ಇಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ 20 ಸರಣಿ ಲಾಂಚ್!..ಲೈವ್‌ ವೀಕ್ಷಣೆ ಹೇಗೆ?

|

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯು ಬಹುನಿರೀಕ್ಷಿತ ಗ್ಯಾಲಕ್ಸಿ ನೋಟ್ 20 ಸರಣಿಯು ಇಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಗ್ಯಾಲಕ್ಸಿ ನೋಟ್ 20 ಸರಣಿಯ ಜೊತೆ ಗ್ಯಾಲಕ್ಸಿ ನೋಟ್ 20 ಅಲ್ಟ್ರಾ, ಗ್ಯಾಲಕ್ಸಿ ಟ್ಯಾಬ್ ಎಸ್ 7 ಸರಣಿ, ಗ್ಯಾಲಕ್ಸಿ Z ಫೋಲ್ಡ್‌ 2 5G, ಗ್ಯಾಲಕ್ಸಿ ಬಡ್ಸ್ ಲೈವ್ ಮತ್ತು ಗ್ಯಾಲಕ್ಸಿ ವಾಚ್ 3 ಡಿವೈಸ್‌ಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.

ಇಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ 20 ಸರಣಿ ಲಾಂಚ್!..ಲೈವ್‌ ವೀಕ್ಷಣೆ ಹೇಗೆ?

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ನೋಟ್ 20 ಸರಣಿಯ ಬಿಡುಗಡೆ ಕಾರ್ಯಕ್ರಮವನ್ನು ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2020 ಎಂದು ಕರೆಯಲಾಗಿದೆ. ಇನ್ನು ಈ ಕಾರ್ಯಕ್ರಮವು (ಇಂದು) ಆಗಸ್ಟ್ 5 ರಂದು ಭಾರತೀಯ ಕಾಲಮಾನ ಸಂಜೆ 7:30ಗಂಟೆಗೆ ನಡೆಯಲಿದೆ. ಗ್ಯಾಲಕ್ಸಿ ನೋಟ್ 20 ಸರಣಿ ಬಿಡುಗಡೆ ಕಾರ್ಯಕ್ರಮವನ್ನು ಸ್ಯಾಮ್‌ಸಂಗ್ ತನ್ನ ಆನ್‌ಲೈನ್ ಚಾನೆಲ್‌ಗಳಾದ ಸ್ಯಾಮ್‌ಸಂಗ್ ಗ್ಲೋಬಲ್‌ ರೂಮ್, ಸ್ಯಾಮ್‌ಸಂಗ್.ಕಾಮ್, ಮತ್ತು ಸ್ಯಾಮ್‌ಸಂಗ್ ಫೇಸ್‌ಬುಕ್‌ ಪೇಜ್‌ ಮೂಲಕ ನೇರ ಪ್ರಸಾರ ಮಾಡಲಿದೆ.

ಲೀಕ್ ಮಾಹಿತಿಗಳ ಪ್ರಕಾರ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಬೆಲೆ 949 ಯುರೋ (ಭಾರತದಲ್ಲಿ ಸರಿಸುಮಾರು ರೂ. 84,000) ದಿಂದ ಪ್ರಾರಂಭವಾಗಲಿದೆ. 5G ವೇರಿಯಂಟ್‌ 1,049 ಯುರೋ ರಿಂದ ಪ್ರಾರಂಭವಾಗಬಹುದು (ಭಾರತದಲ್ಲಿ ಅಂದಾಜು 92,800ರೂ.) ಹಾಗೆಯೇ ಗ್ಯಾಲಕ್ಸಿ ನೋಟ್ 20 ಅಲ್ಟ್ರಾ 1,299 ಯುರೋ (ದೇಶದಲ್ಲಿ ಅಂದಾಜು 1,14,900 ರೂ.) ಬೆಲೆ ಎಂದು ಊಹಿಸಲಾಗುತ್ತಿದೆ. ಇನ್ನು ಗ್ಯಾಲಕ್ಸಿ ನೋಟ್ 20 ಅಲ್ಟ್ರಾ 5G ವೇರಿಯಂಟ್‌ ಬೆಲೆಯು 1,349 ಯುರೋ ದಿಂದ ಪ್ರಾರಂಭವಾಗುತ್ತದೆ (ಭಾರತದಲ್ಲಿ ಅಂದಾಜು 1,19,400 ರೂ.).

ಇಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ 20 ಸರಣಿ ಲಾಂಚ್!..ಲೈವ್‌ ವೀಕ್ಷಣೆ ಹೇಗೆ?

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 ಮತ್ತು ಎಕ್ಸಿನೋಸ್ 990 SoC ಆಯ್ಕೆಗಳಲ್ಲಿ ಬರಲಿದೆ ಎಂದು ಹೇಳಲಾಗುತ್ತದೆ. ಕೆಲವು ಆಯ್ದ ಮಾರುಕಟ್ಟೆಗಳಲ್ಲಿ ಫೋನ್ 5G ಬೆಂಬಲವನ್ನು ಹೊಂದುವ ಸಾಧ್ಯತೆಯಿದೆ. ಹಾಗೆಯೇ ಈ ಫೋನ್ 1,080x2,400 ಪಿಕ್ಸೆಲ್‌ಗಳು ರೆಸಲ್ಯೂಶನ್‌ನೊಮದಿಗೆ 6.7-ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್‌ ಆಗಿರಲಿದೆ. ಈ ಫೋನ್ 8GB RAM ಮತ್ತು 256GB ವರೆಗೆ ಸ್ಟೋರೇಜ್‌ ಹೊಂದಿರಲಿದೆ.

ಗ್ಯಾಲಕ್ಸಿ ನೋಟ್ 20 ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರುವ ಸಾಧ್ಯತೆಗಳಿವೆ. ಮುಖ್ಯ ಕ್ಯಾಮೆರಾವು 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರಲಿದೆ. ಉಳಿದ ಕ್ಯಾಮೆರಾಗಳು 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್ ಮತ್ತು 3x ಆಪ್ಟಿಕಲ್ ಒಳಗೊಂಡಿರಲಿದೆ. ಹಾಗೆಯೇ ಮುಂಭಾಗದಲ್ಲಿ 10 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆನ್ಸಾರ್‌ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ 4,300mAh ಬ್ಯಾಟರಿಯನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ.

Best Mobiles in India

English summary
Samsung Galaxy Note 20 series launch event, officially called Galaxy Unpacked 2020, will begin at 7:30pm IST today.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X