ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 3 ಬಿಡುಗಡೆ!..ಆಕರ್ಷಕ ಫೀಚರ್ಸ್‌ಗಳು!

|

ಜನಪ್ರಿಯ ಸ್ಯಾಮ್‌ಸಂಗ್ ಕಂಪನಿಯು ಹೊಸದಾಗಿ ಗ್ಯಾಲಕ್ಸಿ ನೋಟ್ 20 ಸರಣಿಯನ್ನು ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ನೋಟ್ 20 ಸರಣಿಯ ವರ್ಚುವಲ್ ಲಾಂಚ್ ಕಾರ್ಯಕ್ರಮದಲ್ಲಿ ಸಂಸ್ಥೆಯು ಗ್ಯಾಲಕ್ಸಿ ವಾಚ್‌ 3 ಡಿವೈಸ್‌ ಅನ್ನು ಸಹ ಅನಾವರಣ ಮಾಡಿದೆ. ಈಗಾಗಲೇ ಗ್ರಾಹಕರಲ್ಲಿ ಕುತೂಹಲ ಮೂಡಿಸಿದ್ದ ಈ ಸ್ಮಾರ್ಟ್‌ವಾಚ್ ನಿರೀಕ್ಷೆಯಂತೆ ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಫಿಟ್ನೆಸ್‌ ಪ್ರಿಯರನ್ನು ಸೆಳೆದಿದೆ.

ಗ್ಯಾಲಕ್ಸಿ ವಾಚ್

ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 41 ಎಂಎಂ ಮತ್ತು 45 ಎಂಎಂ ನ ಎರಡು ಡಯಲ್‌ ಗಾತ್ರಗಳ ಆಯ್ಕೆಯನ್ನು ಹೊಂದಿದೆ. ಇನ್ನು ಈ ಡಿವೈಸ್‌ಗಳು ಸ್ಟೈಲಸ್ ಹಾಗೂ ಟೈಟಾನಿಯಂ ಮಾದರಿಗಳಲ್ಲಿವೆ. ಹಾಗೆಯೇ ಈ ಸ್ಮಾರ್ಟ್‌ವಾಚ್‌ 1GB RAM ಮತ್ತು 8GB ಇಂಟರ್‌ ಸ್ಟೊರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್‌ ಫಿಟ್ನೆಸ್‌ ಟ್ರಾಕಿಂಗ್ ಆಯ್ಕೆಗಳನ್ನು ಪಡೆದಿದೆ.

ವಾಚ್ 3

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ವಾಚ್ 3 ಟಿಜೆನ್ ಮೂಲದ ವೇರಬಲ್ ಓಎಸ್ 5.5 ನಲ್ಲಿ ಕಾರ್ಯನಿರ್ವಹಿಸುತ್ತದೆ. 41 ಎಂಎಂ ವೇರಿಯಂಟ್‌ನಲ್ಲಿ 1.2-ಇಂಚಿನ (360x360 ಪಿಕ್ಸೆಲ್‌ಗಳು) ವೃತ್ತಾಕಾರದ ಸೂಪರ್ ಅಮೋಲೆಡ್ ಡಿಸ್ಪ್ಲೇ ಮತ್ತು 45 ಎಂಎಂ ವೇರಿಯಂಟ್‌ನಲ್ಲಿ 1.4-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ, ಅದೇ ರೆಸಲ್ಯೂಶನ್ ಹೊಂದಿರುವ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಡಿಎಕ್ಸ್ ಇದನ್ನು ರಕ್ಷಿಸಿದೆ.

ಡ್ಯುಯಲ್-ಕೋರ್

ಈ ಸ್ಮಾರ್ಟ್ ವಾಚ್ ಅನ್ನು ಡ್ಯುಯಲ್-ಕೋರ್ ಎಕ್ಸಿನೋಸ್ 9110 ಸಿಪಿಯು, ಮಾಲಿ-ಟಿ 720 ಜಿಪಿಯು ಹೊಂದಿದೆ. ಹಾಗೆಯೇ 68 ವಾಟರ್ ರೆಸಿಸ್ಟೆನ್ಸ್ ಮತ್ತು ಎಂಐಎಲ್-ಎಸ್‌ಟಿಡಿ -810 ಜಿ ಕಂಪ್ಲೈಂಟ್ ವಿನ್ಯಾಸದೊಂದಿಗೆ ಹೊಂದಿದೆ. 41 ಎಂಎಂ ವೇರಿಯಂಟ್‌ 247mAh ಬ್ಯಾಟರಿಯನ್ನು ಹೊಂದಿದ್ದರೆ, 45 ಎಂಎಂ ವೇರಿಯಂಟ್‌ 340mAh ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 802.11 ಬಿ / ಜಿ / ಎನ್ ಮತ್ತು ವೈ-ಫೈ ಮಾದರಿಗಾಗಿ ಬ್ಲೂಟೂತ್ ವಿ 5.0 ಸೇರಿವೆ ಮತ್ತು ಎಲ್‌ಟಿಇ ಮಾದರಿಯು 4 ಜಿ ಸಂಪರ್ಕವನ್ನು ಪಡೆದಿದೆ. ಜಿಪಿಎಸ್ ಸಪೋರ್ಟ್ ಒಳಗೊಂಡಿದೆ.

ಹೃದಯ ಬಡಿತ

ಹಾಗೆಯೇ ಸ್ಮಾರ್ಟ್ ವಾಚ್‌ನಲ್ಲಿ ನೇರವಾಗಿ ಕರೆ ಮಾಡಲು ಸ್ಪೀಕರ್ ಮತ್ತು ಮೈಕ್ ಸಹ ಇದೆ. ಇದರೊಂದಿಗೆ ಹೃದಯ ಬಡಿತ ಮಾನಿಟರಿಂಗ್, ಸ್ಲೀಪ್ ಟ್ರ್ಯಾಕಿಂಗ್, ಸ್ವಯಂಚಾಲಿತ ವರ್ಕೌಟ್‌ ಟ್ರ್ಯಾಕ್‌, ಪತ್ತೆ, ಮಹಿಳಾ ಆರೋಗ್ಯ ಟ್ರ್ಯಾಕಿಂಗ್‌ನ ಸೌಲಭ್ಯ ಆಯ್ಕೆ ಪಡೆದಿದೆ. Bixby ವಾಯಿಸ್‌ ಅಸಿಸ್ಟಂಟ್‌ ಮತ್ತು ಗೆಸ್ಚರ್ ನಿಯಂತ್ರಣಗಳನ್ನು ಸೌಲಭ್ಯಗಳನ್ನು ಒಳಗೊಂಡಿದೆ. ಗ್ಯಾಲಕ್ಸಿ ವಾಚ್ 3 ನಲ್ಲಿರುವ ಸಂವೇದಕಗಳು ಪಿಪಿಜಿ ಸಂವೇದಕ, ಅಕ್ಸೆಲೆರೊಮೀಟರ್, ಗೈರೊ ಸೆನ್ಸರ್, ಬಾರೋಮೀಟರ್ ಮತ್ತು ಆಂಬಿಯೆಂಟ್ ಲೈಟ್ ಸೆನ್ಸಾರ್ ಸೌಲಭ್ಯಗಳು ಇವೆ. 41 ಎಂಎಂ ವೇರಿಯಂಟ್ ಡಿವೈಸ್‌ ಬೆಲೆಯು ಯುಎಸ್‌ನಲ್ಲಿ $399 (ಭಾರತದಲ್ಲಿ ಅಂದಾಜು 30,000) ಹಾಗೂ 45 ಎಂಎಂ ವೇರಿಯಂಟ್‌ ಬೆಲೆಯು $429 (ಭಾರತದಲ್ಲಿ ಅಂದಾಜು 32,100ರೂ).

Most Read Articles
Best Mobiles in India

English summary
Samsung Galaxy Watch 3 comes with heart rate monitoring, sleep tracking, automatic workout detection, running coach, fall detection, and women health tracking.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X