ಎಸ್ ಬಿಐ ಕಾರ್ಡ್ ಪೇ ಬಳಸಿ ಒಂದೇ ಟ್ಯಾಪ್ ನಲ್ಲಿ ಪಾವತಿ ಮಾಡಿ

By Gizbot Bureau
|

ಎಸ್ ಬಿಐ ಕಾರ್ಡ್ “ಎಸ್ ಬಿಐ ಕಾರ್ಡ್ ಪೇ” ಬಿಡುಗಡೆಗೊಳಿಸುವ ಬಗ್ಗೆ ಪ್ರಕಟಿಸಿದೆ. ಈ ವೈಶಿಷ್ಟ್ಯತೆಯು ಪಿಓಎಸ್ ಟರ್ಮಿನಲ್ ಗಳಲ್ಲಿ ಮೊಬೈಲ್ ಫೋನ್ ಗಳನ್ನು ಬಳಸಿಕೊಂಡು ಸಂಪರ್ಕರಹಿತ ಪಾವತಿ ಸೇವೆಯನ್ನು ನೀಡುತ್ತದೆ.

ಒಂದೇ ಟ್ಯಾಪ್ ನಲ್ಲಿ ಪಾವತಿ:

ಒಂದೇ ಟ್ಯಾಪ್ ನಲ್ಲಿ ಪಾವತಿ:

ಎಸ್ ಬಿಐ ಕಾರ್ಡ್ ಪೇ ಬಳಸಿಕೊಂಡು ಗ್ರಾಹಕರು ಕಾಂಟ್ಯಾಕ್ಟ್ ಲೆಸ್ ಪಾವತಿಯನ್ನು ಹತ್ತಿರದ ಎನ್ಎಫ್ ಸಿ ಅನೇಬಲ್ ಆಗಿರುವ ಪಾಯಿಂಟ್ ಆಫ್ ಸೇಲ್ ಟರ್ಮಿನಲ್ ಗಳಲ್ಲಿ ಮೊಬೈಲ್ ಫೋನ್ ಬಳಸಿ ಕೇವಲ ಒಂದು ಟ್ಯಾಪ್ ನಲ್ಲಿ ಯಾವುದೇ ಫಿಸಿಕಲ್ ಕ್ರೆಡಿಟ್ ಕಾರ್ಡ್ ಅಥವಾ ಪಿನ್ ನಂಬರ್ ಗಳನ್ನು ಎಂಟರ್ ಮಾಡದೆಯೇ ಟ್ರಾನ್ಸ್ಯಾಕ್ಷನ್ ಮಾಡುವುದಕ್ಕೆ ಅವಕಾಶವಿರುತ್ತದೆ.

ಸಂಪರ್ಕ ರಹಿತ ಪಾವತಿ ಆಯ್ಕೆ:

ಸಂಪರ್ಕ ರಹಿತ ಪಾವತಿ ಆಯ್ಕೆ:

ಎಸ್ ಬಿಐ ಕಾರ್ಡ್ ಪೇ ಎಂಬುದು ಪಾವತಿ ವೈಶಿಷ್ಟ್ಯತೆಯಾಗಿದ್ದು ಹಾಸ್ಟ್ ಕಾರ್ಡ್ ಎಮ್ಯುಲೇಷನ್(ಹೆಚ್ ಸಿಇ) ತಂತ್ರಗಾರಿಕೆ ಆಧಾರದಲ್ಲಿ ಪಾವತಿಯನ್ನು ವೇಗವಾಗಿ, ಸರಳವಾಗಿ ಮತ್ತು ಸುಭದ್ರವಾಗಿ ಮಾಡುವುದಕ್ಕೆ ಮೊಬೈಲ್ ಫೋನ್ ಗಳಲ್ಲಿಯೇ ಅವಕಾಶ ನೀಡುವ ಹೊಸ ವ್ಯವಸ್ಥೆಯಾಗಿದೆ ಎಂದು ಕಂಪೆನಿ ತಿಳಿಸಿದೆ.

ಭಾರತದಲ್ಲಿ ಇದೇ ಮೊದಲು:

ಭಾರತದಲ್ಲಿ ಇದೇ ಮೊದಲು:

ಭಾರತದಲ್ಲಿ ಈ ರೀತಿಯ ಪಾವತಿ ಆಯ್ಕೆ ಇದೇ ಮೊದಲನೆಯದಾಗಿರುವುದರಿಂದಾಗಿ ಎಸ್ ಬಿಐ ಕಾರ್ಡ್ ನ ಮೊಬೈಲ್ ಅಪ್ಲಿಕೇಷನ್ನಿನ ಭಾಗವಾಗಿ ಇದನ್ನು ನಿರ್ಮಿಸಲಾಗಿದೆ.ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಖಾತೆಯನ್ನು ನಿರ್ವಹಿಸಲು ಮತ್ತು ಸಂಪರ್ಕವಿಲ್ಲದ ಪಾವತಿಯನ್ನು ಮಾಡುವುದಕ್ಕಾಗಿ ಕೇವಲ ಒಂದೇ ಅಪ್ಲಿಕೇಷನ್ ನ್ನು ಬಳಸಿ ನಿರ್ವಹಿಸುವುದಕ್ಕೆ ಇದು ನೆರವು ನೀಡುತ್ತದೆ ಎಂದು ತಿಳಿಸಲಾಗಿದೆ. ಎಸ್ ಬಿಐ ಕಾರ್ಡ್ ನ ಎಂಡಿ ಮತ್ತು ಸಿಇಓ ಆಗಿರುವ ಹರ್ದಯಾಳ್ ಪ್ರಸಾದ್ ಎಸ್ ಬಿಐ ಕಾರ್ಡ್ ಪೇ ಗ್ರಾಹಕರಿಗೆ ನಿತ್ಯದ ವಹಿವಾಟು ಮಿತಿ ಮತ್ತು ಅತ್ತ್ಯುತ್ತಮ ವ್ಯವಹಾರವನ್ನು ಬಯಸುತ್ತದೆ ಎಂದು ಹೇಳಿದ್ದಾರೆ.

ಬಳಕೆಯ ಮಿತಿ:

ಬಳಕೆಯ ಮಿತಿ:

ಸದ್ಯ, ಹೆಚ್ ಸಿಇ ಅನೇಬಲ್ ಆಗಿರುವ ಆಪ್ ಗಳು 2,000 ರುಪಾಯಿ ಪ್ರತಿ ವಹಿವಾಟು ಮಿತಿಯನ್ನು ಮತ್ತು 10,000 ರುಪಾಯಿ ದೈನಂದಿನ ವಹಿವಾಟು ಮಿತಿಯನ್ನು ಹೊಂದಿದೆ. ಇದರಿಂದಾಗಿ ಈ ವೈಶಿಷ್ಟ್ಯತೆಯ ಪರಿಣಾಮಕಾರಿ ಬಳಕೆಯನ್ನು ನಿರ್ಬಂಧಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ರಿಜಿಸ್ಟ್ರರ್ ಮಾಡುವುದು:

ರಿಜಿಸ್ಟ್ರರ್ ಮಾಡುವುದು:

ಎಸ್ ಬಿಐ ಕಾರ್ಡ್ ಪೇ ಬಳಸುವುದಕ್ಕಾಗಿ ಕಾರ್ಡ್ ಹೊಂದಿರುವವರು ಮೊದಲ ಬಾರಿಗೆ ಒಂದು ಸಲ ರಿಜಿಸ್ಟ್ರೇಷನ್ ನ್ನು ನೂತನ ವರ್ಷನ್ ನ ಎಸ್ ಬಿಐ ಕಾರ್ಡ್ ಮೊಬೈಲ್ ಆಪ್ ನಲ್ಲಿ ಮಾಡಬೇಕಾಗುತ್ತದೆ. ಒಮ್ಮೆ ಕಾರ್ಡ್ ರಿಜಿಸ್ಟರ್ ಆದ ನಂತರ ಬಳಕೆದಾರರು ಪಾವತಿಯನ್ನು ತಮ್ಮ ಫೋನ್ ಸ್ಕ್ರೀನ್ ನ್ನು ಅನ್ ಲಾಕ್ ಮಾಡುವ ಮೂಲಕ ಸರಳವಾಗಿ ಪಾವತಿಯನ್ನು ಸಂಪೂರ್ಣಗೊಳಿಸುವುದಕ್ಕೆ ಅವಕಾಶವಿರುತ್ತದೆ ಮತ್ತು ಮೊಬೈಲ್ ಡಿವೈಸ್ ನ್ನು ಮಾರಾಟದ ಟರ್ಮಿನಲ್ ಬಳಿ ತರುತ್ತದೆ.

90 ಲಕ್ಷ ಗ್ರಾಹಕರು,17% ಮಾರುಕಟ್ಟೆ ಶೇರ್:

90 ಲಕ್ಷ ಗ್ರಾಹಕರು,17% ಮಾರುಕಟ್ಟೆ ಶೇರ್:

ಈ ಸೌಲಭ್ಯವನ್ನು ವೀಸಾ(VISA) ಫ್ಲ್ಯಾಟ್ ಫಾರ್ಮ್ ನಲ್ಲಿ ಬಿಡುಗಡೆಗೊಳಿಸಲಾಗಿದೆ ಮತ್ತು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಜೊತೆಗೆ ಆಂಡ್ರಾಯ್ಡ್ ಓಎಸ್ ಕಿಟ್ಕ್ಯಾಟ್ ವರ್ಷನ್ 4.4 ಮತ್ತು ಮೇಲಿನದ್ದರಲ್ಲಿ ಕಾರ್ಯ ನಿರ್ವಹಿಸುತ್ತದೆ. ಎಸ್ ಬಿಐ ಕಾರ್ಡ್ ಅಂದಾಜು 90 ಲಕ್ಷ ಗ್ರಾಹಕರನ್ನು ಹೊಂದಿದೆ ಮತ್ತು 17% ಮಾರುಕಟ್ಟೆ ಶೇರ್ ನ್ನು ಒಳಗೊಂಡಿದೆ.

Best Mobiles in India

Read more about:
English summary
SBI Card introduces contactless mobile phone payments service

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X