ಬೆಂಗಳೂರಿನ ಸಿನಿ ಪ್ರೇಮಿಗಳಿಗೆ ಸರ್‌ಪ್ರೈಸ್‌ ಕೊಟ್ಟ ಸ್ಯಾಮ್‌ಸಂಗ್!

|

ಟೆಕ್ ದಿಗ್ಗಜ ಸ್ಯಾಮ್‌ಸಂಗ್ ಕಂಪನಿಯ ಹೊಸ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಗ್ರಾಹಕರಿಗೆ ಭರವಸೆ ಇದ್ದು, ಕಳೆದ ವರ್ಷ Onyx ಸಿನಿಮಾ LED ಸ್ಕ್ರೀನ್ ಅನ್ನು ಪರಿಚಯಿಸುವುದರ ಮೂಲಕ ಹೊಸ ಹೆಜ್ಜೆಯನ್ನು ಕಂಪನಿ ಇಟ್ಟಿತ್ತು. ಆ ಮೂಲಕ ದೇಶದಲ್ಲಿ ತನ್ನ ಸ್ಥಾನವನ್ನು ವಿಸ್ತರಿಸಿಕೊಂಡಿದ್ದು, ಮತ್ತೆ ಅದೇ ನಿಟ್ಟಿನಲ್ಲಿ ಮುಂದುವರೆದಿರುವ ಕಂಪನಿಯು ಇದೀಗ ದೇಶಿಯ ಸಿನಿಮಾ ಅಭಿಮಾನಿಗಳಿಗೆ ಮತ್ತೊಂದು ಬಿಗ್ ಸರ್‌ಪ್ರೈಸ್‌ ನೀಡಿದೆ.

 ಬೆಂಗಳೂರಿನ ಸಿನಿ ಪ್ರೇಮಿಗಳಿಗೆ ಸರ್‌ಪ್ರೈಸ್‌ ಕೊಟ್ಟ ಸ್ಯಾಮ್‌ಸಂಗ್!

ಹೌದು, ಸ್ಯಾಮ್‌ಸಂಗ್ ಕಂಪನಿಯು ವಿಶ್ವದಲ್ಲಿಯೇ ದೊಡ್ಡದಾದ Onyx ಸಿನಿಮಾ ಬಿಗ್ LED ಸ್ಕ್ರೀನ್ ಅನ್ನು ಬೆಂಗಳೂರಿನ ಸ್ವಾಗತ್ ಸಿನಿಮಾಸ್‌ನಲ್ಲಿ ಏಪ್ರಿಲ್ 25(ನೆನ್ನೆ) ಪರಿಚಯಿಸಿದ್ದು, ಸಂಗೀತ ಮಾಂತ್ರಿಕ 'ಎ ಆರ್ ರೆಹಮಾನ್' ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಜೆಬಿಎಲ್ ಹರ್ಮನ್ ಸಂಸ್ಥೆಯ ಜೊತೆಗೆ ಜಂಟಿಯಾಗಿ ಕಂಪನಿಯು ಈ ಬಿಗ್ LED ಸಿನಿಮಾ ಸ್ಕ್ರೀನ್ ಆರಂಭಿಸಲಾಗಿದ್ದು, ಸ್ಕ್ರೀನ್ ಒಟ್ಟು 14 ಮೀಟರ್ ಉದ್ದವನ್ನು ಹೊಂದಿದೆ.

 ಬೆಂಗಳೂರಿನ ಸಿನಿ ಪ್ರೇಮಿಗಳಿಗೆ ಸರ್‌ಪ್ರೈಸ್‌ ಕೊಟ್ಟ ಸ್ಯಾಮ್‌ಸಂಗ್!

Onyx ಸಿನಿಮಾ LED ಸ್ಕ್ರೀನ್‌ನಲ್ಲಿ ಸಿನಿಮಾ ವೀಕ್ಷಿಸುವವರಿಗೆ ದೊಡ್ಡದಾದ ಸ್ಕ್ರೀನ್‌ನಲ್ಲಿ ಅತ್ಯಂತ ಗುಣಮಟ್ಟದಲ್ಲಿ ದೃಶ್ಯಗಳು ಕಾಣುವಂತ ಅನುಭವ ದೊರೆಯಬೇಕು. ಸಿನಿಮಾ ಸ್ಕ್ರೀನ್ ಹೆಚ್ಚು ಪ್ರಖರವಾಗಿವಾಗಿರಬೇಕು ಎನ್ನುವುದು Onyx ಸಿನಿಮಾ ಬಿಗ್ LED ಸ್ಕ್ರೀನ್ ಉದ್ದೇಶವಾಗಿದೆ. ಈಗಾಗಲೇ ಸ್ಯಾಮ್‌ಸಂಗ್ ಕಂಪನಿಯು ಚೀನಾ ಮತ್ತು ಮಲೇಷಿಯಾದಲ್ಲಿ Onyx ಸಿನಿಮಾ LED ಸ್ಕ್ರೀನ್‌ ಇನ್‌ಸ್ಟಾಲ್ ಮಾಡಿದೆ.

 ಬೆಂಗಳೂರಿನ ಸಿನಿ ಪ್ರೇಮಿಗಳಿಗೆ ಸರ್‌ಪ್ರೈಸ್‌ ಕೊಟ್ಟ ಸ್ಯಾಮ್‌ಸಂಗ್!

ಸ್ಯಾಮ್‌ಸಂಗ್‌ ಕಂಪನಿಯು ಸಿನಿಮಾದ ವೀಕ್ಷಣೆಯ ರೋಚಕತೆ ಹೆಚ್ಚಿಸಲು Onyx ಸಿನಿಮಾ ಬಿಗ್ LED ಸ್ಕ್ರೀನ್ ಅನ್ನು ಪರಿಚಯಿಸಿದ್ದು, ಇದರೊಂದಿಗೆ ಹರ್ಮನ್ ಸಂಸ್ಥೆಯ ಜೆಬಿಎಲ್ ಸೌಂಡ್ ಸಹ ಇರುವುದರಿಂದ ಸಿನಿಮಾ ವೀಕ್ಷಿಸುವ ಅನುಭವದಲ್ಲಿ ಹೊಸ ಕ್ರಾಂತಿ ಮೂಡಿಸಲಿದೆ. ಬೆಂಗಳೂರು ನಗರದ ಸಿನಿಮಾ ಪ್ರೇಮಿಗಳಿಗೆ ಹೊಸ ವೀಕ್ಷಣೆ ಅನುಭವ ದೊರೆಯಲಿದ್ದು, ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಇದು ಹೊಸ ಮೈಲುಗಲ್ಲು ಎಂದು ಕಂಪನಿಯ ಗ್ರಾಹಕ ಉತ್ಪನ್ನಗಳು ಉಪಾಧ್ಯಕ್ಷ ಪುನೀತ್ ಸೇತಿ ತಿಳಿಸಿದ್ದಾರೆ.

ಕಂಪನಿಯು ಜೆಬಿಎಲ್ ಸಂಸ್ಥೆಯ ಜೊತೆಗೆ ಜಂಟಿಯಾಗಿದ್ದು, Onyx ಸಿನಿಮಾ LED ಸ್ಕ್ರೀನ್‌ನ ದೃಶ್ಯ ವೈಭವದ ಜೊತೆಗೆ ಜೆಬಿಎಲ್ ಸೌಂಡ್ ಎಫೆಕ್ಟ್ ಸಿನಿಮಾ ವೀಕ್ಷಣೆಯ ಅನುಭವವನ್ನು ಮತ್ತಷ್ಟು ರೋಚಕವಾಗಿಸಲಿದೆ. ಸ್ಕ್ರೀನ್‌ ಹೈ ಬ್ರೈಟ್‌ನೆಸ್‌ನಲ್ಲಿರಲಿದ್ದು, ಕ್ರಿಸ್ಪಿ ಪಿಚ್ಚರ್ ಕ್ವಾಲಿಟಿಯ ಅನುಭವ ಒದಗಿಸಲಿದೆ. ಒಟ್ಟಾರೆ ಬೆಂಗಳೂರಿನ ಸಿನಿಮಾ ಅಭಿಮಾನಿಗಳಿಗೆ ಈ ಸುದ್ಧಿ ಭರ್ಜರಿ ಖುಷಿ ನೀಡಿದೆ.

ಓದಿರಿ : ಭಾರತೀಯರಿಗೆ 'ಟಿಕ್ ಟಾಕ್' ಬೇಕೆ?.ಈ ಸಂಗತಿಗಳ ಬಗ್ಗೆ ನೀವು ತಿಳಿಯಬೇಕು! ಓದಿರಿ : ಭಾರತೀಯರಿಗೆ 'ಟಿಕ್ ಟಾಕ್' ಬೇಕೆ?.ಈ ಸಂಗತಿಗಳ ಬಗ್ಗೆ ನೀವು ತಿಳಿಯಬೇಕು!

Best Mobiles in India

English summary
After launching the first Onyx Cinema LED theater in India last year, Samsung has now launched its largest Onyx screen in Bengaluru at the Swagath Cinemas.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X