ಸ್ಯಾಮ್‌ಸಂಗ್‌ನಿಂದ ಗ್ಯಾಲಕ್ಸಿ ಎಸ್ 10 ಲೈಟ್ ಸ್ಮಾರ್ಟ್‌ಫೋನ್‌ ಲಾಂಚ್‌ !

|

ಟೆಕ್‌ ಜಗತ್ತಿನ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 10 ಲೈಟ್ ಅನ್ನ ಮಾರುಕಟ್ಟೆಗೆ ಲಾಂಚ್‌ ಮಾಡಿದೆ. ಗ್ಯಾಲಕ್ಸಿ ಎಸ್ 10 ಲೈಟ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರುವುದು ವಿಶೇಷವಾಗಿದೆ. ಅಲ್ಲದೆ ಗ್ಯಾಲಕ್ಸಿ ನೋಟ್ 10 ಲೈಟ್‌ ಫ್ಲಾಟ್ ಇನ್ಫಿನಿಟಿ-ಒ ಡಿಸ್ಪ್ಲೇಯನ್ನು ಹೊಂದಿದ್ದು ಪಂಚ್‌ ಹೋಲ್‌ ಕ್ಯಾಮೆರಾ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ ಇದಾಗಿದೆ.

ಹೌದು

ಹೌದು, ಸ್ಮಾರ್ಟ್‌ಫೊನ್‌ ದೈತ್ಯ ಸ್ಯಾಮ್ಸಂಗ್ ಕಂಪೆನಿ ಗ್ಯಾಲಕ್ಸಿ ಎಸ್ 10 ಲೈಟ್ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನ ಪ್ರಾಥಮಿಕ ಕ್ಯಾಮೆರಾ ಸ್ಯಾಮ್‌ಸಂಗ್‌ನ ಸೂಪರ್ ಸ್ಟೆಡಿ ಒಐಎಸ್ ಸ್ಥಿರೀಕರಣ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಹಾಗಾದ್ರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌ 10ಲೈಟ್‌ ಸ್ಮಾರ್ಟ್‌ಫೋನ್‌ನ ವಿಶೇಷತೆಗಳೇನು ಅನ್ನೊದನ್ನ ತಿಳಿಸಿಕೊಡ್ತೀವಿ ಈ ಲೇಖನವನ್ನ ಓದಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 10 ಲೈಟ್ ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್ ಸೆನ್ಸಾರ್‌ ಹೊಂದಿರುವ 6.7-ಇಂಚಿನ ಫುಲ್‌ ಎಚ್‌ಡಿ + ಮತ್ತು 394 ಪಿಪಿಐ ಪಿಕ್ಸೆಲ್ ಸೆನ್ಸಾರ್‌ ಒಳಗೊಂಡಿರುವ ಇನ್ಫಿನಿಟಿ-ಒ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಜೊತೆಗೆ ಪಂಚ್‌ ಹೋಲ್‌ ಕ್ಯಾಮೆರಾ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ ಇದಾಗಿದೆ. ಅಲ್ಲದೆ ಡಿಸ್‌ ಟು ಬಾಡಿ 20: 9 ಅನುಪಾತವನ್ನ ಹೊಂದಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಈ ಸ್ಮಾರ್ಟ್‌ಫೋನ್‌ 64-ಬಿಟ್ 7 ಎನ್ಎಂ ಆಕ್ಟಾ-ಕೋರ್ ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 10 ಆಧಾರಿತ ಒನ್ ಯುಐ 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಗರಿಷ್ಠ 2.8GHz ವೇಗದ ಕಾರ್ಯಕ್ಷಮತೆಯನ್ನ ಹೊಂದಿದೆ. ಹೊಂದಿದೆ. ಜೊತೆಗೆ ಎಕ್ಸಿನೋಸ್ SoC ಚಿಪ್‌ಸೆಟ್ ಹೊಂದಿದೆ. 6GB RAM ಮತ್ತು 128GB ಸಂಗ್ರಹಣಾ ಸಾಮರ್ಥ್ಯ ಹಾಗೂ 8GB RAM ಮತ್ತು 128GB ಸಂಗ್ರಹಣಾ ಸಾಮರ್ಥ್ಯದ ವೆರಿಯೆಂಟ್‌ ಆಯ್ಕೆಯಲ್ಲಿ ಲಭ್ಯವಿದೆ.

ಕ್ಯಾಮೆರಾ

ಕ್ಯಾಮೆರಾ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 10 ನ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಜೊತೆಗೆ F/ 2.0 ಲೆನ್ಸ್ ಹೊಂದಿದ್ದು, ಸೂಪರ್ ಸ್ಟೆಡಿ ಒಐಎಸ್ ಅನ್ನು ಒಳಗೊಂಡಿದೆ. ಅಲ್ಲದೆ ಸುಗಮ ಮತ್ತು ಮಸುಕು-ಮುಕ್ತ ವೀಡಿಯೊಗಳನ್ನು ಸೆರೆಹಿಡಯಲು ಕ್ಯಾಮೆರಾ ಅಪ್ಲಿಕೇಶನ್‌ನಲ್ಲಿ ಸೂಪರ್ ಸ್ಟೆಡಿ ಒಐಎಸ್ ವೈಶಿಷ್ಟ್ಯವು ಸೂಪರ್ ಸ್ಟೆಡಿ ಮೋಡ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಸ್ಯಾಮ್‌ಸಂಗ್ ಹೇಳಿದೆ. ಇನ್ನು ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ F/ 2.2 ಲೆನ್ಸ್‌123 ಡಿಗ್ರಿ ಫೀಲ್ಡ್ ವ್ಯೂ ಹೊಂದಿದೆ. ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋಲೆನ್ಸ್‌ ಒಳಗೊಂಡಿದೆ. 32ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಕೂಡ ಇದೆ.

ಬ್ಯಾಟರಿ ಮತ್ತು ಲಭ್ಯತೆ

ಬ್ಯಾಟರಿ ಮತ್ತು ಲಭ್ಯತೆ

ಎಲೆಕ್ಟ್ರಾನಿಕ್ಸ್ ದೈತ್ಯ ಗ್ಯಾಲಕ್ಸಿ ಎಸ್ 10 ಲೈಟ್‌ ಸ್ಮಾರ್ಟ್‌ಫೋನ್‌ 4500mah ಬ್ಯಾಟರಿ ಪ್ಯಾಕಪ್‌ ಅನ್ನ ಹೊಂದಿದೆ. ಬ್ಲೂಟೂತ್‌, ವೈಫೈ ಕನೆಕ್ಟಿವಿಟಿಯನ್ನ ಹೊಂದಿದ್ದು, ಇದರ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಈ ಸ್ಮಾರ್ಟ್‌ಫೋನ್‌ ಅನ್ನ ಮಾರುಕಟ್ಟೆಗೆ ಲಾಂಚ್‌ ಮಾಡಲಾಗಿದ್ದು ಜನವರಿ 7ರಿಂದ ಖರೀದಿಗೆ ಲಭ್ಯವಾಗಲಿದೆ. ಇದು ಪ್ರಿಸ್ಮ್ ವೈಟ್, ಪ್ರಿಸ್ಮ್ ಬ್ಲ್ಯಾಕ್ ಮತ್ತು ಪ್ರಿಸ್ಮ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

Most Read Articles
Best Mobiles in India

English summary
Samsung Galaxy S10 Lite is official. Just a few days before CES 2020 kicks off, Samsung has unveiled the Galaxy S10 Lite, a slightly diluted version of the standard Galaxy S10 that will fit in a lower price bracket. The Galaxy S10 Lite features a triple rear camera setup with a main 48-megapixel sensor. The primary camera is supported by Samsung's in-house Super Steady OIS stabilisation technology. The phone takes design cues from the Galaxy Note 10 Lite and features a flat Infinity-O display with a centrally-positioned hole-punch housing the front camera.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X