ಸ್ಯಾಮ್‌ಸಂಗ್ ಪರಿಚಯಿಸಿದೆ 'ಸ್ಲೋ ಮೋಷನ್‌ ಸೆಲ್ಫಿ ವಿಡಿಯೊ' ಫೀಚರ್!

|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ದಿಗ್ಗಜ ಸ್ಯಾಮ್‌ಸಂಗ್ ಸಂಸ್ಥೆಯು ಈಗಾಗಲೇ ಹಲವು ವಿಶೇಷ ಫೀಚರ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಹಾಗೆಯೇ ಬಜೆಟ್‌ ಸ್ಮಾರ್ಟ್‌ಫೋನ್‌ಗಳಿಂದ ಫ್ಲ್ಯಾಗ್‌ಶಿಫ್‌ ಮಾದರಿಯ ಹಲವು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿವೇ. ಅವುಗಳಲ್ಲಿ ಗ್ಯಾಲ್ಯಾಕ್ಸಿ ಎಸ್‌10 ಹೆಚ್ಚು ಗಮನ ಸೆಳೆದಿದ್ದು, ಇದೀಗ ಗ್ಯಾಲ್ಯಾಕ್ಸಿ ಎಸ್‌10 ಮತ್ತಷ್ಟು ಫೀಚರ್‌ಗಳಿಂದ ಸ್ಮಾರ್ಟ್‌ಫೋನ್ ಪ್ರಿಯರನ್ನು ಆಕರ್ಷಿಸಲಿದೆ.

ದಕ್ಷಿಣ ಕೋರಿಯಾ

ಹೌದು, ದಕ್ಷಿಣ ಕೋರಿಯಾ ಮೂಲದ ಸ್ಯಾಮ್‌ಸಂಗ್ ಸಂಸ್ಥೆಯು ತನ್ನ ಜನಪ್ರಿಯ ಗ್ಯಾಲ್ಯಾಕ್ಸಿ ಎಸ್‌10 ಸ್ಮಾರ್ಟ್‌ಫೋನ್‌ ಸರಣಿಯ ಸಾಫ್ಟವೇರ್ ಅಪ್‌ಡೇಟ್‌ ಮಾಡಿದ್ದು, ಹಲವು ಆಕರ್ಷಕ ಫೀಚರ್ಸ್‌ಗಳು ಸೇರಿಕೊಂಡಿವೆ. ಅವುಗಳಲ್ಲಿ ಸೆಕ್ಯುರಿಟಿ ಪಾತ್‌ ಮತ್ತು ಸ್ಲೋ ಮೋಷನ್‌ ಸೆಲ್ಫಿ ವಿಡಿಯೊ ಹೊಸತನ ಎನಿಸಿಕೊಂಡವೆ. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌10 ಸ್ಮಾರ್ಟ್‌ಫೋನ್ ನೂತನ ಫೀಚರ್‌ಗಳೆನು ಎನ್ನುವುದುದನ್ನು ಮುಂದೆ ನೋಡೋಣ ಬನ್ನಿರಿ.

ಸ್ಲೋ ಮೋಷನ್‌ ಸೆಲ್ಫಿ ವಿಡಿಯೊ

ಸ್ಲೋ ಮೋಷನ್‌ ಸೆಲ್ಫಿ ವಿಡಿಯೊ

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌10 ಸ್ಮಾರ್ಟ್‌ಫೋನ್ ಸರಣಿಯು ಸಾಫ್ಟ್‌ವೇರ್ ಅಪ್‌ಡೇಟ್ ಆಗಿದ್ದು, ಇದೀಗ ಹೊಸದಾಗಿ ಸೇರಿರುವ ಫೀಚರ್ಸ್‌ಗಳಲ್ಲಿ 'ಸ್ಲೋ ಮೋಷನ್‌ ಸೆಲ್ಫಿ ವಿಡಿಯೊ' ಫೀಚರ್‌ ಸಹ ಒಂದಾಗಿದೆ. ಫೋನ್ ಮುಂಭಾಗದ ಸೆಲ್ಫಿ ಕ್ಯಾಮೆರಾದಲ್ಲಿ ಈ ಸೌಲಭ್ಯವು ಲಭ್ಯವಾಗಲಿದ್ದು, ಬಳಕೆದಾರರು ಸ್ಲೋ ಮೋಷನ್ ಚಿತ್ರಿಕರಣ ಮಾಡಬಹುದಾಗಿದೆ. ಆಪಲ್‌ ಐಫೋನ್ 11 ಸರಣಿಯಲ್ಲಿರುವ (slowfies) ಸ್ಲೋಫಿಸ್‌ ಫೀಚರ್‌ನಂತೆ ಅನಿಸಲಿದೆ.

OTA ಅಪ್‌ಡೇಟ್

OTA ಅಪ್‌ಡೇಟ್

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌10 ಸ್ಮಾರ್ಟ್‌ಫೋನ ಸರಣಿಯು ಮತ್ತೊಂದು ಆಕರ್ಷಕ ಅಪ್‌ಡೇಟ್ ಫೀಚರ್ ಅಂದರೇ OTA ಅಪ್‌ಡೇಟ್. ಇದು ಹಾಟ್‌ಸ್ಟಾಪ್‌ ಕನೆಕ್ಟಿವಿಟಿಗೆ ಸಂಬಂಧಿಸಿದ್ದಾಗಿದೆ. ಈ ಹೊಸ ಫೀಚರ್ ಕ್ವಿಕ್ ಆಗಿ ಮೊಬೈಲ್ ಡೇಟಾ ಶೇರ್ ಮಾಡಲು ಅನುಕೂಲವಾಗಿಸಲಿದೆ. ಬೇಗನೆ ಕನೆಕ್ಟಿವಿಟಿಗೆ ನೆರವಾಗಲಿದ್ದು, ಈ ಫೀಚರ್ ಬಳಕೆಗೆ ಸ್ಯಾಮ್‌ಸಂಗ್ ಅಕೌಂಟ್‌ಗೆ ಲಾಗ್‌ ಇನ್ ಆಗಬೇಕಿದೆ.

ಮೀಡಿಯಾ ಬಟನ್ಸ್

ಮೀಡಿಯಾ ಬಟನ್ಸ್

ಗ್ಯಾಲ್ಯಾಕ್ಸಿ ಎಸ್‌10 ಸ್ಮಾರ್ಟ್‌ಫೋನ್‌ ಮೀಡಿಯಾ ಮತ್ತು ಡಿವೈಸ್‌ ಬಟನ್ಸ್‌ ಆಯ್ಕೆಗಳಲ್ಲಿಯೂ ಹಲವು ಅಪ್‌ಡೇಟ್‌ ಅಂಶಗಳನ್ನು ಕಂಡಿದೆ. ಈ ಫೀಚರ್‌ ಸೌಲಭ್ಯಗಳು ಬಳಕೆದಾರರಿಗೆ ಮೀಡಿಯಾ ನಿಯಂತ್ರಣಕ್ಕೆ ಅನುಕೂಲ ಒದಗಿಸಲಿದೆ. ಸ್ಮಾರ್ಟ್‌ ಟಿವಿ, ಸ್ಪೀಕರ್ಸ್‌, ಇತರೆ ಸ್ಮಾರ್ಟ್‌ ಕನೆಕ್ಟಿವಿಟಿ ಡಿವೈಸ್‌ಗಳನ್ನು ನಿಯಂತ್ರಿಸಲು ಉಪಯುಕ್ತ ಆಗಲಿವೆ. ಹಾಗೆಯೇ ಆನ್‌ಬೋರ್ಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ನಲ್ಲಿಯೂ ಅಪ್‌ಡೇಟ್ ಆಗಿದೆ.

ಅಪ್‌ಡೇಟ್‌ ಮಾಡಿ

ಅಪ್‌ಡೇಟ್‌ ಮಾಡಿ

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌10 ಸ್ಮಾರ್ಟ್‌ಫೋನ್ ಸರಣಿಯ ಸಾಫ್ಟ್‌ವೇರ್ ಅಪ್‌ಗ್ರೇಡ್‌ ಆಗಿದ್ದು, ಬಳಕೆದಾರರು ಹೊಸ ಆವೃತ್ತಿಗೆ ಅಪ್‌ಡೇಟ್ ಆದರೆ ನೂತನ ಫೀಚರ್ಸ್‌ಗಳು ಬಳಕೆಗೆ ಲಭ್ಯವಾಗಲಿವೆ. ಅಪ್‌ಡೇಟ್‌ ಮಾಡಲು ಹೀಗೆ ಮಾಡಿ. ಸ್ಮಾರ್ಟ್‌ಫೋನಿನ ಸೆಟ್ಟಿಂಗ್‌ ಆಯ್ಕೆ > ಸಾಫ್ಟ್‌ವೇರ್ > ಆಗ ಅಪ್‌ಡೇಟ್‌ ಲಭ್ಯತೆ ಇದ್ದರೇ, ಅಪ್‌ಡೇಟ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ.

Best Mobiles in India

English summary
Samsung is pushing out a new software update to its Galaxy S10 series. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X