ಸ್ಯಾಮ್‌ಸಂಗ್‌ನ ಹೊಸ ಫ್ರಿಡ್ಜ್ ಅನಾವರಣ; ಡೋರ್‌ನಲ್ಲಿ 32 ಇಂಚಿನ ಸ್ಮಾರ್ಟ್‌ಟಿವಿ ಆಯ್ಕೆ!

|

ಇತ್ತೀಚೆಗೆ ಮನೆಯಲ್ಲಿ ಸ್ಮಾರ್ಟ್‌ಗ್ಯಾಜೆಟ್‌ಗಳ ಬಳಕೆ ಹೆಚ್ಚಾಗುತ್ತಿದೆ. ಇದನ್ನು ಆಧಾರವಾಗಿರಿಸಿಕೊಂಡೇ ಪ್ರಮುಖ ಕಂಪೆನಿಗಳು ಎಲ್ಲಾ ಅಗತ್ಯ ವಸ್ತುಗಳಲ್ಲಿ ಸ್ಮಾರ್ಟ್‌ಫೀಚರ್ಸ್ ಪರಿಚಯಿಸುತ್ತಿವೆ. ಅಷ್ಟೆಲ್ಲಾ ಯಾಕೆ ಇತ್ತೀಚಿಗೆ ಸ್ಮಾರ್ಟ್‌ ಟಾಯ್ಲೆಟ್‌ ಅನ್ನು ಸಹ ಅನಾವರಣ ಮಾಡಲಾಗಿದೆ. ಅಂತೆಯೇ ಇನ್ಮುಂದೆ ಈ ಹೊಸ ಸ್ಯಾಮ್‌ಸಂಗ್‌ ಕಂಪೆನಿಯ ಫ್ರಿಡ್ಜ್ ಖರೀದಿ ಮಾಡುವವರಿಗೆ ತುಂಬಾ ಖುಷಿಯಾಗಲಿದೆ.

ಪವರ್‌ಬ್ಯಾಂಕ್‌‌

ಹೌದು, ಪವರ್‌ಬ್ಯಾಂಕ್‌‌ ಆಗಿರಬಹುದು, ಇಯರ್‌ಬಡ್ಸ್‌ ಚಾರ್ಜಿಂಗ್ ಕೇಸ್‌ ಆಗಿರಬಹುದು, ಅಷ್ಟೇ ಏಕೆ ಅಗತ್ಯ ಡಿವೈಸ್‌ಗಳಲ್ಲಿ ಚಿಕ್ಕ ಡಿಸ್‌ಪ್ಲೇ ಆಯ್ಕೆ ನೀಡಲಾಗುತ್ತಿದ್ದು, ಈ ಮೂಲಕ ಡಿವೈಸ್‌ಗಳು ಹೆಚ್ಚಿನ ಆಕರ್ಷಣೆ ಪಡೆದುಕೊಳ್ಳುತ್ತಿವೆ. ಅಂತೆಯೇ ಸ್ಯಾಮ್‌ಸಂಗ್‌ನ ಫ್ರಿಡ್ಜ್ ಡೋರ್‌ಮೇಲೆಯೂ ದೊಡ್ಡ ಡಿಸ್‌ಪ್ಲೇ ನೀಡಲಾಗಿದ್ದು, ಇದು ಕೇವಲ ಫ್ರಿಡ್ಜ್ ನ ಮಾಹಿತಿಯನ್ನಷ್ಟೇ ನೀಡದೆ ಸ್ಮಾರ್ಟ್‌ಟಿವಿಯಲ್ಲಿನ ಸೌಕರ್ಯ ಪಡೆದುಕೊಂಡಿದೆ.

ಫ್ರಿಡ್ಜ್

ಫ್ರಿಡ್ಜ್ ಗಳು ಹಿಂದೆಂದಿಗಿಂತಲೂ ಈಗ ಹೆಚ್ಚಿನ ಫೀಚರ್ಸ್‌ಗಳನ್ನು ಪಡೆದುಕೊಳ್ಳುತ್ತಿವೆ. ಅದರಲ್ಲೂ ಪ್ರಮುಖ ಬ್ರ್ಯಾಂಡ್‌ನ ಕಂಪೆನಿಗಳು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಈ ಡೋರ್‌ಗಳಲ್ಲಿ ಡಿಸ್‌ಪ್ಲೇ ಇರಿಸುವ ಸೌಲಭ್ಯವನ್ನು ಪರಿಚಯಿಸಿಕೊಂಡು ಬರುತ್ತಿವೆ. ಅಂತೆಯೇ ಈಗ ಈ ಹೊಸ ಫ್ರಿಡ್ಜ್ ನಲ್ಲಿ ತಣ್ಣನೆಯ ನೀರನ್ನು ಕುಡಿಯುತ್ತಾ 32 ಇಂಚಿನ ಡಿಸ್‌ಪ್ಲೇ ಮೂಲಕ ಬೇಕಾದ ವಿಡಿಯೋ ವೀಕ್ಷಣೆ ಮಾಡಬಹುದು.

ಟಚ್ ಸ್ಕ್ರೀನ್ ಡಿಸ್‌ಪ್ಲೇ

ಟಚ್ ಸ್ಕ್ರೀನ್ ಡಿಸ್‌ಪ್ಲೇ

ಸಾಮಾನ್ಯವಾಗಿ ಈ ಹಿಂದೆ ಫ್ರಿಡ್ಜ್ ನಲ್ಲಿ ಪರಿಚಯಿಸಲಾಗುತ್ತಿದ್ದ ಹಲವು ಡಿಸ್‌ಪ್ಲೇಗಳು ಟಚ್ ಸ್ಕ್ರೀನ್ ಡಿಸ್‌ಪ್ಲೇ ಹೊಂದಿರಲಿಲ್ಲ. ಆದರೆ, ಈ ಹೊಸ ಫ್ರಿಡ್ಜ್ ನಲ್ಲಿ 32 ಇಂಚಿನ ಟಚ್ ಸ್ಕ್ರೀನ್ ಡಿಸ್‌ಪ್ಲೇ ಆಯ್ಕೆ ನೀಡಲಾಗಿದ್ದು, ಇದನ್ನು ಸ್ಯಾಮ್‌ಸಂಗ್‌ ಬಿಸ್ಫೋಕ್ ರೆಫ್ರಿಜರೇಟರ್ ಫ್ಯಾಮಿಲಿ ಹಬ್ ಪ್ಲಸ್ ಎಂದು ಕರೆಯಲಾಗುತ್ತಿದೆ.

ಇದು ಕೇವಲ ಡಿಸ್‌ಪ್ಲೇ ಮಾತ್ರವೇ ಅಥವಾ ಸ್ಮಾರ್ಟ್ ಟಿವಿಯೇ?

ಇದು ಕೇವಲ ಡಿಸ್‌ಪ್ಲೇ ಮಾತ್ರವೇ ಅಥವಾ ಸ್ಮಾರ್ಟ್ ಟಿವಿಯೇ?

ಈ ಪ್ರಶ್ನೆ ನಿಮ್ಮಲ್ಲಿ ಖಂಡಿತಾ ಮೂಡಿರುತ್ತದೆ. ಫ್ರಿಡ್ಜ್ ನ ಡೋರ್‌ನಲ್ಲಿ ಇರಿಸಲಾಗಿರುವ ಈ ಡಿಸ್‌ಪ್ಲೇ ಸ್ಮಾರ್ಟ್‌ಟಿವಿಯೂ ಹೌದು ಎಂದು ಸ್ಯಾಮ್‌ಸಂಗ್‌ ಗುಟ್ಟಾಗಿ ಮಾಹಿತಿ ಬಿಚ್ಚಿಟ್ಟಿದೆ. ಯಾಕೆಂದರೆ ಈ ಫ್ರಿಡ್ಜ್‌ನಲ್ಲಿರುವ ಡಿಸ್‌ಪ್ಲೇ ಸ್ಯಾಮ್‌ಸಂಗ್ ಟಿವಿ ಪ್ಲಸ್‌ ಸೇವೆಗೆ ಬೆಂಬಲ ನೀಡುತ್ತದೆ ಎನ್ನಲಾಗಿದೆ.

ಕಂಪೆನಿ

ಕಂಪೆನಿ

ಈ ಸ್ಯಾಮ್ಸಂಗ್ ಫ್ರಿಡ್ಜ್ ಕಂಪೆನಿಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT) ತಂತ್ರಜ್ಞಾನದ ಸಂಯೋಜನೆಯಲ್ಲಿ ಕೆಲಸ ಮಾಡಲಿದ್ದು, ಇದು ಆಲ್-ಇನ್-ಒನ್ ರೆಫ್ರಿಜರೇಟರ್ ಆಗಿದೆ. ಈ ಮೂಲಕ ಬಳಕೆದಾರರು ಮನರಂಜನೆ, ಕುಟುಂಬ ಸಂವಹನ, ಅಡುಗೆ ಮತ್ತು ಸ್ಮಾರ್ಟ್ ಹೋಮ್‌ಗೆ ಸಂಬಂಧಿಸಿದ ಸೇವೆಗಳನ್ನು ಪಡೆದುಕೊಳ್ಳಬಹುದು.

ಸಿನಿಮಾ ನೋಡಬಹುದೇ?

ಸಿನಿಮಾ ನೋಡಬಹುದೇ?

ಸ್ಯಾಮ್‌ಸಂಗ್ ಪ್ರಕಾರ, 32 ಇಂಚಿನ ಡಿಸ್‌ಪ್ಲೇಯು ಯೂಟ್ಯೂಬ್‌ನಂತಹ ಪ್ರಮುಖ ಸಾಮಾಜಿಕ ಮಾಧ್ಯಮ ಸೈಟ್‌ಗಳು ನೀಡುವ ಪೋರ್ಟ್ರೇಟ್-ಫಾರ್ಮ್ಯಾಟ್ ಚಿತ್ರಗಳಿಗಾಗಿ ಆಪ್ಟಿಮೈಸ್ ಮಾಡಲಾಗಿದೆ. ಹಾಗೆಯೇ ಸ್ಯಾಮ್‌ಸಂಗ್ ಟಿವಿ ಪ್ಲಸ್ ಸೇವೆಯ ಮೂಲಕ ಪಿಐಪಿ (ಪಿಕ್ಚರ್ ಇನ್ ಪಿಕ್ಚರ್) ಮೋಡ್‌ನಲ್ಲಿ ವಿಡಿಯೋಗಳನ್ನು ವೀಕ್ಷಿಸಬಹುದು. ಇದರೊಂದಿಗೆ ಪಾಕವಿಧಾನಗಳನ್ನು ಸರ್ಚ್‌ ಮಾಡಬಹುದಾಗಿದೆ. ಜೊತೆಗೆ ನ್ಯೂಸ್‌ ಚಾನೆಲ್‌ ಅನ್ನುಸಹ ವೀಕ್ಷಣೆ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ ಸ್ಮಾರ್ಟ್‌ಹೋಮ್‌ ಗ್ಯಾಜೆಟ್‌ಗಳನ್ನೂ ಸಹ ಈ ಮೂಲಕ ನಿಯಂತ್ರಣ ಮಾಡಬಹುದಾಗಿದೆ.

ಈ ಫ್ರಿಡ್ಜ್‌ನಿಂದಾಗುವ ಪ್ರಮುಖ ಪ್ರಯೋಜನ ಇವು

ಈ ಫ್ರಿಡ್ಜ್‌ನಿಂದಾಗುವ ಪ್ರಮುಖ ಪ್ರಯೋಜನ ಇವು

ಇದರಲ್ಲಿನ ಸ್ಮಾರ್ಟ್‌ಥಿಂಗ್ಸ್‌ ಆಪ್‌ ಮೂಲಕ ವಿವಿಧ ಡಿವೈಸ್‌ಗಳ ಜೊತೆ ಸಂಪರ್ಕ ಸಾಧಿಸಬಹುದಾಗಿದೆ. ಹಾಗೆಯೇ ಈ ಸ್ಮಾರ್ಟ್‌ ಥಿಂಗ್ಸ್‌ ಹೋಮ್ ಲೈಫ್ ಅಡಿಯಲ್ಲಿ ಆರು ಪ್ರಮುಖ ಸೇವೆಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದ್ದು, ಎನರ್ಜಿ, ಕುಕಿಂಗ್, ಕೇರ್‌, ಹೋಮ್‌ ಕೇರ್‌, ಪೆಟ್‌ ಕೇರ್ ಹಾಗೂ ಕ್ಲೋಡಿಂಗ್ ಕೇರ್‌ ವಿಭಾಗಗಳಿಗೆ ಅನುಮತಿ ನೀಡುತ್ತದೆ. ಇದರೊಂದಿಗೆ ಈ ಹೊಸ ಬೆಸ್ಪೋಕ್ ಫ್ರಿಡ್ಜ್ ಒನ್‌ ಡ್ರೈವ್‌ ಮತ್ತು ಗೂಗಲ್‌ ಫೋಟೋಗಳೊಂದಿಗೆ ಕ್ಲೌಡ್-ಸಂಪರ್ಕವನ್ನು ಹೊಂದಿದ್ದು, ವರ್ಧಿತ ಹಂಚಿಕೆ ಅನುಭವವನ್ನು ನೀಡುತ್ತದೆ.

ಈ ಫ್ರಿಡ್ಜ್ ಬೆಲೆ ಎಷ್ಟು?

ಈ ಫ್ರಿಡ್ಜ್ ಬೆಲೆ ಎಷ್ಟು?

ಸದ್ಯಕ್ಕೆ ಸ್ಯಾಮ್‌ಸಂಗ್‌ನ ಹೊಸ ಫ್ರಿಜ್ ಅನ್ನು ಅನಾವರಣ ಮಾಡಲಾಗಿದೆಯೇ ಹೊರತು ಇದರ ಬೆಲೆ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, ಜನವರಿ 5, 2023 ರಿಂದ ಲಾಸ್ ವೇಗಾಸ್‌ನಲ್ಲಿ ಜರುಗುವ CES 2023 ಈವೆಂಟ್‌ನಲ್ಲಿ ಇದರ ಬೆಲೆಯನ್ನು ಘೋಷಿಸುವ ಸಾಧ್ಯತೆಯಿದೆ. ಏಕೆಂದರೆ ಈವೆಂಟ್‌ನಲ್ಲಿ ಸ್ಯಾಮ್‌ಸಂಗ್ ಬಿಸ್‌ಫೋಕ್ ರೆಫ್ರಿಜರೇಟರ್ ಫ್ಯಾಮಿಲಿ ಹಬ್ ಪ್ಲಸ್ ಫ್ರಿಜ್ ಅನ್ನು ಅನಾವರಣ ಮಾಡಲಿದೆ.

Best Mobiles in India

English summary
Samsung's new fridge comes with 32 inch display.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X