ಜನಪ್ರಿಯ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ!

|

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯು ಗ್ಯಾಲಕ್ಸಿ A ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಅವುಗಳಲ್ಲಿ ಗ್ಯಾಲಕ್ಸಿ A51 ಮತ್ತು ಗ್ಯಾಲಕ್ಸಿ A71 ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಫೀಚರ್ಸ್‌ಗಳಿಂದ ಟ್ರೆಂಡಿ ಅನಿಸಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳ ಜೊತೆಗೆ ಕೆಲವು ಆಯ್ದ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ.

ಜನಪ್ರಿಯ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ!

ಹೌದು, ಗ್ಯಾಲಕ್ಸಿ A51 ಮತ್ತು ಗ್ಯಾಲಕ್ಸಿ A71 ಸ್ಮಾರ್ಟ್‌ಫೋನ್‌ಗಳ ದರದಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಗರಿಷ್ಠ 2000ರೂ.ವರೆಗೂ ಬೆಲೆ ಇಳಿಕೆ ಆಗಿದೆ. ಅದರ ಬೆನ್ನಲೆ ಈಗ ಕೆಲವು ಸ್ಮಾಮ್‌ಸಂಗ್ ಫೋನ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ. ಗ್ಯಾಲಕ್ಸಿ A71 ಫೋನ್‌ 500ರೂ. ಹಾಗೂ ಗ್ಯಾಲಕ್ಸಿ A51 ಫೋನ್ 1500ರೂ. ವರೆಗೂ ಬೆಲೆ ಕಡಿತ ಕಂಡಿವೆ. ಹೀಗಾಗಿ ಗ್ಯಾಲಕ್ಸಿ A51 ಫೋನ್ ಬೇಸ್‌ ವೇರಿಯಂಟ್ 22,999 ರೂ. ಆಗಿದೆ. ಹಾಗೆಯೇ ಗ್ಯಾಲಕ್ಸಿ A71 ಸ್ಮಾರ್ಟ್‌ಫೋನ್ ದರವು 29,499ರೂ. ಆಗಿದೆ. ಹಾಗಾದರೆ ಗ್ಯಾಲಕ್ಸಿ A51 ಮತ್ತು ಗ್ಯಾಲಕ್ಸಿ A71 ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಜನಪ್ರಿಯ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ!

ಗ್ಯಾಲಾಕ್ಸಿ A51-ಡಿಸೈನ್

ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನ್ 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು ಸೂಪರ್ AMOLED ಇನ್‌ಫಿನಿಟಿ-O ಮಾದರಿಯಲ್ಲಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯವನ್ನು ಪಡೆದಿದೆ.

ಗ್ಯಾಲಾಕ್ಸಿ A51- ಪ್ರೊಸೆಸರ್
ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನಿನಲ್ಲಿ 2.3GHz ವೇಗದಲ್ಲಿ Exynos 9611 ಪ್ರೊಸೆಸರ್ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೋನ್ 4GB RAM + 128GB ಮತ್ತು 8GB RAM+128GB ಆಯ್ಕೆಯ ಎರಡು ವೇರಿಯಂಟ್ ಮಾದರಿಗಳನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 512GB ವರೆಗೂ ವಿಸ್ತರಿಸುವ ಅವಕಾಶ ನೀಡಲಾಗಿದೆ.

ಗ್ಯಾಲಾಕ್ಸಿ A51-ಕ್ಯಾಮೆರಾ
ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನಿನಲ್ಲಿ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಇದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್ ಹೊಂದಿದ್ದು, ಉಳಿದಂತೆ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 5ಎಂಪಿ ಸೆನ್ಸಾರ್‌ ಸಾಮರ್ಥ್ಯ ಪಡೆದಿವೆ. ಇದರೊಂದಿಗೆ 32ಎಂಪಿ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಜನಪ್ರಿಯ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ!

ಗ್ಯಾಲಕ್ಸಿ A71-ಡಿಸ್‌ಪ್ಲೇ
ಗ್ಯಾಲಕ್ಸಿ A71 ಸ್ಮಾರ್ಟ್‌ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 393 ppi ಆಗಿದ್ದು, ಹಾಗೆಯೇ ಡಿಸ್‌ಪ್ಲೇಯ ಅನುಪಾತವು 20:9 ರಷ್ಟಾಗಿದೆ. ಬಾಹ್ಯ ಬಾಡಿಯಿಂದ ಸ್ಕ್ರೀನ್‌ನ ನಡುವಿನ ಅಂತರವು ಶೇ.87.2% ಪರ್ಸೆಂಟ್ ಆಗಿದೆ. ಇದರೊಂದಿಗೆ ಗೊರಿಲ್ಲಾ ಗ್ಲಾಸ್ ಪಡೆದಿದೆ.

ಗ್ಯಾಲಕ್ಸಿ A71-ಪ್ರೊಸೆಸರ್
ಗ್ಯಾಲಕ್ಸಿ A71 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 10 ಓಎಸ್‌ ಸಫೋರ್ಟ್‌ ಪಡೆದುಕೊಂಡಿದೆ. ಇದರೊಂದಿಗೆ 8GB RAM ಮತ್ತು 128GB ವೇರಿಯಂಟ್ ಆಯ್ಕೆಯನ್ನು ಹೊಂದಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಗ್ಯಾಲಕ್ಸಿ A71-ಕ್ಯಾಮೆರಾ
ಗ್ಯಾಲಕ್ಸಿ A71 ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 12ಎಂಪಿಯ ಅಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್‌ ಇದ್ದು, ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 5ಎಂಪಿಯ ಸೆನ್ಸಾರ್ ಹೊಂದಿವೆ. ಇದರೊಂದಿಗೆ 32ಎಂಪಿ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

Best Mobiles in India

English summary
Samsung Galaxy A71, Samsung Galaxy A51, Samsung Galaxy A31, Samsung Galaxy A21s, Samsung Galaxy M01s, and Samsung Galaxy M01 Core. Price cuts in india.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X