ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ A8 ಅನಾವರಣ!..ಬ್ಯಾಟರಿ ಎಷ್ಟು ಗೊತ್ತಾ?

|

ದಕ್ಷಿಣ ಕೊರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಸಂಸ್ಥೆ ತನ್ನ ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಇತರೆ ಸ್ಮಾರ್ಟ್‌ ಡಿವೈಸ್‌ಗಳಲ್ಲೂ ತನ್ನ ಕಮಾಲ್‌ ತೋರಿದೆ. ಈಗಾಗಲೇ ಭಿನ್ನ ಶ್ರೇಣಿಯಲ್ಲಿ ಹಲವು ಆಕರ್ಷಕ ಟ್ಯಾಬ್‌ಗಳನ್ನು ಪರಿಚಯಿಸಿರುವ ಸ್ಯಾಮ್‌ಸಂಗ್‌ ಇದೀಗ ಹೊಸದಾಗಿ 'ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ A8' ಟ್ಯಾಬ್‌ ಅನ್ನು ಅನಾವರಣ ಮಾಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ A8 ಅನಾವರಣ!..ಬ್ಯಾಟರಿ ಎಷ್ಟು ಗೊತ್ತಾ?

ಹೌದು, ಸ್ಯಾಮ್‌ಸಂಗ್‌ ಕಂಪೆನಿ ತನ್ನ A ಟ್ಯಾಗ್ ಸರಣಿಯಲ್ಲಿ ನೂತನವಾಗಿ ಗ್ಯಾಲಕ್ಸಿ ಟ್ಯಾಬ್‌ A8 ಟ್ಯಾಬ್ ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಈ ಟ್ಯಾಬ್‌ ಈ ಹಿಂದಿನ ಗ್ಯಾಲಕ್ಸಿ ಟ್ಯಾಬ್ A7 ಡಿವೈಸ್‌ನ ಉತ್ತರಾಧಿಕಾರಿಯಾಗಿ ಕಾಣಿಸಿಕೊಂಡಿದೆ. ಇದು 7,040 mAh ಬ್ಯಾಟರಿ ಬ್ಯಾಕ್‌ಅಪ್‌ ಪವರ್‌ ಪಡೆದಿದ್ದು, 15W ಚಾರ್ಜಿಂಗ್ ಸಪೋರ್ಟ್‌ ಪಡೆದಿದೆ. ತೆಳುವಾದ ರಚನೆ ಯನ್ನು ಹೊಂದಿದ್ದು, ಜೊತೆಗೆ ಕ್ವಾಡ್ ಸ್ಪೀಕರ್ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಹಾಗಾದರೇ 'ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ A8' ಟ್ಯಾಬ್‌ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ A8 ಅನಾವರಣ!..ಬ್ಯಾಟರಿ ಎಷ್ಟು ಗೊತ್ತಾ?

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್‌ A8 ಡಿವೈಸ್ 1,920 x 1,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 10.5 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ ಯನ್ನು ಹೊಂದಿದೆ. ಇದು 16:10 ರಚನೆಯ ಅನುಪಾತವನ್ನು ಪಡೆದುಕೊಂಡಿದೆ. ಇನ್ನು ಈ ಡಿಸ್‌ಪ್ಲೇ 80 % ಸ್ಕ್ರೀನ್‌ ಟು ಬಾಡಿ ಅನುಪಾತವನ್ನು ಒಳಗೊಂಡಿದೆ.

ಪ್ರೊಸೆಸರ್‌ ಪವರ್ ಯಾವುದು
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್‌ A8 ಡಿವೈಸ್ ಆಕ್ಟಾ ಕೋರ್ ಪ್ರೊಸೆಸರ್ ಮೂಲಕ 2GHz ಅನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಈ ಟ್ಯಾಬ್ ಡಿವೈಸ್ 32GB, 64GB, ಮತ್ತು 128GB ಆಂತರೀಕ ಸಂಗ್ರಹದ ಆಯ್ಕೆಗಳನ್ನು ಒಳಗೊಂಡಿವೆ. ಇದು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1 ಟಿಬಿ ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ A8 ಅನಾವರಣ!..ಬ್ಯಾಟರಿ ಎಷ್ಟು ಗೊತ್ತಾ?

ಕ್ಯಾಮೆರಾ ವಿಶೇಷ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್‌ A8 ಡಿವೈಸ್ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಡಿಜಿಟಲ್‌ ಜೂಮ್‌ ಮತ್ತು ಆಟೋ ಫ್ಲ್ಯಾಶ್‌ ಅನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್‌ A8 ಡಿವೈಸ್ 7,040mAh ಬ್ಯಾಟರಿ ಬ್ಯಾಕ್‌ಅಪ್‌ ಪವರ್‌ ಪಡೆದಿದ್ದು, 15W ಚಾರ್ಜಿಂಗ್ ಸಪೋರ್ಟ್‌ ಪಡೆದಿದೆ. ಇದು 246.8mm x 161.9mm x 6.9 ಎಮ್.ಎಮ್ ಸುತ್ತಳತೆ ಹೊಂದಿದ್ದು, 508 ಗ್ರಾಂ ತೂಕ ಹೊಂದಿದೆ. ಯುಎಸ್‌ಬಿ ಟೈಪ್‌-C ಆಯ್ಕೆ ಪಡೆದಿದೆ. ಹಾಗೆಯೇ ಇದು ಡ್ಯುಯಲ್-ಬ್ಯಾಂಡ್ Wi-Fi ಮತ್ತು ಬ್ಲೂಟೂತ್ 5.0 ಬೆಂಬಲದೊಂದಿಗೆ LTE ಸಂಪರ್ಕವನ್ನು ಬೆಂಬಲಿಸುತ್ತದೆ. ಕಂಪನಿಯ ಪ್ರಕಾರ ಈ ಡಿವೈಸ್ 3.5mm ಆಡಿಯೊ ಜಾಕ್ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್‌ A8 ಡಿವೈಸ್ ಬೆಲೆ ಇನ್ನು ಬಹಿರಂಗ ಪಡಿಸಿಲ್ಲ. ಈ ಡಿವೈಸ್ ಯುಎಸ್‌ ಮತ್ತು ಇತರ ಕೆಲವು ಪ್ರದೇಶಗಳಲ್ಲಿ 2022 ರ ಜನವರಿಯಲ್ಲಿ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ. ಇನ್ನು ಈ ಟ್ಯಾಬ್ಲೆಟ್ ಗ್ರೇ, ಪಿಂಕ್, ಗೋಲ್ಡ್‌ ಮತ್ತು ಸಿಲ್ವರ್ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ.

Best Mobiles in India

English summary
Samsung Galaxy Tab A8 With 7,040mAh Battery, 10.5 inch Display Announced.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X