ಸ್ಯಾಮ್‌ಸಂಗ್‌ನಿಂದ ಎರಡು ಬಿಸಿನೆಸ್ ಎಡಿಷನ್ ಲ್ಯಾಪ್‌ಟಾಪ್‌ ಬಿಡುಗಡೆ

|

ದಕ್ಷಿಣ ಕೊರಿಯಾ ಟೆಕ್ ದಿಗ್ಗಜ ಸಂಸ್ಥೆ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ ಜೊತೆಗೆ ಇತರೆ ಹಲವು ಟೆಕ್ ಉತ್ಪನ್ನಗಳಿಂದ ಗ್ರಾಹಕರ ಮನ ಗೆದ್ದಿದೆ. ಆ ಪೈಕಿ ಸ್ಯಾಮ್‌ಸಂಗ್ ಭಿನ್ನ ಶ್ರೇಣಿಯ ಲ್ಯಾಪ್‌ಟಾಪ್‌ಗಳು ಅತ್ಯುತ್ತಮ ಎನಿಸಿಕೊಂಡಿವೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ಸ್ಯಾಮ್‌ಸಂಗ್ ಕಂಪನಿಯು ಈಗ ನೂತನವಾಗಿ ಗ್ಯಾಲಕ್ಸಿ ಬುಕ್ ಬಿಸಿನೆಸ್ ಎಡಿಷನ್ ಮತ್ತು ಗ್ಯಾಲಕ್ಸಿ ಬುಕ್ ಪ್ರೊ ಬಿಸಿನೆಸ್ ಎಡಿಶನ್ ಲ್ಯಾಪ್‌ಟಾಪ್‌ಗಳನ್ನು ಯುಎಸ್‌ನಲ್ಲಿ ಬಿಡುಗಡೆ ಮಾಡಿದೆ.

ಸ್ಯಾಮ್‌ಸಂಗ್‌ನಿಂದ ಎರಡು ಬಿಸಿನೆಸ್ ಎಡಿಷನ್ ಲ್ಯಾಪ್‌ಟಾಪ್‌ ಬಿಡುಗಡೆ

ಹೌದು, ಜನಪ್ರಿಯ ಸ್ಯಾಮ್‌ಸಂಗ್ ಕಂಪನಿಯು ಹೊಸದಾಗಿ 'ಗ್ಯಾಲಕ್ಸಿ ಬುಕ್ ಬಿಸಿನೆಸ್ ಎಡಿಷನ್' ಮತ್ತು 'ಗ್ಯಾಲಕ್ಸಿ ಬುಕ್ ಪ್ರೊ ಬಿಸಿನೆಸ್ ಎಡಿಶನ್' ಲ್ಯಾಪ್‌ಟಾಪ್‌ಗಳನ್ನು ಲಾಂಚ್ ಮಾಡಿದ್ದು, ಗ್ರಾಹಕರನ್ನು ಆಕರ್ಷಿಸಿದೆ. ಸಾಮಾನ್ಯ ಲ್ಯಾಪ್‌ಟಾಪ್‌ ಮತ್ತು ಬುಸಿನೆಸ್‌ ಲ್ಯಾಪ್‌ಟಾಪ್‌ ಗಳ ನಡುವೆ ಸಾಫ್ಟ್‌ವೇರ್‌, ಬಿಸಿನೆಸ್ ಟೂಲ್‌, ಸೆಕ್ಯುರಿಟಿ ಫೀಚರ್ಸ್‌ಗಳಂತಹ ವ್ಯತ್ಯಾಸ ಇವೆ. ಇನ್ನು ಸದ್ಯ ಹೊಸದಾಗಿ ಬಿಡುಗಡೆ ಆಗಿರುವ ಗ್ಯಾಲಕ್ಸಿ ಬುಕ್ ಬಿಸಿನೆಸ್ ಎಡಿಷನ್' ಮತ್ತು 'ಗ್ಯಾಲಕ್ಸಿ ಬುಕ್ ಪ್ರೊ ಬಿಸಿನೆಸ್ ಎಡಿಶನ್' ಲ್ಯಾಪ್‌ಟಾಪ್‌ಗಳು ಇಂಟೆಲ್‌ನ 11 ನೇ ತಲೆಮಾರಿನ ಪ್ರೊಸೆಸರ್‌ಗಳ ಸಪೋರ್ಟ್‌ ಪಡೆದಿವೆ. ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಗ್ಯಾಲಕ್ಸಿ ಬುಕ್ ಬಿಸಿನೆಸ್ ಎಡಿಷನ್ ಲ್ಯಾಪ್‌ಟಾಪ್‌ ಫೀಚರ್ಸ್‌:
ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಬಿಸಿನೆಸ್ ಎಡಿಶನ್ ಡಿವೈಸ್ 15.6 ಇಂಚಿನ ಪೂರ್ಣ ಹೆಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 1920 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಇದು 11 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ ನಿಂದ ಇಂಟೆಲ್ ಐರಿಸ್ Xe ಗ್ರಾಫಿಕ್ಸ್ ವರೆಗೆ ಜಂಟಿಯಾಗಿದೆ. ಅಲ್ಲದೇ ಇದು ವಿಂಡೋಸ್ 10 ಪ್ರೊ ಅನ್ನು ರನ್ ಮಾಡುತ್ತದೆ. ಹಾಗೆಯೇ ಐಚ್ಛಿಕ ಫಿಂಗರ್‌ಪ್ರಿಂಟ್ ರೀಡರ್‌ನೊಂದಿಗೆ ಬರುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ 16GB RAM ಮತ್ತು 256GB NVMe SSD ಸಂಗ್ರಹದೊಂದಿಗೆ ಬರುತ್ತದೆ.

ಸ್ಯಾಮ್‌ಸಂಗ್‌ನಿಂದ ಎರಡು ಬಿಸಿನೆಸ್ ಎಡಿಷನ್ ಲ್ಯಾಪ್‌ಟಾಪ್‌ ಬಿಡುಗಡೆ

ಇನ್ನು ಈ ಲ್ಯಾಪ್‌ಟಾಪ್ ಡಾಲ್ಬಿ ಅಟ್ಮಾಸ್ ಆಡಿಯೋ ಸೌಲಭ್ಯವನ್ನು ಹೊಂದಿದೆ. ಜೊತೆಗೆ 65W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 54Whr ಬ್ಯಾಟರಿ ಬ್ಯಾಕ್‌ಅಪ್ ಬೆಂಬಲಿತವಾಗಿದೆ. ಕನೆಕ್ಟಿವಿ ಆಯ್ಕೆಗಳಲ್ಲಿ ಆಯ್ಕೆಗಳಲ್ಲಿ ವೈ-ಫೈ 6, ಬ್ಲೂಟೂತ್ v5.1, ಥಂಡರ್‌ಬೋಲ್ಟ್ 4, ಯುಎಸ್‌ಬಿ ಟೈಪ್-ಸಿ, ಯುಎಸ್‌ಬಿ 3.2, ಎಚ್‌ಡಿಎಂಐ ಪೋರ್ಟ್ ಮತ್ತು 3.5 ಎಂಎಂ ಆಡಿಯೋ ಜ್ಯಾಕ್ ನಂತಹ ಇತ್ತೀಚಿನ ಆಯ್ಕೆಗಳು ಸೇರಿವೆ.

ಗ್ಯಾಲಕ್ಸಿ ಬುಕ್ ಪ್ರೊ ಬಿಸಿನೆಸ್ ಎಡಿಶನ್ ಫೀಚರ್ಸ್‌:
ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಪ್ರೊ ಬಿಸಿನೆಸ್ ಲ್ಯಾಪ್‌ಟಾಪ್‌ ಎರಡು ಡಿಸ್‌ಪ್ಲೇ ಆಯ್ಕೆಗಳಲ್ಲಿ/ವೇರಿಯಂಟ್‌ನಲ್ಲಿ ಅನಾವರಣ ಆಗಿದೆ. ಅವು ಒಂದು 13.3-ಇಂಚು ಮತ್ತು ಇನ್ನೊಂದು 15-ಇಂಚು ಆಗಿವೆ. ಇನ್ನು ಈ ಡಿಸ್‌ಪ್ಲೇಗಳು 1920 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದ್ದು, ಪೂರ್ಣ HD AMOLED ಡಿಸ್‌ಪ್ಲೇ ಮಾದರಿ ಪಡೆದಿವೆ. ಈ ಲ್ಯಾಪ್‌ಟಾಪ್ 11 ನೇ ತಲೆಮಾರಿನ ಇಂಟೆಲ್ ಕೋರ್ i7 ಪ್ರೊಸೆಸರ್‌ಗಳಿಂದ ಇಂಟೆಲ್ ಐರಿಸ್ Xe ಗ್ರಾಫಿಕ್ಸ್‌ಗೆ ಜಂಟಿ ಆಗಿದೆ. ಹಾಗೆಯೇ ಇದು ಗರಿಷ್ಠ 8GB RAM ನೊಂದಿಗೆ 512GB NVMe SSD ಯೊಂದಿಗೆ ಬರುತ್ತದೆ. ಈ ಲ್ಯಾಪ್‌ಟಾಪ್‌ ವಿಂಡೋಸ್ 10 ಪ್ರೊ ನಲ್ಲಿ ರನ್ ಆಗುತ್ತದೆ. ವಿಂಡೋಸ್ 11 ಪ್ರೊ ಗೆ ಅಪ್‌ಗ್ರೇಡ್ ಮಾಡಲು ಅವಕಾಶ ಇದೆ.

ಸ್ಯಾಮ್‌ಸಂಗ್‌ನಿಂದ ಎರಡು ಬಿಸಿನೆಸ್ ಎಡಿಷನ್ ಲ್ಯಾಪ್‌ಟಾಪ್‌ ಬಿಡುಗಡೆ

ಇನ್ನು 15.6 ಇಂಚಿನ ಲ್ಯಾಪ್‌ಟಾಪ್‌ ವೇರಿಯಂಟ್‌ 68Whr ಬ್ಯಾಟರಿ ಬ್ಯಾಕ್‌ಅಪ್‌ ನೊಂದಿಗೆ ಬರುತ್ತದೆ. ಅದೇ ರೀತಿ 13.3 ಇಂಚಿನ ವೇರಿಯಂಟ್‌ 63Whr ಬ್ಯಾಟರಿಯೊಂದಿಗೆ ಬರುತ್ತದೆ. ಇದು 65W ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದು ಡಾಲ್ಬಿ ಅಟ್ಮೋಸ್ ಬೆಂಬಲ ಇದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 6, ಬ್ಲೂಟೂತ್ v5.1, ಥಂಡರ್‌ಬೋಲ್ಟ್ 4, ಯುಎಸ್‌ಬಿ ಟೈಪ್-ಸಿ, ಯುಎಸ್‌ಬಿ 3.2 ಮತ್ತು 3.5 ಎಂಎಂ ಆಡಿಯೋ ಜ್ಯಾಕ್ ಸೇರಿವೆ.

ಬೆಲೆ ಎಷ್ಟು ಮತ್ತು ಲಭ್ಯತೆ?
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಬಿಸಿನೆಸ್ ಎಡಿಶನ್ ಬೆಲೆ $ 899 (ಭಾರತದಲ್ಲಿ ಅಂದಾಜು 66,100ರೂ. ಎನ್ನಲಾಗಿದೆ) ಮತ್ತು ಗ್ಯಾಲಕ್ಸಿ ಬುಕ್ ಪ್ರೊ ಬಿಸಿನೆಸ್ ಎಡಿಶನ್ $ 1,099 (ಭಾರತದಲ್ಲಿ ಸುಮಾರು 88,100ರೂ. ಎನ್ನಲಾಗಿದೆ). ಎರಡೂ ಲ್ಯಾಪ್‌ಟಾಪ್‌ಗಳು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಮಿಸ್ಟಿಕ್ ಬ್ಲೂ ಮತ್ತು ಮಿಸ್ಟಿಕ್ ಸಿಲ್ವರ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತವೆ.

Best Mobiles in India

English summary
Samsung Galaxy Book Business Edition, Galaxy Book Pro Business Edition Launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X