ನವೆಂಬರ್‌ನಲ್ಲಿ ಈ ಸ್ಯಾಮ್‌ಸಂಗ್‌ ಫೋನ್‌ಗಳಲ್ಲಿ 5G ಸೇವೆ ಪಕ್ಕಾ!..ಲಿಸ್ಟ್‌ ಇಲ್ಲಿದೆ!

|

ಭಾರತದಲ್ಲಿ ಮುಂದಿನ ತಿಂಗಳು ತನ್ನ ಕೆಲವು ಫೋನ್‌ಗಳಿಗೆ 5G ಗೆ ಬೆಂಬಲವನ್ನು ಹೊರತರಲು ಯೋಜಿಸುತ್ತಿದೆ ಎಂದು ಸ್ಯಾಮ್‌ಸಂಗ್‌ (Samsung) ಘೋಷಿಸಿದೆ. ಇನ್ನು ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ನವೆಂಬರ್ ತಿಂಗಳ ಮಧ್ಯದಲ್ಲಿ 5G ಅಪ್‌ಡೇಟ್‌ ನೀಡುವುದಾಗಿ ಎಂದು ಕಂಪನಿ ದೃಢಪಡಿಸಿದೆ. ಹೀಗಾಗಿ, 5G ಸ್ಯಾಮ್‌ಸಂಗ್ ಫೋನ್ ಹೊಂದಿರುವ ಬಳಕೆದಾರರು ಹಾಗೂ 5G ಲಭ್ಯತೆ ಪಡೆದ ನಗರದ ಬಳಕೆದಾರರು ಇನ್ನೇನು ಕೆಲವೇ ವಾರಗಳಲ್ಲಿ ನಿಮ್ಮ ಸ್ಯಾಮ್‌ಸಂಗ್‌ ಫೋನ್‌ಗಳಲ್ಲಿ 5G ಸೇವೆ ಪಡೆಯಬಹುದು.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಸಂಸ್ಥೆಯು ನವೆಂಬರ್‌ನಲ್ಲಿ ತನ್ನ ಕೆಲವು 5G ಸ್ಮಾರ್ಟ್‌ಫೋನ್‌ಗಳಿಗೆ 5G ಸಪೋರ್ಟ್‌ ಅಪ್‌ಡೇಟ್‌ ಅನ್ನು ಮಾಡಲಿದೆ. ಅಪ್‌ಡೇಟ್‌ ಬಳಿಕ 5G ಬೆಂಬಲಿತ ನಗರದ ಸ್ಯಾಮ್‌ಸಂಗ್ ಫೋನ್ ಬಳಕೆದಾರರು 5G ನೆಟ್‌ವರ್ಕ್‌ ಪಡೆಯಲು ಸಾಧ್ಯವಾಗುತ್ತದೆ.

ಸಾಧ್ಯವಾಗುವುದಿಲ್ಲ

ಇನ್ನು ಬಹುತೇಕ ಸ್ಯಾಮ್‌ಸಂಗ್ ಬಳಕೆದಾರರಿಗೆ 5G ನೆಟ್‌ವರ್ಕ್ ಅನ್ನು ಆಕ್ಸಸ್‌ ಮಾಡಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವರ ಸ್ಮಾರ್ಟ್‌ಫೋನ್‌ಗೆ 5G ತರಂಗಾಂತರ ಸಪೋರ್ಟ್‌ ಅತ್ಯುತ್ತಮವಾಗಿಸಲು ಸಂಸ್ಥೆಯಿಂದ ಅಪ್‌ಡೇಟ್‌ನ ಅಗತ್ಯವಿದೆ. ಇತ್ತೀಚಿಗೆ ಏರ್‌ಟೆಲ್ ಟೆಲಿಕಾಂ ಇನ್ನೂ 5G ಗೆ ಬೆಂಬಲವನ್ನು ಪಡೆಯದ ಫೋನ್‌ಗಳ ಲಿಸ್ಟ್‌ ಪ್ರಕಟಿಸಿದೆ. ಆ ಲಿಸ್ಟ್‌ನಲ್ಲಿ ಕೆಲವು ಸ್ಯಾಮ್‌ಸಂಗ್‌ ಫೋನ್‌ಗಳು ಒಳಗೊಂಡಿದೆ.

ಗ್ಯಾಲಕ್ಸಿ

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE, ಸ್ಯಾಮ್‌ಸಂಗ್ ಗ್ಯಾಲಕ್ಸಿ A53, ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸರಣಿ ಫೋನ್‌ಗಳು, ಸ್ಯಾಮ್‌ಸಂಗ್ ಗ್ಯಾಲಕ್ಸಿ A33, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 4, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ M33 ಫೋನ್‌ ಹೊಂದಿರುವ ಬಳಕೆದಾರರು 5G ನೆಟ್‌ವರ್ಕ್‌ ಅನ್ನು (5G ಸೇವೆ ಲಭ್ಯವಿರುವ ನಗರದಲ್ಲಿ) ಪ್ರವೇಶಿಸಬಹುದು.

ಬೆಂಬಲವನ್ನು

ಹಾಗೆಯೇ ಇನ್ನೂ 5G ಬೆಂಬಲವನ್ನು ಪಡೆಯದ ಕೆಲವು ಸ್ಯಾಮ್‌ಸಂಗ್ ಫೋನ್‌ಗಳೆಂದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಅಲ್ಟ್ರಾ, ಸ್ಯಾಮ್‌ಸಂಗ್ ಗ್ಯಾಲಕ್ಸಿ S21, ಸ್ಯಾಮ್‌ಸಂಗ್ ಗ್ಯಾಲಕ್ಸಿ S21+, ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್‌ 2, ಸ್ಯಾಮ್‌ಸಂಗ್ ಗ್ಯಾಲಕ್ಸಿ F42, ಸ್ಯಾಮ್‌ಸಂಗ್ ಗ್ಯಾಲಕ್ಸಿ A52s, ಸ್ಯಾಮ್‌ಸಂಗ್ ಗ್ಯಾಲಕ್ಸಿ M52, ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್ 3, ಸ್ಯಾಮ್‌ಸಂಗ್ ಗ್ಯಾಲಕ್ಸಿ A22 5G, ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE 5G, ಸ್ಯಾಮ್‌ಸಂಗ್ ಗ್ಯಾಲಕ್ಸಿ M32 5G, ಸ್ಯಾಮ್‌ಸಂಗ್ ಗ್ಯಾಲಕ್ಸಿ F23, ಸ್ಯಾಮ್‌ಸಂಗ್ ಗ್ಯಾಲಕ್ಸಿ A73, ಸ್ಯಾಮ್‌ಸಂಗ್ ಗ್ಯಾಲಕ್ಸಿ M42, ಸ್ಯಾಮ್‌ಸಂಗ್ ಗ್ಯಾಲಕ್ಸಿ M53 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಆಗಿವೆ.

ಡಿಸೆಂಬರ್‌ನಲ್ಲಿ

ಸ್ಯಾಮ್‌ಸಂಗ್ ತನ್ನ ಬಳಕೆದಾರರು 5G ಅನ್ನು ಸೇವೆ ಪಡೆಯಲು ಇನ್ನು ಕೆಲವು ವಾರಗಳು ಕಾಯಬೇಕಿದೆ. ಹಾಗೆಯೇ ಆಪಲ್‌ (Apple) ಮತ್ತು ಇತರ ಬ್ರ್ಯಾಂಡ್‌ಗಳು ಈ ವರ್ಷದ ಡಿಸೆಂಬರ್‌ನಲ್ಲಿ ಸಾಫ್ಟ್‌ವೇರ್ ನವೀಕರಣವನ್ನು ಬಿಡುಗಡೆ ಮಾಡುತ್ತವೆ ಎಂದು ವರದಿಯಾಗಿದೆ. ಹೀಗಾಗಿ ಐಫೋನ್ ಬಳಕೆದಾರರು 5G ಲಭ್ಯತೆಗೆ ಸುಮಾರು ಎರಡು ತಿಂಗಳು ಕಾಯಬೇಕಾಗುತ್ತದೆ. ಇನ್ನು ಗೂಗಲ್‌ ಸಂಸ್ಥೆಯು ತನ್ನ ಪಿಕ್ಸಲ್‌ 6a ಬಳಕೆದಾರರಿಗೆ ಅಪ್‌ಡೇಟ್‌ ಹೊರತರಲು ಯೋಜಿಸುತ್ತಿದೆ.

ಏರ್ಟೆಲ್ 5G ಲಭ್ಯವಿರುವ ನಗರಗಳು

ಏರ್ಟೆಲ್ 5G ಲಭ್ಯವಿರುವ ನಗರಗಳು

ಮೊದಲ ಹಂತದಲ್ಲಿ, ಏರ್ಟೆಲ್ 5G ಸೇವೆಯು ದೆಹಲಿ, ಮುಂಬೈ, ವಾರಣಾಸಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ನಾಗ್ಪುರ ಮತ್ತು ಸಿಲಿಗುರಿ ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯವಿದೆ.

ಜಿಯೋ ಮತ್ತು ವಿ ಟೆಲಿಕಾಂ 5G ಸೇವೆ

ಜಿಯೋ ಮತ್ತು ವಿ ಟೆಲಿಕಾಂ 5G ಸೇವೆ

ಜಿಯೋ ಟೆಲಿಕಾಂ ದೀಪಾವಳಿ ವೇಳಗೆ 5G ಸೇವೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ. ಹಾಗೆಯೇ 5G ಸೇವೆಗಳು ಕೈಗೆಟುಕುವ ದರದಲ್ಲಿ ಇರಲಿದೆ ಎಂದು ಹೇಳಿದೆ. ಇನ್ನು ವೊಡಾಫೋನ್ ಐಡಿಯಾ ಟೆಲಿಕಾಂ (ವಿ ಟೆಲಿಕಾಂ) 5G ಅನ್ನು ಯಾವಾಗ ಪ್ರಾರಂಭಿಸಲಿದೆ ಎನ್ನುವ ಬಗ್ಗೆ ಅಧಿಕೃತ ದಿನಾಂಕ ತಿಳಿಸಿಲ್ಲ.

Best Mobiles in India

English summary
Samsung users are not able to access 5G network because their smartphone requires an update from the brand to optimize radio frequency for 5G.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X