ರಚನೆಯನ್ನು ಪಡೆದಿದೆ. ವಿಶಾಲ ಡಿಸ್‌ಪ್ಲೇ ಇದ್ದು, ಹಿಂಬದಿ ಕವರ್ ಪ್ಲಾಸ್ಟಿಕ್ ಮೆಟಿರಿಯಲ್‌ನಿಂದ ರಚಿತವಾಗಿದೆ.

ಪ್ರೊಸೆಸರ್ ಸಾಮರ್ಥ್ಯ

ಪ್ರೊಸೆಸರ್ ಸಾಮರ್ಥ್ಯ

ಗ್ಯಾಲಕ್ಸಿ A11 ಸ್ಮಾರ್ಟ್‌ಫೋನ್ 1.8GHz ಆಕ್ಟಾ ಕೋರ್ ಸಾಮರ್ಥ್ಯದ ಪ್ರೊಸೆಸರ್‌ನಲ್ಲಿ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಪ್ರೊಸೆಸರ್ ಸಾಮರ್ಥ್ಯ ಎಷ್ಟಿರಲಿದೆ ಎನ್ನುವ ಬಗ್ಗೆ ಕಂಪನಿ ಮಾಹಿತಿ ತಿಳಿಸಿಲ್ಲ. ಇನ್ನು ಈ ಫೋನ್ 2GB ಅಥವಾ 3GB RAM ಹೊಂದಿರಲಿದ್ದು, 32GB ಆಂತರಿಕ ಸ್ಟೋರೇಜ್ ಹೊಂದಿರಲಿದೆ. ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸುವ ಅವಕಾಶ ನೀಡಿದೆ.

ಕ್ವಾಡ್‌ ಕ್ಯಾಮೆರಾ

ಕ್ವಾಡ್‌ ಕ್ಯಾಮೆರಾ

ಗ್ಯಾಲಕ್ಸಿ A11 ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 13ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 5ಎಂಪಿಯ ಅಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್‌ ಇದ್ದು, ತೃತೀಯ ಕ್ಯಾಮೆರಾಗಳು 2ಎಂಪಿಯ ಸೆನ್ಸಾರ್ ಹೊಂದಿವೆ. ಇದರೊಂದಿಗೆ 8ಎಂಪಿ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ಗ್ಯಾಲಕ್ಸಿ A11 ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಲೈಫ್‌ ಅನ್ನು ಪಡೆದಿದೆ. ಇದರೊಂದಿಗೆ 15W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಹಾಗೆಯೇ ಈ ಫೋನಿನಲ್ಲಿ ಇತ್ತೀಚಿನ ಓಎಸ್‌ ಕಾರ್ಯನಿರ್ವಹಿಸುತ್ತದೆ. ಜೊತೆಗೆ ವೈಫೈ, ಬ್ಲೂಟೂತ್, ಜಿಪಿಎಸ್‌, ಯುಎಸ್‌ಬಿ-ಸಿ-ಪೋರ್ಟ್‌ ಸೌಲಭ್ಯಗಳು ಸಹ ಇವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮಾರುಕಟ್ಟೆಗೆ ಅನಾವರಣ ಆಗಿರುವ ಎಂಟ್ರಿ ಲೆವೆಲ್ ಗ್ಯಾಲಕ್ಸಿ A11 ಸ್ಮಾರ್ಟ್‌ಫೋನ್ ನಿಗದಿತ ಬೆಲೆಯನ್ನು ಕಂಪನಿಯು ಇನ್ನು ರೀವಿಲ್ ಮಾಡಿಲ್ಲ. ಆದರೆ ಈ ಫೊನ್ ಸಂಪೂರ್ಣ ಅಗ್ಗದ ಬೆಲೆಗೆ ಲಭ್ಯವಾಗುವ ಸಾಧ್ಯತೆಗಳಿವೆ.

Best Mobiles in India

English summary
Samsung recently launched the A11 entry-level smartphone quite silently.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X