ಸ್ಯಾಮ್‌ಸಂಗ್ ವರ್ಸಸ್ ಆಪಲ್: ಹಾವು ಮುಂಗುಸಿಯಾಟಕ್ಕೆ ಕೊನೆ ಎಂದು?

  By Shwetha
  |

  ಸ್ಯಾಮ್‌ಸಂಗ್ ಮತ್ತು ಆಪಲ್ ಮಾರುಕಟ್ಟೆಯಲ್ಲಿ ಟಾಪ್ ಸ್ಥಾನಕ್ಕಾಗಿ ಪ್ರತಿಸ್ಪರ್ಧೆಯನ್ನು ಒಡ್ಡುತ್ತಿರುವ ಟಾಪ್ ಕಂಪೆನಿಗಳು. ಒಬ್ಬರಿಗಿಂತ ಒಬ್ಬರು ಮಿಗಿಲಾಗಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುತ್ತಾ ಅತ್ಯುನ್ನತ ವೈಶಿಷ್ಟ್ಯಗಳನ್ನು ತಮ್ಮ ಫೋನ್‌ಗಳಲ್ಲಿ ಅಳವಡಿಸುವ ಸಾಮರ್ಥ್ಯವುಳ್ಳವರು.

  ಓದಿರಿ: ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ

  ಇಂದಿನ ಲೇಖನದಲ್ಲಿ ಇವರುಗಳ ಸಾಮರ್ಥ್ಯಕ್ಕೆ ಅನುಗುಣವಾಗಿಯೇ ಲಾಂಚ್ ಮಾಡಿರುವ ಎರಡು ಅದ್ಭುತ ಫೋನ್‌ಗಳ ವಿಶೇಷತೆಗಳನ್ನು ಅರಿಯೋಣ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಆಪಲ್ ಐಫೋನ್ 6 ನಡುವಿನ ವ್ಯತ್ಯಾಸಗಳು, ವಿಶೇಷತೆಗಳು ಮತ್ತು ಖರೀದಿಗೆ ಯಾವುದು ಬೆಸ್ಟ್ ಎಂಬ ಆಯ್ಕೆಯನ್ನು ಈ ಲೇಖನ ಒಳಗೊಂಡಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ವರ್ಸಸ್ ಆಪಲ್ ಐಫೋನ್6

  ಗ್ಯಾಲಕ್ಸಿ ಎಸ್6 ಮೆಟಲ್ ಅಂಚುಗಳನ್ನು ಹೊಂದಿದ್ದು ಇದರ ಗ್ಲಾಸ್ ಬ್ಯಾಕ್ ನಿಜಕ್ಕೂ ನಯನಮನೋಹರವಾಗಿದೆ. ಇದರ ಬಿಲ್ಡ್ ಗುಣಮಟ್ಟ ನೋಡಿದಾಗ ಸ್ಯಾಮ್‌ಸಂಗ್ ಕೊಂಚ ಕಡಿಮೆ ವೆಚ್ಚದು ಎಂದೇ ನಮಗನಿಸುತ್ತದೆ. ಇನ್ನು ಐಫೋನ್ 6, 6.9 ಎಮ್‌ಎಮ್ ತೆಳುವಿನ ಈ ಆಪಲ್ ಉತ್ಪನ್ನ ನಿಮ್ಮ ಹಸ್ತಕ್ಕೆ ಇನ್ನಷ್ಟು ಮೆರುಗನ್ನು ಒದಗಿಸುತ್ತದೆ. ಇದರ ಸ್ಪೀಕರ್ ಚಾರ್ಜಿಂಗ್ ಡಾಕ್ ಅತ್ಯದ್ಭುತವಾಗಿದೆ. ಇಲ್ಲಿ ವಿಜಯಿ ಆಪಲ್ ಐಫೋನ್ 6.

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ವರ್ಸಸ್ ಆಪಲ್ ಐಫೋನ್6

  ಆಪಲ್ ತನ್ನ ಫೋನ್‌ನಲ್ಲಿ ಪರದೆ ಗುಣಮಟ್ಟಕ್ಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ನೀಡಿಲ್ಲ. ಐಫೋನ್6 ನಲ್ಲಿ 4.7 ಇಂಚಿನ ಡಿಸ್‌ಪ್ಲೇ ಮತ್ತು 750x1334 ಪಿಕ್ಸೆಲ್‌ಗಳ ಈ ಫೋನ್ ಅಷ್ಟೊಂದು ಗಮನ ಸೆಳೆಯುತ್ತಿಲ್ಲ. ಗ್ಯಾಲಕ್ಸಿ ಎಸ್6ನಲ್ಲಿ 5.1 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ನಮಗೆ ಕಾಣಬಹುದಾಗಿದೆ. 1440x2560 ಪಿಕ್ಸೆಲ್‌ಗಳನ್ನು ಇದು ಹೊಂದಿದೆ. ಇಲ್ಲಿ ವಿಜಯಿ ಗ್ಯಾಲಕ್ಸಿ ಎಸ್6.

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ವರ್ಸಸ್ ಆಪಲ್ ಐಫೋನ್6

  ಗ್ಯಾಲಕ್ಸಿ ಎಸ್6 ಎಕ್ಸೋನಸ್ 7 ಓಕ್ಟಾ ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿದ್ದು ಎರಡು ಕ್ವಾಡ್ ಕೋರ್ ಪ್ರೊಸೆಸರ್ ಮತ್ತು 3 ಜಿಬಿ RAM ಅನ್ನು ಡಿವೈಸ್‌ನಲ್ಲಿ ಕಾಣಬಹುದಾಗಿದೆ. ಇನ್ನು ಐಫೋನ್ 6, 64 ಬಿಟ್ 1.39GHZ ಡ್ಯುಯಲ್ ಕೋರ್ A8 ಪ್ರೊಸೆಸರ್ ಮತ್ತು 1ಜಿಬಿ RAM ಅನ್ನು ಒಳಗೊಂಡಿದೆ.

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ವರ್ಸಸ್ ಆಪಲ್ ಐಫೋನ್6

  ಐಫೋನ್ 6 ನ 8ಮೆಗಾಪಿಕ್ಸೆಲ್ ಕ್ಯಾಮೆರಾ ಅಷ್ಟೊಂದು ಮೋಹಕವಾಗಿಲ್ಲ. ಆದರೆ ಎಸ್6 ನಲ್ಲಿರುವ 16ಎಮ್‌ಪಿ ಕ್ಯಾಮೆರಾ ಸ್ಯಾಮ್‌ಸಂಗ್‌ನ ಉತ್ತಮ ಆಯ್ಕೆಯನ್ನು ನಿರೂಪಿಸುತ್ತಿದೆ.

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ವರ್ಸಸ್ ಆಪಲ್ ಐಫೋನ್6

  ಎಸ್6ನಲ್ಲಿ 2,550mAh ಬ್ಯಾಟರಿಯನ್ನು ನಾವು ಕಾಣಬಹುದಾಗಿದ್ದು ವಿಪಿಸಿ ಮತ್ತು ಪಿಎಮ್‌ಎ ವೈರ್‌ಲೆಸ್ ಚಾರ್ಜಿಂಗ್ ಬಳಸಿಕೊಂಡು ಸ್ಯಾಮ್‌ಸಂಗ್‌ನ ಚಾರ್ಜಿಂಗ್ ಪ್ಯಾಡ್ ಬಳಸಿ ಚಾರ್ಜ್ ಮಾಡಬಹುದಾಗಿದೆ. ಇನ್ನು ಐಫೋನ್6 ನಲ್ಲಿ 1810mAh ಬ್ಯಾಟರಿ ಇದೆ.

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ವರ್ಸಸ್ ಆಪಲ್ ಐಫೋನ್6

  ಹೆಚ್ಚಿನ ದುಬಾರಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಡಿವೈಸ್‌ಗಳು, ಎಸ್6 ನಲ್ಲಿ ಮುಖ್ಯ ಪರದೆಯಲ್ಲಿ ಒಂದಕ್ಕಿಂತ ಹೆಚ್ಚು ಅಪ್ಲಿಕೇಶನ್ ಅನ್ನು ತೆರೆಯಲು ಅನುಮತಿಸುತ್ತದೆ. ಆದರೆ ಐಫೋನ್ ಅಪ್ಲಿಕೇಶನ್ ಅನ್ನು ಪರದೆಯಲ್ಲಿ ಒಂದೇ ಸಲ ತೆರೆಯಲು ಅನುಮತಿಸುತ್ತದೆ.

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ವರ್ಸಸ್ ಆಪಲ್ ಐಫೋನ್6

  ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಎಸ್6 ಸ್ಮಾರ್ಟ್ ಮ್ಯಾನೇಜರ್ ಅಪ್ಲಿಕೇಶನ್‌ನೊಂದಿಗೆ ಬಂದಿದ್ದು ಬಟನ್‌ನ ಒಂದೇ ಪ್ರೆಸ್‌ನೊಂದಿಗೆ ಕ್ಲೀನ್ ಮಾಡಿಬಿಡುತ್ತದೆ. ಆಪಲ್‌ ಐಫೋನ್6 ನಲ್ಲಿ ಈ ವ್ಯವಸ್ಥೆ ಇಲ್ಲ.

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ವರ್ಸಸ್ ಆಪಲ್ ಐಫೋನ್6

  ಎಸ್6 ಶ್ರೇಣಿಯ ಫೋನ್‌ಗಳನ್ನು ಬಳಸಿ ನಿಮಗೆ ಎನ್‌ಎಫ್‌ಸಿ ಇಲ್ಲದೆಯೇ ಸ್ಟೋರ್‌ಗಳಲ್ಲಿ ಪಾವತಿಗಳನ್ನು ಮಾಡಬಹುದಾಗಿದೆ. ಆದರೆ ಆಪಲ್ ಪೇನಲ್ಲಿ ಎನ್‌ಎಫ್‌ಸಿ ಸಕ್ರಿಯಗೊಂಡಿರುವುದು ಅತೀ ಅವಶ್ಯಕ ಎಂದೆನಿಸಿದೆ.

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ವರ್ಸಸ್ ಆಪಲ್ ಐಫೋನ್6

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಶೀಘ್ರವಾಗಿ ಚಾರ್ಜ್ ಆಗುತ್ತದೆ ಸ್ಯಾಮ್‌ಸಂಗ್‌ನಲ್ಲಿ 10 ನಿಮಿಷದ ಚಾರ್ಜ್ ನಿಮಗೆ ನಾಲ್ಕು ಗಂಟೆಗಳ ಬಳಕೆಯನ್ನು ದಯಪಾಲಿಸುತ್ತದೆ. ಆದರೆ ಐಫೋನ್ 6 ಈ ರೀತಿಯ ವೇಗದ ಚಾರ್ಜ್ ಅನ್ನು ಹೊಂದಿಲ್ಲ.

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ವರ್ಸಸ್ ಆಪಲ್ ಐಫೋನ್6

  ಇನ್ನು ಎರಡು ಹ್ಯಾಂಡ್‌ಸೆಟ್‌ಗಳ ನಡುವಿನ ಸ್ಪರ್ಧೆಯನ್ನು ಗಮನಿಸುವಾಗ ಎಸ್6 ಡಿಸ್‌ಪ್ಲೇ, ಪ್ರೊಸೆಸರ್, ಕ್ಯಾಮೆರಾ ಮತ್ತು ಬ್ಯಾಟರಿ ವಿಭಾಗದಲ್ಲಿ ಮೇಲುಗೈ ಸಾಧಿಸುತ್ತಿದೆ. ಆಪಲ್ ಈ ವಿಚಾರಗಳಲ್ಲಿ ಸಪ್ಪೆಯಾಗಿದೆ. ಐಫೋನ್6 ಮೃದುವಾದ ಆದರೆ ಕಡಿಮೆ ಕಸ್ಟಮೈಸ್ ಮಾಡಬಹುದಾದ ಇಕೋಸಿಸ್ಟಮ್ ಅನ್ನು ಹೊಂದಿದ್ದರೆ, ಎಸ್6 ಹೆಚ್ಚು ಸ್ವತಂತ್ರ ಆಂಡ್ರಾಯ್ಡ್ ಲಾಲಿಪಪ್‌ನೊಂದಿಗೆ ಆಕರ್ಷಕ ಮತ್ತು ಭಿನ್ನವಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The curtains have been pulled off the new Samsung Galaxy S6 at the ongoing Mobile World Congress. Yes, it looks great and Samsung is claiming a lot about its new flagship. But the question stands – is the Galaxy S6 better than the iPhone 6? Here is the comparison.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more