ಸ್ಯಾಮ್‌ಸಂಗ್ 'ಗ್ಯಾಲಕ್ಸಿ Z ಫ್ಲಿಪ್' ಲಾಂಚ್; ತಲ್ಲಣಗೊಂಡ ಮಾರುಕಟ್ಟೆ!
ಜನಪ್ರಿಯ ಸ್ಯಾಮ್‌ಸಂಗ್ ಸಂಸ್ಥೆಯು ತನ್ನ ಬಹುನಿರೀಕ್ಷಿತ 'ಗ್ಯಾಲಕ್ಸಿ Z ಫ್ಲಿಪ್' ಸ್ಮಾರ್ಟ್‌ಫೋನ್ ಅನ್ನು ಇಂದು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್/ಮಡಚುವ ಮಾದರಿಯ ರಚನೆಯನ್ನು ಹೊಂದಿದ್ದು, ಸಂಪೂರ್ಣ ಹೈ ಎಂಡ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಮೂಲಕ ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಪೋನ್ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಹುಟ್ಟುಹಾಕುವ ಲಕ್ಷಣಗಳನ್ನು ಹೊರಹಾಕಿದೆ.

ಹೌದು, ಸ್ಯಾಮ್‌ಸಂಗ್ ಕಂಪನಿಯು ಸ್ಯಾನ್ ಫ್ರಾನ್ಸಿಸ್ಕೊ, ಕ್ಯಾಲಿಫೋರ್ನಿಯಾದಲ್ಲಿ ನಡೆದ 'ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2020' ಕಾರ್ಯಕ್ರಮದಲ್ಲಿ ಗ್ಯಾಲಕ್ಸಿ ಎಸ್20, ಗ್ಯಾಲಕ್ಸಿ ಎಸ್20 ಪ್ಲಸ್, ಗ್ಯಾಲಕ್ಸಿ ಎಸ್20 ಅಲ್ಟ್ರಾ ಮತ್ತು ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್‌ಗಳನ್ನು ಅನ್ನು ಅಧಿಕೃತವಾಗಿ ಅನಾವರಣ ಮಾಡಿದೆ. ಅಧಿಕ ರೆಸಲ್ಯೂಶ್‌ನಿನ 12ಎಂಪಿ ಕ್ಯಾಮೆರಾ, ಸ್ಯ್ನಾಪ್‌ಡ್ರಾಗನ್ 855+, ಆಂಡ್ರಾಯ್ಡ್ 10 ಓಎಸ್ ಫೀಚರ್ಸ್‌ಗಳು ಇವೆ.

ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್ 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಹೊಂದಿದೆ. ಮೊದಲ ಸೇಲ್ ಫೆ.14ರಂದು ನಡೆಯಲಿದ್ದು, ಆರಂಭಿಕ ಬೆಲೆಯು $1380 (ಭಾರತದಲ್ಲಿ ಅಂದಾಜು.98,500ರೂ.) ಇನ್ನು ಈ ಫ್ಲ್ಯಾಗ್‌ಶಿಫ್ ಫೋನ್ ಮಿರರ್ ಬ್ಕ್ಯಾಕ್, ಮಿರರ್ ಗೋಲ್ಡ್ ಮತ್ತು ಮಿರರ್ ಪರ್ಪಲ್ ದಿದೆ. ಇನ್ನು ಈ ಫೋನಿನ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಹಾಗೆಯೆ ಫೋನ್ ವಿಶೇಷ ಟಾಮ್ ಬ್ರೌನ್ ಎಡಿಷನ್‌ನಲ್ಲಿಯೂ ಲಭ್ಯವಾಗಲಿದೆ. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸೈನ್ ಮತ್ತು ರಚನೆ
ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್ ಆಕರ್ಷಕವಾಗಿದ್ದು, ಬಳಕೆದಾರರಿಗೂ ಕಂಫರ್ಟ್ ಅನುಭೂತಿ ಒದಗಿಸುವಂತಿದೆ. ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್‌ದೆ. ಫ್ಲಿಪ್ ರಚನೆಯು ಸಂಪೂರ್ಣ ಫ್ಲೆಕ್ಸಿ ಮಾದರಿಯ ರಚನೆ ಪಡೆದಿದೆ. ಈ ಸ್ಮಾರ್ಟ್‌ಫೋನ್ ಅನ್ನು ಲ್ಯಾಪ್‌ಟಾಪ್ ತರಹ ಬಳಕೆ ಮಾಡಬಹುದಾಗಿದೆ ಹಾಗೂ ಮಿನಿ ಡಿಸ್‌ಪ್ಲೇ ರಚನೆ ಪಡೆದಿದೆ. ಸೆಲ್ಫಿ ಸೆರೆಹಿಡಿಯುವುದು ಸಹ ಅತೀ ಸುಲಭವಾಗಿದೆ.

ಡಿಸ್‌ಪ್ಲೇ ಮತ್ತು ಪಿಕ್ಸಲ್
ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್ 1080 x 2636 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.7 ಇಂಚಿನ ಡೈನಾಮಿಕ್ AMOLED ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಮೇಲ್ಭಾಗದ ಕವರ ಡಿಸ್‌ಪ್ಲೇಯು 1.06 ಇಂಚಿನಲ್ಲಿದ್ದು, 116 x 300 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಈ ಸ್ಕ್ರೀನಿನ ಅನುಪಾತವು ಶೇ82.2% ಆಗಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 425ppi ಆಗಿದೆ.

ಪ್ರೊಸೆಸರ್ ಸಾಮರ್ಥ್ಯ
ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ಯ್ನಾಪ್‌ಡ್ರಾಗನ್ 855+ ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಒನ್ UI 2 ಆಂಡ್ರಾಯ್ಡ್ 10 ಆಕ್ಸಿಜನ್ ಓಎಸ್‌ನ ಬೆಂಬಲವನ್ನು ಸಹ ಹೊಂದಿದೆ. ಹಾಗೆಯೇ ಈ ಫೋನ್ 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಹೊಂದಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್ ಮೂಲಕ 512GB ವರೆಗೂ ಮೆಮೊರಿ ವಿಸ್ತರಿಸುವ ಅವಕಾಶ ನೀಡಲಾಗಿದೆ.

ಹೈ ರೆಸಲ್ಯೂಶನ್ ಕ್ಯಾಮೆರಾ
ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಅದರಲ್ಲಿ ಮುಖ್ಯ ಕ್ಯಾಮೆರಾವು 12ಎಂಪಿ ಸೆನ್ಸಾರ್ ಪಡೆದಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು ಸಹ 12ಎಂಪಿ ಸೆನ್ಸಾರ್ ಪಡೆದಿದ್ದು, ಅಲ್ಟ್ರಾ ವೈಲ್ಡ್ ಲೆನ್ಸ್ ಹೊಂದಿದೆ.

ಸೆಲ್ಫಿ ಮತ್ತು ವ್ಯೂವ್ ಫೈಂಡರ್
ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್ ಸೆಲ್ಫಿಗೂ ಕ್ಯಾಮೆರಾಗೂ ಉತ್ತಮ ಪ್ಲಾಟ್‌ಫಾರ್ಮ್ ಒದಗಿಸಿದೆ. ಮುಂಬದಿಯಲ್ಲಿನ ಸೆಲ್ಫಿ ಕ್ಯಾಮೆರಾವು ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ಮೊದಲ ಬಾರಿಗೆ ಮೊಬೈಲ್ ಕ್ಯಾಮೆರಾದಲ್ಲಿ ವ್ಯೂವ್ ಫೈಂಡರ್ ಸೌಲಭ್ಯವನ್ನು ಪರಿಚಯಿಸಿದೆ.

ಬ್ಯಾಟರಿ ಬ್ಯಾಕ್‌ಅಪ್
ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್ 3,300mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ 15w ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಟೈಪ್-ಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ವೈಫೈ, ಬ್ಲೂಟೂತ್, UFS 3.0, ಆಂಡ್ರಾಯ್ಡ್ ಆಕ್ಸಿಜನ್ ಓಎಸ್ ಸೌಲಭ್ಯಗಳನ್ನು ಪಡೆದಿದೆ.

ಬೆಲೆ ಎಷ್ಟು?
ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್ 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್‌ನಲ್ಲಿ ಬಿಡುಗಡೆ ಆಗಿದ್ದು, ಆರಂಭಿಕ ಬೆಲೆಯು $1380 (ಭಾರತದಲ್ಲಿ ಅಂದಾಜು.98,500ರೂ.) ಆಗಿದೆ. ಮೊದಲ ಸೇಲ್ ಇದೇ ಫೆ.14ರಂದು ನಡೆಯಲಿದ್ದು, ಇನ್ನು ಈ ಫ್ಲ್ಯಾಗ್‌ಶಿಫ್ ಫೋನ್ ಮಿರರ್ ಬ್ಕ್ಯಾಕ್, ಮಿರರ್ ಗೋಲ್ಡ್ ಮತ್ತು ಮಿರರ್ ಪರ್ಪಲ್ ದಿದೆ. ಇನ್ನು ಈ ಫೋನಿನ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








