ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5 ಲಾಂಚ್

Written By:

ವಿಶ್ವದ ಟಾಪ್ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5 ಫ್ಯಾಬ್ಲೆಟ್‌ನ ಹೊಸ ಆವೃತ್ತಿಯನ್ನು ಆಗಸ್ಟ್ ಮಧ್ಯದಲ್ಲಿ ಲಾಂಚ್ ಮಾಡುತ್ತಿದ್ದು, ನೋಟ್ 3 ಮತ್ತು ನೋಟ್ 4 ನ ಬಿಡುಗಡೆಯನ್ನು ಸಪ್ಟೆಂಬರ್‌ನಲ್ಲಿ ಲಾಂಚ್ ಮಾಡಲಾಗಿತ್ತು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5 ಲಾಂಚ್

ಆಪಲ್‌ ಇಂಕ್‌ನ ಮುಂದಿನ ಐಫೋನ್‌ಗಳಿಗೆ ಪೈಪೋಟಿಯನ್ನು ಒಡ್ಡುವಂತೆ ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಫೋನ್‌ನ ಲಾಂಚ್ ಅನ್ನು ಮಾಡಲಿದೆ. ಇನ್ನು ಹೊಸ ಫೋನ್‌ನ ತಯಾರಿಗೆ ಸಕಲ ಸಿದ್ಧತೆಯನ್ನು ಕಂಪೆನಿ ಮಾಡಿಕೊಳ್ಳುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಓದಿರಿ: ಫೋನ್ ಕ್ಷೇತ್ರದಲ್ಲೇ ನಮ್ಮ ದೇಶದಿಂದ ಹೊಸ ಇತಿಹಾಸ ಸೃಷ್ಟಿ

2014 ರಲ್ಲಿ ಸ್ಯಾಮ್‌ಸಂಗ್ ತನ್ನ ಫೋನ್ ಮಾರುಕಟ್ಟೆ ವ್ಯವಹಾರದಲ್ಲಿ ಸೋಲನ್ನು ಅನುಭವಿಸಿದ್ದು, ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮೂಲಕ ಭರ್ಜರಿ ಪ್ರಾರಂಭವನ್ನು ಮಾಡುವ ನಿಟ್ಟಿನಲ್ಲಿದೆ. ಇನ್ನು ಸ್ಯಾಮ್‌ಸಂಗ್‌ನ ಆದಾಯ ಕೊಂಚ ಚೇತರಿಕೆಯನ್ನು ಕಾಣುತ್ತಿದ್ದು, ಗ್ಯಾಲಕ್ಸಿ ಎಸ್6 ಸ್ಮಾರ್ಟ್‌ಫೋನ್‌ನ ಕರ್ವ್ ಆವೃತ್ತಿಯ ಮಾರಾಟ ಹಿಮ್ಮುಖತೆಯು ಮಾರುಕಟ್ಟೆ ಸ್ವಾಧೀನತೆಯ ಮೇಲೆ ಪರಿಣಾಮ ಬೀರಿದೆ.

ಓದಿರಿ: ಗ್ಯಾಜೆಟ್ಸ್: ಕೇವಲ ಅಂಬಾನಿಗಳಿಗೆ ಮಾತ್ರ!!!

ಮಾರುಕಟ್ಟೆಯಲ್ಲಿದ್ದ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಪಡೆದುಕೊಳ್ಳುವ ನಿಟ್ಟಿನಲ್ಲಿರುವ ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಫೋನ್‌ನ ಲಾಂಚ್ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ.

English summary
Samsung Electronics Co is bringing forward the launch of the Galaxy S5 smartphone, a person familiar with the matter told Reuters on Friday, as the South Korean tech giant seeks to revive sales after a sluggish second quarter.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot