ವಿಶ್ವದ ಅತಿದೊಡ್ಡ ಮೊಬೈಲ್ ತಯಾರಿಕಾ ಘಟಕ ಏನೆಲ್ಲಾ ವಿಶೇಷತೆ ಹೊಂದಿದೆ ಗೊತ್ತಾ..!

By Avinash
|

ವಿಶ್ವದಲ್ಲಿಯೇ ಅತಿಹೆಚ್ಚು ಮೊಬೈಲ್ ಬಳಸುವವರ ಸಂಖ್ಯೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಮೊಬೈಲ್ ಅಥವಾ ಗ್ಯಾಜೆಟ್ ತಯಾರಕರಿಗೆ ಭಾರತವೂ ಬಹುದೊಡ್ಡ ಮಾರುಕಟ್ಟೆ ಕೂಡ ಆಗಿದೆ. ಆದ್ದರಿಂದ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಮತ್ತು ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಲೆ ಇರುತ್ತದೆ. ಹೀಗ್ಯಾಕಪ್ಪ ಈ ಮಾತುಗಳು ಎಂದರೆ, ಇದೆ ಜಗತ್ತಿನಲ್ಲಿಯೇ ಅತಿದೊಡ್ಡ್ ಮೊಬೈಲ್ ಕಾರ್ಖಾನೆ ಭಾರತದಲ್ಲಿ ಸ್ಥಾಪನೆಯಾಗಿದೆ.

ವಿಶ್ವದ ಅತಿದೊಡ್ಡ ಮೊಬೈಲ್ ತಯಾರಿಕಾ ಘಟಕ ಏನೆಲ್ಲಾ ವಿಶೇಷತೆ ಹೊಂದಿದೆ ಗೊತ್ತಾ..!

ಹೌದು, ರಾಷ್ಟ್ರ ರಾಜಧಾನಿ ದೆಹಲಿಯಿಂದ ಅಣತಿ ದೂರದಲ್ಲಿರುವ ಕೈಗಾರಿಕಾ ಪ್ರದೇಶ ನೋಯ್ಡಾದ ಸೆಕ್ಟರ್ 81ರಲ್ಲಿ ತಲೆಎತ್ತಿರುವ ಸ್ಯಾಮ್‌ಸಂಗ್‌ನ ಮೊಬೈಲ್ ತಯಾರಿಕಾ ಘಟಕ ವಿಶ್ವದಲ್ಲಿಯೇ ಅತಿ ದೊಡ್ಡ ತಯಾರಿಕಾ ಘಟಕ ಎನಿಸಿಕೊಂಡಿದೆ. ಸೋಮವಾರ ಸಂಜೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷ ಮೋನ್‌ ಜೇ ನೋಯ್ಡಾದಲ್ಲಿನ ತಯಾರಿಕಾ ಘಟಕಕ್ಕೆ ಜಂಟಿಯಾಗಿ ಚಾಲನೆ ನೀಡಿದರು. ಈ ಸ್ಯಾಮ್‌ಸಂಗ್ ಘಟಕ ಹಲವು ಅಂಶಗಳಿಂದ ಜಗತ್ತನ್ನು ಸೆಳೆಯುತ್ತಿದೆ.

ಮೇಕ್‌ ಇನ್‌ ಇಂಡಿಯಾಕ್ಕೆ ವೇಗ

ಮೇಕ್‌ ಇನ್‌ ಇಂಡಿಯಾಕ್ಕೆ ವೇಗ

ಸ್ಯಾಮ್‌ಸಂಗ್‌ನ ಈ ಮೊಬೈಲ್ ಘಟಕ ಜನರಿಗೆ ಶಕ್ತಿ ತುಂಬಿರುವುದಷ್ಟೇ ಅಲ್ಲ, ಮೇಕ್‌ ಇನ್ ಇಂಡಿಯಾ ಯೋಜನೆಗೆ ವೇಗ ದಕ್ಕಿಸಿಕೊಟ್ಟಿದ್ದು, ಉತ್ತರ ಪ್ರದೇಶ ಹಾಗೂ ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.

ನೋಯ್ಡಾ ಮೊಬೈಲ್ ತಯಾರಿಕಾ ಘಟಕ

ನೋಯ್ಡಾ ಮೊಬೈಲ್ ತಯಾರಿಕಾ ಘಟಕ

ನೋಯ್ಡಾದ ಸೆಕ್ಟರ್ 81ರಲ್ಲಿ ಸ್ಥಾಪನೆಯಾಗಿರುವ ಸ್ಯಾಮ್‌ಸಂಗ್ ಮೊಬೈಲ್ ತಯಾರಿಕಾ ಘಟಕ 35 ಎಕರೆ ಭೂಮಿ ವಿಸ್ತೀರ್ಣ ಹೊಂದಿದೆ. 1995 ರಲ್ಲಿಯೇ ನೋಯ್ಡಾದಲ್ಲಿ ಸ್ಯಾಮ್‌ಸಂಗ್ ತನ್ನ ತಯಾರಿಕೆ ಘಟಕವನ್ನು ಪ್ರಾರಂಭಿಸಿತ್ತು. 2017ರ ಜೂನ್‌ನಲ್ಲಿ ಈ ಘಟಕವನ್ನು ವಿಸ್ತರಣೆ ಮಾಡಲು ಸ್ಯಾಮ್‌ಸಂಗ್ ನಿರ್ಧರಿಸಿ, ಸುಮಾರು 4,915 ಕೋಟಿ ರೂ. ಬಂಡವಾಳ ಹೂಡಿ ಉತ್ಪಾದನೆಯನ್ನು ದ್ವಿಗುಣಗೊಳಿಸುವತ್ತ ಹೆಜ್ಜೆ ಹಾಕಿತು.

ಉತ್ಪಾದನೆ ದ್ವಿಗುಣ

ಉತ್ಪಾದನೆ ದ್ವಿಗುಣ

ಸ್ಯಾಮ್‌ಸಂಗ್‌ನ ಉತ್ಪಾದನಾ ಘಟಕದ ಉತ್ಪಾದನೆ ಪ್ರಮಾಣ ಇನ್ಮುಂದೆ ದ್ವಿಗುಣಗೊಳ್ಳಲಿದೆ. ಭಾರತದಲ್ಲಿ 67 ಮಿಲಿಯನ್ ಇದ್ದ ಮೊಬೈಲ್ ತನ್ನ ಉತ್ಪಾದನೆಯನ್ನು 120 ಮಿಲಿಯನ್‌ಗೆ ದ್ವಿಗುಣಗೊಳಿಸುತ್ತಿದೆ. ಇಲ್ಲಿ ಉತ್ಪಾದನೆಯಾಗುವ ಶೇ. 70ರಷ್ಟು ಮೊಬೈಲ್‌ಗಳು ದೇಶಿಯ ಮಾರುಕಟ್ಟೆಯಲ್ಲಿಯೇ ಮಾರಾಟವಾಗಲಿವೆ. ಇಲ್ಲಿ ಕೇವಲ ಮೊಬೈಲ್ ಅಷ್ಟೇ ಅಲ್ಲದೇ ಸ್ಯಾಮ್‌ಸಂಗ್ ಕಂಪನಿಯ ಇತರೆ ಎಲೆಕ್ಟ್ರಾನಿಕ್ ವಸ್ತುಗಳಾದ ಟಿವಿ, ಫ್ರಿಡ್ಜ್ ಮತ್ತು ಏರ್ ಕಂಡೀಷನರ್‌ಗಳಂತಹ ಬೇರೆ ಉತ್ಪನ್ನಗಳು ಸಹ ನಿರ್ಮಾಣವಾಗುತ್ತವೆ. ಅವುಗಳ ಉತ್ಪಾದನೆ ಪ್ರಮಾಣದಲ್ಲಿಯೂ ಏರಿಕೆ ಕಾಣಲಿದೆ.

70 ಸಾವಿರ ಉದ್ಯೋಗಾವಕಾಶ

70 ಸಾವಿರ ಉದ್ಯೋಗಾವಕಾಶ

ಸ್ಯಾಮ್‌ಸಂಗ್ ನೋಯ್ಡಾದಲ್ಲಿ ಸ್ಥಾಪಿಸಿರುವ ಬೃಹತ್ ಮೊಬೈಲ್ ತಯಾರಿಕಾ ಘಟಕದಿಂದ 70 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಉದ್ಯೋಗಾಂಕ್ಷಿಗಳಿಗೆ ಬಂಪರ್ ಆಫರ್‌ಗಳು ಬರುವ ಸಾಧ್ಯತೆ ಇದೆ.

ಸ್ಯಾಮ್‌ಸಂಗ್‌ನ ಭಾರತದ ಹಾದಿ

ಸ್ಯಾಮ್‌ಸಂಗ್‌ನ ಭಾರತದ ಹಾದಿ

1995ರಲ್ಲಿ ನೋಯ್ಡಾದಲ್ಲಿ ಸ್ಯಾಮ್‌ಸಂಗ್ ಘಟಕ ಸ್ಥಾಪಿಸಲಾಯಿತು. ಈ ಘಟಕದಲ್ಲಿ 1997ರಲ್ಲಿ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆ ಆರಂಭವಾಯಿತು. ಮೊದಲ ಟೆಲಿವಿಷನ್ 2003ರಲ್ಲಿ ಈ ಘಟಕದಿಂದ ಭಾರತದ ಮಾರುಕಟ್ಟೆಗೆ ಬಂತು. 2005ರ ಸಮಯಕ್ಕೆ ಸ್ಯಾಮ್‌ಸಂಗ್ ಭಾರತದಲ್ಲಿ ಟಿವಿ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿತು. 2007ರಲ್ಲಿ ನೋಯ್ಡಾ ಕಾರ್ಖಾನೆಯಲ್ಲಿ ಮೊಬೈಲ್‌ ಫೋನ್ ಉತ್ಪಾದನೆಯನ್ನು ಆರಂಭಿಸಿ, 2012ರ ಹೊತ್ತಿಗೆ ಭಾರತದ ಮೊಬೈಲ್‌ ಮಾರುಕಟ್ಟೆಯ ಮೇಲೆ ಸ್ಯಾಮ್‌ಸಂಗ್ ಹಿಡಿತ ಸಾಧಿಸಿತು.

ಕೇವಲ ಶೇ.10ರಷ್ಟು ಉತ್ಪಾನೆ

ಕೇವಲ ಶೇ.10ರಷ್ಟು ಉತ್ಪಾನೆ

ಸ್ಯಾಮ್‌ಸಂಗ್ ಭಾರತದಲ್ಲಿರುವ ತನ್ನ ತಯಾರಿಕಾ ಘಟಕಗಳಲ್ಲಿ ತನ್ನ ಉತ್ಪಾದನೆಯ ಶೇ.10ರಷ್ಟು ಉತ್ಪಾದನೆ ಮಾತ್ರ ಮಾಡುತ್ತಿದ್ದು, ಈ ಪ್ರಮಾಣವನ್ನು ಮುಂದಿನ 3 ವರ್ಷಗಳ ಅವಧಿಯಲ್ಲಿ ಶೇ.50ಕ್ಕೆ ಏರಿಕೆ ಮಾಡಲು ಸ್ಯಾಮ್‌ಸಂಗ್ ನಿರ್ಧರಿಸಿದೆ. 2016-17ರ ಆರ್ಥಿಕ ವರ್ಷದಲ್ಲಿ ಸ್ಯಾಮ್‌ಸಂಗ್‌ ಮೊಬೈಲ್ ವಹಿವಾಟು ಭಾರತದಲ್ಲಿ ಶೇ. 27ರಷ್ಟು ಹೆಚ್ಚಾಗಿದ್ದು, ಭಾರತದಲ್ಲಿನ ವ್ಯವಹಾರ 50 ಸಾವಿರ ಕೋಟಿ ರೂ. ಇದರಲ್ಲಿ ಮೊಬೈಲ್ ಕ್ಷೇತ್ರದ ಪಾಲೇ 34 ಸಾವಿರ ಕೋಟಿ ರೂ.

4 ವರ್ಷದಲ್ಲಿ 120 ಕಾರ್ಖಾನೆ

4 ವರ್ಷದಲ್ಲಿ 120 ಕಾರ್ಖಾನೆ

ಕಳೆದ ನಾಲ್ಕು ವರ್ಷದಲ್ಲಿ ದೇಶದಲ್ಲಿ ಸುಮಾರು 120 ಕಾರ್ಖಾನೆಗಳು ಸ್ಥಾಪನೆಯಾಗಿದ್ದು, 4 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿವೆ. ಡಿಜಿಟಲ್ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಅಭಿವೃದ್ಧಿಯಾಗಿದೆ. ದೇಶದಲ್ಲಿ ಸುಮಾರು 40 ಕೋಟಿ ಸ್ಮಾರ್ಟ್‌ಪೋನ್ ಬಳಕೆದಾರರು ಹಾಗೂ 32 ಕೋಟಿ ಬ್ರಾಡ್‌ಬ್ಯಾಂಡ್ ಗ್ರಾಹಕರು ಇದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತದಲ್ಲಿಯೇ ಏಕೆ?

ಭಾರತದಲ್ಲಿಯೇ ಏಕೆ?

ಸ್ಯಾಮ್‌ಸಂಗ್ ತನ್ನ ತಯಾರಿಕಾ ಘಟಕವನ್ನು ಭಾರತದಲ್ಲಿ ವಿಸ್ತರಿಸುತ್ತಿರುವುದಕ್ಕೆ ಹಲವು ಕಾರಣಗಳಿವೆ. ದಿನದಿಂದ ದಿನಕ್ಕೆ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಿದೆ. ಚೀನಾದ ನಂತರ ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆ ಭಾರತವೇ ಆಗಿರುವುದರಿಂದ ಸ್ಯಾಮ್‌ಸಂಗ್ ಭಾರತವನ್ನು ಆಯ್ದುಕೊಂಡಿದೆ. ಮುಂದಿನ ದಿನಗಳಲ್ಲಿ ಮೊಬೈಲ್ ಉತ್ಪಾದನೆಯಲ್ಲಿ ಅಮೇರಿಕವನ್ನು ಮೀರಿ ಎರಡನೇ ಸ್ಥಾನಕ್ಕೇರುವ ಅವಕಾಶ ಭಾರತ ಹೊಂದಿದೆ.

ಯುವ ರಾಷ್ಟ್ರ ಭಾರತ

ಯುವ ರಾಷ್ಟ್ರ ಭಾರತ

ಸ್ಯಾಮ್‌ಸಂಗ್‌ನಂತಹ ಮೊಬೈಲ್ ತಯಾರಿಕಾ ಕಂಪನಿಗಳಿಗೆ ಭಾರತದಲ್ಲಿ ಉತ್ಪಾದನಾ ಸಾಮರ್ಥ್ಯ‌ದ ವಿಸ್ತರಣೆಗೆ ಮಾರುಕಟ್ಟೆ ಹಾಗೂ ಭವಿಷ್ಯದ ಅವಕಾಶಗಳು ಪ್ರೇರಣೆಯಾಗಿದ್ದು, ಭಾರತದ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಯುವಜನತೆಯೇ ಹೆಚ್ಚಿರುವುದರಿಂದ ಸ್ಯಾಮ್‌ಸಂಗ್‌ಗೆ ಭಾರತ ಬಹುದೊಡ್ಡ ಆಯ್ಕೆಯಾಯಿತು. 2022ರ ವೇಳೆಗೆ ಮೊಬೈಲ್ ಬಳಕೆದಾರರ ಪ್ರಮಾಣ 44 ಕೋಟಿ ದಾಟುವ ಸಾಧ್ಯತೆ ಇರುವುದರಿಂದ ಭಾರತವನ್ನು ಆಯ್ಕೆ ಮಾಡಿಕೊಂಡಿದೆ.

ಸರಳ ವಿದೇಶಿ ನೇರ ಬಂಡವಾಳ

ಸರಳ ವಿದೇಶಿ ನೇರ ಬಂಡವಾಳ

ಇತ್ತೀಚಿನ ವರ್ಷಗಳಲ್ಲಿ ಮೊಬೈಲ್‌ ಉತ್ಪಾದನಾ ವಲಯಕ್ಕೆ ಎಫ್‌ಡಿಐ ಹೂಡಿಕೆ ನಿಯಮಗಳನ್ನು ಭಾರತ ಸಡಿಲಗೊಳಿಸಿದೆ. ಈ ನಿಯಮಗಳಿಂದ ಕಂಪನಿಗಳಿಗೆ ಇ-ಕಾಮರ್ಸ್‌, ಸಗಟು ಮತ್ತು ರಿಟೇಲ್‌ ವಿಭಾಗದಲ್ಲಿ ಸರ್ಕಾರದ ಅನುಮತಿ ಇಲ್ಲದೆ ಸುಲಭವಾಗಿ ಸ್ಮಾರ್ಟ್‌ಫೋನ್‌ ಮಾರಾಟ ಮಾಡಬಹುದಿತ್ತು. ಅದಲ್ಲದೇ, ಇಷ್ಟು ವರ್ಷ ಭಾರತಕ್ಕೆ ಶೇ.90ರಷ್ಟು ಮೊಬೈಲ್‌ ಬಿಡಿ ಭಾಗಗಳು ಆಮದಾಗಿ, ಇಲ್ಲಿ ಜೋಡಣೆಯಾಗುತ್ತಿತ್ತು. ಆದ್ದರಿಂದ ಇಲ್ಲಿ ಉತ್ಪಾದನೆಗೆ ಹಿನ್ನಡೆಯಾಗಿತ್ತು. ಆದ್ದರಿಂದ ಮೊಬೈಲ್‌ ಬಿಡಿ ಭಾಗಗಳ ತೆರಿಗೆ ಪದ್ಧತಿಯಲ್ಲಿ ಸರ್ಕಾರ ಸುಧಾರಣೆ ತಂದಿತ್ತು.ಈ ಕಾರಣಕ್ಕೂ ಸ್ಯಾಮ್‌ಸಂಗ್ ಭಾರತವನ್ನು ತನ್ನ ತಯಾರಿಕಾ ಘಟಕದ ವಿಸ್ತರಣೆಗೆ ಆಯ್ದುಕೊಂಡಿತು.

Most Read Articles
Best Mobiles in India

English summary
Samsung Noida factory can manufacture 120 million of mobile phones. To know more this visit kannada.izbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more