ಸ್ಯಾಮ್‌ಸಂಗ್ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್ ಫೀಚರ್ಸ್‌ ಲೀಕ್!

|

ದಕ್ಷಿಣ ಕೊರೊಯಾ ಟೆಕ್ ದೈತ್ಯ ಸಂಸ್ಥೆ ಸ್ಯಾಮ್‌ಸಂಗ್ ಕಳೆದ ವರ್ಷದಲ್ಲಿ ಗ್ಯಾಲಕ್ಸಿ A ಮತ್ತು ಗ್ಯಾಲಕ್ಸಿ M ಸರಣಿಯಲ್ಲಿ ಹಲವು ಬಜೆಟ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಬಿಡುಗಡೆಯಾದ ಹಲವು ಎಲ್ಲ ಫೋನ್‌ಗಳು ತ್ರಿವಳಿ ಹಾಗೂ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ರಚನೆಯನ್ನು ಪಡೆದು ಗ್ರಾಹಕರನ್ನು ಸೆಳೆದಿದೆ. ಇದೀಗ ಮತ್ತೆ ಅದೇ ಹಾದಿಯಲ್ಲಿ ಮುನ್ನಡೆದಿರುವ ಸ್ಯಾಮ್‌ಸಂಗ್ ಮತ್ತೊಂದು ಬಜೆಟ್‌ ಫೋನ್ ಬಿಡುಗಡೆಗೆ ಸಜ್ಜಾಗುತ್ತಿದೆ.

ಗ್ಯಾಲಕ್ಸಿ A21s

ಹೌದು, ಸ್ಯಾಮ್‌ಸಂಗ್‌ ಈಗ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ತಯಾರಿ ನಡೆಸಿದೆ. ಹಾಗೆಯೇ ಈ ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಎನ್ನುವುದು ಸಹ ಇದೀಗ ಲೀಕ್ ಆಗಿದೆ. ಲೀಕ್ ಮಾಹಿತಿಯಂತೆ ಗ್ಯಾಲಕ್ಸಿ A21s ಬಜೆಟ್‌ ಫೋನ್‌ ಎಂದು ತಿಳಿದುಬಂದಿದ್ದು, ಈ ಫೋನ್ ತ್ರಿವಳಿ ಕ್ಯಾಮೆರಾ ರಚನೆಯನ್ನು ಒಳಗೊಂಡಿರಲಿದೆ ಹಾಗೂ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗಾದರೆ ಗ್ಯಾಲಕ್ಸಿ A21s ಫೋನ್ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಗ್ಯಾಲ್ಯಾಕ್ಸಿ A21s ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ A21s ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ A21s ಸ್ಮಾರ್ಟ್‌ಫೋನ್ 720x1600 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿರಲಿದ್ದು, 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ IPS ಡಿಸ್‌ಪ್ಲೇಯನ್ನು ಹೊಂದಿರಲಿದೆ. ಹಾಗೆಯೇ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 263 ppi ಆಗಿರಲಿದ್ದು, ಗೇಮಿಂಗ್‌ ಹಾಗೂ ವಿಡಿಯೊ ವೀಕ್ಷಣೆಗೆ ಪೂರಕವಾಗಿರಲಿದೆ.

ಗ್ಯಾಲ್ಯಾಕ್ಸಿ A21s ಪ್ರೊಸೆಸರ್

ಗ್ಯಾಲ್ಯಾಕ್ಸಿ A21s ಪ್ರೊಸೆಸರ್

ಗ್ಯಾಲ್ಯಾಕ್ಸಿ A21s ಸ್ಮಾರ್ಟ್‌ಫೋನ್ ಆಕ್ಟಾಕೋರ್‌ Exynos 7904 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 10 ಓಎಸ್‌ ಬೆಂಬಲ ಪಡೆದಿರಲಿದೆ. ಹಾಗೆಯೇ ಎರಡು ವೇರಿಯಂಟ್‌ ಮಾದರಿಗಳಿರಲಿದ್ದು, ಅವುಗಳು ಕ್ರಮವಾಗಿ 3GB + 32GB ಮತ್ತು 4GB RAM+ 64GB ಸಾಮರ್ಥ್ಯವನ್ನು ಒಳಗೊಂಡಿರಲಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹವನ್ನು ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗುತ್ತದೆ.

ಗ್ಯಾಲ್ಯಾಕ್ಸಿ A21s ಕ್ಯಾಮೆರಾ

ಗ್ಯಾಲ್ಯಾಕ್ಸಿ A21s ಕ್ಯಾಮೆರಾ

ಗ್ಯಾಲ್ಯಾಕ್ಸಿ A21s ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಮೆಗಾಪಿಕ್ಸಲ್ ಸೆನ್ಸಾರ್‌ನಲ್ಲಿರಲಿದೆ. ಹಾಗೆಯೇ ಸೆಕೆಂಡ್‌ ಮತ್ತು ಮೂರನೇ ಕ್ಯಾಮೆರಾಗಳು 8 ಮೆಗಾಪಿಕ್ಸಲ್ ಮತ್ತು 2 ಮೆಗಾಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯ ಪಡೆದಿರಲಿವೆ. ಮುಂಭಾಗದಲ್ಲಿ 13 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ.

ಗ್ಯಾಲ್ಯಾಕ್ಸಿ A21s ಬ್ಯಾಟರಿ

ಗ್ಯಾಲ್ಯಾಕ್ಸಿ A21s ಬ್ಯಾಟರಿ

ಗ್ಯಾಲ್ಯಾಕ್ಸಿ A21s ಸ್ಮಾರ್ಟ್‌ಫೋನಿನಲ್ಲಿ 5,000mAh ಸಾಮರ್ಥ್ಯದ ದೀರ್ಘಕಾಲದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇನ್ನೂ ಇದರೊಂದಿಗೆ ಫಾಸ್ಟ್‌ ಚಾರ್ಜರ್‌ ಸೌಲಭ್ಯ ಒದಗಿಸುವ ಸಾಧ್ಯತೆಗಳು ಇವೆ. ಹಾಗೆಯೇ ವೈಫೈ, ಬ್ಲೂಟೂತ್, ಜಿಪಿಎಸ್‌, ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯಗಳು ಇರಲಿವೆ.

Best Mobiles in India

English summary
Samsung Galaxy A21s expected company’s Exynos 850 processor, tripple camera.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X