ರಾಯಲ್ ಫ್ಲೆಕ್ಸಿಪೈ: ವಿಶ್ವದಲ್ಲಿಯೇ ಕಡಿಮೆ ಬೆಲೆಯ ಪೋಲ್ಡೆಬಲ್ ಫೋನ್!

|

ಸ್ಮಾರ್ಟ್‌ಫೋನ್ ಮಾರುಕಟ್ಟೆ ಸಾಕಷ್ಟು ಬದಲಾವಣೆಗಳೊಂದಿಗೆ ಸಾಗಿದ್ದು, ಭಿನ್ನ ಭಿನ್ನ ಮಾದರಿಯ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಆ ಪೈಕಿ ಪ್ರಸ್ತುತ ಭಾರಿ ಕಕುತೂಹಲ ಮೂಡಿಸಿರುವುದೆಂದರೇ ಪೋಲ್ಡೆಬಲ್‌ ಸ್ಮಾರ್ಟ್‌ಫೋನ್‌ಗಳು. ಈಗಾಗಲೇ ಸ್ಯಾಮ್‌ಸಂಗ್, ಹಾನರ್, ಮೊಟೊ ಸೇರಿದಂತೆ ಪ್ರಮುಖ ಮೊಬೈಲ್ ಸಂಸ್ಥೆಗಳು ತಮ್ಮ ಪೋಲ್ಡೆಬಲ್‌ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿವೆ.

ಸ್ಮಾರ್ಟ್‌ಫೋನ್‌ ಮಾರುಕಟ್ಟೆ

ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಹೊಸದಾಗಿ ಪ್ರವೇಶ ಪಡೆದಿರುವ ಪೋಲ್ಡೆಬಲ್‌ ಮಾದರಿಯ ಫೋನ್‌ಗಳ ಬೆಲೆಯು ದುಬಾರಿ ಆಗಿದ್ದು, ಹಾಗೆಯೇ ಫೀಚರ್ಸ್‌ಗಳು ಸಹ ಸಂಪೂರ್ಣ ಹೈ ಎಂಡ್‌ ಮಾದರಿಯಲ್ಲಿವೆ. ಆದರೆ 'ರಾಯಲ್ ಫ್ಲೆಕ್ಸಿಪೈ' ಪೋಲ್ಡೆಬಲ್ ಫೋನ್ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಗುರುತಿಸಿಕೊಂಡಿದ್ದು, ಇದೀಗ ಪೋಲ್ಡೆಬಲ್ ಫೋನ್ ಮಾರುಕಟ್ಟೆಯಲ್ಲಿ ಅಚ್ಚರಿ ಮೂಡಿಸಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಪೋಲ್ಡ್‌ ಫೋನ್‌ಗೆ ಪೈಪೋಟಿ ನೀಡುವ ಲಕ್ಷಣ ಹೊಂದಿದೆ.

ಪೋಲ್ಡೆಬಲ್ ಫೋನ್

ಕಳೆದ CES 2019ರ ಟೆಕ್ ಕಾರ್ಯಕ್ರಮದಲ್ಲಿ ಅನಾವರಣವಾಗಿದ್ದ ಈ ರಾಯಲ್ ಫ್ಲೆಕ್ಸಿಪೈ ಪೋಲ್ಡೆಬಲ್ ಫೋನ್ ಫೀಚರ್ಸ್‌ಗಳಿಂದ ಗಮನ ಸೆಳೆದಿತ್ತು. ಆದರೆ ಈ ಸ್ಮಾರ್ಟ್‌ಫೋನ್ ಇದೀಗ ಬೆಲೆಯಿಂದಾಗಿ ಮತ್ತಷ್ಟು ಕೂತುಹಲ ಮೂಡಿಸಿದೆ. ಯುಎಸ್‌ನಲ್ಲಿ Aliexpress ತಾಣದಲ್ಲಿ ಈ ಪೋನ್‌ ಬೆಲೆಯು $999.99 ಆಗಿದ್ದು, ಅಗ್ಗದ ಪೋಲ್ಡೆಬಲ್ ಫೋನ್ ಆಗಿ ಗುರುತಿಸಿಕೊಂಡಿದೆ. (ಭಾರತದಲ್ಲಿ ಅಂದಾಜು 74,279ರೂ.ಗಳು ಆಗಿದೆ). ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಪೋಲ್ಡ್‌ ಫೋನಿನ ಬೆಲೆಯು 1,64,000ರೂ.ಗಳಾಗಿದೆ.

ರಾಯಲ್ ಫ್ಲೆಕ್ಸಿಪೈ

ಇನ್ನು ರಾಯಲ್ ಫ್ಲೆಕ್ಸಿಪೈ ಪೋಲ್ಡೆಬಲ್ 7.8 ಇಂಚಿನ ವಿಶಾಲ ಡಿಸ್‌ಪ್ಲೇ ಹೊಂದಿದ್ದು, ಪೋಲ್ಡ್‌ ರಚನೆಯನ್ನು ಹೊಂದಿದೆ. ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವು 1920 x 1440 ಆಗಿದ್ದು, ಡಿಸ್‌ಪ್ಲೇಯು OLED ಮಾದರಿಯಲ್ಲಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 308ppi ಆಗಿದ್ದು, ಡಿಸ್‌ಪ್ಲೇಯು ಹೆಚ್ಚು ಪ್ರಖರವಾಗಿ ಕಾಣಿಸುತ್ತದೆ. 180 ಡಿಗ್ರಿ ಪೋಲ್ಡ್‌ ಆಗುವ ವಿನ್ಯಾಸ್‌ವನ್ನು ಒಳಗೊಂಡಿದೆ.

6GB RAM ಮತ್ತು 128GB

ಹಾಗೆಯೇ ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 6GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, 8GB + 256GB ಸ್ಟೋರೇಜ್‌ನ ವೇರಿಯಂಟ್ ಆಯ್ಕೆಯನ್ನು ಹೊಂದಿದೆ. ಇನ್ನು ಈ ಫೋನ್ 3,800mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಜೊತೆಗೆ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ರಚನೆ ಪಡೆದಿದೆ.

Most Read Articles
Best Mobiles in India

English summary
Royole Flexpai, a foldable smartphone first revealed at CES 2019 that hoped to rub shoulders with devices such as the Samsung Galaxy Fold.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X