ಭಾರತದಲ್ಲಿ ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+ ಅಧಿಕೃತ ಬೆಲೆ ಪ್ರಕಟ!

|

ನೆನ್ನೆಯಷ್ಟೇ ಯುಎಸ್‌ನಲ್ಲಿ ಲಾಂಚ್ ಆಗಿರುವ ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ಸರಣಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಇಂದಿನಿಂದಲೇ ಪ್ರೀ ಬುಕ್ಕಿಂಗ್‌ಗೆ ರೆಡಿಯಾಗಿವೆ. ದೇಶದಲ್ಲಿ ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ಸರಣಿ ಸ್ಮಾರ್ಟ್‌ಫೋನ್‌ಗ ಬೆಲೆಗಳನ್ನು ಇಂದು ಬಹಿರಂಗಪಡಿಸಿರುವ ಸ್ಯಾಮ್‌ಸಂಗ್, ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಸ್ಯಾಮ್‌ಸಂಗ್ ಆನ್‌ಲೈನ್ ತಾಣಗಳಲ್ಲಿ ಇಂದಿನಿಂದಲೇ ಪೋನ್‌ಗಳನ್ನು ಪ್ರೀ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಿದೆ ಮತ್ತು ಆಗಸ್ಟ್ 23 ರಿಂದ ಮಾರಾಟ ಮಾಡಲಿದೆ.

ಭಾರತದಲ್ಲಿ ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+ ಅಧಿಕೃತ ಬೆಲೆ ಪ್ರಕಟ!

ಹೌದು, ಬುಧವಾರ ನ್ಯೂಯಾರ್ಕ್‌ನಲ್ಲಿ ನಡೆದ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಸ್ಯಾಮ್‌ಸಂಗ್ ತನ್ನ ಎರಡು ನೂತನ ಗ್ಯಾಲಕ್ಸಿ ನೋಟ್ 10 ಫೋನ್‌ಗಳನ್ನು ಅನಾವರಣಗೊಳಿಸಿತ್ತು. ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ಎರಡು ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾವುದು ತಡವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಹುಬೇಗ ಬಿಡುಗಡೆ ಮಾಡಲು ಸ್ಯಾಮ್‌ಸಂಗ್ ನಿರ್ಧರಿಸಿದೆ. ಇದಕ್ಕಾಗಿ ಭರ್ಜರಿ ಕೊಡುಗೆಗಳನ್ನು ಸಹ ನೀಡಿದೆ.

ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10, ಗ್ಯಾಲಕ್ಸಿ ನೋಟ್ 10+ ಬೆಲೆಗಳನ್ನು ಸ್ಯಾಮ್‌ಸಂಗ್ ಅಧಿಕೃತವಾಗಿ ಪ್ರಕಟಿಸಿದ್ದು, 8 ಜಿಬಿ RAM ಮತ್ತು 256 ಜಿಬಿ ಸ್ಟೋರೇಜ್ ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10 ಬೆಲೆ ಭಾರತದಲ್ಲಿ 69,999 ರೂ.ಗಳಿಂದ ಪ್ರಾರಂಭವಾಗಿದೆ. 12 ಜಿಬಿ RAM ಮತ್ತು 256 ಜಿಬಿ ಸ್ಟೋರೇಜ್ ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 10+ ಬೆಲೆ 79,999 ರೂ. ಹಾಗೂ 12 ಜಿಬಿ RAM ಮತ್ತು 512 ಜಿಬಿ ಸಂಗ್ರಹದೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+ ಬೆಲೆ 89,999 ರೂ.ಗಳಾಗಿವೆ.

ಭಾರತದಲ್ಲಿ ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+ ಅಧಿಕೃತ ಬೆಲೆ ಪ್ರಕಟ!

ಇನ್ನು ಭಾರತದಲ್ಲಿ ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+ ಅನ್ನು ಮೊದಲೇ ಬುಕ್ ಮಾಡಲು ಸ್ಯಾಮ್‌ಸಂಗ್ ಕೊಡುಗೆಗಳನ್ನು ಸಹ ಪ್ರಾರಂಭಿಸಿದೆ. ಯಾವುದೇ ಪೋನನ್ನು ಮೊದಲೇ ಆರ್ಡರ್ ಮಾಡಿದ ಎಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹಾಗೂ ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್‌ನಿಂದ 6,000 ಕ್ಯಾಶ್‌ಬ್ಯಾಕ್ ಸಿಗಲಿದೆ. ಫೋನ್ ಬುಕ್ಕಿಂಗ್ ಜೊತೆಗೆ 19,990 ರೂಪಾಯಿಗಳ ಗ್ಯಾಲಕ್ಸಿ ವಾಚ್ ಆಕ್ಟಿವ್ ಅನ್ನು 9,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.

ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+: ತಿಳಿಯಲೇಬೇಕಾದ 5 ವಿಷಯಗಳು!ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+: ತಿಳಿಯಲೇಬೇಕಾದ 5 ವಿಷಯಗಳು!

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 6.3-ಇಂಚಿನ ಎಫ್‌ಹೆಚ್‌ಡಿ + ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ, ಆದರೆ ಗ್ಯಾಲಕ್ಸಿ ನೋಟ್ 10+ 6.8-ಇಂಚಿನ ಕ್ಯೂಹೆಚ್‌ಡಿ + ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಎರಡೂ ಮಾದರಿಗಳು ಎಕ್ಸಿನೋಸ್ 9825 SoC ನಿಂದ 12GB RAM ಮತ್ತು 512GB ಆಂತರಿಕ ಸಂಗ್ರಹಣೆಯನ್ನು ಹೊಂದಿವೆ. ಈ ಸಾಧನಗಳು ಆಂಡ್ರಾಯ್ಡ್ 9 ಪೈ ಓಎಸ್‌ನಲ್ಲಿ ಕಸ್ಟಮ್ ಒನ್ ಯುಐ ಮೂಲಕ ರನ್ ಆಗಲಿದ್ದು, ಜೊತೆಗೆ ಅತ್ಯುತ್ತಮ ಫ್ಲಾಗ್‌ಶಿಪ್ ಫೀಚರ್ಸ್‌ಗಳನ್ನು ಹೊಂದಿರುವುದನ್ನು ನಾವು ನೋಡಬಹುದು.

Best Mobiles in India

English summary
Samsung has finally unveiled the Galaxy Note 10 and the Galaxy Note 10+ series of smartphones at an event in the US. Now, the company has revealed India pricing for these smartphones. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X