ಸ್ಯಾಮ್‌ಸಂಗ್‌ನ ಈ ಫೋನ್‌ಗಳ ಮೇಲೆ ಸಿಗಲಿದೆ 24 ತಿಂಗಳ ನೋ ಕಾಸ್ಟ್ EMI ಆಫರ್‌!

|

ಟೆಕ್‌ ದೈತ್ಯ ಎನಿಸಿಕೊಂಡಿರುವ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಗ್ರಾಹಕರಿಗೆ ಗುಡ್‌ ನ್ಯೂಸ್‌ ನೀಡಿದೆ. ಫ್ಲ್ಯಾಗ್‌ಶಿಪ್‌ ಗ್ಯಾಲಕ್ಸಿ ಸ್ಮಾರ್ಟ್‌ಪೋನ್‌ಗಳನ್ನು ಇಎಂಐನಲ್ಲಿ ಖರೀದಿಸಬೇಕು ಎಂದು ಕೊಂಡವರಿಗೆ ಬಿಗ್‌ ಆಫರ್‌ ನೀಡಿದೆ. ಇದೇ ಮೊದಲ ಬಾರಿಗೆ ಗ್ಯಾಲಕ್ಸಿ Z ಫೋಲ್ಡ್‌ 3 5G, ಗ್ಯಾಲಕ್ಸಿ Z ಫ್ಲಿಪ್‌ 3 5G ಮತ್ತು ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್‌ಗಳನ್ನು ನೋ ಕಾಸ್ಟ್‌ ಇಂಎಐ ಆಫರ್‌ನಲ್ಲಿ ನೀಡುವುದಾಗಿ ಘೋಷಣೆ ಮಾಡಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ತನ್ನ ಫ್ಲ್ಯಾಗ್‌ಶಿಪ್‌ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳ ಮೇಲೆ 24 ತಿಂಗಳ ನೋ ಕಾಸ್ಟ್ ಇಎಂಐ ಆಫರ್ ಅನ್ನು ಘೋಷಿಸಿದೆ. ಅಂದರೆ ಎರಡು ವರ್ಷಗಳ ನೋ ಕಾಸ್ಟ್‌ ಇಎಂಐ ಆಫರ್‌ ಸಿಗಲಿದೆ. ಇದಕ್ಕಾಗಿ HDFC ಬ್ಯಾಂಕ್ ಜೊತೆಗೆ ಸಹಭಾಗಿತ್ವವನ್ನು ಹೊಂದಿದ್ದು, ಭಾರತದ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ. ಹಾಗಾದ್ರೆ ನೋ ಕಾಸ್ಟ್‌ ಇಎಂಐನಲ್ಲಿ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಘೋಷಣೆ ಮಾಡಿರುವ 24 ತಿಂಗಳ ನೋ ಕಾಸ್ಟ್‌ EMI ಆಫರ್‌ನಲ್ಲಿ ಸ್ಯಾಮ್‌ಸಂಗ್‌ ಫ್ಲ್ಯಾಗ್‌ಶಿಪ್‌ ಫೋನ್‌ಗಳನ್ನು ಖರೀದಿಸಬಹುದು. ಇದರಲ್ಲಿ ಗ್ಯಾಲಕ್ಸಿ S22+ ಮತ್ತು ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್‌ EMI ನಲ್ಲಿ 3042ರೂ.ಗಳಿಂದ ಪ್ರಾರಂಭವಾಗುತ್ತವೆ. ಆದರೆ ಗ್ಯಾಲಕ್ಸಿ S22 ಅಲ್ಟ್ರಾ 4,584ರೂ.ಗಳ EMI ನಲ್ಲಿ ಲಭ್ಯವಾಗಲಿದೆ. ಇದಲ್ಲದೆ ಸ್ಯಾಮ್‌ಸಂಗ್‌ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು ಕೂಡ ಎರಡು ವರ್ಷದ ನೋ ಕಾಸ್ಟ್‌ EMI ನಲ್ಲಿ ದೊರೆಯಲಿವೆ. ಇದರಲ್ಲಿ ಗ್ಯಾಲಕ್ಸಿ Z ಫೋಲ್ಡ್‌ 3 5G ಮತ್ತು ಗ್ಯಾಲಕ್ಸಿ ಫ್ಲಿಪ್‌ 3 5G ಫೋನ್‌ಗಳು ಸೇರಿವೆ.

ಸ್ಯಾಮ್‌ಸಂಗ್‌

ಇನ್ನು ಈ ಆಫರ್‌ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್‌ ಇಂಡಿಯಾದ ಮಾರ್ಕೆಟಿಂಗ್‌ ಮತ್ತು ಪ್ರಾಡಕ್ಟ್‌ ಮಾರ್ಕೆಟಿಂಗ್‌ ಮುಖ್ಯಸ್ಥ ಆದಿತ್ಯ ಬಬ್ಬರ್‌ ನಾವು ಮಾಡುವ ಪ್ರತಿಯೊಂದಕ್ಕೂ ಗ್ರಾಹಕರು ಕೇಂದ್ರವಾಗಿದ್ದಾರೆ ಎಂದಿದ್ದಾರೆ. ನಾವು ಗ್ರಾಹಕರ ಜೀವನವನ್ನು ಸುಲಭಗೊಳಿಸಲು ನಮ್ಮ ಪ್ರೀಮಿಯಂ ಗ್ಯಾಲಕ್ಸಿ S22 ಸರಣಿ, ಗ್ಯಾಲಕ್ಸಿ Z ಫೊಲ್ಡ್‌ 3 5G ಮತ್ತು ಗ್ಯಾಲಕ್ಸಿ Z ಫ್ಲಿಪ್‌ 3 5G ಅನ್ನು ನೋ ಕಾಸ್ಟ್‌ ಇಎಂಐನಲ್ಲಿ ನೀಡುತ್ತಿದ್ದೇವೆ. HDFC ಬ್ಯಾಂಕ್‌ನೊಂದಿಗೆ 24 ತಿಂಗಳ EMI ಆಫರ್‌ ಪರಿಚಯಿಸಲು ನಾವು ತುಂಬಾ ಸಂತೋಷಪಡುತ್ತೇವೆ ಎಂದು ಹೇಳಿದ್ದಾರೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ 24 ತಿಂಗಳ ನೋ ಕಾಸ್ಟ್‌ EMI ಆಫರ್‌ ಜೊತೆಗೆ, ಗ್ಯಾಲಕ್ಸಿ S22 ಅಲ್ಟ್ರಾ ಫೋನ್‌ ಖರೀದಿಸುವ ಗ್ರಾಹಕರು ಗ್ಯಾಲಕ್ಸಿ ವಾಚ್‌ 4 ಅನ್ನು ಕೇವಲ 2,999ರೂ.ಗಳಿಗೆ ಖರೀದಿಸಬಹುದು. ಅಲ್ಲದೆ ಗ್ಯಾಲಕ್ಸಿ S22+ ಅಥವಾ ಗ್ಯಾಲಕ್ಸಿ S22 ಅನ್ನು ಖರೀದಿಸುವವರು 2,999ರೂ.ಗಳಿಗೆ ಗ್ಯಾಲಕ್ಸಿ ಬಡ್ಸ್‌ 2 ಅನ್ನು ಖರೀದಿಸಬಹುದಾಗಿದೆ. ಇನ್ನು ಈ ನೋ ಕಾಸ್ಟ್‌ ಇಎಂಐ ಆಫರ್‌ ಎಷ್ಟು ದಿನಗಳವರೆಗೆ ಲಭ್ಯವಾಗಲಿದೆ ಅನ್ನೊದು ತಿಳಿದುಬಂದಿಲ್ಲ.

ಸ್ಯಾಮ್‌ಸಂಗ್‌

ಇನ್ನು ಸ್ಯಾಮ್‌ಸಂಗ್‌ ಕಂಪೆನಿ ಇತ್ತೀಚಿಗೆ ಸ್ಮಾರ್ಟ್‌ಫೋನ್ ಮಾರಾಟವು ಏಪ್ರಿಲ್ 2022ರಲ್ಲಿ 9% ರಷ್ಟು ಬೆಳೆದಿದೆ. ಇದು ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯ 24% ಅನ್ನು ವಶಪಡಿಸಿಕೊಂಡಿದೆ. ಇದು ಇತ್ತೀಚಿನ ದಿನಗಳಲ್ಲಿ ಸ್ಯಾಮ್‌ಸಂಗ್‌ ಕಂಪೆನಿಗೆ ಅತ್ಯಧಿಕ ಮಾಸಿಕ ಮಾರುಕಟ್ಟೆ ಪಾಲಾಗಿದೆ. ಇದೇ ಅವಧಿಯಲ್ಲಿ ಜಾಗತಿಕ ಸ್ಮಾರ್ಟ್‌ಫೋನ್ ಮಾರಾಟವು 8% ಕುಸಿದಿದ್ದರೂ ಕಂಪನಿಯ ಮಾರಾಟವು ಬೆಳವಣಿಗೆಯನ್ನು ಸಾಧಿಸಿದೆ. ಮಾರುಕಟ್ಟೆಯ ಕುಸಿತದ ನಂತರವೂ ಬೆಳೆವಣಿಗೆ ಸಾಧಿಸಿರುವ ಕೆಲವೇ ಬ್ರಾಂಡ್‌ಗಳಲ್ಲಿ ಸ್ಯಾಮ್‌ಸಂಗ್‌ ಕೂಡ ಒಂದೆನಿಸಿಕೊಂಡಿದೆ.

ಸ್ಯಾಮ್‌ಸಂಗ್‌

ಪ್ರಸ್ತುತ ಸ್ಯಾಮ್‌ಸಂಗ್‌ 2022 ರಲ್ಲಿ ಸತತ ಮೂರನೇ ತಿಂಗಳು ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಆಗಸ್ಟ್ 2020 ರಿಂದ ಮೊದಲ ಬಾರಿಗೆ ಏಪ್ರಿಲ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ನಂ.1 ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಇದಲ್ಲದೆ ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 2022 ರ ಎರಡನೇ ತ್ರೈ ಮಾಸಿಕದಲ್ಲಿ ನಂಬರ್‌ ಒನ್‌ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆಯಿದೆ.

ಸ್ಯಾಮ್‌ಸಂಗ್‌

ಇದಲ್ಲದೆ, ಸ್ಯಾಮ್‌ಸಂಗ್‌ ಕಂಪೆನಿ ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲಿರುವ ಫೋಲ್ಡಬಲ್‌ ಫೋನ್‌ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿಯೂ ಕುಡ ಪ್ರಾಬಲ್ಯ ಸಾಧಿಸುವುದ್ಕೆ ಈ ನಿರ್ಧಾರದ ಮಾಡಿದೆ. ಇನ್ನು ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಬೆಲೆ ಕಡಿಮೆ ಮಾಡುವುದಕ್ಕಾಗಿಯೇ ATL ಕಂಪೆನಿಯ ಬ್ಯಾಟರಿ ಬಳಸುವುದಕ್ಕೆ ಮುಂದಾಗಿದೆ. ಟೆಕ್‌ ವಲಯದ ವರದಿಯ ಪ್ರಕಾರ, ಸ್ಮಾರ್ಟ್‌ಫೋನ್‌ಗಳ ತಯಾರಿಕೆಯ ವೆಚ್ಚದಲ್ಲಿ ಬ್ಯಾಟರಿಗಳು ಸುಮಾರು 5% ಹೊಂದಿವೆ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ತನ್ನ ಗ್ಯಾಲಕ್ಸಿ ಫೋಲ್ಡಬಲ್‌ ಫೋನ್‌ಗಳಲ್ಲಿ ATL ಬ್ಯಾಟರಿ ಬಳಸಲಿದೆ.

ಫೋಲ್ಡಬಲ್‌

ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳ ಬೆಲೆ ಹೆಚ್ಚಳದಲ್ಲಿ ಬ್ಯಾಟರಿಗಳ ಪಾತ್ರ ಮಹತ್ವದ್ದಾಗಿದೆ. ಏಕೆಂದರೆ ಫೋಲ್ಡಬಲ್‌ ಫೋನ್‌ಗಳಿಗೆ ಹೆಚ್ಚಿನ ದಕ್ಷತೆಯ ಬ್ಯಾಟರಿಯ ಅವಶ್ಯಕತೆಯಿದೆ. ಇದಕ್ಕಾಗಿ ಪ್ರಮುಖ ಕಂಪೆನಿಯ ಬ್ಯಾಟರಿಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಇದರಿಂದ ಆ ಫೋನಿನ ಬೆಲೆ ಕೂಡ ದುಭಾರಿಯಾಗಿದೆ. ಸದ್ಯ ಇದೀಗ ಚೀನಾದ ಬ್ಯಾಟರಿ ತಯಾರಕರು ಗ್ಯಾಲಕ್ಸಿ A ಮತ್ತು M ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ ಬ್ಯಾಟರಿಗಳನ್ನು ಪೂರೈಸುತ್ತಿದ್ದಾರೆ. ಅದರಂತೆ ATL ಕಂಪೆನಿಯ ಬ್ಯಾಟರಿಗಳು ಕೂಡ ಸ್ಯಾಮ್‌ಸಂಗ್‌ ಫೋಲ್ಡಬಲ್‌ ಫೋನ್‌ ಸೇರಲಿವೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಕಂಪೆನಿ ಇಲ್ಲಿಯವರೆಗೆ ತನ್ನ ಗ್ಯಾಲಕ್ಸಿ Z ಫ್ಲಿಪ್ ಮತ್ತು ಗ್ಯಾಲಕ್ಸಿ Z ಫೋಲ್ಡ್ ಸರಣಿಯ ಫೋನ್‌ಗಳಲ್ಲಿ ಸ್ಯಾಮ್‌ಸಂಗ್‌ SDI ಬ್ಯಾಟರಿಯನ್ನು ಹೊಂದಿದೆ. ಸದ್ಯ ಸ್ಯಾಮ್‌ಸಂಗ್‌ ಕಂಪೆನಿಯ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು ದುಭಾರಿ ಬೆಲೆ ಹೊಂದಿವೆ. ಇವುಗಳು ಇನ್ನು ಕೂಡ ಮಧ್ಯಮ ವರ್ಗದ ಜನರ ಕೈಗೆಟಕುತ್ತಿಲ್ಲ. ಫೋಲ್ಡಬಲ್‌ ಫೋನ್‌ಗಳು ಕೂಡ ಮಧ್ಯಮ ವರ್ಗದ ಜನರ ಕೈಗೆಟುಕವ ಬೆಲೆಗೆ ದೊರಕುವಂತೆ ಮಾಡಲು ATL ಬ್ಯಾಟರಿ ಬಳಸಲು ಸ್ಯಾಮ್‌ಸಂಗ್‌ ಮುಂದಾಗಿದೆ.

ಸ್ಯಾಮ್‌ಸಂಗ್‌

ಇದರೊಂದಿಗೆ ಸ್ಯಾಮ್‌ಸಂಗ್‌ ಕಂಪೆನಿ ಮುಂದಿನ ವರ್ಷದಿಂದ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಮಾಡುವುದಿಲ್ಲ ಎಂದು ವರದಿಯಾಗಿದೆ. ಈ ವರ್ಷಾಂತ್ಯದ ವೇಳೆಗೆ ತನ್ನ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳ ಸ್ಟಾಕ್‌ ಅನ್ನು ಸೇಲ್‌ ಮಾಡಲಿದೆ. ಬಜೆಟ್‌ ಸ್ಮಾರ್ಟ್‌ಫೋನ್‌ಗಳ ಕೊನೆಯ ಬ್ಯಾಚ್ ಅನ್ನು ಸ್ಯಾಮ್‌ಸಂಗ್‌ನ ಒಪ್ಪಂದದ ಪಾಲುದಾರ ಡಿಕ್ಸನ್ ಈ ಡಿಸೆಂಬರ್‌ನಲ್ಲಿ ತಯಾರಿಸುತ್ತಾರೆ. ನಂತರ ಸ್ಯಾಮ್‌ಸಂಗ್‌ ಕಂಪನಿಯು ಹೆಚ್ಚಾಗಿ 15,000ರೂ. ಕ್ಕಿಂತ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ಪ್ರಾರಂಭಿಸಲು ಗಮನಹರಿಸುತ್ತದೆ ಎಂದು ವರದಿಯಾಗಿದೆ.

Best Mobiles in India

English summary
Samsung has announced 24 Months No Cost EMI offer on flagship Galaxy smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X