ಸ್ಯಾಮ್‌ಸಂಗ್ 'ಗ್ಯಾಲಕ್ಸಿ S10' ಸರಣಿಯ ಫೋನ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ!

|

ಜನಪ್ರಿಯ ಸ್ಯಾಮ್‌ಸಂಗ್ ಸಂಸ್ಥೆಯು ಮೊನ್ನೆಯಷ್ಟೆ ಗ್ಯಾಲಕ್ಸಿ ಎಸ್‌20 ಸರಣಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಭಾರಿ ಸದ್ದು ಮಾಡಿದೆ. ಅದರ ಬೆನ್ನಲೆ ಇದೀಗ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ತನ್ನ ಗ್ಯಾಲಕ್ಸಿ ಎಸ್‌10 ಸರಣಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ದೊಡ್ಡ ಮೊತ್ತದ ಇಳಿಕೆ ಮಾಡಡಿದೆ. ಹೀಗಾಗಿ ಗ್ಯಾಲಕ್ಸಿ ಎಸ್‌10 ಸರಣಿ ಫೋನ್‌ಗಳು ಡಿಸ್ಕೌಂಟ್‌ ಬೆಲೆಯಲ್ಲಿ ಸಿಗಲಿವೆ.

ಸ್ಯಾಮ್‌ಸಂಗ್‌ ಸಂಸ್ಥೆ

ಹೌದು, ಸ್ಯಾಮ್‌ಸಂಗ್‌ ಸಂಸ್ಥೆಯ ಜನಪ್ರಿಯ 'ಗ್ಯಾಲಕ್ಸಿ ಎಸ್‌10' ಸರಣಿಯಲ್ಲಿನ ಗ್ಯಾಲಕ್ಸಿ ಎಸ್‌10, ಗ್ಯಾಲಕ್ಸಿ ಎಸ್‌10e ಮತ್ತು ಗ್ಯಾಲಕ್ಸಿ ಎಸ್‌10 ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ದರದಲ್ಲಿ 12,000ರೂ ವರೆಗೂ ಕಡಿತ ಘೋಷಿಸಿದೆ. ಗ್ಯಾಲಕ್ಸಿ ಎಸ್‌10 128GB ಸ್ಟೋರೆಜ್‌ ವೇರಿಯಂಟ್‌ ಇದೀಗ 54,900ರೂ.ಗಳಿಗೆ ಲಭ್ಯ. ಅದೇ ರೀತಿ 128GB ಸ್ಟೋರೆಜ್ ಸಾಮರ್ಥ್ಯದ ಗ್ಯಾಲಕ್ಸಿ ಎಸ್‌10 ಪ್ಲಸ್‌ ಬೆಲೆ ಈಗ 61,900ರೂ. ಆಗಿದೆ. ಇನ್ನು ಗ್ಯಾಲಕ್ಸಿ ಎಸ್‌10e ಬೇಸ್‌ ವೇರಿಯಂಟ್‌ ಬೆಲೆಯು 47,900ರೂ.ಆಗಿದೆ. ಉಳಿದಂತೆ ಈ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌10

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌10

ಗ್ಯಾಲಕ್ಸಿ ಎಸ್‌10 ಸ್ಮಾರ್ಟ್‌ಫೋನ್ 1440 x 3040 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.1 ಇಂಚಿನ ಡಿಸ್‌ಪ್ಲೇ ಪಡೆದಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಇದರಲ್ಲಿದೆ ಹಾಗೂ ಅದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಸಫೋರ್ಟ್‌ ಇದೆ. ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿದ್ದು, 10ಎಂಪಿ ಸೆಲ್ಫಿ ಕ್ಯಾಮೆರಾ ಹೊಂದಿದೆ. ಫಾಸ್ಟ್‌ ಚಾರ್ಜರ ಬೆಂಬಲದೊಂದಿಗೆ 3400 mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌10 ಪ್ಲಸ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌10 ಪ್ಲಸ್‌

ಗ್ಯಾಲಕ್ಸಿ ಎಸ್‌10 ಪ್ಲಸ್‌ ಸ್ಮಾರ್ಟ್‌ಫೋನ್ ಸಹ 1440 x 3040 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ AMOLED ಡಿಸ್‌ಪ್ಲೇ ಪಡೆದಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಇದರಲ್ಲಿದೆ ಹಾಗೂ ಅದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಸಫೋರ್ಟ್‌ ಇದೆ. ಹಾಗೆಯೇ ಆಂಡ್ರಾಯ್ಡ್‌ 10 ಓಎಸ್‌ಗೆ ಅಪ್‌ಡೇಟ್ ಅವಕಾಶ ಇದೆ. ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿದ್ದು, ಡ್ಯುಯಲ್‌ ಸೆಲ್ಫಿ ಕ್ಯಾಮೆರಾ ಹೊಂದಿದೆ. 15W ಬಲದ ಫಾಸ್ಟ್‌ ಚಾರ್ಜರ ಬೆಂಬಲದೊಂದಿಗೆ 4100 mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌10e

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌10e

ಗ್ಯಾಲಕ್ಸಿ ಎಸ್‌10e ಸ್ಮಾರ್ಟ್‌ಫೋನ್ 5.8 ಇಂಚಿನ AMOLED ಡಿಸ್‌ಪ್ಲೇ ಪಡೆದಿದ್ದು, ಡಿಸ್‌ಪ್ಲೇಯು 1080 x 2280ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಈ ಫೋನ್ ಸಹ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಇದರಲ್ಲಿದೆ ಹಾಗೂ ಅದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಸಫೋರ್ಟ್‌ ಇದೆ. ಹಾಗೆಯೇ ಆಂಡ್ರಾಯ್ಡ್‌ 10 ಓಎಸ್‌ಗೆ ಅಪ್‌ಡೇಟ್ ಅವಕಾಶ ಇದೆ. ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿದ್ದು, 10ಎಂಪಿ ಸೆಲ್ಫಿ ಕ್ಯಾಮೆರಾ ಹೊಂದಿದೆ. 15W ಬಲದ ಫಾಸ್ಟ್‌ ಚಾರ್ಜರ ಬೆಂಬಲದೊಂದಿಗೆ 3100 mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ.

Best Mobiles in India

English summary
Samsung has permanently slashed the pricing of the Galaxy S10, Galaxy S10+, and Galaxy S10e in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X