Just In
- 52 min ago
ಮೊಟೊ G62 5G ಫಸ್ಟ್ ಲುಕ್: ಬಜೆಟ್ ಬೆಲೆಯಲ್ಲಿ ಆಕರ್ಷಕ 5G ಸ್ಮಾರ್ಟ್‌ಫೋನ್!
- 11 hrs ago
ನಾಯ್ಸ್ ಸಂಸ್ಥೆಯಿಂದ ಹೊಸ ಸ್ಮಾರ್ಟ್ವಾಚ್ ಲಾಂಚ್! 7 ದಿನಗಳ ಬ್ಯಾಟರಿ ಬ್ಯಾಕಪ್!
- 16 hrs ago
ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಡಿಲೀಟ್ ಮೆಸೇಜ್ ರಿಕವರಿ ಆಯ್ಕೆ!
- 17 hrs ago
ಭಾರತದಲ್ಲಿ 5G ಪ್ರಾರಂಭಕ್ಕೂ ಮುನ್ನವೇ ಅಚ್ಚರಿ ಮೂಡಿಸಿದ ಓಕ್ಲಾ ವರದಿ!
Don't Miss
- Lifestyle
ಆಗಸ್ಟ್ 21ರವರೆಗೆ ಬುಧ-ಆದಿತ್ಯ ಯೋಗ: ಈ 4 ರಾಶಿಯವರು ಈ ಅವಧಿಯಲ್ಲಿ ಮಾಡಿದ ಕಾರ್ಯಕ್ಕೆ ಯಶಸ್ಸು ಖಚಿತ
- Automobiles
ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಉನ್ನತೀಕರಣಗೊಂಡ ಸ್ಕೋಡಾ ಕುಶಾಕ್ ಆಕ್ಟಿವ್
- Finance
ಆಗಸ್ಟ್ 18: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಭಾರತ vs ಜಿಂಬಾಬ್ವೆ ಸರಣಿಯ ನೇರ ಪ್ರಸಾರ ಯಾವ ಚಾನೆಲ್ನಲ್ಲಿ ಲಭ್ಯ? ಮೊಬೈಲ್ನಲ್ಲಿ ವೀಕ್ಷಿಸುವುದು ಹೇಗೆ?
- News
World Photography Day- ವಿಶ್ವ ಛಾಯಾಗ್ರಹಣ ದಿನದ ಮೂಲ ಯಾವ ದೇಶದ್ದು?
- Movies
'ಶೇರ್' ಅವತಾರವೆತ್ತಿದ ಕಿರುತೆರೆ ನಟ ಕಿರಣ್ ರಾಜ್: 3ನೇ ಸಿನಿಮಾ ಶುರು!
- Education
How To Become IAS Officer : ಐಎಎಸ್ ಅಧಿಕಾರಿಯಾಗುವುದು ಹೇಗೆ ?
- Travel
ಇಲ್ಲಿಯವರೆಗೆ ಯಾರಿಗೂ ಈ ಗುಹೆಯೊಳಗಿನ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ..!
ಇಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಫಸ್ಟ್ ಸೇಲ್!.ಬೆಲೆ ಎಷ್ಟು?..ಆಫರ್ ಏನಿದೆ?
ಸ್ಯಾಮ್‌ಸಂಗ್ ಕಂಪೆನಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳು ಹಾಗೂ ಬಜೆಟ್ ಪ್ರೈಸ್ ಟ್ಯಾಗ್‌ನಿಂದ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಜೂ 29) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ಸ್ಯಾಮ್‌ಸಂಗ್ ಇಂಡಿಯಾ ಆನ್‌ಲೈನ್ ಸ್ಟೋರ್ (ಸ್ಯಾಮ್‌ಸಂಗ್.ಕಾಮ್) ಮೂಲಕ ಮೊದಲ ಬಾರಿಗೆ ಮಾರಾಟವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್ 6,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ನಿಂದ ಗಮನ ಸೆಳೆದಿದೆ.

ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಫೋನ್ ಇಂದು ಫ್ಲಿಪ್‌ಕಾರ್ಟ್ ಮೂಲಕ ಫಸ್ಟ್ ಸೇಲ್ ಪ್ರಾರಂಭಿಸಲಿದೆ. ಇನ್ನು ಈ ಹೊಸ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 4GB + 64GB ಮತ್ತು 4GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಇದರೊಂದಿಗೆ ಈ ಫೋನ್ ಆಕ್ಟಾ ಕೋರ್ Exynos 850 ಪ್ರೊಸೆಸರ್ ಪವರ್ ಅನ್ನು ಹೊಂದಿದೆ.

ಗ್ಯಾಲಕ್ಸಿ F13 ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಅದರಲ್ಲಿ ಪ್ರಾಥಮಿಕ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ 8 ಮೆಗಾ ಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಜೊತೆಗೆ ಹೆಚ್ಚುವರಿ ಸಂಗ್ರಹಕ್ಕಾಗಿ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ಸಹ ನೀಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಬಜೆಟ್ ಬೆಲೆಯಲ್ಲಿ ಎಂಟ್ರಿ ಪಡೆದಿದ್ದು, ಅದಾಗ್ಯೂ, ಗ್ರಾಹಕರಿಗೆ ಕೆಲವು ರಿಯಾಯಿತಿ ಕೊಡುಗೆಗಳು ಲಭ್ಯವಾಗಲಿಗೆ. ಐಸಿಐಸಿಐ ಕ್ರೆಡಿಟ್ ಮೂಲಕ ಖರೀದಿಸುವ ಗ್ರಾಹಕರಿಗೆ ಸ್ಯಾಮ್‌ಸಂಗ್ ಇಂಡಿಯಾ 1000ರೂ. ಗಳ ಇನ್‌ಸ್ಟಂಟ್ ರಿಯಾಯಿತಿ ನೀಡಲಿದೆ. ಹಾಗೆಯೇ ಐಸಿಐಸಿಐ ಡೆಬಿಟ್ ಕಾರ್ಡ್ ಗ್ರಾಹಕರಿಗೆ EMI ಸೌಲಭ್ಯ ದೊರೆಯಲಿದೆ. ಅಲ್ಲದೇ ಫ್ಲಿಪ್‌ಕಾರ್ಟ್ ಆಕ್ಸಿಸ್ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್ ಸಿಗಲಿದೆ. ಹಾಗದರೇ ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಯನ್ನು ಹೊಂದಿದೆ. ಈ ಡಿಸ್‌ಪ್ಲೇ 2408 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ವನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ ವಾಟರ್ ಡ್ರಾಪ್ ನಾಚ್ ಡಿಸೈನ್ ಹೊಂದಿದೆ. ಇದು ಸ್ಲಿಮ್ ಬೆಜೆಲ್ ಹೊಂದಿದ್ದು, 60hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ.

ಪ್ರೊಸೆಸರ್ ಪವರ್ ಯಾವುದು
ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್ ಎಕ್ಸಿನೋಸ್ 850 ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಹಾಗೂ 4GB RAM ಮತ್ತು 128 GB ಇಂಟರ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ಸಹ ನೀಡಿದೆ. ಜೊತೆಗೆ ARM ಮಾಲಿ G52 ಬೆಂಬಲವನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ RAM ಪ್ಲಸ್ ಟೆಕ್ನಾಲಜಿಯನ್ನು ಹೊಂದಿದ್ದು, ಹೆಚ್ಚಿನ RAM ಸಾಮರ್ಥ್ಯವನ್ನು ನೀಡಲು ಐಡಲ್ ಸ್ಟೋರೇಜ್ ಅನ್ನು ಬಳಸಲಿದೆ.

ಕ್ಯಾಮೆರಾ ಸೆನ್ಸಾರ್ ವಿಶೇಷ
ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್ 6000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲುಟೂತ್ v5.0, ವೈಫೈ, ಯುಎಸ್‌ಬಿ ಪೋರ್ಟ್, 3.5ಮಿ.ಮೀ ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ. ಇದಲ್ಲದೆ ಗೂಗಲ್ ಕ್ರೋಮ್, ಸ್ಯಾಮ್‌ಸಂಗ್ S ಬ್ರೌಸರ್ 14.0 ಪ್ರಿ ಇನ್‌ಸ್ಟಾಲ್ಡ್ ಹೊಂದಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಫಿಂಗರ್‌ಪ್ರಿಂಟ್ ಸೆನ್ಸರ್, ಜಿಯೋಮ್ಯಾಗ್ನೆಟಿಕ್ ಸೆನ್ಸರ್, ವರ್ಚುವಲ್ ಲೈಟ್ ಸೆನ್ಸಿಂಗ್, ವರ್ಚುವಲ್ ಪ್ರಾಕ್ಸಿಮಿಟಿ ಸೆನ್ಸಿಂಗ್ ಅನ್ನು ಒಳಗೊಂಡಿದೆ.

ವಿಶೇಷ ಆಯ್ಕೆಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್ ಆಟೋ ಡೇಟಾ ಸ್ವಿಚಿಂಗ್, ಅಡಾಪ್ಟಿವ್ ಪವರ್-ಸೇವ್ ಮತ್ತು AI ಪವರ್ ಮ್ಯಾನೇಜ್‌ಮೆಂಟ್ ನಂತಹ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಿಂದ ಈ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಉತ್ತಮವಾದ ಅನುಭವವನ್ನು ನೀಡಲಿದೆ ಎಂದು ಹೇಳಲಾಗಿದೆ. ಆಟೋ ಡೇಟಾ ಸ್ವಿಚಿಂಗ್ ಫೀಚರ್ಸ್ ನಿಮಗೆ ತಡೆರಹಿತ ಇಂಟರ್‌ನೆಟ್ ಸೇವೆಯನ್ನು ನೀಡಲಿದೆ. ಇದರಿಂದ ನಿಮ್ಮ ಪ್ರಾಥಮಿಕ ಸಿಮ್‌ಗೆ ಯಾವುದೇ ನೆಟ್‌ವರ್ಕ್ ಇಲ್ಲದಿದ್ದರೂ ಸಹ, ನಿಮ್ಮ ಸೆಕೆಂಡರಿ ಸಿಮ್‌ನಿಂದ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಅಥವಾ ಡೇಟಾವನ್ನು ಬಳಸಲು ಅನುಮತಿಸುತ್ತದೆ.

ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. 4GB RAM ಮತ್ತು 64GB ಸ್ಟೋರೇಜ್ ಆಯ್ಕೆಗೆ 11,999 ರೂ. ಬೆಲೆ ಹೊಂದಿದೆ. ಇದರ 4GB RAM ಮತ್ತು 128 GB ಸ್ಟೋರೇಜ್ ಆಯ್ಕೆಯು 12,999 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ ಇದೇ ಜೂನ್ 29 ರಿಂದ (ಇಂದು) ತನ್ನ ಮೊದಲ ಸೇಲ್ ಆರಂಭಿಸಲಿದೆ. ಸ್ಯಾಮ್‌ಸಂಗ್.ಕಾಮ್, ಫ್ಲಿಪ್‌ಕಾರ್ಟ್.ಕಾಮ್ ಖರೀದಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ವಾಟರ್‌ಫಾಲ್ ಬ್ಲೂ, ಸನ್‌ರೈಸ್ ಕಾಪರ್ ಮತ್ತು ನೈಟ್‌ಸ್ಕಿ ಗ್ರೀನ್ ಸೇರಿದಂತೆ ಮೂರು ಬಣ್ಣಗಳ ಆಯ್ಕೆಗಳನ್ನು ಪಡೆದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086