ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 2 ಪ್ರೊ ಈಗ ಕೇವಲ 9,090 ರೂ. ಗೆ ಲಭ್ಯ..!

By: Akshatha J

2016 ರಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 2 ಪ್ರೊ ಅನ್ನು ಭಾರತದಲ್ಲಿ 9,890 ರೂ. ಗೆ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಈ ಮೊಬೈಲ್ ಬೆಲೆಯಲ್ಲಿ 800 ರೂ. ಅನ್ನು ಕಡಿತಗೊಳಿಸಿ ಕೇವಲ 9,090 ರೂ. ಗೆ ಲಭ್ಯವಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 2 ಪ್ರೊ ಈಗ ಕೇವಲ 9,090 ರೂ. ಗೆ ಲಭ್ಯ..!

ಕಳೆದ ವರ್ಷ ಸ್ನ್ಯಾಪ್ಡೀಲ್ ನಿಂದ ಪ್ರತ್ಯೇಕಗೊಂಡಿದ್ದ ಗ್ಯಾಲಕ್ಸಿ ಜೆ 2 ಈಗ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಗೋಲ್ಡ್, ಸಿಲ್ವರ್ ಮತ್ತು ಬ್ಲಾಕ್ ಅಂತಹ ಮೂರು ಬಣ್ಣಗಳಲ್ಲಿ ಗ್ರಾಹಕರಿಗೆ ಮೊಬೈಲ್ ಸಿಗುತ್ತಿದೆ.

ಇನ್ನು ಮೊಬೈಲ್ ನ ವಿಶೇಷತೆಗಳು

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 2 ಪ್ರೊ 5 ಇಂಚಿನ HD ಸೂಪರ್ ಅಮೋಲೆಡ್ ಪ್ರದರ್ಶನವನ್ನು ಹೊಂದಿದೆ. ಮೈಕ್ರೊ SD ಕಾರ್ಡ್ ಬಳಸಿಕೊಂಡು 128GB ವರೆಗೆ ವಿಸ್ತರಿಸಬಹುದಾದ 2GB RAM ಮತ್ತು 16GB ಡೇಟಾ, 1.5GHz ಕ್ವಾಡ್-ಕೋರ್ ಪ್ರೊಸೆಸರ್, 4 ಜಿ ಎಲ್ ಟಿಇ, ಬ್ಲೂಟೂತ್ 4.1, ವೈ-ಫೈ, ಜಿಪಿಎಸ್, ಯುಎಸ್ಬಿ 2.0, ಡ್ಯುಯಲ್-ಸಿಮ್, 2600mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಕೇವಲ ಇಷ್ಟೇ ಅಲ್ಲದೆ ಅಲ್ಟ್ರಾ ಡೇಟಾ ಸೇವಿಂಗ್ ಮೋಡ್ ಮತ್ತು ಎಸ್ ಬೈಕ್ ಮೋಡ್ ಅನ್ನು ಹೊಂದಿರುವುದು ಮೊಬೈಲ್ ನ ಮತ್ತೊಂದು ವಿಶೇಷತೆ ಆಗಿದೆ.

ಕ್ಯಾಮೆರಾ ವೈಶಿಷ್ಟ್ಯ

ಗ್ಯಾಲಕ್ಸಿ ಜೆ 2 ಪ್ರೊ, 8 ಎಂಪಿ ಸ್ನಾಪರ್ ಮತ್ತು 5 ಎಂಪಿ ಸೆಲ್ಫಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಎರಡು ಕ್ಯಾಮೆರಾಗಳಲ್ಲಿ f / 2.2 ವಿಶೇಷತೆಗಳಿದ್ದು, ಗ್ರಾಹಕರನ್ನು ಕೈಬೀಸಿ ತನ್ನತ್ತ ಸೆಳೆಯುತ್ತಿದೆ.Read more about:
English summary
Samsung Galaxy J2 Pro has now received a minor price cut of Rs. 800 and is now available at Rs. 9,090.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot