ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇಳಿಕೆ!

|

ಜನಪ್ರಿಯ ಸ್ಯಾಮ್‌ಸಂಗ್ ಸಂಸ್ಥೆಯ ನೋಟ್‌ ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಗ್ಯಾಲಕ್ಸಿ ನೋಟ್ 10 ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್ಸ್‌ಗಳಿಂದ ಸದ್ದು ಮಾಡಿದೆ. ಇದೀಗ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದ್ದು, ಗ್ರಾಹಕರು ತಿರುಗಿ ನೋಡುವಂತೆ ಮಾಡಿದೆ.

ಸ್ಯಾಮ್‌ಸಂಗ್

ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಭಾರತದಲ್ಲಿ ಭಾರಿ ಬೆಲೆ ಕಡಿತವನ್ನು ಪಡೆದಿದೆ ಎಂದು ವರದಿಯಾಗಿದೆ. ದೇಶದ ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಬೆಲೆ ಕುಸಿತವನ್ನು ಪರಿಚಯಿಸಲಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಕಳೆದ ವರ್ಷ ಭಾರತದಲ್ಲಿ 69,999ರೂ. ಬೆಲೆ ಹೊಂದಿತ್ತು. ಆನಂತರ 57,100ರೂ. ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿತ್ತು. ಆದರೆ ಚಿಲ್ಲರೆ ಅಂಗಡಿಗಳು ಈಗ ಗ್ಯಾಲಕ್ಸಿ ನೋಟ್ 10 ಸ್ಮಾರ್ಟ್‌ಫೋನ್ ಅದಕ್ಕಿಂತ ಕಡಿಮೆ ಬೆಲೆಗೆ (ಅಂದಾಜು 45,000ರೂ.) ಮಾರಾಟ ಮಾಡಬಹುದು ಎಂದು ವರದಿಯಾಗಿದೆ. ಹಾಗಾದರೆ ಗ್ಯಾಲಕ್ಸಿ ನೋಟ್ 10 ಫೋನಿನ ಇನ್ನಿತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಗ್ಯಾಲಕ್ಸಿ ನೋಟ್ 10

ಗ್ಯಾಲಕ್ಸಿ ನೋಟ್ 10 ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯ ರಚನೆಯ ಹೊಂದಿದ್ದು, 1,080x2,280 ಪಿಕ್ಸಲ್ ರೆಸಲ್ಯೂಶನ್‌ ಡಿಸ್‌ಪ್ಲೇಯು 6.3-ಇಂಚಿನ ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇಯ ನಾಲ್ಕು ಬದಿಗಳಲ್ಲಿ ಕನಿಷ್ಠ ಬೆಜೆಲ್‌ಗಳನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಇನ್ಫಿನಿಟಿ-ನೋಚ್ ವಿನ್ಯಾಸದಲ್ಲಿದೆ.

ಪ್ರೊಸೆಸರ್ ಯಾವುದು

ಪ್ರೊಸೆಸರ್ ಯಾವುದು

ಗ್ಯಾಲಕ್ಸಿ ನೋಟ್ 10 ಸ್ಮಾರ್ಟ್‌ಫೋನ್ ಎಕ್ಸಿನೋಸ್ 9825 ಪ್ರೊಸೆಸರ್ ಅನ್ನು ಅಳವಡಿಸಲಾಗಿದ್ದು, ಎಸ್ ಪೆನ್ ಬೆಂಬಲದೊಂದಿಗೆ ಬರುತ್ತವೆ ಮತ್ತು ಆಂಡ್ರಾಯ್ಡ್ ಪೈ ಆಧಾರಿತ ಒನ್ ಯುಐ ಮೂಲಕ ರನ್ ಆಗಲಿದ್ದು, 8 ಜಿಬಿ RAM ಮತ್ತು 256 ಜಿಬಿ ಸ್ಟೋರೇಜ್ ಆರಂಭಿಕ ವೇರಿಯಂಟ್ ಆಗಿದೆ.

ಕ್ಯಾಮೆರಾ ಸೆನ್ಸಾರ್‌

ಕ್ಯಾಮೆರಾ ಸೆನ್ಸಾರ್‌

ಗ್ಯಾಲಕ್ಸಿ ನೋಟ್ 10 ಪೋನ್ ಟ್ರಿಪಲ್-ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. 12 ಎಂಪಿ ಸ್ಟ್ಯಾಂಡರ್ಡ್ ಸೆನ್ಸಾರ್, 16 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 12 ಎಂಪಿ ಟೆಲಿಫೋಟೋ ಲೆನ್ಸ್ ಹೊಂದಿದೆ. ಸೆಲ್ಫಿ ಕ್ಯಾಮೆರಾವು 10ಎಂಪಿ ಸೆನ್ಸಾರ್‌ನಲ್ಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಬ್ಯಾಟರಿ ಮತ್ತು ಚಾರ್ಜಿಂಗ್

ಗ್ಯಾಲಕ್ಸಿ ನೋಟ್ 10 ಪೋನ್ 3400mAh ಬ್ಯಾಟರಿಯೊಂದಿಗೆ 25W ವೇಗದ ಚಾರ್ಜಿಂಗ್ ಫೀಚರ್ ಅನ್ನು ಹೊಂದಿದೆ. ಇದರೊಂದಿಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎನ್‌ಎಫ್‌ಸಿ, ಬ್ಲೂಟೂತ್ 5.0, ಯುಎಸ್‌ಬಿ ಟೈಪ್-ಸಿ, ಮತ್ತು ವೈ-ಫೈ 802.11 ಕೊಡಲಿ ಸೇರಿವೆ. ಬ್ಲ್ಯಾಕ್, ಗ್ಲೋ ಮತ್ತು ರೆಡ್ ಬಣ್ಣಗಳ ಆಯ್ಕೆ ಇವೆ.

Best Mobiles in India

English summary
Samsung Galaxy Note 10 will now be available in retail shops at Rs. 45,000.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X