ಸ್ಯಾಮ್‌ಸಂಗ್ ಫೋನ್ ಸ್ಫೋಟ ಏನಿದು ಕಥೆ?

Posted By:

ಟೊರೆಂಟೋದ ಒಂಟಾರಿಯೋ ಯೂನಿವರ್ಸಿಟಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬಳ ಸ್ಯಾಮ್‌ಸಂಗ್ ಫೋನ್ ಆಕೆ ನಿದ್ರಿಸುತ್ತಿರುವಾಗ ತನ್ನಷ್ಟಕ್ಕೇ ಉರಿದು ಭಸ್ಮವಾಗಿದೆ. ಈ ಘಟನೆ ಅಕ್ಟೋಬರ್‌ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

(ಮಾರುಕಟ್ಟೆಯನ್ನಾಳುತ್ತಿರುವ ಸೂಪರ್ ಕಿಟ್‌ಕ್ಯಾಟ್ ಫೋನ್ಸ್)

ತನ್ನ ಪಕ್ಕದಲ್ಲೇ ಫೋನ್ ಅನ್ನು ಇಟ್ಟುಕೊಂಡು ಆಕೆ ನಿದ್ರಿಸುತ್ತಿದ್ದಳು ಆದರೆ ಹಠಾತ್ತಾಗಿ ಫೋನ್‌ನೊಳಗಿಂದ ಬೆಳಕೊಂದು ಬಂದಿದ್ದು ಗೋಡೆಗೆ ಬಡಿದು ನಂತರ ಭಸ್ಮಗೊಂಡಿದೆ ಎಂದು ವಿದ್ಯಾರ್ಥಿನಿಯೇ ತಿಳಿಸಿದ್ದಾಳೆ. ನನಗೆ ಏನಾಗುತ್ತಿದೆ ಎಂದು ಅರಿವಾಗುವಾಗ ಫೋನ್‌ನೊಳಗಿಂದ ಬೆಂಕಿ ಕಾಣಿಸಿಕೊಂಡಿದೆ. ಫೋನ್ ಚಾರ್ಜಿಂಗ್ ಕೂಡ ಆಗುತ್ತಿರಲಿಲ್ಲ. ಆದರೆ ಈ ಘಟನೆ ಸಂಭವಿಸಿದೆ ಎಂದು ವಿದ್ಯಾರ್ಥಿನಿ ಮಾಧ್ಯಮಕ್ಕೆ ವರದಿ ಮಾಡಿದ್ದಾಳೆ.

ವಿದ್ಯಾರ್ಥಿನಿಯ ಸ್ಯಾಮ್‌ಸಂಗ್ ಫೋನ್ ಸ್ಫೋಟ

ಹುಡುಗಿ ತುರ್ತಾಗಿ ಸ್ಯಾಮ್‌ಸಂಗ್ ಗ್ರಾಹಕ ಸೇವಾ ವೇದಿಕೆಯನ್ನು ಸಂಪರ್ಕಿಸಿದ್ದು ತನಿಖೆಗಾಗಿ ಫೋನ್ ಅನ್ನು ಕೊರಿಯಾಗೆ ಕಳುಹಿಸಲಾಗಿದೆ. ಸ್ಯಾಮ್‌ಸಂಗ್ ಕಂಪೆನಿ ಈ ಸಂಭವವನ್ನು ಗಂಭೀರವಾಗಿ ಪರಿಗಣಿಸಿದ್ದು ಸೂಕ್ತ ತನಿಖೆ ಮಾಡುವ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗಿದೆ. ಉತ್ತಮ ಗುಣಮಟ್ಟದ ಬ್ಯಾಟರಿಯನ್ನೇ ತಮ್ಮ ಫೋನ್‌ನಲ್ಲಿ ಗ್ರಾಹಕರು ಬಳಸಬೇಕು ಎಂಬ ಮತ್ತು ಈ ಸಲುವಾಗಿ ಉತ್ತಮ ತೀರ್ಮಾನವನ್ನು ನಾವು ಗ್ರಾಹಕರಿಗೆ ನೀಡಲಿರುವೆವು ಎಂದು ಸಂಸ್ಥೆ ತಿಳಿಸಿದೆ.

English summary
An Ontario University student revealed that her Samsung Galaxy Ace phone exploded next to her while she was sleeping. The incident, which happened in October, only came to light when the media reported it Monday.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot