ಸ್ಯಾಮ್‌ಸಂಗ್‌ನ ಈ ಡಿವೈಸ್‌ಗಳನ್ನು ಖರೀದಿಸುವ ವಿದ್ಯಾರ್ಥಿಗಳಿಗೆ ಸಿಗಲಿದೆ ಬಿಗ್‌ ಆಫರ್‌!

|

ಟೆಕ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ವೈವಿಧ್ಯಮಯ ಗ್ಯಾಜೆಟ್ಸ್‌ಗಳ ಮೂಲಕ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ, ಟ್ಯಾಬ್‌, ಸೇರಿದಂತೆ ಅನೇಕ ಸ್ಮಾರ್ಟ್‌ ಗ್ಯಾಜೆಟ್ಸ್‌ಗಳನ್ನು ಪರಿಚಯಿಸಿದೆ. ತನ್ನ ಗುಣಮಟ್ಟದ ಗ್ಯಾಜೆಟ್ಸ್‌ಗಳಿಂದಾಗಿ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಇನ್ನು ಸ್ಯಾಮ್‌ಸಂಗ್‌ ಕಂಪೆನಿ ತನ್ನ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಪ್ರೋಗ್ರಾಂಗಳನ್ನು ನಡೆಸುತ್ತಾ ಬಂದಿದೆ. ಸದ್ಯ ಇದೀಗ ಸ್ಯಾಮ್‌ಸಂಗ್‌ ಸ್ಟೂಡೆಂಟ್‌ ಅಡ್ವಾಂಟೇಜ್‌ ಪ್ರೋಗ್ರಾಂ 2022 ಅನ್ನು ಪ್ರಾರಂಭಿಸಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಸ್ಟೂಡೆಂಟ್‌ ಅಡ್ವಾಂಟೇಜ್‌ ಪ್ರೋಗ್ರಾಂ ಅನ್ನು ಆಯೋಜಿಸಿದೆ. ಈ ಪ್ರೋಗ್ರಾಂನಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳು ಗ್ಯಾಲಕ್ಸಿ ಪುಸ್ತಕಗಳು, ಟ್ಯಾಬ್‌ಗಳು, ಸ್ಮಾರ್ಟ್‌ಫೋನ್‌ಗಳನ್ನು ಬಿಗ್‌ ಆಫರ್‌ನಲ್ಲಿ ಖರೀದಿಸಲು ಸಾಧ್ಯವಾಗಲಿದೆ. ಈ ಹೊಸ ಆಫರ್‌ ಸ್ಯಾಮ್‌ಸಂಗ್ ಶಾಪ್ (ಆನ್‌ಲೈನ್ ಸ್ಟೋರ್) ಮತ್ತು ದೇಶಾದ್ಯಂತ ಸ್ಯಾಮ್‌ಸಂಗ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳ ಮೂಲಕ ಲಭ್ಯವಾಗಲಿದೆ. ವಿದ್ಯಾರ್ಥಿಗಳು ಈ ಆಫರ್‌ನಲ್ಲಿ ತಮಗೆ ಬೇಕಾದ ಗ್ಯಾಜೆಟ್ಸ್‌ಗಳನ್ನು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಸ್ಟೂಡೆಂಟ್‌ ಅಡ್ವಾಂಟೇಜ್‌ ಪ್ರೋಗ್ರಾಂ ಖರೀದಿಯಿಂದ ಬೆಂಬಲದವರೆಗೆ ಅಂತ್ಯದಿಂದ ಕೊನೆಯವರೆಗೆ ಸೇವೆಗಳನ್ನು ಸಕ್ರಿಯಗೊಳಿಸುತ್ತದೆ. ಅಲ್ಲದೆ ಖರೀದಿ ಪ್ರಕ್ರಿಯೆಯನ್ನು ತಡೆರಹಿತ, ಕೈಗೆಟುಕುವ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿಸುತ್ತದೆ. ಇದಲ್ಲದೆ ಸ್ಯಾಮ್‌ಸಂಗ್‌ನ ‘ಪವರ್ರಿಂಗ್ ಡಿಜಿಟಲ್ ಇಂಡಿಯಾ' ದೃಷ್ಟಿಯನ್ನು ಬಲಪಡಿಸಲಿದೆ ಎಂದು ಸ್ಯಾಮ್‌ಸಂಗ್‌ ಇಂಡಿಯಾದ ಹಿರಿಯ ನಿರ್ದೇಶಕ ಸುಮಿತ್ ವಾಲಿಯಾ ಹೇಳಿದ್ದಾರೆ. ಅಲ್ಲದೆ "' ಈ ಕಾರ್ಯಕ್ರಮದ ಮೂಲಕ ನಾವು ದೇಶದಾದ್ಯಂತ ಯುವ ವಿದ್ಯಾರ್ಥಿಗಳಿಗೆ ಪ್ರೀಮಿಯಂ ತಂತ್ರಜ್ಞಾನವನ್ನು ಪ್ರವೇಶಿಸುವಂತೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಕಂಪೆನಿ ವಿದ್ಯಾರ್ಥಿಗಳಿಗಾಗಿಯೇ ಸ್ಟೂಡೆಂಟ್‌ ಅಡ್ವಾಂಟೇಜ್‌ ಪ್ರೋಗ್ರಾಂ ನಡೆಸುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಗ್ಯಾಜೆಟ್ಸ್‌ಗಳು ರಿಯಾಯಿತಿ ಪಡೆದಿವೆ. ಈ ಕಾರ್ಯಕ್ರಮವನ್ನು ದಿನನಿತ್ಯದ ಬಳಕೆಗೆ ತಂತ್ರಜ್ಞಾನವನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಡಿಜಿಟಲ್ ಕಲಿಕೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎನ್ನಲಾಗಿದೆ. ಹಾಗಾದ್ರೆ ಸ್ಟೂಡೆಂಟ್‌ ಅಡ್ವಾಂಟೇಜ್‌ ಪ್ರೋಗ್ರಾಂನಲ್ಲಿ ಏನೆಲ್ಲಾ ಆಫರ್‌ ಲಭ್ಯವಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗ್ಯಾಲಕ್ಸಿ S20 FE

ಗ್ಯಾಲಕ್ಸಿ S20 FE

ಸ್ಯಾಮ್‌ಸಂಗ್‌ ಕಂಪೆನಿ ಸ್ಟೊಡೆಂಟ್‌ ಅಡ್ವಾಂಟೇಜ್‌ ಪ್ರೋಗ್ರಾಂನಲ್ಲಿ ಗ್ಯಾಲಕ್ಸಿ S20 FE ಸ್ಮಾರ್ಟ್‌ಫೋನ್‌ 5% ಡಿಸ್ಕೌಂಟ್‌ ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ + ಸೂಪರ್ ಅಮೋಲೆಡ್ ಇನ್ಫಿನಿಟಿ-ಒ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಆಪರೇಟಿಂಗ್‌ ಸಿಸ್ಟಮ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.

ಗ್ಯಾಲಕ್ಸಿ S22 ಅಲ್ಟ್ರಾ

ಗ್ಯಾಲಕ್ಸಿ S22 ಅಲ್ಟ್ರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಅಲ್ಟ್ರಾ ಸ್ಮಾರ್ಟ್‌ಫೋನ್‌ ಖರೀದಿಸುವ ವಿದ್ಯಾರ್ಥಿಗಳಿಗೆ ವಿಶೇಷ ಆಫರ್‌ ಲಭ್ಯವಾಗಲಿದೆ. ಅಂದರೆ ನೀವು ಈ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಿದರೆ ಸ್ಯಾಮ್‌ಸಂಗ್‌ ವಾಚ್‌ 4 ಅನ್ನು 8,000 ರೂ ವರೆಗಿನ ಅಪ್‌ಗ್ರೇಡ್ ಬೋನಸ್ ಅಥವಾ 5,000 ರೂ ಕ್ಯಾಶ್‌ಬ್ಯಾಕ್ ಜೊತೆಗೆ ಪಡೆಯಬಹುದು. ಇದಲ್ಲದೆ ವಿದ್ಯಾರ್ಥಿಗಳು 5% ರಿಯಾಯಿತಿಯ ಜೊತೆಗೆ ಜಿರೋ ಡೌನ್ ಪೇಮೆಂಟ್‌ ಆಯ್ಕೆಯ 24 ತಿಂಗಳ ನೋ-ಕಾಸ್ಟ್ EMI ಅನ್ನು ಪಡೆಯಬಹುದು. ಇನ್ನು ಗ್ಯಾಲಕ್ಸಿ S22 ಅಲ್ಟ್ರಾ ಫೋನ್‌ 6.8 ಇಂಚಿನ ಎಡ್ಜ್‌ QHD ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ ಕೋರ್ 4 nm SoC ಪ್ರೊಸೆಸರ್‌ ಬೆಂಬಲ ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್‌ ಮೇಲೆ ವಿದ್ಯಾರ್ಥಿಗಳಿಗಾಗಿ 5% ರಿಯಾಯಿತಿಯ ಜೊತೆಗೆ ಜಿರೋ ಡೌನ್ ಪಾವತಿಯೊಂದಿಗೆ 24 ತಿಂಗಳ ನೋ ಕಾಸ್ಟ್‌ ಇಎಂಐ ಅನ್ನು ನೀಡಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.1 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ ಕೋರ್ 4nm SoC ಪ್ರೊಸೆಸರ್‌ ಬೆಂಬಲ ಹೊಂದಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 3,700mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಅನ್ನು ಸಹ ಬೆಂಬಲಿಸುತ್ತದೆ.

ಗ್ಯಾಲಕ್ಸಿ S21 FE

ಗ್ಯಾಲಕ್ಸಿ S21 FE

ಸ್ಯಾಮ್‌ಸಂಗ್‌ನ ಸ್ಟೂಡೆಂಟ್‌ ಅಡ್ವಾಂಟೇಜ್‌ ಪ್ರೋಗ್ರಾಂನಲ್ಲಿ ಗ್ಯಾಲಕ್ಸಿ S21 FE ಫೋನ್‌ ಕೂಡ 5% ರಿಯಾಯಿತಿ ಪಡೆದುಕೊಂಡಿದೆ. ಈ ರಿಯಾಯಿತಿ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಾಗಲಿದೆ ಅನ್ನೊದು ಗಮನಿಸಬೇಕಾದ ವಿಚಾರ. ಇನ್ನು ಈ ಸ್ಮಾರ್ಟ್‌ಫೋನ್‌ 6.4 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 888 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12MP ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ 32MP ಫಿಕ್ಸೆಡ್ ಫೋಕಸ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಸ್ಯಾಮ್‌ಸಂಗ್‌

ಇದಲ್ಲದೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22+ ಸ್ಮಾರ್ಟ್‌ಫೋನ್‌ 5% ರಿಯಾಯಿತಿಯ ಜೊತೆಗೆ ಜಿರೋ ಡೌನ್ ಪೇಮೆಂಟ್‌ ಆಯ್ಕೆಯ ಜೊತೆಗೆ 24 ತಿಂಗಳ ನೋ ಕಾಸ್ಟ್‌ EMI ಅನ್ನು ಪಡೆದುಕೊಳ್ಳಬಹುದು. ಜೊತೆಗೆ ವಿದ್ಯಾರ್ಥಿಗಳು ಸ್ಯಾಮ್‌ಸಂಗ್‌ ಗ್ಯಾಲಕ್ಸಿ A53 5G ಮತ್ತು ಗ್ಯಾಲಕ್ಸಿ A33 5G ಮೇಲೆ 3,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಸ್ಯಾಮ್‌ಸಂಗ್‌ ವೇರಿಯೆಬಲ್ಸ್‌ ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ 10% ರಿಯಾಯಿತಿಯನ್ನು ನೀಡಲಾಗ್ತಿದೆ.

Best Mobiles in India

English summary
Samsung Student Advantage Program 2022 announced with discounts on tablets and smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X