ಸ್ಯಾಮ್‌ಸಂಗ್ನ ಹೊಸ ಫೋಲ್ಡ್ ಫೋನ್ ಟೀಸರ್!..ಖರೀದಿಗೆ ಕ್ಯೂ ನಿಲ್ಲಲು ತಯಾರಾಗಿ!

|

'ಗ್ಯಾಲಾಕ್ಸ್ ಫೋಲ್ಡ್' ಮೂಲಕ ವಿಶ್ವದ ಮೊದಲ ಮಡಚುವ ಸ್ಮಾರ್ಟ್‌ಫೋನ್ ತಯಾರಿಸಿ ಗಮನಸೆಳೆದಿರುವ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಇದೀಗ ಚದರಕ್ಕೆ ಮಡಚಿಕೊಳ್ಳುವಂತಹ ಮತ್ತೊಂದು ವಿಶೇಷ ಮಡಚುವ ಸ್ಮಾರ್ಟ್‌ಫೋನ್ ವಿನ್ಯಾಸವನ್ನು ಬಿಡುಗಡೆ ಮಾಡಿದೆ. ಕೆಳೆದ ಸೆಪ್ಟೆಂಬರ್‌ನಲ್ಲಿ ತನ್ನ ಮೊದಲ ಮಡಚುವ ಫೋನ್ ಮಾದರಿಯನ್ನು ಬಿಡುಗಡೆ ಮಾಡಿದ ನಂತರ, ಇದೇ ಮಂಗಳವಾರ ಯುನೈಟೆಡ್ ಸ್ಟೇಟ್‌ನಲ್ಲಿ ನಡೆದ ಸ್ಯಾಮ್ಸಂಗ್ ಡೆವಲಪರ್ ಕಾನ್ಫರೆನ್ಸ್ 2019ರಲ್ಲಿ ಈ ರೀತಿಯ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದೆ.

ಗ್ಯಾಲಾಕ್ಸ್ ಫೋಲ್ಡ್

ಹೌದು, ಗ್ಯಾಲಾಕ್ಸ್ ಫೋಲ್ಡ್ ವಿಶ್ವದ ಮೊಟ್ಟ ಮೊದಲ ಮಡಚುವ ಫೋನ್ ಆಗಿದ್ದು, ಇದೀಗ ಮತ್ತೊಂದು ರೀತಿಯಲ್ಲಿ ಮಡಚುವ ಫೋನ್ ಮಾರುಕಟ್ಟೆಗೆ ಬರುತ್ತಿದೆ. ಅಂದರೆ, ಇದೀಗ ಖರೀದಿಗೆ ಲಭ್ಯವಿರುವ ಗ್ಯಾಲಾಕ್ಸ್ ಫೋಲ್ಡ್ ಆಯತಾಕಾರದಲ್ಲಿ ಮಡಚಬಹುದಾದ ಆಯ್ಕೆಯನ್ನು ಹೊಂದಿದ್ದರೆ, ಮುಂದಿನ ಸ್ಮಾರ್ಟ್‌ಫೋನ್ ಚದರದ ರೂಪದಲ್ಲಿ ಮಡಚಿಕೊಳ್ಳಲಿದೆ. ಈಗಾಗಲೇ ಗ್ಯಾಲಾಕ್ಸಿ ಫೋಲ್ಡ್' ಮೂಲಕ ಯಶಸ್ವಿಯಾಗಿರುವ ಸ್ಯಾಮ್‌ಸಂಗ್ ಶೀಘ್ರದಲ್ಲೇ ಚದರಕ್ಕೆ ಮಡಚಿಕೊಳ್ಳುವಂತಹ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿರುವ ಸುದ್ದಿ ವೈರಲ್ ಆಗಿದೆ.

ಹೊಚ್ಚ ಹೊಸ ರೂಪ

ನಾವು ಈಗ ಅನ್ವೇಷಿಸುತ್ತಿರುವ ಈ ಹೊಚ್ಚ ಹೊಸ ರೂಪದ ವಿಷಯವು ನಿಮ್ಮ ಜೇಬಿನಲ್ಲಿ ಸುಲಭವಾಗಿ ಹೊಂದಿಕೊಳ್ಳುವುದಲ್ಲದೆ, ನೀವು ಸ್ಮಾರ್ಟ್‌ಫೋನ್ ಬಳಸುವ ವಿಧಾನವನ್ನು ಸಹ ಬದಲಾಯಿಸುತ್ತದೆ. ಇನ್ನು 'ಮಡಚಬಹುದಾದ ಈ ತಂತ್ರಜ್ಞಾನದ ಅದ್ಭುತ ಸಂಗತಿಯೆಂದರೆ, ಇದು ಕೂಡ ಈ ರೀತಿಯಾಗಿ ಹೆಚ್ಚು ಸಾಂದ್ರವಾಗಿರುತ್ತದೆ' ಎಂದು ಸ್ಯಾಮ್‌ಸಂಗ್‌ನ ಮೊಬೈಲ್ ಫ್ರೇಮ್‌ವರ್ಕ್ ಆರ್ & ಡಿ ಗ್ರೂಪ್‌ನ ಮುಖ್ಯಸ್ಥ ಸ್ಯಾಲಿ ಹೈಸೂನ್ ಜಿಯಾಂಗ್ ಅವರು ಹೇಳಿದ್ದಾರೆ. ಹಾಗಾಗಿ, ಹೊಸ ಮಡಚುವ ಫೋನ್ ಬಗ್ಗೆ ಮತ್ತಷ್ಟು ಕುತೂಹಲಗಳು ಹೆಚ್ಚಾಗಿವೆ.

ಸ್ಯಾಮ್‌ಸಂಗ್

ಇಷ್ಟೆಲ್ಲಾ ಮಾಹಿತಿ ನೀಡಿರುವ ಸ್ಯಾಮ್‌ಸಂಗ್ ಕಂಪೆನಿ ಚದರವಾಗಿ ಮಡಿಸುವ ಸ್ಮಾರ್ಟ್‌ಫೋನ್ ಯಾವಾಗ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಮಾತ್ರ ವಿವರಗಳನ್ನು ನೀಡಿಲ್ಲ. "ಭವಿಷ್ಯದ ಉತ್ಪನ್ನಗಳ ಬಗ್ಗೆ ನಾವು ಪ್ರತಿಕ್ರಿಯಿಸಲು ಸಾಧ್ಯವಾಗದಿದ್ದರೂ, ಹೊಸ ರೂಪದ ಅಂಶಗಳ ಅಭಿವೃದ್ಧಿಗೆ ಹೂಡಿಕೆ ಮಾಡುವುದು ಸೇರಿದಂತೆ ಮಡಿಸಬಹುದಾದ ವರ್ಗಕ್ಕೆ ಪ್ರವರ್ತಿಸಲು ಸ್ಯಾಮ್‌ಸಂಗ್ ಬದ್ಧವಾಗಿದೆ" ಎಂದು ಸ್ಯಾಮ್‌ಸಂಗ್ ಸಂಸ್ಥೆಯ ವಕ್ತಾರರು ರಾಯಿಟರ್ಸ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿರುವುದಾಗಿ ರಾಯಿಟರ್ಸ್ ವೆಬ್‌ಸೈಟ್ ವರದಿ ಮಾಡಿದೆ.

ಸ್ಮಾರ್ಟ್‌ಫೋನ್

ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿಗಳು 5ಜಿ ಫೋನ್‌ಗಳು ಮತ್ತು $ 2,000 ಫೋಲ್ಡಬಲ್ ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆ ಮಾಡುವುದರೊಂದಿಗೆ ಮುಂದೆ ಸಾಗುತ್ತಿವೆ. ಸ್ಯಾಮ್‌ಸಂಗ್ ಪ್ರತಿಸ್ಪರ್ಧಿಗಳಾದ ಆಪಲ್ ಮತ್ತು ಹುವಾವೇ ಟೆಕ್ನಾಲಜೀಸ್‌ ಇದೇ ಮಾರುಕಟ್ಟೆಗಾಗಿ ಹೆಚ್ಚು ಹೋರಾಡುತ್ತಿದೆ. ಚೀನಾದ ಹುವಾವೇ ಕಳೆದ ವಾರ ಚೀನಾದಲ್ಲಿ ತನ್ನ ಕುತೂಹಲದಿಂದ ಕಾಯುತ್ತಿದ್ದ ಮಡಿಸಬಹುದಾದ ಸ್ಮಾರ್ಟ್‌ಫೋನ್‌ಗಾಗಿ ಆದೇಶಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ ಎಂಬುದನ್ನು ನಾವಿಲ್ಲಿ ನೋಡಬಹುದು.

Best Mobiles in India

English summary
'The amazing thing with the foldable technology is that it can also become more compact like this', said Sally Hyesoon Jeong, head of Framework R&D Group at Samsung's mobile communications. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X