ಎಸ್‌ಬಿಐ ಬ್ಯಾಂಕ್‌ ಗ್ರಾಹಕರೇ ಎಚ್ಚರ? ಎಸ್‌ಬಿಐ ನೀಡಿದ ಸಂದೇಶ ಏನ್‌ ಗೊತ್ತಾ?

|

ಭಾರತದ ಪ್ರಮುಖ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಇಂಡಿಯಾ ತನ್ನ ಗ್ರಾಹಕರಿಗೆ ಆಲರ್ಟ್‌ ಮೆಸೇಜ್‌ ನೀಡಿದೆ. ಎಸ್‌ಬಿಐ ಬ್ಯಾಂಕ್‌ ಹೆಸರಿನಲ್ಲಿ ನಡೆಯುತ್ತಿರುವ ಫಿಶಿಂಗ್‌ ಹಗರಣದ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಬ್ಯಾಂಕಿಂಗ್‌ ಹೆಸರಿನಲ್ಲಿ ವಂಚನೆ ಮಾಡುವ ವಂಚಕರು ಎಸ್‌ಬಿಐ ಗ್ರಾಹಕರಿಗೆ ಸಂದೇಶದ ಮೂಲಕ ಲಿಂಕ್ ಅನ್ನು ಕಳುಹಿಸುತ್ತಿದ್ದಾರೆ. ಈ ಮಾದರಿಯ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ಗ್ರಾಹಕರು ವಂಚನೆ ಹೋಗುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಎಸ್‌ಬಿಐ ತನ್ನ ಗ್ರಾಹಕರಿಗೆ ಎಚ್ಚರಿಕೆಯಿಂದ ಇರುವಂತೆ ಮಾಹಿತಿ ನೀಡಿದೆ.

ಎಸ್‌ಬಿಐ

ಹೌದು, ಎಸ್‌ಬಿಐ ತನ್ನ ಗ್ರಾಹಕರಿಗೆ ವಂಚಕರ ಸಂದೇಶಗಳ ಬಗ್ಗೆ ಎಚ್ಚರದಿಂದಿರುವಂತೆ ಕೋರಿದೆ. ಗ್ರಾಹಕರ ಕೆವೈಸಿ ದಾಖಲೆಗಳನ್ನು ಅಪ್ಡೇಟ್‌ ಮಾಡುವ ನೆಪದಲ್ಲಿ ಅನೇಕ ನಕಲಿ ಲಿಂಕ್‌ಗಳನ್ನು ಜನರನ್ನು ವಂಚಿಸುತ್ತಿವೆ ಎಂದು ಎಸ್‌ಬಿಐ ಬ್ಯಾಂಕ್‌ ಹೇಳಿದೆ. ಎಸ್‌ಬಿಐ ತನ್ನ ಟ್ವಿಟರ್‌ನಲ್ಲಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದು, SBI ಗ್ರಾಹಕರು ಪ್ರಾಥಮಿಕವಾಗಿ ಎರಡು ಫೋನ್ ಸಂಖ್ಯೆಗಳಿಂದ ಕರೆಗಳು ಮತ್ತು ಸಂದೇಶಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದೆ. ಹಾಗಾದ್ರೆ ಎಸ್‌ಬಿಐ ತನ್ನ ಗ್ರಾಹಕರಿಗೆ ನೀಡಿದ ಎಚ್ಚರಿಕೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಎಸ್‌ಬಿಐ

ಎಸ್‌ಬಿಐ ಬ್ಯಾಂಕ್‌ ತನ್ನ ಗ್ರಾಹಕರು +918294710946 ಮತ್ತು +91-7362951973 ಸಂಖ್ಯೆಯಿಂದ ಬರುವ ಸಂದೇಶ ಹಾಗೂ ಕರೆಗಳ ಬಗ್ಗೆ ಎಚ್ಚರ ವಹಿಸುವಂತೆ ಹೇಳಿದೆ. ಈ ಎರಡು ಸಂಖ್ಯೆಗಳಿಂದ ಬರುವ ಕರೆಗಳನ್ನು ಸ್ವಿಕರಿಸುವ ಗ್ರಾಹಕರಿಗೆ ಕೆವೈಸಿ ದಾಖಲೆ ಅಪ್ಡೇಟ್‌ ಮಾಡುವಂತೆ ಹೇಳಿ ಮೋಸ ಮಾಡಿರುವ ಘಟನೆಗಳು ಬೆಳಕಿಗೆ ಬಂದಿವೆ. KYC ಅಪ್‌ಡೇಟ್‌ಗಾಗಿ ಫಿಶಿಂಗ್ ಲಿಂಕ್ ಅನ್ನು ಕ್ಲಿಕ್ ಮಾಡಲು ಕೇಳುತ್ತಿದ್ದಾರೆ. ಇಂತಹ ಯಾವುದೇ ಫಿಶಿಂಗ್ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಎಂದು ಎಲ್ಲಾ ಗ್ರಾಹಕರಿಗೆ ಎಸ್‌ಬಿಐ ಮನವಿ ಮಾಡಿದೆ.

SBI

ಈ ಮಾದರಿಯ ಹಗರಣ ಈಗಾಗಲೇ ಅಸ್ಸಾಂನಲ್ಲಿ ಕಂಡು ಬಂದಿದೆ. ಅಸ್ಸಾಂ ಪೊಲೀಸರ ಸಿಐಡಿ ಟೀಂ ಈ ಹಗರಣದ ಬಗ್ಗೆ ಮಾಹಿತಿಯನ್ನು ತನ್ನ ಟ್ವೀಟ್‌ನಲ್ಲಿ ಹಂಚಿಕೊಂಡಿದೆ. ಸಿಐಡಿ ಅಸ್ಸಾಂನ ಟ್ವೀಟ್ ಅನ್ನು ಎಸ್‌ಬಿಐ ಕೂಡ ತನ್ನ ಬಳಕೆದಾರರಿಗೆ ಶೇರ್‌ ಮಾಡಿದೆ. KYC ಅಪ್ಡೇಟ್‌ಗಾಗಿ ಫಿಶಿಂಗ್ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು SBI ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್‌ ಮಾಡಿದೆ. ಇದಲ್ಲದೆ ಈಗಾಗಲೇ ಎಸ್‌ಬಿಐ ಬ್ಯಾಂಕ್‌ನ ಅನೇಕ ಗ್ರಾಹಕರು ತಮ್ಮ ಪ್ಯಾನ್ ಕಾರ್ಡ್ ಮತ್ತು ಇತರ ವಿವರಗಳನ್ನು ಅಪ್ಡೇಟ್‌ ಮಾಡಲು ಕೇಳಿರುವ ಸ್ಕ್ಯಾಮರ್‌ಗಳಿಂದ ಬಂದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಸಹ ಶೇರ್‌ ಮಾಡಿದ್ದಾರೆ.

ಎಸ್‌ಬಿಐ

ಇದೇ ಕಾರಣಕ್ಕೆ ಎಸ್‌ಬಿಐ ಬ್ಯಾಂಕ್‌ ಗ್ರಾಹಕರು ಇಂತಹ ಯಾವುದೇ ಮೋಸದ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವುದು ಉತ್ತಮ. ಅಲ್ಲದೆ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳಿಗೆ ಉತ್ತರಿಸುವಾಗ ನಿಮ್ಮ ಬ್ಯಾಂಕಿಂಗ್‌ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಒಮ್ಮೆ ನೀವು ನಿಮ್ಮ ಮಾಹಿತಿಯನ್ನು ಅಪರಿಚಿತರಿಗೆ ನೀಡಿದರೆ ನಿಮ್ಮ ಹಣಕಾಸು ಬೇರೆಯವರ ಪಾಲಾಗುವುದು ಖಂಡಿತ. ಆದರಿಂದ ಬ್ಯಾಂಕಿಂಗ್‌ ವಿಚಾರಕ್ಕೆ ಸಂಬಂಧಿಸಿದಂತೆ ಬರುವ ಅಪರಿಚತಿ ಕರೆಗಳನ್ನು ನೀವು ನಿರ್ಲಕ್ಷಿಸುವುದು ಉತ್ತಮ.

ಫಿಶಿಂಗ್ ಸ್ಕ್ಯಾಮ್‌ಗಳಿಂದ ನಿಮ್ಮನ್ನು ಪ್ರೊಟೆಕ್ಟ್‌ ಮಾಡಿಕೊಳ್ಳುವುದು ಹೇಗೆ?

ಫಿಶಿಂಗ್ ಸ್ಕ್ಯಾಮ್‌ಗಳಿಂದ ನಿಮ್ಮನ್ನು ಪ್ರೊಟೆಕ್ಟ್‌ ಮಾಡಿಕೊಳ್ಳುವುದು ಹೇಗೆ?

* ನಿಮ್ಮ ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಕೇಳುವ ಅಪರಿಚಿತ ಸೈಟ್‌ನಲ್ಲಿ ಯಾವುದೇ ಮಾಹಿತಿಯನ್ನು ಅಪ್ಡೇಟ್‌ ಮಾಡಬೇಡಿ. ಜೊತೆಗೆ ಯಾವುದೇ ಅಪರಿಚಿತ ಇಮೇಲ್, ಸಂದೇಶ ಅಥವಾ ಫೋನ್ ಕರೆಯನ್ನು ಸ್ವೀಕರಿಸುವಾಗ ಎಚ್ಚರಿಕೆಯಿಂದಿರಿ. ಆ ಕರೆಗಳು ಅಥವಾ ಸಂದೇಶಗಳ ದೃಢೀಕರಣವನ್ನು ಪರಿಶೀಲಿಸಲು ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ.

* ನಿಮ್ಮ ಅಕೌಂಟ್‌ ನಂಬರ್‌, ಪಾಸ್‌ವರ್ಡ್‌ಗಳು ಅಥವಾ ಯಾವುದೇ ವೈಯಕ್ತಿಕ ಮಾಹಿತಿಯನ್ನು ಟೆಕ್ಸ್ಟ್‌ ಮೆಸೇಜ್‌ ರೂಪದಲ್ಲಿ ಯರಿಗೂ ಕಳುಹಿಸಬೇಡಿ.

* ಇಮೇಲ್ ಅಥವಾ ಸಂದೇಶಗಳಲ್ಲಿ ಎಂಬೆಡೆಡ್ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದನ್ನು ತಪ್ಪಿಸಿ.

* ವೆಬ್‌ಸೈಟ್‌ನ ವಿಳಾಸದ ಸಾಲನ್ನು ನೋಡಿ ಮತ್ತು ಇಮೇಲ್‌ನಲ್ಲಿ ಉಲ್ಲೇಖಿಸಲಾದ ವಿಳಾಸಕ್ಕಿಂತ ಭಿನ್ನವಾದದ್ದನ್ನು ಅದು ಪ್ರದರ್ಶಿಸುತ್ತದೆಯೇ ಅನ್ನೊದನ್ನ ಪರಿಶೀಲಿಸಿ.

Best Mobiles in India

English summary
SBI warns its users regarding phishing scam and how to transact safely

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X