ಸ್ಯಾಮ್‌ಸಂಗ್‌ನಿಂದ ಹೊಸ ಕ್ಯಾಮೆರಾ ಅಸಿಸ್ಟೆಂಟ್‌ ಅಪ್ಲಿಕೇಶನ್‌ ಬಿಡುಗಡೆ! ವಿಶೇಷತೆ ಏನು?

|

ಸ್ಯಾಮ್‌ಸಂಗ್‌ ಕಂಪೆನಿ ತನ್ನ ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗುರುತಿಸಿಕೊಂಡಿದೆ. ತನ್ನ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ವಿಶೇಷ ಸೇವೆಗಳನ್ನು ಕೂಡ ಪರಿಚಯಿಸುತ್ತಾ ಬಂದಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಿಗಾಗಿ ಹೊಸ ಕ್ಯಾಮೆರಾ ಅಸಿಸ್ಟೆಂಟ್‌ ಅಪ್ಲಿಕೇಶನ್‌ ಅನ್ನು ಬಿಡುಗಡೆ ಮಾಡಿದೆ. ಇದು ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಕ್ಯಾಮೆರಾ ಬಳಕೆಯಲ್ಲಿ ಹೊಸ ಅನುಭವ ನೀಡಲಿದೆ.

ಸ್ಯಾಮ್‌ಸಂಗ್

ಹೌದು, ಸ್ಯಾಮ್‌ಸಂಗ್ ಕಂಪೆನಿ ತನ್ನ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಿಗಾಗಿ ಹೊಸ ಕ್ಯಾಮೆರಾ ಅಸಿಸ್ಟೆಂಟ್‌ ಅಪ್ಲಿಕೇಶನ್ ಪರಿಚಯಿಸಿದೆ. ಇದು ಬಳಕೆದಾರರ ಅನುಭವವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಅಂದರೆ ವೈಯಕ್ತೀಕರಣ ಅಪ್ಲಿಕೇಶನ್‌ಗಳ ಕಂಪನಿಯ ಗುಡ್ ಲಾಕ್ ಸೂಟ್‌ನ ಒಂದು ಭಾಗವಾಗಿದೆ. ಇದರಿಂದ ನೀವು ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ನಲ್ಲಿ ಕ್ಯಾಮೆರಾವನ್ನು ಬಳಸುವಾಗ ಅಪ್ಡೇಟೆಡ್‌ ಫೀಚರ್ಸ್‌ಗಳು ಲಭ್ಯವಾಗಲಿವೆ. ಹಾಗಾದ್ರೆ ಈ ಹೊಸ ಕ್ಯಾಮೆರಾ ಅಸಿಸ್ಟೆಂಟ್‌ ಅಪ್ಲಿಕೇಶನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಸಿಸ್ಟೆಂಟ್‌

ಕ್ಯಾಮೆರಾ ಅಸಿಸ್ಟೆಂಟ್‌ ಅಪ್ಲಿಕೇಶನ್‌ ಬಳಕೆದಾರರಿಗೆ ಸುಧಾರಿತ ಫೀಚರ್ಸ್‌ಗಳನ್ನು ನೀಡಲಿದೆ. ಇದು ಆಟೋ ಮೋಡ್‌ ಮೂಲಕ ಬಳಕೆದಾರರ ಗ್ರಾಹಕೀಕರಣವನ್ನು ಸುಧಾರಿಸಲು ಸಹಾಯ ಮಾಡಲಿದೆ. ಪ್ರಸ್ತುತ ಈ ಅಪ್ಲಿಕೇಶನ್ ಭಾರತ, ದಕ್ಷಿಣ ಕೊರಿಯಾ ಮತ್ತು ಇತರ ಕೆಲವು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಇದನ್ನು ಗ್ಯಾಲಕ್ಸಿ ಸ್ಟೋರ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ, ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ಆಟೋಮ್ಯಾಟಿಕ್‌ HDR ಅನ್ನು ನಿಷ್ಕ್ರಿಯಗೊಳಿಸುವ ಅಥವಾ ಸಕ್ರಿಯಗೊಳಿಸುವುದಕ್ಕೆ ಅವಕಾಶ ನೀಡಲಿದೆ.

ಅಪ್ಲಿಕೇಶನ್‌

ಇದಲ್ಲದೆ ಈ ಅಪ್ಲಿಕೇಶನ್‌ ಗ್ಯಾಲಕ್ಸಿ ಫೋನ್‌ ಬಳಕೆದಾರರು ಮೃದುವಾದ ಫೋಟೋ ವಿನ್ಯಾಸವನ್ನು ನೋಡುವುದಕ್ಕೆ ಸಾಧ್ಯವಾಗಲಿದೆ. ಅಲ್ಲದೆ ನೀವು ಫೋಟೋ ಶೂಟ್‌ ಮಾಡುವ ಕಂಟೆಂಟ್‌ ದೂರವಿದ್ದರೆ ಸ್ವಯಂಚಾಲಿತ ಲೆನ್ಸ್ ಸ್ವಿಚಿಂಗ್ ಅನ್ನು ಸಹ ನಿರೀಕ್ಷಿಸಬಹುದು. ಇದಲ್ಲದೆ, ಹೊಸ ಕ್ಯಾಮರಾ ಅಸಿಸ್ಟೆಂಟ್‌ ಅಪ್ಲಿಕೇಶನ್ ಫೋಟೋ ಮೋಡ್ ಅನ್ನು ಬಳಸುವಾಗಲೂ ವೀಡಿಯೊಗಳನ್ನು ಶೂಟ್ ಮಾಡಲು ನಿಮಗೆ ಅನುಮತಿಸಲಿದೆ.

ಕ್ಯಾಮೆರಾ

ಇನ್ನು ಕ್ಯಾಮೆರಾ ಅಸಿಸ್ಟಂಟ್‌ ಮೂಲಕ ವೀಡಿಯೊಗಳನ್ನು ರೆಕಾರ್ಡಿಂಗ್ ಪ್ರಾರಂಭಿಸಲು ಬಳಕೆದಾರರು ಶಟರ್ ಬಟನ್ ಅನ್ನು ಬಳಸಬಹುದಾಗಿದೆ. ಇನ್ನು ಈ ಅಪ್ಲಿಕೇಶನ್‌ನಲ್ಲಿ ಕ್ವಿಕ್‌ ಶಾಟ್‌ ಫೀಚರ್ಸ್‌ ನೀಡಿರುವುದು ಇದರ ಪ್ರಮುಖ ಫೀಚರ್ಸ್‌ ಆಗಿದೆ. ಇದರಿಂದ ಸ್ಟಿಲ್‌ ಇಮೇಜ್‌ಗಳಲ್ಲಿ ರೆಡ್ಯೂಶ್‌ ಮೋಷನ್‌ ಬ್ಲರ್‌ ಅನ್ನು ಕಡಿಮೆ ಮಾಡಲು ನಿಮಗೆ ಅವಕಾಶ ನೀಡಲಿದೆ. ಇದಲ್ಲದೆ ಈ ಅಪ್ಲಿಕೇಶನ್‌ ಬಳಸಿ ನೀವು ಸೆರಿ ಹಿಡಿದ ಫೋಟೋ ಗುಣಮಟ್ಟವನ್ನು ಸ್ವಲ್ಪ ಕಡಿಮೆ ಮಾಡಬಹುದು ಎಂದು ಸ್ಯಾಮ್‌ಸಂಗ್‌ ಕಂಪೆನಿ ಹೇಳಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಕ್ಯಾಮೆರಾ ಅಸಿಸ್ಟೆಂಟ್‌ ಅಪ್ಲಿಕೇಶನ್‌ ಮೂಲಕ ನೀವು ಸಾಕುಪ್ರಾಣಿಗಳು ಚಲಿಸುವ ಫೋಟೊವನ್ನು ಉತ್ತಮವಾಗಿ ಸೆರೆಹಿಡಿಯಲು ಸಹಾಯ ಮಾಡಲಿದೆ. ಇದರಿಂದ ನೀವು ಪ್ರಾಣಿಗಳು ವೇಗವಾಗಿ ಚಲಿಸುವ ವಿಷಯಗಳನ್ನು ಉತ್ತಮವಾಗಿ ಸೆರೆಹಿಡಿಯಬಹುದಾಗಿದೆ. ಇದಕ್ಕಾಗಿ ನೀವು ಅಪ್ಲಿಕೇಶನ್‌ನಲ್ಲಿ ಯಾವುದೇ ಹೊಸ ಸೆಟ್‌ಅಪ್‌ ಅನ್ನು ಮಾಡಬೇಕಾದ ಅವಶ್ಯಕತೆಯಿಲ್ಲ ಎಂದು ಹೇಳಲಾಗಿದೆ. ಇದರಿಂದ ನೀವು ಅಪ್ಲಿಕೇಶನ್‌ ಮೂಲಕ ಫೋಟೋಗಳನ್ನು ನಿಮಗೆ ಬೇಕಾದಂತೆ ಸೆರೆಹಿಡಿಯಬಹುದಾಗಿದೆ.

ಅಪ್ಲಿಕೇಶನ್‌

ಇನ್ನು ಈ ಅಪ್ಲಿಕೇಶನ್‌ ಮೂಲತಃ ಹಲವಾರು ಹೊಸ ಆಯ್ಕೆಗಳನ್ನು ಗ್ಯಾಲಕ್ಸಿ ಫೋನ್‌ನ ಕ್ಯಾಮೆರಾ ಸೆಟ್ಟಿಂಗ್‌ಗಳಲ್ಲಿ ಸಕ್ರಿಯಗೊಳಿಸುತ್ತದೆ. ಅಲ್ಲದೆ ಬಳಕೆದಾರರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಟಾಗಲ್ ಮಾಡಬಹುದು. ಅಂದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ ಬಳಸುವ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಫೋಟೋಗಳ ಗುಣಮಟ್ಟ ಹಾಗೂ ಅತ್ಯುತ್ತಮ ಫೋಟೋಗಳನ್ನು ಸೆರೆಹಿಡಿಯುವುದಕ್ಕೆ ಸಹಾಯ ಮಾಡಲಿದೆ. ಸ್ಮಾರ್ಟ್‌ಫೋನ್‌ಗಳ ಮೂಲಕ ಅತ್ಯುತ್ತಮ ಫೋಟೋಗಳನ್ನು ಸೆರೆಹಿಡಿಯುವುದಕ್ಕಾಗಿ ಈ ಅಪ್ಲಿಕೇಶನ್‌ ಅನ್ನು ವಿನ್ಯಾಸಗೊಳಿಸಲಾಗಿದೆ.

Best Mobiles in India

English summary
Samsung new Camera Assistant app launched: Details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X