Samsung : ಶೀಘ್ರದಲ್ಲೇ ಸ್ಯಾಮ್‌ಸಂಗ್‌ನಿಂದ ಗ್ಯಾಲಕ್ಸಿ M21 ಫೋನ್‌ ಬಿಡುಗಡೆ!

|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳ ಭರಾಟೆ ಪ್ರತಿನಿತ್ಯ ನಡೆಯುತ್ತಲೇ ಇರುತ್ತೆ. ಹೊಸ ಬಗೆಯ ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನ ಸೆಳೆಯುವ ಪ್ರಯತ್ನವನ್ನ ಸ್ಮಾರ್ಟ್‌ಫೋನ್‌ ಕಂಪೆನಿಗಳು ನಡೆಸುತ್ತಲೇ ಇರುತ್ತವೆ. ಸದ್ಯ ಸ್ಮಾರ್ಟ್‌ಫೋನ್‌ ದಿಗ್ಗಜ ಕಂಪೆನಿ ಎನಿಸಿಕೊಂಡಿರುವ ಸ್ಯಾಮ್‌ಸಂಗ್‌ ತನ್ನ ಗ್ಯಾಲಕ್ಸಿ ಎಂ ಮತ್ತು ಗ್ಯಾಲಕ್ಸಿ ಎ ಸರಣಿಯ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಲು ಸಿದ್ದತೆ ನಡೆಸಿದ್ದು, ಆನ್‌ಲೈನ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಲೀಕ್‌ ಆಗಿದೆ.

ಹೌದು

ಹೌದು, ಟೆಕ್‌ಲೋಕದಲ್ಲಿ ದಿಗ್ಗಜ ಎನಿಸಿಕೊಂಡಿರುವ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಗ್ಯಾಲಕ್ಸಿ ಎಂ ಸರಣಿಯ ಹೊಸ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಲು ವೇದಿಕೆ ಸಿದ್ದಪಡಿಸಿದೆ.
ಸದ್ಯ ಈ ಸರಣಿಯ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಸ್ಯಾಮ್‌ಸಂಗ್‌ ಕಂಪೆನಿ ಯಾವುದೇ ಮಾಹಿತಿಯನ್ನ ಬಹಿರಂಗ ಪಡಿಸದೆ ಹೋದರೂ ಈಗಾಗ್ಲೆ ಈ ಸ್ಮಾರ್ಟ್‌ಫೋನ್‌ಗಳ ಮಾಹಿತಿ ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ನ ಈ ಹೊಸ ಸ್ಮಾರ್ಟ್‌ಫೋನ್‌ ಅನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ M21 ಎಂದು ಹೆಸರಿಸಲಾಗಿದ್ದು, ಯುವಜನತೆಯ ಆಶಯಕ್ಕೆ ತಕ್ಕಂತೆ ನೂತನ ವಿನ್ಯಾಸವನ್ನ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಸ್ಯಾಮ್ಸಂಗ್ ಎಕ್ಸಿನೋಸ್ 9611 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗ್ತಿದೆ. ಜೊತೆಗೆ 4GB RAM ಮತ್ತು 128GB ಶೇಖರಣಾ ಸಾಮರ್ಥ್ಯದೊಂದಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.

ಇದಲ್ಲದೆ

ಇದಲ್ಲದೆ, ಈ ಸ್ಮಾರ್ಟಫೋನ್‌ ಸಿಂಗಲ್-ಕೋರ್ ಮತ್ತು ಮಲ್ಟಿ-ಕೋರ್ ಬೆಂಚ್‌ಮಾರ್ಕ್ ಸ್ಕೋರ್‌ಗಳು ಬಹಿರಂಗವಾಗಿದ್ದು, ಸದ್ಯ ಲೀಕ್‌ ಮಾಹಿತಿಯ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 21 ಸಿಂಗಲ್-ಕೋರ್ ಪರೀಕ್ಷೆಯಲ್ಲಿ 348 ಮತ್ತು ಮಲ್ಟಿ-ಕೋರ್ ಪರೀಕ್ಷೆಯಲ್ಲಿ 1,265 ಅಂಕಗಳನ್ನು ಗಳಿಸಿದೆ. ಅಲ್ಲದೆ ಡ್ಯುಯಲ್ ಅಥವಾ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುವ ಸಾಧ್ಯತೆಯಿದ್ದು, ಸ್ಯಾಮ್‌ಸಂಗ್ ಬ್ಲೂ, ಬ್ಲ್ಯಾಕ್ ಮತ್ತು ಗ್ರೀನ್, ಈ ಮೂರು ಕಲರ್‌ಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಸ್ಯಾಮ್‌ಸಂಗ್

ಇನ್ನು ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಂ-ಸೀರೀಸ್ ಫೋನ್‌ಗಳನ್ನು 2014 ರ ಜನವರಿಯ ಕೊನೆಯಲ್ಲಿ ಗ್ಯಾಲಕ್ಸಿ ಎಂ 10 ಮತ್ತು ಗ್ಯಾಲಕ್ಸಿ ಎಂ 20 ಅನ್ನು ತನ್ನ ಆರಂಭಿಕ ಆವೃತ್ತಿಗಳಾಗಿ ಬಿಡುಗಡೆ ಮಾಡಿತ್ತು. ಸದ್ಯ ಇದೀಗ ಎಂ ಸರಣಿಯ ಹೊಸ ಆವೃತ್ತಿಯನ್ನ ಬಿಡುಗಡೆ ಮಾಡಲು ಸಿದ್ದತೆ ನಡೆಸಿದ್ದು, ಕ್ಯಾಮೆರಾ ಹಾಗೂ ಡಿಸ್‌ಪ್ಲೇ ವಿನ್ಯಾಸ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ ಇನ್ನು ಕೆಲವೇ ತಿಂಗಳುಗಳ ಅಂತರದಲ್ಲಿ ಬಿಡುಗಡೆಯಾಗುವ ಸಾದ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
The Samsung Galaxy M21 will come more than a year after the launch of its predecessor.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X